• Home
  • »
  • News
  • »
  • lifestyle
  • »
  • Hair Care: ಕೂದಲಿನ ಆರೈಕೆಗೆ ಸಸ್ಯಗಳಲ್ಲೇ ಇದೆ ಪರಿಹಾರ! ಹೀಗೆ ಬಳಸಿ ಪ್ರಯೋಜನ ಪಡೆಯಿರಿ

Hair Care: ಕೂದಲಿನ ಆರೈಕೆಗೆ ಸಸ್ಯಗಳಲ್ಲೇ ಇದೆ ಪರಿಹಾರ! ಹೀಗೆ ಬಳಸಿ ಪ್ರಯೋಜನ ಪಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೀನು, ಮಾಂಸ ಮತ್ತು ಮೊಟ್ಟೆ ಸೇವನೆ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗಿದೆ. ಆದರೆ ಸಸ್ಯಾಹಾರ ಹೆಚ್ಚು ಆರೋಗ್ಯಕರ ಮತ್ತು ಕೂದಲ ಆರೈಕೆಗೆ ಸಹಕಾರಿ ಎಂದು ಸಾಬೀತು ಪಡಿಸುವ ಕೆಲವು ಸೂಪರ್‌ ಫುಡ್‌ಗಳಿವೆ.

  • Share this:

    ತುಂಬಾ ಜನರು (People) ಹೊಳೆಯುವ ಮತ್ತು ದಪ್ಪ ಕೂದಲಿಗಾಗಿ (Shiny And Thick Hair) ಮೊಟ್ಟೆ ಹಚ್ಚುತ್ತಾರೆ. ಇನ್ನು ಕೆಲವರು ಮಾಂಸಾಹಾರ ಸೇವನೆ ಕೂದಲ ಆರೈಕೆಗೆ ಸಹಕಾರಿ ಅಂತಾ ಹೇಳ್ತಾರೆ. ಕೂದಲಿಗೆ ಮೊಟ್ಟೆ (Egg) ಹಚ್ಚುವುದು ತುಂಬಾ ಉತ್ತಮ ಪರಿಹಾರ ನೀಡುತ್ತದೆ ಎಂಬುದು ಹಲವರ ಅಭಿಪ್ರಾಯ. ಪ್ರಾಣಿ ಆಹಾರದಲ್ಲಿ (Food) ಹೆಚ್ಚು ಪೋಷಕಾಂಶವಿರುತ್ತದೆ. ಅದರ ಸೇವನೆ ದೇಹಕ್ಕೆ ಹಲವು ಪೋಷಕಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಮೀನು, ಮಾಂಸ ಮತ್ತು ಮೊಟ್ಟೆ ಸೇವನೆ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗಿದೆ. ಮೊಟ್ಟೆ, ಮಾಂಸ ಮತ್ತು ಮೀನುಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸದ ಜನರ ಕೂದಲು ಹೆಚ್ಚು ಉದುರುತ್ತವೆ, ಒರಟಾಗಿರುತ್ತವೆ ಎಂದು ಹೇಳಲಾಗುತ್ತದೆ.


    ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಸಸ್ಯಾಹಾರ ಸೂಪರ್‌ ಫುಡ್‌ ಗಳು


    ಆದರೆ ಸಸ್ಯಾಹಾರ ಹೆಚ್ಚು ಆರೋಗ್ಯಕರ ಮತ್ತು ಕೂದಲ ಆರೈಕೆಗೆ ಸಹಕಾರಿ ಎಂದು ಸಾಬೀತು ಪಡಿಸುವ ಕೆಲವು ಸೂಪರ್ ಫುಡ್ ಗಳಿವೆ. ನಿಮ್ಮ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಸಸ್ಯಾಹಾರ ಸೂಪರ್‌ ಫುಡ್‌ ಗಳು ಹೀಗಿವೆ.


    ತೆಂಗಿನ ಎಣ್ಣೆ


    ಕೊಬ್ಬರಿ ಎಣ್ಣೆಯನ್ನು ಕೂದಲು ಬೆಳವಣಿಗೆಗೆ ಬಳಸುತ್ತಾರೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಶಾಂಪೂ ಮಾಡುವ ಮೊದಲು ತೆಂಗಿನೆಣ್ಣೆಯನ್ನು ತಲೆಗೆ ಅನ್ವಯಿಸುವುದು ಕೂದಲಿಗೆ ಬೇಕಾದ ಪ್ರೋಟೀನ್ ಒದಗಿಸುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ತೆಂಗಿನ ಎಣ್ಣೆಯನ್ನು ಬಳಸುವ ಸರಿಯಾದ ಮಾರ್ಗ ?


    ಒಂದು ಬಟ್ಟಲಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಅದನ್ನು ಉಗುರು ಬೆಚ್ಚಗಾಗಿಸಿ, ನಂತರ ಕೂದಲಿಗೆ ಮಸಾಜ್ ಮಾಡಿ. ಮತ್ತು ರಾತ್ರಿಯಿಡೀ ಬಿಡಿ. ಎಣ್ಣೆಯುಕ್ತ ಚರ್ಮ ಹೊಂದಿದ್ದರೆ 2-3 ಗಂಟೆಗಳ ಕಾಲ ಬಿಡಿ. ಬೆಳಿಗ್ಗೆ ಶಾಂಪೂ ಮಾಡಿ. ಈ ಪಾಕವಿಧಾನವನ್ನು ವಾರಕ್ಕೆ 2 ರಿಂದ 3 ಬಾರಿ ಪ್ರಯತ್ನಿಸಿ.


    ಅಗಸೆ ಬೀಜದ ಎಣ್ಣೆ


    ಅಗಸೆ ಬೀಜಗಳು ಕಬ್ಬಿಣ ಮಾತ್ರವಲ್ಲದೆ ಒಮೆಗಾ -3 ಅನ್ನು ಹೇರಳವಾಗಿ ಹೊಂದಿದೆ. ಕೂದಲು ಬೆಳವಣಿಗೆಗೆ ಕಬ್ಬಿಣವು ಸಹಾಯ ಮಾಡುತ್ತದೆ. ಒಮೆಗಾ ಕೊಬ್ಬಿನಾಮ್ಲಗಳು ತಲೆಬುರುಡೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡುತ್ತವೆ. ಕೂದಲನ್ನು ಆರೋಗ್ಯವಾಗಿಡುತ್ತದೆ.


    ಕೂದಲಿಗೆ ಹೀಗೆ ಬಳಸಿ


    ಒಂದು ಬಟ್ಟಲಿನಲ್ಲಿ ಕೂದಲಿಗೆ ಅಗತ್ಯ ಲಿನ್ಸೆಡ್ ಎಣ್ಣೆ ತೆಗೆದುಕೊಂಡು ಲಘುವಾಗಿ ಬೆಚ್ಚಗಾಗಿಸಿ. ಈ ಎಣ್ಣೆಯಿಂದ ನಿಮ್ಮ ಕೂದಲಿಗೆ ಬೇರಿನಿಂದ ತುದಿಯವರೆಗೆ ಮಸಾಜ್ ಮಾಡಿ. 1 ರಿಂದ 2 ಗಂಟೆಗಳ ಕಾಲ ಬಿಡಿ ಮತ್ತು ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.


    ದಾಸವಾಳದ ಎಲೆ ಮತ್ತು ಹೂವು


    ದಾಸವಾಳದ ಎಲೆ ಮತ್ತು ಹೂವು ಕೂದಲಿಗೆ ಪ್ರಯೋಜನಕಾರಿ. ದಾಸವಾಳವನ್ನು ಹೇರ್ ಟಾನಿಕ್ ಆಗಿ ಬಳಸಬಹುದು. ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ.


    ಕೂದಲಿಗೆ ದಾಸವಾಳವನ್ನು ಹೀಗೆ ಬಳಸಿ


    ಎರಡು ದಾಸವಾಳ ಹೂವುಗಳು ಮತ್ತು 6 ಎಲೆಗಳನ್ನು ಪುಡಿ ಮಾಡಿ. ಮತ್ತು ತೆಂಗಿನ ಎಣ್ಣೆಯನ್ನು ಅಗತ್ಯವಿರುವಂತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಮಸಾಜ್ ಮಾಡಿ ಮತ್ತು ಸುಮಾರು 1 ರಿಂದ 2 ಗಂಟೆ ಬಿಟ್ಟು ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.


    ರೋಸ್ಮರಿ ಎಣ್ಣೆ


    ರೋಸ್ಮರಿ ಎಣ್ಣೆ ಅಥವಾ ಅದರ ಎಲೆಗಳನ್ನು ಕೂದಲಿನ ಬೆಳವಣಿಗೆಗೆ ಬಳಸಬಹುದು. ಇದು ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ.


    ರೋಸ್ಮರಿ ಎಣ್ಣೆ ಹೇಗೆ ಬಳಸುವುದು


    ರೋಸ್ಮರಿ ಎಣ್ಣೆಯಲ್ಲಿ ಅರ್ಧ ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆ ಸೇರಿಸಿ, ಮಿಶ್ರಣ ಮಾಡಿ ಕೂದಲಿಗೆ ಮಸಾಜ್ ಮಾಡಿ. ಇದನ್ನು ವಾರಕ್ಕೆ 3 ಬಾರಿ ಪ್ರಯತ್ನಿಸಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಬೆಟ್ಟದ ನೆಲ್ಲಿಕಾಯಿ


    ಬೆಟ್ಟದ ನೆಲ್ಲಿಕಾಯಿ ಕೂದಲಿಗೆ ಔಷಧವಾಗಿದೆ. ಇದರ ಬಳಕೆ ಕೂದಲು ದಟ್ಟ, ಕಪ್ಪಾಗಿ ಬೆಳೆಯುತ್ತದೆ. ಆಮ್ಲಾ ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆ ನಿವಾರಿಸುತ್ತದೆ.

    Published by:renukadariyannavar
    First published: