ಧಾವಂತದ ಬದುಕಿನಲ್ಲಿ (Life) ನಮ್ಮ ಆಹಾರದ (Food) ಬಗ್ಗೆ ಕಾಳಜಿ (Care) ವಹಿಸಲು ನಮಗೆ ಸಾಧ್ಯವಾಗಲ್ಲ. ಹಾಗಾದಾಗ ನಮ್ಮ ದೇಹದಲ್ಲಿ (Body) ಅನೇಕ ಪೋಷಕಾಂಶಗಳು (Nutrients) ಪೂರೈಕೆಯಾಗದೇ ಪೋಷಕಾಂಶ ಕೊರತೆ ಕಾಡುತ್ತದೆ. ಈ ಪೋಷಕಾಂಶಗಳನ್ನು ಸುಲಭವಾಗಿ ಪೂರೈಸಲು ಹಣ್ಣುಗಳ ಸೇವನೆ ಉತ್ತಮ ಮಾರ್ಗ. ಸೀಸನ್ ನಲ್ಲಿರುವ ಹಣ್ಣುಗಳ ಸೇವನೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಾಗಾಗಿ ಇಂದು ನಾವು ಪೇರಳೆ ಹಣ್ಣಿನ (Guava Fruit) ಎಲೆಗಳು ಹೇಗೆ ಆರೋಗ್ಯ ವರ್ಧಕ ಎಂದು ನೋಡೋಣ. ಪೇರಳೆ ಸೇವನೆಯು ದೇಹವನ್ನು ಆರೋಗ್ಯವಾಗಿ ಇಡುವುದರ ಜೊತೆಗೆ ಅನೇಕ ರೋಗಗಳಿಂದ ರಕ್ಷಣೆ ಮಾಡುತ್ತದೆ. ಪೇರಳೆ ಔಷಧೀಯ ಗುಣ ಹೊಂದಿದೆ ಎಂಬುದನ್ನು ತಿಳಿಯೋಣ.
ಆಯುರ್ವೇದ ತಜ್ಞರು ದೀಕ್ಸಾ ಭಾವಸರ್ ಅವರ ಪ್ರಕಾರ, ಪೇರಳೆ ಹಣ್ಣು ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿಡುತ್ತದೆ. ಇದು ಅವುಗಳನ್ನು ಅನನ್ಯವಾಗಿಸುತ್ತದೆ. ಇದು ಕ್ಯಾರೊಟಿನಾಯ್ಡ್ಗಳು ಮತ್ತು ಪಾಲಿಫಿನಾಲ್ ಹೊಂದಿದೆ.
ವಯಸ್ಸಾಗುವಿಕೆಯ ವಿರೋಧಿ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣ ಹೊಂದಿದೆ. ಚರ್ಮ ಮತ್ತು ಕೂದಲಿಗೆ ಉತ್ತಮ. ಪೇರಳೆ ಹಣ್ಣು, ಎಲೆ ಮತ್ತು ತೊಗಟೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.
ಮಧುಮೇಹ ನಿಯಂತ್ರಿಸುತ್ತದೆ
ಮಧುಮೇಹದಲ್ಲಿ ಸಿಪ್ಪೆ ತೆಗೆದ ಪೇರಳೆ ಸೇವಿಸುವುದು ರಕ್ತದ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಿಸ್ಯಾಕರೈಡ್ ಅಂಶವು ಟೈಪ್-2 ಮಧುಮೇಹ ಕಡಿಮೆ ಮಾಡುತ್ತದೆ. ಪೇರಳೆ ಎಲೆಯ ಸಾರವು ಆ್ಯಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣ ಹೊಂದಿದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಆಹಾರದಲ್ಲಿ ಪೇರಳೆ ಸೇರಿಸಿ.
ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ
ಪೇರಳೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಲೈಕೋಪೀನ್ ಎಂಬ ಸಂಯುಕ್ತ ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ವಿರುದ್ಧ ಕೀಮೋಪ್ರೆವೆಂಟಿವ್ ಪರಿಣಾಮ ಹೊಂದಿದೆ. ಅಪಾಯ ಕಡಿಮೆ ಮಾಡುತ್ತದೆ.
ಜೀರ್ಣಶಕ್ತಿ ಹೆಚ್ಚಿಸುತ್ತದೆ
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಇದು ಉತ್ತಮ ಪ್ರಮಾಣದ ಆಹಾರದ ಫೈಬರ್ ಹೊಂದಿದೆ. ಫೈಬರ್ ಕೊರತೆ ಮಲಬದ್ಧತೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಪೇರಳೆಯಲ್ಲಿ ವಿಟಮಿನ್ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್-ಸಿ ರೋಗ ನಿರೋಧಕ ವ್ಯವಸ್ಥೆ ಸುಧಾರಿಸುತ್ತದೆ. ರೋಗಕಾರಕಗಳ ವಿರುದ್ಧ ಹೋರಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಆರೋಗ್ಯಕರ ಹೃದಯಕ್ಕೆ ಸಹಕಾರಿ
ಪೇರಳೆ ಸೇವನೆ ಹೃದಯಕ್ಕೂ ಪ್ರಯೋಜನಕಾರಿ. ಪೊಟ್ಯಾಸಿಯಮ್ ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಕೆಲಸ ಮಾಡುತ್ತದೆ. ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. ಪೇರಳೆಯರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಕಣ್ಣುಗಳಿಗೂ ಪ್ರಯೋಜನಕಾರಿ
ಪೌಷ್ಟಿಕಾಂಶದ ಅಂಶಗಳ ಕೊರತೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸುತ್ತದೆ. ಪೇರಳೆಯಲ್ಲಿರುವ ವಿಟಮಿನ್-ಎ, ಸಿ, ಫೋಲೇಟ್, ಸತು ಮತ್ತು ತಾಮ್ರ ಗುಣಗಳು ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಇದರ ಎಲೆಗಳನ್ನು ಹೇಗೆ ಬಳಸಬೇಕೆಂದು ಈಗ ತಿಳಿಯಿರಿ
ಪೇರಳೆ ಎಲೆಗಳ ಕಷಾಯ
ಹತ್ತು ಪೇರಳೆ ಎಲೆಗಳನ್ನು ನಾಲ್ಕು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಅರ್ಧಕ್ಕೆ ಬಂದ ನಂತರ ಶೋಧಿಸಿ ಕುಡಿಯಿರಿ. ಮುಟ್ಟಿನ ಸೆಳೆತ, ಆಮ್ಲೀಯತೆ, ಮಧುಮೇಹಕ್ಕೆ ಈ ಕಷಾಯವನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಗಾರ್ಗ್ಲಿಂಗ್ ಮಾಡಿದ್ರೆ ಬಾಯಿ ಹುಣ್ಣು, ಒಸಡು ರಕ್ತಸ್ರಾವ ಮತ್ತು ಬಾಯಿಯ ಆರೋಗ್ಯಕ್ಕೆ ಕಾಪಾಡುತ್ತದೆ. ಕೂದಲ ಉದುರುವಿಕೆ ತಡೆಯುತ್ತದೆ.
ಪೇಸ್ಟ್ ರೂಪದಲ್ಲಿ ಪೇರಳೆ ಎಲೆ ಬಳಕೆ
ತಾಜಾ ಪೇರಳೆ ಎಲೆಗಳ ಪೇಸ್ಟ್ ಉರಿಯೂತ, ಜ್ವರ, ತಲೆನೋವು ಮತ್ತು ಕೀಲು ನೋವು ನಿವಾರಿಸುತ್ತದೆ. ಇದು ಪೇರಳೆತಿನ್ನಲು ಉತ್ತಮ ಸಮಯ
ಇದನ್ನೂ ಓದಿ: ಪಿಸಿಒಎಸ್ ಇಂದ ಉಂಟಾಗುವ ಮೊಡವೆ ಸಮಸ್ಯೆ ತೊಡೆದು ಹಾಕಲು ತಜ್ಞರು ಹೇಳಿದ ಸಲಹೆ ಹೀಗಿದೆ!
ಮಧ್ಯಾಹ್ನದ ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟದ ನಂತರ 2 ಗಂಟೆಗಳ ನಂತರ ಸೇವಿಸಿ. ಸಂಜೆ ತಡವಾಗಿ, ಮುಂಜಾನೆ ಅಥವಾ ರಾತ್ರಿ ತಿನ್ನುವುದನ್ನು ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ