Hair Care: ಪ್ರಸವದ ನಂತರ ಕೂದಲು ಉದುರುವ ಸಮಸ್ಯೆಗೆ ಇಲ್ಲಿವೆ ಪರಿಹಾರಗಳು

ಪ್ರಸವದ ನಂತರ ಕೂದಲು ಉದುರುವುದು ಸಾಮಾನ್ಯ. ಇದಕ್ಕೆ ನೀವು ಭಯಪಡದಿದ್ದರೆ ಏನು ಮಾಡಬೇಕಾಗಿಲ್ಲ. ಆದರೆ ಕೆಲವರು ಕೂದಲು ಉದರುತ್ತಿದ್ದಂತೆ ಭಯಗೊಳ್ಳುತ್ತಾರೆ. ನಿಮಗೆ ಕೂದಲು ಉದುರುವುದು ಸಮಸ್ಯೆಯಾಗಿ ಕಾಣುತ್ತಿದ್ದರೆ, ನಿಮ್ಮ ಕೂದಲು ಬೆಳೆಯುವುದಕ್ಕೆ ಕೆಲವು ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಾಯ್ತನ ಪ್ರತಿ ಹೆಣ್ಣು ಮಕ್ಕಳಿಗೂ ವಿಶೇಷ ಅನುಭವ. ಹೆರಿಗೆಯ ಸಮಯ ಹತ್ತಿರವಾಗುತ್ತಿದ್ದಂತೆ ಮಗುವಿನ ಮುಖ ನೋಡಲು ತಾಯಿಯು ಹಂಬಲಿಸುತ್ತಿರುತ್ತಾಳೆ. ಈ ಖುಷಿಯಲ್ಲಿ ಆಕೆ ಕೆಲವು ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದರಲ್ಲಿ ಕೂದಲ ಆರೈಕೆಯು ಒಂದು. ಹೌದು ಕೆಲವರು ಗರ್ಭಧಾರಣೆಯು ಕೂದಲನ್ನು ದಪ್ಪ ಮತ್ತು ದಟ್ಟವಾಗಿಸುತ್ತದೆ ಎಂದು ತಿಳಿಯುತ್ತಾರೆ. ಇದರ ಜೊತೆಗೆ ಮಗು ಪಡೆಯುವ ಒತ್ತಡವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂಬುದನ್ನು ನಾವು ಕಂಡುಕೊಳ್ಳಬೇಕು.


ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ನಂತರ ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗರ್ಭವತಿಯಾಗಿದ್ದಾಗ ಹಾರ್ಮೋನುಗಳಲ್ಲಿ ಬದಲಾವಣೆ ಸಂಭವಿಸುತ್ತದೆ.


ಗರ್ಭಧಾರಣೆಯ ಮೊದಲ ಹಂತ ಕೋರಿಯಾನಿಕ್ ಗೊನಡೋಟ್ರೋಪಿನ್ ಅಥವಾ ಎಚ್‍ಸಿಜಿ. ಇದು ಗರ್ಭಧಾರಣೆಯನ್ನು ಅಳೆಯುವ ಹಾರ್ಮೋನು. ಇದರಲ್ಲಿ ಹೆಚ್ಚಳವಾದಂತೆ ಮಹಿಳೆಯು ಗರ್ಭವತಿಯಾಗಿದ್ದಾಳೆ ಎಂಬುದು ಖಚಿತವಾಗುತ್ತದೆ. ಗರ್ಭಧಾರಣೆಯು ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ಸೇರಿದಂತೆ ಹಲವಾರು ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದ ಪ್ರಮಾಣವು ಹೆರಿಗೆಯ ನಿಗದಿತ ದಿನಾಂಕದ ವೇಳೆಗೆ ಸಾಮಾನ್ಯಕ್ಕಿಂತ 50 ಪ್ರತಿಶತದಷ್ಟು ಹೆಚ್ಚಾಗುತ್ತದೆ.


ಮಗು ಜನಿಸಿದ ತಕ್ಷಣ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಸೇರಿದಂತೆ ಹಲವಾರು ಹಾರ್ಮೋನ್ ಮಟ್ಟಗಳು ಶೀಘ್ರವಾಗಿ ಇಳಿಯುತ್ತವೆ. ಆ ಹಾರ್ಮೋನುಗಳು ಜನನದ ನಂತರ 24 ಗಂಟೆಗಳೊಳಗೆ ಸಾಮಾನ್ಯ ಮಟ್ಟಕ್ಕೆ ಮರಳುತ್ತವೆ, ಆದರೂ ಸ್ತನ್ಯಪಾನ ಮಾಡುವವರೆಗೂ ಪ್ರೊಲ್ಯಾಕ್ಟಿನ್ ಅಧಿಕವಾಗಿರುತ್ತದೆ. ಇನ್ನು ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ, ಮಗು ಬಂದ ಕೆಲವು ವಾರಗಳ ನಂತರ ಅದು ಸಾಮಾನ್ಯ ಸ್ಥಿತಿಗೆ ಬರುತ್ತದೆ.


ಇದನ್ನೂ ಓದಿ:Morning Digest: ಇಂದಿನಿಂದ ಹಾಲಿನ ದರ ಹೆಚ್ಚಳ; ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ; ಇಂದಿನ ಪ್ರಮುಖ ಸುದ್ದಿಗಳಿವು

ಹಾರ್ಮೋನ್ ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?


ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ನಂತರ ಹಾರ್ಮೋನುಗಳಲ್ಲಿ ಸಂಭವಿಸುವ ಏರಿಳಿತವೇ ಕೂದಲು ಉದುರುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚಾಗುವ ಈಸ್ಟ್ರೊಜೆನ್ ಎಂಬ ಅಂಶ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ಹೆಚ್ಚು ಕೂದಲು ಉದುರುವುದನ್ನು ತಡೆಯುತ್ತದೆ. ಗರ್ಭಾವಸ್ಥೆಯಲ್ಲಿ, ನಿಮ್ಮ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಆದರೆ ಹೆಚ್ಚಿದ ರಕ್ತದ ಪ್ರಮಾಣ ಮತ್ತು ರಕ್ತಪರಿಚಲನೆಯು ಕೂದಲು ಸಾಮಾನ್ಯಕ್ಕಿಂತ ಕಡಿಮೆಯಾಗಲು ಕಾರಣವಾಗುತ್ತದೆ.


ಪ್ರಸವದ ನಂತರ ಯಾವ ಸಮಯದಲ್ಲಾದರೂ ಕೂದಲು ಉದುರುವಿಕೆ ಶುರುವಾಗಬಹುದು. ಇದಕ್ಕೆ ನಿಗದಿತ ಸಮಯವೆಂಬುದಿಲ್ಲ ಮತ್ತು ಕೂದಲು ಉದುರುವಿಕೆ ಒಂದು ವರ್ಷದವರೆಗೂ ಮುಂದುವರೆಯುತ್ತದೆ. ಅಂದರೆ ಮಗುವಿಗೆ ಸುಮಾರು ನಾಲ್ಕು ತಿಂಗಳಿರುವಾಗ ಕೂದಲು ಉದುರಲು ಶುರುವಾಗುತ್ತದೆ. ಮಗು ವಯಸ್ಸು ಹೆಚ್ಚಾಗುತ್ತಿದ್ದಂತೆ ಕೂದಲು ಉದುರುವುದು ಮುಂದುವರೆಯುತ್ತದೆ. ಆದರೆ ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ.


ಪ್ರಸವದ ನಂತರ ಕೂದಲ ಚಿಕಿತ್ಸೆಗಳು


ಪ್ರಸವದ ನಂತರ ಕೂದಲು ಉದುರುವುದು ಸಾಮಾನ್ಯ. ಇದಕ್ಕೆ ನೀವು ಭಯಪಡದಿದ್ದರೆ ಏನು ಮಾಡಬೇಕಾಗಿಲ್ಲ. ಆದರೆ ಕೆಲವರು ಕೂದಲು ಉದರುತ್ತಿದ್ದಂತೆ ಭಯಗೊಳ್ಳುತ್ತಾರೆ. ನಿಮಗೆ ಕೂದಲು ಉದುರುವುದು ಸಮಸ್ಯೆಯಾಗಿ ಕಾಣುತ್ತಿದ್ದರೆ, ನಿಮ್ಮ ಕೂದಲು ಬೆಳೆಯುವುದಕ್ಕೆ ಕೆಲವು ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.


1. ಸ್ಟೈಲ್ ಮಾಡಲು ಬಿಟ್ಟುಬಿಡಿ
ಕೆಲವರು ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತಾರೆ. ಇದು ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಹೇರ್ ಕರ್ಲಿಂಗ್ ಮಾಡುವುದು ಕೂಡ ಕೂದಲು ಉದುರುವಂತೆ ಮಾಡುತ್ತದೆ. ಇದರ ಬದಲು ಕೂದಲನ್ನು ಗಾಳಿಯಲ್ಲಿ ಒಣಗಲು ಬಿಡಬೇಕು. ಅಲ್ಲದೇ ಹೇರ್ ಬ್ರಶ್‍ನಿಂದ ಜೋರಾಗಿ ಕೂದಲು ಬಾಚುವುದು ಕೂದಲನ್ನು ಉದುರಿಸುತ್ತದೆ. ಹಾಗಾಗಿ ದಿನಕ್ಕೆ ಒಮ್ಮೆ ಮಾತ್ರ ತಲೆ ಬಾಚುವ ಅಭ್ಯಾಸವಿರಲಿ.


ಇದನ್ನೂ ಓದಿ:ಇಂದಿನಿಂದ SBI, Axis, IDBI ಮತ್ತು Syndicate ಬ್ಯಾಂಕ್​ಗಳಲ್ಲಿ ನಿಯಮ ಬದಲಾವಣೆ; ಅಗತ್ಯ ಮಾಹಿತಿ ಇಲ್ಲಿದೆ

2. ಉತ್ತಮ ಆಹಾರ ಸೇವಿಸಿ
ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕಾಗುತ್ತದೆ. ಹಾಗಾಗಿ ಎಲ್ಲಾ ರೀತಿಯ ತರಕಾರಿ, ಹಣ್ಣುಗಳು, ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.


ಕೂದಲ ಬೆಳವಣಿಗೆಗೆ ಉತ್ತಮ ಆಹಾರಗಳು
ಕಡು ಹಸಿರು ಸೊಪ್ಪುಗಳು: ಇದರಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಾಗಿರುತ್ತದೆ.
ಸಿಹಿ ಆಲೂಗಡ್ಡೆ ಮತ್ತು ಕ್ಯಾರೆಟ್ ಇದರಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಿರುವುದರಿಂದ ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಮೊಟ್ಟೆಗಳು: ವಿಟಮಿನ್ ಡಿ ಅಂಶ ಹೆಚ್ಚಾಗಿರುತ್ತದೆ
ಮೀನುಗಳು: ಒಮೆಗಾ 3 ಮತ್ತು ಮೆಗ್ನೀಶಿಯಂ ಹೆಚ್ಚಾಗಿರುವುದರಿಂದ ಇದು ಕೂದಲ ಪೋಷಣೆಗೆ ಕಾರಣವಾಗುತ್ತದೆ.


3. ಜೀವಸತ್ವಗಳು ಹೆಚ್ಚಾಗಿರಲಿ
ತಾಯಿ ಮಗುವಿನ ಆಹಾರ ಕ್ರಮದಲ್ಲಿ ಯಾವುದೇ ಬದಲಾವಣೆಯಾಗಬಾರದು. ಆದರೆ ನಿಮ್ಮ ಆಹಾರ ಸಮತೋಲಿತವಾಗದಿದ್ದರೆ ಈ ಜೀವಸತ್ವಗಳು ಸಹಾಯ ಮಾಡುತ್ತದೆ. ಇಂತಹದ್ದೇ ಜೀವಸತ್ವಗಳು ಕೂದಲ ಉದುರುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಒಟ್ಟಾರೆ ಇವು ಆರೋಗ್ಯಕ್ಕೆ ಉತ್ತಮವಾದುದಾಗಿದೆ. ವಿಶೇಷವಾಗಿ ನೀವು ಸ್ತನ್ಯಪಾನ ಮಾಡುತ್ತಿದ್ದರೆ, ಪ್ರಸವಪೂರ್ವ ತೆಗೆದುಕೊಳ್ಳುತ್ತಿದ್ದ ಜೀವಸತ್ವದ ಆಹಾರವನ್ನೇ ಮುಂದುವರಿಸಲು ಸೂಚಿಸಲಾಗುತ್ತದೆ.




4. ವಾಲ್ಯುಮೈಸಿಂಗ್ ಶಾಂಪೂ ಬಳಸಿ
ಕಂಡೀಷನಿಂಗ್ ಶ್ಯಾಂಪೂಗಳು ಕೆಲವೊಮ್ಮೆ ನಿಮ್ಮ ಕೂದಲಿಗೆ ತೊಂದರೆ ಉಂಟು ಮಾಡುತ್ತದೆ ಮತ್ತು ಅದು ತೆಳ್ಳಗೆ ಮತ್ತು ಹೆಚ್ಚು ತುಂಡಾಗುವಂತೆ ಮಾಡುತ್ತದೆ. ವಾಲ್ಯುಮೈಜರ್ಗಳು ನಿಮ್ಮ ಕೂದಲಿಗೆ ಕಾಂತಿ ನೀಡುತ್ತದೆ.

Published by:Latha CG
First published: