ರಂಜಾನ್​: ಉಪವಾಸವಿರುವ ಮಧುಮೇಹಿಗಳು ಈ ಆಹಾರದ ಬಗ್ಗೆ ಎಚ್ಚರವಹಿಸಿ

news18
Updated:May 30, 2018, 3:59 PM IST
ರಂಜಾನ್​:  ಉಪವಾಸವಿರುವ ಮಧುಮೇಹಿಗಳು ಈ ಆಹಾರದ ಬಗ್ಗೆ ಎಚ್ಚರವಹಿಸಿ
news18
Updated: May 30, 2018, 3:59 PM IST
ನ್ಯೂಸ್ 18 ಕನ್ನಡ

ಹಸಿವಿನ ಮೌಲ್ಯ– ದಾನದ ಆದರ್ಶ ಪ್ರತಿಪಾದಿಸುವ ರಂಜಾನ್ ಹಬ್ಬದ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನ ಕೊಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಉಪವಾಸದ ಸಂದರ್ಭದಲ್ಲಿ ಮಧುಮೇಹ ರೋಗದಿಂದ ಬಳಲುತ್ತಿರುವವರು ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಮಧುಮೇಹಿಗಳು ಉಪವಾಸವನ್ನು ಆಚರಿಸುವಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಒಳಿತು.

ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನುಗಳ ಕೊರತೆಯಿಂದಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗುವುದರಿಂದ ಮಧುಮೇಹ ಸಮಸ್ಯೆ ಉಂಟಾಗುತ್ತದೆ. ಉಪವಾಸದ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರಿಗೆ ಕಾರಣವಾಗಬಹುದು.

ಮಧುಮೇಹದಿಂದ ಬಳಲುತ್ತಿರುವವರು ಸಹರಿ(ಸುರ್ಯೋದಯಕ್ಕೂ ಮುನ್ನ) ಮತ್ತು ಇಫ್ತಾರ್(ಸುರ್ಯಾಸ್ತಮಾನದ ನಂತರ) ಸಮಯದಲ್ಲಿ ಸಕ್ಕರೆ ಅಂಶವಿರುವ ಆಹಾರಗಳನ್ನು ತಿನ್ನುವುದು ತುಂಬಾ ಅಪಾಯಕಾರಿ. ಉಪವಾಸದ ಸಂದರ್ಭದಲ್ಲಿ ಮಧುಮೇಹಿಗಳು ಮುಖ್ಯವಾಗಿ ಗಮನಿಸಬೇಕಾದ ಕೆಲ ಆಹಾರಗಳ ಮಾಹಿತಿ ಇಲ್ಲಿದೆ.

ಬಿಳಿ ಬ್ರೆಡ್ : ಬಿಳಿ ಬ್ರೆಡ್​ ಮತ್ತು ಬಿಳಿ ಹಿಟ್ಟಿನ ಪಾಸ್ತಗಳಲ್ಲಿ ಕಾರ್ಬೊಹೈಡ್ರೇಟ್​ಗಳು ಹೆಚ್ಚಾಗಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಮಧುಮೇಹಿಗಳು ಈ ಆಹಾರಗಳಿಂದ ಸಂಪೂರ್ಣ ದೂರವಿರಬೇಕು.

ಹಾಲು : ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಧುವೇಹಿಗಳು ಉಪವಾಸದ ಸಂದರ್ಭದಲ್ಲಿ ಸೇವಿಸಬಾರದು. ಡೈರಿ ಉತ್ಪನ್ನಗಳು ಕೊಬ್ಬು ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು.

ಬಿಳಿ ಅನ್ನ : ಮಧುಮೇಹಿಗಳು ಪ್ರತಿದಿನ ಬಿಳಿ ಅನ್ನವನ್ನು ತಿನ್ನುವುದರಿಂದ ಮಧುಮೇಹದ ಮಟ್ಟವು ಶೇ.27ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಬಿಳಿ ಅನ್ನದಲ್ಲಿ ಕಡಿಮೆ ಗುಣಮಟ್ಟದ ಕಾರ್ಬೊಹೈಡ್ರೇಟ್​ಗಳು ಇರುತ್ತದೆ. ಇದು ಉಪವಾಸದ ಸಂದರ್ಭದಲ್ಲಿ ಮಧುಮೇಹಿಗಳಿಗೆ ಅಪಾಯವನ್ನು ಉಂಟು ಮಾಡುತ್ತದೆ.
Loading...

ಆಲೂಗಡ್ಡೆ : ಮಧುಮೇಹದಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ದಿನನಿತ್ಯ ತಿನ್ನುವುದು ಅಪಾಯಕಾರಿ. ಇದರಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುವ ಅಂಶಗಳು ಹೆಚ್ಚಾಗಿರುತ್ತದೆ.

ಒಣದ್ರಾಕ್ಷಿ : ಉಪವಾಸದ ಸಂದರ್ಭದಲ್ಲಿ ಮಧುಮೇಹಿಗಳು ಒಣದ್ರಾಕ್ಷಿಗಳನ್ನು ತಿನ್ನಬಾರದು. ಒಣದ್ರಾಕ್ಷಿಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಗ್ಲುಕೋಸ್ ಮಟ್ಟವನ್ನು ಹೆಚ್ಚಿಸಿ ಅಪಾಯವನ್ನು ತಂದಿಡುತ್ತದೆ.
First published:May 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...