• Home
  • »
  • News
  • »
  • lifestyle
  • »
  • Childhood Obesity: ಬೆಳೆಯುವ ಮಕ್ಕಳಲ್ಲಿ ಹೆಚ್ಚುತ್ತಿದೆ ಅಧಿಕ ತೂಕದ ಸಮಸ್ಯೆ, ಪೋಷಕರೇ ಇರಲಿ ಎಚ್ಚರ

Childhood Obesity: ಬೆಳೆಯುವ ಮಕ್ಕಳಲ್ಲಿ ಹೆಚ್ಚುತ್ತಿದೆ ಅಧಿಕ ತೂಕದ ಸಮಸ್ಯೆ, ಪೋಷಕರೇ ಇರಲಿ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಗರ ಪ್ರದೇಶಗಳಲ್ಲಿ ಅಧಿಕ ತೂಕದ ಮಕ್ಕಳ ಪ್ರಮಾಣ ಹೆಚ್ಚಿದೆ. ಅಧಿಕ ಮತ್ತು ಸ್ಥೂಲಕಾಯ ಸಮಸ್ಯೆ ಹೊಂದಿರುವ ಈ ಮಕ್ಕಳು ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳಿಂದ ಬಂದವರು ಹಾಗೂ ಅವರ ತಾಯಂದಿರು ಸಹ ಅಧಿಕ ತೂಕ ಹೊಂದಿದ್ದಾರೆ ಎಂಬುದನ್ನು ಕಂಡು ಹಿಡಿಯಲಾಗಿದೆ.

  • Share this:

    ಈ ಹಿಂದೆ ಅಧಿಕ ತೂಕ ಮತ್ತು ಸ್ಥೂಲಕಾಯ (More Weight And Obesity) ಸಮಸ್ಯೆ ಅಭಿವೃದ್ಧಿ ಹೊಂದಿದ ದೇಶಗಳ ಜನರಲ್ಲಿ (People) ಕಾಣಿಸಿಕೊಳ್ಳುವ ಕಾಯಿಲೆಗಳೆಂದು (Disease) ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ರೋಗವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೂ ಕಂಡು ಬರುತ್ತಿದೆ. ಅಧಿಕ ತೂಕ ಮತ್ತು ಸ್ಥೂಲಕಾಯ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ತುಂಬಾ ಜನರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದು, ವಿವಿಧ ಕಾಯಿಲೆಗಳಿಗೆ ಗುರಿಯಾಗಿದ್ದಾರೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಿದೆ. ಇತ್ತ ಚಿಕ್ಕಮಕ್ಕಳೂ (Children’s) ಸಹ ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಅನೇಕ ರೋಗಗಳ ಸಂಕೇತವಾಗಿದೆ. ಬೆಳೆಯುವ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ಹಲವು ಕಾಯಿಲೆ ತಂದೊಡ್ಡಲಿದ್ದು, ಅಪಾಯಕಾರಿಯಾಗಿದೆ.


    ಬೆಳೆಯುವ ಮಕ್ಕಳಲ್ಲಿ ಹೆಚ್ಚುತ್ತಿದೆ ಅಧಿಕ ತೂಕ ಮತ್ತು ಸ್ಥೂಲಕಾಯ ಸಮಸ್ಯೆ


    ಬೆಳೆಯುವ ಸಮಯದಲ್ಲಿ ಮಕ್ಕಳು ಸ್ಥೂಲಕಾಯ ಎದುರಿಸುತ್ತಿರುವುದು ಕಾಯಿಲೆ ಮೂಲಕ ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಡ್ಯೂಕ್ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಫಿಂಕೆಲ್‌ಸ್ಟೈನ್ ಮತ್ತು ಇತರರು ಹೇಳುವ ಪ್ರಕಾರ, ಬಾಲ್ಯದಲ್ಲಿ ಬೊಜ್ಜು ಇದ್ದರೆ ಅದು ವೈದ್ಯಕೀಯ ವೆಚ್ಚ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.


    ಹೆಚ್ಚುತ್ತಿದೆ ಸ್ಥೂಲಕಾಯ ಮಕ್ಕಳ ಸಂಖ್ಯೆ


    ಕಳೆದ ಎರಡು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಐದು ವರ್ಷದೊಳಗಿನ ಅಧಿಕ ತೂಕದ ಮಕ್ಕಳ ಪ್ರಮಾಣವು 2015-16 ರಲ್ಲಿ 2.1ಪ್ರತಿಶತ ರಿಂದ 2019-21 ರಲ್ಲಿ 3.4 ಪ್ರತಿಶತ ಕ್ಕೆ ಏರಿಕೆ ಆಗಿದೆ. ಸಮೀಕ್ಷೆ ನಡೆಸಿದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, 33 ಅಧಿಕ ತೂಕದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ.




    ನಗರ ಪ್ರದೇಶದಲ್ಲಿದ್ದಾರೆ ಹೆಚ್ಚು ಅಧಿಕ ತೂಕದ ಮಕ್ಕಳು


    ಎನ್ ಎಫ್ ಎಚ್ ಎಸ್ ದತ್ತಾಂಶವು ನಗರ ಪ್ರದೇಶಗಳಲ್ಲಿ ಅಧಿಕ ತೂಕದ ಮಕ್ಕಳ ಪ್ರಮಾಣ ಹೆಚ್ಚಿದೆ ಎಂದು ಹೇಳಿದೆ. ಅಧಿಕ ಮತ್ತು ಸ್ಥೂಲಕಾಯ ಸಮಸ್ಯೆ ಹೊಂದಿರುವ ಈ ಮಕ್ಕಳು ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳಿಂದ ಬಂದವರು ಹಾಗೂ ಅವರ ತಾಯಂದಿರು ಸಹ ಅಧಿಕ ತೂಕ ಹೊಂದಿದ್ದಾರೆ ಎಂಬುದನ್ನು ಕಂಡು ಹಿಡಿಯಲಾಗಿದೆ.


    ಮುಖ್ಯವಾಗಿ ಆಹಾರದಲ್ಲಿ ಹೆಚ್ಚಿನ ಕ್ಯಾಲೊರಿ ಸೇವಿಸುವುದು ಮತ್ತು ಕಡಿಮೆ ಕ್ಯಾಲೊರಿ ಪದಾರ್ಥ ಸೇವನೆ ಹೀಗೆ ಆಹಾರದ ಅಸಮತೋಲನದಿಂದಾಗಿ ಬೊಜ್ಜು ಉಂಟಾಗುತ್ತದೆ. ಕೊಬ್ಬು ಮತ್ತು ಸಕ್ಕರೆ ಸಿಹಿ ಸೇವನೆ ಹಾಗೂ ಜಡ ಜೀವನಶೈಲಿಯಿಂದ ಜನರು ಹೆಚ್ಚು ನಿಷ್ಕ್ರಿಯ ಸ್ಥಿತಿಯಿಂದಾಗಿ ಬೊಜ್ಜು ಹೆಚ್ಚಾಗುತ್ತದೆ.


    ಸಾರಿಗೆ, ನಗರೀಕರಣ, ಜಡ ಜೀವನಶೈಲಿ, ಜಂಕ್ ಫುಡ್ ಸೇವನೆ, ಪರಿಸರ ಮತ್ತು ಸಾಮಾಜಿಕ ಬದಲಾವಣೆ ಬೊಜ್ಜು ಹೆಚ್ಚಳಕ್ಕೆ ಕಾರಣವಾಗುತ್ತಿದೆ.


    ಸ್ಥೂಲಕಾಯ ಮತ್ತು ರೋಗಗಳ ಅಪಾಯ


    ಸ್ಥೂಲಕಾಯ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಸಿವು, ಚಯಾಪಚಯ ತೊಂದರೆ, ಕೊಬ್ಬು ಹೆಚ್ಚಳ, ಹಾರ್ಮೋನು ವ್ಯತ್ಯಾಸ, ತೂಕ ಹೆಚ್ಚಳ ಹೀಗೆ ಚಿಕ್ಕ ವಯಸ್ಸಿನಲ್ಲೇ ಮೂಳೆ ಸವೆತ ತೊಂದರೆ ಉಂಟಾಗುತ್ತದೆ. ದೀರ್ಘಕಾಲದ ಬೊಜ್ಜು ಹೃದಯ ಮತ್ತು ಹೊಟ್ಟೆ ಕಾಯಿಲೆ ಅಪಾಯ ಹೆಚ್ಚಿಸುತ್ತದೆ.


    ಮಾನಸಿಕ ಆರೋಗ್ಯ


    ಮಕ್ಕಳು ಮತ್ತು ಯುವಕರಲ್ಲಿ ಸ್ಥೂಲಕಾಯ ಕೀಳರಿಮೆ ಉಂಟು ಮಾಡುತ್ತದೆ. ಮಾನಸಿಕ ಆರೋಗ್ಯ ಹದಗೆಡಿಸುತ್ತದೆ. ಶಿಕ್ಷಣ ಮತ್ತು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪೌಷ್ಟಿಕಾಂಶದ ಕೊರತೆ ಮತ್ತು ಅಧಿಕ ತೂಕ ಅಥವಾ ಸಾಂಕ್ರಾಮಿಕವಲ್ಲದ ರೋಗಗಳು ಅಪೌಷ್ಟಿಕತೆಗೆ ಕಾರಣವಾಗಿವೆ. ಡಬ್ಲ್ಯು ಎಚ್ ಒ ಅಧಿಕ ತೂಕದ ಅಪಾಯ ಕಡಿಮೆ ಮಾಡಲು ಡಬಲ್ ಡ್ಯೂಟಿ ಆಕ್ಷನ್ ಪರಿಚಯಿಸಿದೆ.


    ಇದನ್ನೂ ಓದಿ: ಆಹಾರದಲ್ಲಿ ಬಳಸುವ ಈ 3 ಬಿಳಿ ಪದಾರ್ಥಗಳು ಸ್ಥೂಲಕಾಯ ಹಾಗೂ ಹೃದಯಕ್ಕೆ ಹಾನಿಕರ!


    ಆಟದ ಮೈದಾನ ಮತ್ತು ಹೊರಾಂಗಣ ಆಟ


    ದೈಹಿಕ ಚಟುವಟಿಕೆ ಉತ್ತೇಜಿಸಬೇಕು. ಮೇಳಗಳನ್ನು ಆಯೋಜಿಸುವುದು, ಶಾಲಾ ಆವರಣದ ಸುತ್ತಲೂ ಜಂಕ್-ಫುಡ್ ಲಭ್ಯತೆ ತೆಗೆದು ಹಾಕುವುದು. ಪೌಷ್ಟಿಕಾಂಶದ ಸೂಕ್ಷ್ಮತೆ ಹೆಚ್ಚಿಸುವುದು ಮಾಡಬೇಕು.

    Published by:renukadariyannavar
    First published: