ಆರೋಗ್ಯವಂತರಾಗಲು ಆಹಾರ ಕ್ರಮ ಬದಲಿಸಿ, ವ್ಯಾಯಾಮ ಹೆಚ್ಚಿಸಿ

news18
Updated:May 27, 2018, 5:02 PM IST
ಆರೋಗ್ಯವಂತರಾಗಲು ಆಹಾರ ಕ್ರಮ ಬದಲಿಸಿ, ವ್ಯಾಯಾಮ ಹೆಚ್ಚಿಸಿ
news18
Updated: May 27, 2018, 5:02 PM IST
ನ್ಯೂಸ್ 18 ಕನ್ನಡ

ಉತ್ತಮ ಆರೋಗ್ಯವನ್ನು ನೀವು ಬಯಸುತ್ತಿದ್ದರೆ ಆಹಾರ ಕ್ರಮದಲ್ಲಿ ಬದಲಾವಣೆ ಅತ್ಯಗತ್ಯ. ಆದರೆ ಇಂದಿನ ಜೀವನ ಶೈಲಿಯೇ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ವೇಗದ ಜೀವನ ಶೈಲಿಗೆ ಹೊಂದಿಕೊಂಡಿರುವವರು ದೈನಂದಿನ ಚಟುವಟಿಕೆಯಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿದರೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು.

ಆಹಾರ ಕ್ರಮ ಮತ್ತು ವ್ಯಾಯಾಮದಿಂದ ದೀರ್ಘಕಾಲದ ಆರೋಗ್ಯವನ್ನು ಪಡೆಯಬಹುದು. ದೀರ್ಘಾಯುಷ್ಯವನ್ನು ಪಡೆಯಲು ವ್ಯಾಯಾಮ ಮತ್ತು ಸಮತೋಲಿತ ಆಹಾರ ಮುಖ್ಯ ಎಂಬುದು ಇಟಲಿಯಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

90 ಮತ್ತು 100 ವರ್ಷಗಳ ವ್ಯಕ್ತಿಗಳನ್ನು ಪರಿಶೀಲಿಸಿದಾಗ ಅವರ ಆಹಾರ ಪದ್ಧತಿ ಮತ್ತು ದೈನಂದಿನ ಚಟುವಟಿಕೆ ಉತ್ತಮವಾಗಿತ್ತು ಎಂದು ಅಧ್ಯಯನ ತಂಡ ಕಂಡುಕೊಂಡಿದೆ. ಅಲ್ಲದೆ ಕೆಲ ಆಹಾರ ಕ್ರಮಗಳನ್ನು ಬದಲಿಸಿದರೆ ಮತ್ತು ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.

ದೇಹದಲ್ಲಿ ಎರಡು ರೀತಿಯ ಕೊಬ್ಬುಗಳು ಕ್ರೋಡೀಕರಣವಾಗುತ್ತದೆ. ಅವುಗಳಲ್ಲಿ ಕೆಟ್ಟ ಕೊಬ್ಬನ್ನು ದೈನಂದಿನ ವ್ಯಾಯಾಮದ ಮೂಲಕ ಕರಗಿಸಿಕೊಳ್ಳಬೇಕು. ಕೆಟ್ಟ ಕೊಬ್ಬನ್ನು ಹೋಗಲಾಡಿಸಲು ಸಹ ಉತ್ತಮ ಕೊಬ್ಬಿನ ಅವಶ್ಯಕತೆ ಇರುತ್ತದೆ. ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ.

ತಾಜಾ ಆಹಾರ ಕೂಡ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ಯಾಕ್ ಮಾಡಿರುವ ಆಹಾರಗಳನ್ನು ಸೇವಿಸುವುದಕ್ಕಿಂತ ತಾಜಾ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ತಯಾರಿಸಿಡುವ ಆಹಾರಗಳಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡಿರುತ್ತಾರೆ. ಇದರಿಂದ ಆರೋಗ್ಯ ಹಾಳಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ.

ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೆವಿಸುವುದರಿಂದ ಸಹ ಆರೋಗ್ಯವನ್ನು ಕಾಪಾಡಬಹುದು. ಅನಿಯಮಿತ ಆಹಾರವು ದೇಹದ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ರಾತ್ರಿಯ ವೇಳೆ ಅಧಿಕ ಆಹಾರವನ್ನು ಸೇವಿಸುದರಿಂದ ದೇಹದಲ್ಲಿ ಬಹು ಬೇಗನೆ ಬೊಜ್ಜು ಆವರಿಸುತ್ತದೆ. ಆಹಾರ ಪದ್ಧತಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು.
Loading...

 
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ