Weight Loss: ಪ್ರತಿದಿನ ಕೆನೆಭರಿತ ಗಟ್ಟಿ ಹಾಲು ಕುಡಿದರೆ ಬೇಗನೆ ತೂಕ ಇಳಿಯುತ್ತಂತೆ ನೋಡಿ..!

ತೂಕ ಇಳಿಕೆಗಾಗಿ ಕೊಬ್ಬಿನ ಅಂಶ ಇರುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತೂಕ ಇಳಿಸಲು ಪ್ರಯತ್ನ ಪಡುವವರು ದೂರ ಇಡುತ್ತಾರೆ. ಭಾರತದಲ್ಲಿ ಹೆಚ್ಚಾಗಿ  ಜನರು  ತೂಕ ನಷ್ಟಕ್ಕಾಗಿ ಆಹಾರದಲ್ಲಿ ಕೊಬ್ಬು ಸೇವನೆ ತೀರ ಕಡಿಮೆ ಮಾಡಿದ್ದರು. ಅಲ್ಲದೇ ಹಳೆಯ ಪೌಷ್ಟಿಕಾಂಶ ಪದ್ಧತಿಯಲ್ಲಿ ಕೊಬ್ಬನ್ನು ತಿನ್ನುವುದಕ್ಕೇ ಭಯಪಡುತ್ತಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಯ್ಯೋ ಎಲ್ಲಾರು ದಪ್ಪ ದಪ್ಪ ಅಂತಾರೆ ಅಂತ ತಲೆಕೆಡಿಸಿಕೊಳ್ಳೋ ಮಂದಿ ಸಾಕಷ್ಟು ಜನ ಇದ್ದಾರೆ. ಅದಕ್ಕಾಗಿ ಮಾಡದ ಕರಸತ್ತುಗಳು ಇಲ್ಲ ಬಿಡಿ. ಏನೇ ಮಾಡಿದ್ರು ಸಣ್ಣ ಆಗುತ್ತಿಲ್ಲ ಅಂತ ಯೋಚನೆ ಮಾಡ್ತಾ ಕುತ್ರೆ ಏನು ಪ್ರಯೋಜನ ಇಲ್ಲ. ತೂಕ ಇಳಿಸುವುದು ಹೇಳಿದಷ್ಟು ಸುಲಭವಲ್ಲ ಎಂದು ಈ ಪ್ರಯತ್ನ ನಡೆಸಿದ ಯಾವುದೇ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ಗೊತ್ತಾಗಿ ಬಿಡುತ್ತದೆ. ಪ್ರತೀವರ್ಷ ಲಕ್ಷಾಂತರ ಜನರು ತೂಕ ಇಳಿಕೆಗೆ ( weight loss )ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಕೆಲವರು ಸಕ್ಸಸ್‌ ಆದರೆ ಮತ್ತೆ ಕೆಲವರಿಗೆ ತೂಕ ಇಳಿಕೆ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವರು ಮೂರು-ನಾಲ್ಕು ತಿಂಗಳು ಕಷ್ಟಪಟ್ಟು ಮೈ ತೂಕ(body weight) ಇಳಿಸಿ ಕೊಳ್ಳುತ್ತಾರೆ. ಆದರೆ ತಮ್ಮ ಡಯಟ್‌ ಪ್ಲ್ಯಾನ್ ನಿಲ್ಲಿಸಿದ ಕೆಲವೇ ಕೆಲವೇ ತಿಂಗಳಿನಲ್ಲಿ ಮರಳಿ ದಪ್ಪಗಾಗುತ್ತಾರೆ.

  ತೂಕ ಇಳಿಕೆಗಾಗಿ ಕೊಬ್ಬಿನ ಅಂಶ ಇರುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತೂಕ ಇಳಿಸಲು ಪ್ರಯತ್ನ ಪಡುವವರು ದೂರ ಇಡುತ್ತಾರೆ. ಭಾರತದಲ್ಲಿ ಹೆಚ್ಚಾಗಿ  ಜನರು  ತೂಕ ನಷ್ಟಕ್ಕಾಗಿ ಆಹಾರದಲ್ಲಿ ಕೊಬ್ಬು ಸೇವನೆ ತೀರ ಕಡಿಮೆ ಮಾಡಿದ್ದರು. ಅಲ್ಲದೇ ಹಳೆಯ ಪೌಷ್ಟಿಕಾಂಶ ಪದ್ಧತಿಯಲ್ಲಿ ಕೊಬ್ಬನ್ನು ತಿನ್ನುವುದಕ್ಕೇ ಭಯಪಡುತ್ತಿದ್ದರು. ಆದರೆ ಈ ರೀತಿಯಾಗಿ ತೂಕ ಇಳಿಸಲು ದೂರಮಾಡುವ ಆಹಾರ ಪದಾರ್ಥಗಳಲ್ಲಿ ಹಾಲು (fat milk)ಕೂಡಾ ಸೇರಿದೆ. ಆದ್ರೆ ಹಾಲು ತೂಕ ಏರಿಸುವ ( weight loss )ಬದಲು ಇಳಿಕೆ ಮಾಡಲು ಸಹಾಯಕಾರಿಯಾಗಿದೆ ಎಂಬ ಅಂಶ ತಿಳಿದು ಬಂದಿದ್ದು, ಜನರು ಇನ್ಮುಂದೆ ತೂಕ ಇಳಿಕೆಗೆ ಹಾಲನ್ನು ಬಳಸುತ್ತಾರೆ ಎಂಬೋಣ

  ನ್ಯೂಟ್ರಿಷಿಯನ್ ತಜ್ಞರು

  ದಶಕಗಳ ಹಿಂದಿನ ನ್ಯೂಟ್ರಿಷಿಯನ್ ತಜ್ಞರು (nutrition guidelines )ಹಾಲು ಹಾಗೂ ನಟ್ಸ್‌ , ತುಪ್ಪದಂತ ಕೊಬ್ಬಿನಂಶ ( fats such as nuts, seeds, ghee, whole, or full-fat milk.)ಬಳಕೆಯಾಗುತ್ತದೆ ಎಂಬ ಮಾತು ಹೇಳುತ್ತಿದ್ದರು.. ಇದರಿಂದಾಗಿ ಜನರು ಕೊಬ್ಬಿನಾಂಶವಿರುವ ಹಾಲು ಸೇರಿ ಹಲವು ಆಹಾರ ಪದಾರ್ಥಗಳನ್ನು ದೂರವಿಟ್ಟು,ಕೆನೆರಹಿತ ಅಥವಾ ಟೋನ್ಡ್ ಹಾಲು ಆರೋಗ್ಯಕರ ಎಂದು ಅದನ್ನೇ ಬಳಕೆ ಮಾಡುತ್ತಿದ್ರು.. ಆದರೆ ವಾಸ್ತವಾಂಶ ಏನೆಂದರೆ ಈ ರೀತಿಯ ಕೆನೆರಹಿತ ಹಾಲು ಅಥವಾ ಟೋನ್ಡ್ ಹಾಲಿಗಿಂತ ಕೆನೆ ಇರುವ ಗಟ್ಟಿ ಹಾಲು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಅಂತೆ.

  ಪೌಷ್ಟಿಕಾಂಶಗಳ ಸಂಗ್ರಹ (Nutrition profile)
  ಸಂಸ್ಕರಿಸಿದ ಹಾಲು ಹಾಗೂ ಸಂಸ್ಕರಿಸದ ಹಾಲು ಎರಡು ಕೂಡ ಕೊಬ್ಬಿನಾಂಶದ ವಿಷಯದಲ್ಲಿ ಪರಸ್ಪರ ಭಿನ್ನವಾಗಿದೆ.. ಸಂಸ್ಕರಿಸದ ಹಾಲಿನಲ್ಲಿ 3.25 ಪ್ರತಿಶತದಷ್ಟು ಕೊಬ್ಬು ಇದ್ದು, ಸಂಸ್ಕರಿಸಿದ ಹಾಲು ಶೇಕಡಾ 1 ಪ್ರತಿಶತದಷ್ಟು ಹಾಲಿನ ಕೊಬ್ಬು ಹೊಂದಿರುತ್ತದೆ..ಹೀಗಾಗಿ ಸಂಸ್ಕರಿಸದ ಹಾಲು ದೇಹಕ್ಕೆ ಹೆಚ್ಚಿನ ಕ್ಯಾಲೋರಿಗಳನ್ನು ಒದಗಿಸುತ್ತದೆ.. ಜೊತೆಗೆ ಸಂಸ್ಕರಿಸದ ಹಾಲಿಗಿಂತ ಹೆಚ್ಚು ವಿಟಮಿನ್ ಡಿ ಮತ್ತು ಒಮೆಗಾ 3 ಯನ್ನು ಹೊಂದಿರುತ್ತದೆ. ಆದ್ರೆ ಸಂಸ್ಕರಿಸಿದ ಹಾಲಿನಲ್ಲಿ ವಿಟಮಿನ್ ಡಿ ಮಾತ್ರ ಇದ್ದು ಒಮೆಗಾ 3 ಇರುವುದಿಲ್ಲ

  ಊಹೆಗಳು ಸುಳ್ಳು
  1977ರ ಸುಮಾರಿಗೆ ರೂಪಿಸಲಾದ ಪೌಷ್ಠಿಕಾಂಶದ ಮಾರ್ಗಸೂಚಿಗಳಲ್ಲಿ(Conventional nutrition guidelines, formulated around), ,ಸ್ಯಾಚುರೇಟೆಡ್ ಕೊಬ್ಬಿನಂಶದಿಂದಾಗಿ ಪೂರ್ಣ-ಕೊಬ್ಬಿನ ಹಾಲನ್ನು ತಪ್ಪಿಸಲು ಸಲಹೆ ನೀಡಲಾಯಿತು ಏಕೆಂದರೆ ಸ್ಯಾಚುರೇಟೆಡ್ ಕೊಬ್ಬುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈ ಆರೋಪಗಳನ್ನು ಪುಷ್ಟೀಕರಿಸುವ ಅಂಶಗಳು ಈವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಸಂಸ್ಕರಿಸದ ಹಾಲು ಸೇವನೆ ಹೃದಯಾಘಾತ, ಪಾರ್ಶ್ವವಾಯು ಬರುವುದಕ್ಕೂ ಸಂಬಂಧ ಇಲ್ಲ ಎಂದು ಈವರೆಗೂ ಸಾಬೀತಾಗಿಲ್ಲ. ತೂಕ ನಷ್ಟಕ್ಕೆ ಪೂರ್ಣ-ಕೊಬ್ಬಿನ ಹಾಲು ಉತ್ತಮವಾಗಿದೆ. ಹೆಚ್ಚಿನ ಜನರು ಪೂರ್ಣ-ಕೊಬ್ಬಿನ ಹಾಲನ್ನು ದೂರವಿಡುತ್ತಾರೆ, ಹಾಲಿನಲ್ಲಿರುವ ಕೊಬ್ಬು ಮತ್ತು ಕ್ಯಾಲೊರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ ಎಂದು ನಂಬುತ್ತಾರೆ. ಆದರೆ ಸಂಸ್ಕರಿಸದ ಹಾಲು ಸೇವನೆಯಿಂದ, ( Full-fat milk is good )ತೂಕ ಇಳಿಕೆ ಮಾಡಿಕೊಳ್ಳಬಹುದಾಗಿದೆ..

  ಮೆಟಾಬಾಲಿಕ್ ಸಿಂಡ್ರೋಮ್‌ನ ( metabolic syndrome)ಅಪಾಯವನ್ನು ಕಡಿಮೆ ಮಾಡುತ್ತದೆ
  ಕಿಬ್ಬೊಟ್ಟೆಯ ಸ್ಥೂಲಕಾಯತೆ,ಟೈಪ್ 2 ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಸಂಸ್ಕರಿಸದ ಹಾಲು ಸಹಕಾರಿಯಾಗಿದೆ.. ಸಂಸ್ಕರಿಸಿದ ಹಾಲು ಸೇವನೆ ಮಾಡುವವರಿಗಿಂತ ಸಂಸ್ಕರಿಸದ ಹಾಲು ಸೇವನೆ ಮಾಡುವವರ ಟೈಪ್ 2ಮಧುಮೇಹ ಶೇ.44ರಷ್ಟು ಕಡಿಮೆ ಇದೆ. ಒಂದು ಅಧ್ಯಯನದಲ್ಲಿ, 1,800 ಕ್ಕಿಂತ ಹೆಚ್ಚು ಜನರಲ್ಲಿ, ಹೆಚ್ಚು ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸುವ ವಯಸ್ಕರು, ಕಡಿಮೆ ಸೇವಿಸುವವರಿಗೆ ಹೋಲಿಸಿದರೆ, ಮೆಟಾಬಾಲಿಕ್ ಸಿಂಡ್ರೋಮ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ 59 ಪ್ರತಿಶತ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಪರಿಣಾಮಕಾರಿ ತೂಕ ನಷ್ಟ ಅಥವಾ ಉತ್ತಮ ಚಯಾಪಚಯ ಆರೋಗ್ಯಕ್ಕಾಗಿ ಪೂರ್ಣ-ಕೊಬ್ಬಿನ ಹಾಲನ್ನು ಕಡಿಮೆ ಮಾಡಲು ನೀಡಲಾಗಿದ್ದ ಸಲಹೆ -ಹಳೆಯ ಮಾರ್ಗಸೂಚಿಗಳಿಗೆ ವೈಜ್ಞಾನಿಕ ಪುರಾವೆಗಳಿಲ್ಲ ಎನ್ನಬಹುದು.
  Published by:vanithasanjevani vanithasanjevani
  First published: