ಈ ಚಟಗಳಿಂದ ದೂರವಿರಿ, ಹೃದಯವನ್ನು ಆರೋಗ್ಯವಾಗಿಡಿ

news18
Updated:June 24, 2018, 5:22 PM IST
ಈ ಚಟಗಳಿಂದ ದೂರವಿರಿ, ಹೃದಯವನ್ನು ಆರೋಗ್ಯವಾಗಿಡಿ
news18
Updated: June 24, 2018, 5:22 PM IST
ನ್ಯೂಸ್ 18 ಕನ್ನಡ

ದೇಹದ ಅಂಗಗಳಲ್ಲಿ ಹೃದಯವು ಅಂತ್ಯಂತ ಪ್ರಮುಖ ಭಾಗವಾಗಿದೆ. ಮನುಷ್ಯನ ಪ್ರಾಣವನ್ನು ಜೀವಂತವಾಗಿರಿಸುವ ಹೃದಯದ ಬಗ್ಗೆ ಕಾಳಜಿವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಬಹುದು. ಆರೋಗ್ಯಕರ ಹೃದಯಕ್ಕಾಗಿ ಕೆಲ ವಿಷಯಗಳ ಮೇಲೆ ಗಮನಹರಿಸಬೇಕಾಗುತ್ತದೆ. ಅವುಗಳೆಂದರೆ...

ಧೂಮಪಾನ : ಕ್ಯಾನ್ಸರ್​ನಂತಹ ಮಾರಕ ರೋಗಗಳಿಗೆ ಕಾರಣವಾಗುವ ಧೂಮಪಾನದಿಂದ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತದೆ. ಧೂಮಪಾನದಿಂದಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯ ಮೇಲೆ ಅಡ್ಡ ಪರಿಣಾಮ ಬೀರುವ ಅಭ್ಯಾಸಗಳಲ್ಲಿ ಧೂಮಪಾನ ಕೂಡ ಒಂದು.

ವ್ಯಾಯಾಮ/ಚಟುವಟಿಕೆ : ಆರೋಗ್ಯವಂತ ಹೃದಯವನ್ನು ಹೊಂದಲು ದಿನಂಪ್ರತಿ 500 ರಿಂದ 950 ಕ್ಯಾಲೊರಿಗಳನ್ನು ಕರಗಿಸಿಕೊಳ್ಳಬೇಕಾಗುತ್ತದೆ. ದಿನನಿತ್ಯ ವ್ಯಾಯಾಮಾ ಮತ್ತು ಇತರೆ ದೈಹಿಕ ಚಟುವಟಿಕೆಯಿಂದ ದೇಹದ ಕ್ಯಾಲೊರಿಯನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು.

ನಿದ್ರೆ : ನಿದ್ರಾಹೀನತೆಯ ಸಮಸ್ಯೆ ಕೂಡ ಹೃದ್ರೋಗಕ್ಕೆ ಕಾರಣವಾಗುತ್ತದೆ. ರಾತ್ರಿಯಲ್ಲಿ ಕಡಿಮೆ ನಿದ್ರಿಸಿದರೆ ಅಪಧಮನಿಯಲ್ಲಿ ಬ್ಲಾಕ್ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಹೃದಯದ ಕಾಯಿಲೆಗಳು ಕಂಡು ಬರುತ್ತದೆ. ಪ್ರತಿನಿತ್ಯ ರಾತ್ರಿಯಲ್ಲಿ ನಿದ್ರಿಸುವುದರಿಂದ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

ಒತ್ತಡ : ಅಮೆರಿಕದ ಹಾರ್ಟ್​ ಅಸೋಸಿಯೇಶನ್ ಸಮೀಕ್ಷೆ ಪ್ರಕಾರ ಕೋಪ, ಕಿರಿಕಿರಿ ಮತ್ತು ದ್ವೇಷದ ಸ್ವಭಾವದವರಲ್ಲಿ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೃದಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಒತ್ತಡ ಮತ್ತು ಖಿನ್ನತೆಯಿರುವ ಜನರಲ್ಲಿ ಹೃ ದಯಾಘಾತ ಸಂಭವಿಸುವ ಅಪಾಯ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

ಫಾಸ್ಟ್​ ಫುಡ್ : ಅತೀ ಕೊಬ್ಬಿನ ಮತ್ತು ಸಕ್ಕರೆಯ ಆಹಾರಗಳು ಹೃದಯ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಫಾಸ್ಟ್​ಫುಡ್​ಗಳಲ್ಲಿ ಕೊಲೆಸ್ಟ್ರಾಲ್ ಅಂಶವು ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುವುದರಿಂದ ಹೃದಯಾಘಾತಕ್ಕೆ ಕಾರಣವಾಗಬಹುದು. ಆದರಿಂದ ಇಂತಹ ಆಹಾರಗಳನ್ನು ತ್ಯಜಿಸುವುದು ಉತ್ತಮ. ಒಮೆಗಾ ಫ್ಯಾಟಿ ಆ್ಯಸಿಡ್ ಸಮೃದ್ದವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಹೃದಯದ ಚಟುವಟಿಕೆಯನ್ನು ಉತ್ತಮ ಪಡಿಸಿಕೊಳ್ಳಬಹುದು.
Loading...

ಸ್ಥೂಲಕಾಯತೆ : ಜೀವನ ಶೈಲಿ ಮತ್ತು ಆಹಾರ ಕ್ರಮದಿಂದ ಸ್ಥೂಲಕಾಯ ಸಮಸ್ಯೆ ಕಾಣಿಸುತ್ತದೆ. ಸ್ಥೂಲಕಾಯ ಹೊಂದಿರುವ ವ್ಯಕ್ತಿಗಳಲ್ಲಿ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಇನ್ಸುಲಿನ್ ರೆಜಿಸ್ಟೆಂಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತದೆ ಎಂದು ಅಮೆರಿಕದ ಹಾರ್ಟ್​ ಅಸೋಸಿಯೇಶನ್ ಅಧ್ಯಯನ ತಿಳಿಸಿದೆ.

ಮದ್ಯಪಾನ : ಮದ್ಯಪಾನ ಕೂಡ ಹೃದಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ ಸಂಭವಿಸುವುದರಿಂದ ಹೃದಯಾಘಾತ ಉಂಟಾಗುತ್ತದೆ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ