ದೇಹದಲ್ಲಿ (Body) ಕರುಳನ್ನು ಎರಡನೇ ಮೆದುಳು ಎಂದು ಕರೆಯುತ್ತಾರೆ. ಯಾಕಂದ್ರೆ ಕರುಳು ಆರೋಗ್ಯ (Gut Health) ತುಂಬಾ ಮುಖ್ಯ. ದೇಹದ ಉಳಿದ ಭಾಗಗಳು (Other Parts) ಮೆದುಳಿನ (Brain) ಸೂಚನೆಯಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ ಕರುಳು ಅಂಗವು ಹಾಗಲ್ಲ. ಇದು ಮನಸ್ಸಿನ ಸೂಚನೆ ಮೇರೆಗೆ ಕೆಲಸ (Work) ಮಾಡಲ್ಲ. ಕರುಳು ಅಂಗವು ಆಂತರಿಕ ನರಮಂಡಲದಿಂದ ನಿರ್ವಹಿಸಲ್ಪಡುತ್ತದೆ. ಕರುಳು ಜೀರ್ಣಕ್ರಿಯೆ (Digestion) ಪ್ರಕ್ರಿಯೆಗೆ ನೇರವಾಗಿ ಕಾರಣ ಆಗಿದೆ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಸರಿಯಾಗಿರಲು ಕರುಳಿನ ಆರೋಗ್ಯವು ಚೆನ್ನಾಗಿರಬೇಕಾಗುತ್ತದೆ. ಅಷ್ಟೇ ಅಲ್ಲದೇ, ದೇಹಕ್ಕೆ ಬೇಕಾದ ಶಕ್ತಿ ಸಿಗಲು ಮತ್ತು ಪೋಷಕಾಂಶಗಳು ದೇಹ ಸೇರಲು ಸಹ ಜೀರ್ಣಕ್ರಿಯೆ ಚೆನ್ನಾಗಿರಬೇಕಾಗುತ್ತದೆ.
ಒಟ್ಟಾರೆ ಆರೋಗ್ಯಕ್ಕೆ ಆರೋಗ್ಯಕರ ಕರುಳು ಬೇಕು
ಆರೋಗ್ಯಕರ ಕರುಳು ಹೊಂದಿದಾಗ ಮಾತ್ರ ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಸಾಧ್ಯ. ಯಾಕಂದ್ರೆ ಇದು ಪ್ರತಿರಕ್ಷಣಾ ವ್ಯವಸ್ಥೆಯ 70 ಪ್ರತಿಶತ ಜೀವಕೋಶ ಹೊಂದಿದೆ.
ಇದರಿಂದಾಗಿಯೇ ಯಾರು ಕರುಳು ಅಸ್ವಸ್ಥತೆ, ದುರ್ಬಲ ಕರುಳು ಹೊಂದಿರುತ್ತಾರೋ ಅಂತಹ ಜನರು ಸುಲಭವಾಗಿ ಜ್ವರ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗುತ್ತಾರೆ.
ಕರುಳು ಅನಾರೋಗ್ಯ ಇದ್ದಾಗ ಇದು ನಿಮ್ಮ ತೂಕ ಹೆಚ್ಚಿಸುವ ಮತ್ತು ಆರೋಗ್ಯ ಹಾಳು ಮಾಡುವ ಕೆಲಸ ಮಾಡುತ್ತದೆ. ಅಂದ ಹಾಗೇ ಕರುಳಿನ ಅಸ್ವಸ್ಥತೆಗೆ ಉತ್ತಮ ಬ್ಯಾಕ್ಟೀರಿಯಾ ಕೊರತೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಹೆಚ್ಚಳವು ಕಾರಣವಾಗುತ್ತದೆ.
ಕರುಳಿನ ಅಸ್ವಸ್ಥತೆ ಲಕ್ಷಣಗಳು ಯಾವುವು?
ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಸಮತೋಲನದ ಅಡಚಣೆಯಿಂದ ಆಯಾಸ, ಹೊಟ್ಟೆ ನೋವು, ಮಲಬದ್ಧತೆ, ಅತಿಸಾರ, ಆಮ್ಲೀಯತೆ, ನಿದ್ರೆ ತೊಂದರೆ, ತೂಕದಲ್ಲಿ ಹಠಾತ್ ಬದಲಾವಣೆ, ಸಕ್ಕರೆ ಕಡು ಬಯಕೆ ಉಂಟಾಗುತ್ತದೆ.
ಹಾಗಾಗಿ ಕರುಳಿನ ಆರೋಗ್ಯ ಕಾಪಾಡುವ ಆಹಾರವನ್ನು ದಿನನಿತ್ಯದ ಊಟದಲ್ಲಿ ಸೇರಿಸಿ. ಇದು ಆರೋಗ್ಯಕರ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ. ಕರುಳಿನ ಆರೋಗ್ಯ ಉತ್ತೇಜಿಸುವ ಕೆಲವು ಮಸಾಲೆಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ ಅರಿಶಿನ
ಅಧ್ಯಯನವೊಂದರ ಪ್ರಕಾರ, ಅರಿಶಿನ ಕರುಳಿನಲ್ಲಿರುವ ಅಗತ್ಯ ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ. ಇದರಲ್ಲಿ ಕರ್ಕ್ಯುಮಿನ್ ಅಂಶವಿದೆ. ಇದು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದರ ಬಳಕೆಯಿಂದ ಅನಿಲ, ಅಜೀರ್ಣ, ಹುಣ್ಣು ಉಂಟು ಮಾಡುತ್ತದೆ.
ಕರುಳಿನ ಆರೋಗ್ಯಕ್ಕೆ ಶುಂಠಿ ಪ್ರಯೋಜನಗಳು
ಶುಂಠಿಯಲ್ಲಿ ಜಿಂಜರಾಲ್ ಎಂಬ ಸಂಯುಕ್ತವಿದೆ. ಇದು ಜಠರಗರುಳಿನ ಚಟುವಟಿಕೆ ಹೆಚ್ಚಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶುಂಠಿಯ ನಿಯಮಿತ ಸೇವನೆ ಅಸಿಡಿಟಿ, ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಜೊತೆಗೆ ಪೈಲ್ಸ್ ಮತ್ತು ಕ್ಯಾನ್ಸರ್ ತಡೆಗೆ ಸಹಕಾರಿ.
ಜೀರ್ಣಕ್ರಿಯೆ ಸುಧಾರಿಸುತ್ತದೆ ಜೀರಿಗೆ
ಜೀರಿಗೆ ತಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಹಸಿವು ಹೆಚ್ಚಿಸುತ್ತದೆ. ಅತಿಸಾರ, ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ಜೀರ್ಣಕಾರಿ ಅಸ್ವಸ್ಥತೆ ತಡೆಗೆ ಜೀರಿಗೆ ಪ್ರಯೋಜನಕಾರಿ. ಇದು ಥೈಮೋಲ್ ಎಂಬ ಅಂಶ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯ ನಿರ್ವಹಣೆಗೆ ಸಹಕಾರಿ.
ಕರುಳಿ ಆರೋಗ್ಯಕ್ಕೆ ಕೊತ್ತಂಬರಿ ಸೊಪ್ಪು ಸಹಕಾರಿ
ಕೊತ್ತಂಬರಿ ಸೊಪ್ಪು ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರ ಬಳಕೆಯು ಪಿತ್ತರಸ ಆಮ್ಲ ಉತ್ಪಾದಿಸುತ್ತದೆ. ಇದು ಜೀರ್ಣಕ್ರಿಯೆಗೆ ಅಗತ್ಯವಾಗಿದೆ. ಕಾರ್ಮಿನೇಟಿವ್ ಗುಣಲಕ್ಷಣಗಳು ಗ್ಯಾಸ್ ಸಮಸ್ಯೆ ತಡೆಯುತ್ತದೆ. ದೈನಂದಿನ ಸೇವನೆಯು ಕರುಳಿನ ಆರೋಗ್ಯ ಸುಧಾರಿಸುತ್ತದೆ.
ಸ್ವಸ್ಥ ಕರುಳಿಗಾಗಿ ದಾಲ್ಚಿನ್ನಿ ಸೇವಿಸಿ
ದಾಲ್ಚಿನ್ನಿ ಪ್ರಿಬಯೋಟಿಕ್ ಗುಣ ಹೊಂದಿದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ರಕ್ತದ ಸಕ್ಕರೆ ನಿಯಂತ್ರಿಸಲು ಇದರ ನಿಯಮಿತ ಸೇವನೆ ಸಹಕಾರಿ.
ಇದನ್ನೂ ಓದಿ: ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಸುತ್ತಾರಾ? ಅದು ರೋಗಿಯ ತೂಕ ಹೆಚ್ಚಿಸುತ್ತಾ?
ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸಲು ಇಂಗು ಸೇವಿಸಿ
ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿ ಜೀರ್ಣಕಾರಿ ಕಿಣ್ವಗಳ ಚಟುವಟಿಕೆ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಇಂಗು ಸಹಕಾರಿ. ಗ್ಯಾಸ್ಟ್ರಿಕ್ ಸಮಸ್ಯೆ ತಡೆಗೆ ನಿಯಮಿತ ಆಹಾರದಲ್ಲಿ ಇಂಗು ಸೇರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ