• Home
  • »
  • News
  • »
  • lifestyle
  • »
  • Tips for Intelligence: ಜೀವನದಲ್ಲಿ ಎಂದಿಗೂ ದಡ್ಡರು ಎನಿಸಿಕೊಳ್ಳಬಾರದು ಎಂದರೆ ಈ 6 ಟಿಪ್ಸ್ ಪಾಲಿಸಿ

Tips for Intelligence: ಜೀವನದಲ್ಲಿ ಎಂದಿಗೂ ದಡ್ಡರು ಎನಿಸಿಕೊಳ್ಳಬಾರದು ಎಂದರೆ ಈ 6 ಟಿಪ್ಸ್ ಪಾಲಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪಝಲ್ ಗಳನ್ನು ಬಗೆಹರಿಸುವುದು ನಿಮ್ಮ ಮನಸ್ಸಿಗೆ ಮತ್ತು ಮೆದುಳಿಗೆ ಉತ್ತಮವಾದ ವ್ಯಾಯಾಮವಾಗಿದೆ ಎಂದು ಹೇಳಬಹುದು. ಸುಡೋಕು ಅಥವಾ ಕ್ರಾಸ್ ವರ್ಡ್ ಒಗಟುಗಳು ಮನಸ್ಸನ್ನು ಉತ್ತೇಜಿಸಬಹುದು.

  • Trending Desk
  • Last Updated :
  • Bangalore [Bangalore], India
  • Share this:

    ಯಾರಿಗೆ ತಾನೇ ತಾವು ದಡ್ಡರು ಮತ್ತು ಪೆದ್ದು ಅಂತ ಅನ್ನಿಸಿಕೊಳ್ಳೋಕೆ ಇಷ್ಟವಿರುತ್ತೆ ನೀವೇ ಹೇಳಿ?  ತಾವು ತುಂಬಾ ಬುದ್ದಿವಂತರಂತೆ (Intelligent) ಇರದೆ ಹೋದರೂ ಸಹ ಸ್ವಲ್ಪ ಬುದ್ದಿವಂತಿಕೆಯಿಂದ (Smart) ವ್ಯವಹರಿಸಬೇಕು ಮತ್ತು ಎದುರಿನವರಿಗೆ ನಾವು ಬುದ್ದಿವಂತರು  (Intelligent Person) ಅಂತ ಅನ್ನಿಸುವಷ್ಟು ಬುದ್ದಿವಂತಿಕೆ ನಮ್ಮಲ್ಲಿದ್ದರೆ ಸಾಕು ಎಂದುಕೊಳ್ಳುತ್ತಾರೆ.  ಅದರಲ್ಲೂ ನಾವು ಕಾಲೇಜಿಗೆ ಸೇರುವಾಗ ಅಲ್ಲಿ ಪ್ರಾಂಶುಪಾಲರು ನಮ್ಮ ಬುದ್ದಿವಂತಿಕೆಯನ್ನು ಪರೀಕ್ಷಿಸಿ ಅಡ್ಮಿಷನ್ ನೀಡಬಹುದು. ಕೆಲಸದ ಸಂದರ್ಶನಕ್ಕೆ ಹೋದಾಗ ಸಂದರ್ಶಕರು ಪ್ರಶ್ನೆಗಳನ್ನು ಕೇಳುವ ಮೂಲಕ ನಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. 


    ಎಷ್ಟೋ ದಿನಗಳಿಂದ ನಿಮ್ಮ ಮೆದುಳನ್ನು ಹೇಗೆ ಟ್ರೈನ್ ಮಾಡಿರುತ್ತೀರಿ, ಅದು ಹಾಗೆಯೇ ವರ್ತಿಸುತ್ತದೆ ಮತ್ತು ಅದು ಸಹಜ ಕೂಡ. ಆದರೂ ಸಹ ನೀವು ನಿಮಗಿರುವ ಬುದ್ದಿವಂತಿಕೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಲು ಕೆಲವು ವರ್ತನೆಗಳು ಇಲ್ಲಿವೆ ನೋಡಿ. ನಿಮ್ಮ ಐಕ್ಯೂ ಮಟ್ಟವನ್ನು ಹೆಚ್ಚಿಸುವ ರಹಸ್ಯವೆಂದರೆ ನಿಮ್ಮ ಬೌದ್ಧಿಕ ಸಾಮರ್ಥ್ಯವನ್ನು ಸುಧಾರಿಸುವ ಕೆಲವು ನಡವಳಿಕೆಗಳಲ್ಲಿ ತೊಡಗುವುದು. ನಿಮ್ಮ ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸಲು ತೊಡಗಿಸಿಕೊಳ್ಳಬಹುದಾದ ಕೆಲವು ಸರಳ ನಡವಳಿಕೆಗಳನ್ನು ನೋಡೋಣ.


    1. ಪಝಲ್ ಗಳನ್ನು ಪರಿಹರಿಸುವುದು


    ಈ ಪಝಲ್ ಗಳನ್ನು ಬಗೆಹರಿಸುವುದು ನಿಮ್ಮ ಮನಸ್ಸಿಗೆ ಮತ್ತು ಮೆದುಳಿಗೆ ಉತ್ತಮವಾದ ವ್ಯಾಯಾಮವಾಗಿದೆ ಎಂದು ಹೇಳಬಹುದು. ಸುಡೋಕು ಅಥವಾ ಕ್ರಾಸ್ ವರ್ಡ್ ಒಗಟುಗಳು ಮನಸ್ಸನ್ನು ಉತ್ತೇಜಿಸಬಹುದು ಮತ್ತು ಪರಿಹಾರವನ್ನು ವೇಗವಾಗಿ ಹುಡುಕಲು ನಿಮ್ಮನ್ನು ಪ್ರೇರೇಪಿಸಬಹುದು. ನೀವು ಪ್ರತಿದಿನ ಇಂತಹ ಒಗಟುಗಳನ್ನು ಮತ್ತು ಪಝಲ್ ಗಳನ್ನು ಪರಿಹರಿಸಿದರೆ, ಅದು ಖಂಡಿತವಾಗಿಯೂ ನಿಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸುತ್ತದೆ.


    ಇದನ್ನೂ ಓದಿ: Child Care: ಮಕ್ಕಳ ರೂಂನಲ್ಲಿ ಈ ವಸ್ತುಗಳನ್ನು ಇಡಲೇಬಾರದಂತೆ, ಆರೋಗ್ಯಕ್ಕೆ ಹಾನಿಕರ ಅಂತಾರೆ ತಜ್ಞರು


    2. ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಗಮನ ಹರಿಸಿ


    ನಿಮ್ಮ ಸುತ್ತಮುತ್ತಲಿರುವ ಪರಿಸರದ ಮತ್ತು ಪ್ರಪಂಚದ ಬಗ್ಗೆ ಗಮನ ಹರಿಸುವುದು, ಇತರರ ಭಾವನೆಗಳು, ತಾರ್ಕಿಕ ವಿಧಾನಗಳು ಇತ್ಯಾದಿ ಅನೇಕ ವಿಷಯಗಳನ್ನು ಕಲಿಯಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಜವಾಗಿಯೂ ಒಬ್ಬ ವ್ಯಕ್ತಿ ಅಥವಾ ವಸ್ತುವನ್ನು ಗಮನಿಸಿದಾಗ, ನೀವು ಯಾವಾಗಲೂ ಹೊಸದನ್ನು ಕಲಿಯುತ್ತೀರಿ ಮತ್ತು ಇದು ನಿಮಗೆ ಹೊಸ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ.


    3. ಧ್ಯಾನ ಮಾಡುವುದು


    ಬೆಳಿಗ್ಗೆ ಎದ್ದು ಯೋಗಾಭ್ಯಾಸ ಮಾಡಿದ ನಂತರ ಧ್ಯಾನ ಮಾಡುವುದು ನಿಮ್ಮ ಮನಸ್ಸನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತದೆ. ಇದು ಯಾವುದೇ ನಕಾರಾತ್ಮಕ ಅಥವಾ ವಿಷಕಾರಿ ಆಲೋಚನೆಗಳ ಮನಸ್ಸನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಹೊಸ ಸಕಾರಾತ್ಮಕ ಕಂಪನಗಳನ್ನು ಅನುಮತಿಸುತ್ತದೆ. ಧ್ಯಾನವು ನಿಮ್ಮಲ್ಲಿರುವ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 5 ನಿಮಿಷಗಳ ಕಾಲ ಈ ಅಭ್ಯಾಸವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಮ್ಮ ಬುದ್ಧಿವಂತಿಕೆಯನ್ನು ಸಹ ಹೆಚ್ಚಿಸುತ್ತದೆ ಅಂತ ಹೇಳಬಹುದು.


    Spirituality And Its Benefits On Mental Health it has a different meaning for different people
    ಸಾಂದರ್ಭಿಕ ಚಿತ್ರ


    4. ಸುದ್ದಿಗಳನ್ನು ಓದಿ ತಿಳಿದುಕೊಳ್ಳಿ


    ವೃತ್ತಪತ್ರಿಕೆ ಅಥವಾ ಆನ್ಲೈನ್ ನಲ್ಲಿ ಬರುವ ಸುದ್ದಿಗಳನ್ನು ಓದುವುದರಿಂದ ದೇಶ ಮತ್ತು ಪ್ರಪಂಚದಲ್ಲಿ ಎನ್ನೆಲ್ಲಾ ಆಗುತ್ತಿದೆ ಅಂತ ನೀವು ತಿಳಿದುಕೊಳ್ಳಬಹುದು. ದೈನಂದಿನ ಸುದ್ದಿಯ ಬಗ್ಗೆ ಯಾರಾದರೂ ನಿಮ್ಮನ್ನು ಕೇಳಿದರೆ, ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂದು ತಿಳಿದಿರುವುದು ಒಳ್ಳೆಯದು ಮತ್ತು ಇದು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿ ಮತ್ತು ಪರಿಣಾಮಕಾರಿಯಾಗಿಡುವಲ್ಲಿ ಸಹಾಯ ಮಾಡುತ್ತದೆ ಅಂತ ಹೇಳಬಹುದು. ಅಲ್ಲದೆ ಇದು ನಿಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ನಿಮ್ಮ ಜ್ಞಾನ ಮತ್ತು ಅರಿವನ್ನು ಸಹ ಹೆಚ್ಚಿಸುತ್ತದೆ.


    Morning Digest news 17 october 2022 have quick look of important news today mrq
    ಸಾಂದರ್ಭಿಕ ಚಿತ್ರ


    5. ಕಾಲ್ಪನಿಕ ಕಥೆಗಳನ್ನು ಹೆಚ್ಚಾಗಿ ಓದಿ


    ಕಾಲ್ಪನಿಕ ಕಥೆಗಳು ಓದುವುದರಿಂದ ನಿಮ್ಮ ಮನಸ್ಸು ಉಲ್ಲಾಸಮಯವಾಗಿರುತ್ತದೆ. ಕಾಲ್ಪನಿಕ ಕಾದಂಬರಿಯನ್ನು ರಚಿಸುವ ಸೃಜನಶೀಲ ಪ್ರಕ್ರಿಯೆ ತುಂಬಾನೇ ಚೆನ್ನಾಗಿರುತ್ತದೆ. ಇದು ನಿಮ್ಮ ಕಲ್ಪನೆ ಮತ್ತು ಸೃಜನಶೀಲ ಆಲೋಚನಾ ಪ್ರಕ್ರಿಯೆಯನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಇದು ಇತರರ ಭಾವನೆಗಳು ಮತ್ತು ಆಲೋಚನೆಗಳೊಂದಿಗೆ ಹೆಚ್ಚು ಹೊಂದಿಕೆಯಾಗಲು ನಿಮಗೆ ಅನುವು ಮಾಡಿಕೊಡುತ್ತದೆ.




    6. ಹೊಸ ವಿಷಯಗಳ ಬಗ್ಗೆ ಕುತೂಹಲದಿಂದಿರಿ


    ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಾಗ, ನೀವು ಪ್ರಪಂಚದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಿಮಗೆ ಅವಕಾಶ ನೀಡುತ್ತೀರಿ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ಮತ್ತು ರಸಪ್ರಶ್ನೆಗಳನ್ನು ಪರಿಹರಿಸಿ, ಏಕೆಂದರೆ ಇದು ಕಲಿಯಲು ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ. ನಿಮ್ಮ ಗೆಳೆಯರು, ಸಹೋದ್ಯೋಗಿಗಳು, ಪ್ರಾಧ್ಯಾಪಕರು, ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಮತ್ತು ಪ್ರತಿ ಉತ್ತರದಲ್ಲಿಯೂ ನೀವು ಕೆಲವು ಅಥವಾ ಇತರ ರೀತಿಯ ಜ್ಞಾನವನ್ನು ಕಂಡುಕೊಳ್ಳುವಿರಿ.

    Published by:Kavya V
    First published: