Grinding Teeth: ಸದಾ ಹಲ್ಲು ಕಡಿಯುವುದು ಈ ಕಾಯಿಲೆ ಲಕ್ಷಣವಂತೆ

ಒಬ್ಬ ವ್ಯಕ್ತಿಯು ನಿದ್ರೆಯಲ್ಲಿ ತನ್ನ ಹಲ್ಲುಗಳನ್ನು ಕಡಿಯುವ ಕಾಯಿಲೆ ಅಥವಾ ಹಲ್ಲುಗಳಿಂದ ಕಟ ಕಟ ಎಂಬ ಶಬ್ದ ಬರುತ್ತದೆ. ಇದರಲ್ಲಿ ನಿಮ್ಮ ಹಲ್ಲುಗಳು ಹೆಚ್ಚು ಸೂಕ್ಷ್ಮವಾಗುತ್ತವೆ. ದವಡೆ ಸ್ನಾಯುಗಳು ಇದರಿಂದ ನೋಯುತ್ತವೆ. ನೀವು ತಲೆನೋವಿನಿಂದ ಬಳಲಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾತ್ರಿ (Night) ನಿಮಗೆ ಸರಿಯಾದ ನಿದ್ದೆ (Sleep) ಬರುತ್ತಿಲ್ಲವೇ? ಹಾಗೆಯೇ ನೀವು ಬೆಳಿಗ್ಗೆ ಎದ್ದ ತಕ್ಷಣ ಗಂಟಲು ನೋವು (Throat Pain) ಅಥವಾ ತಲೆನೋವಿನಂತಹ (Headache) ರೋಗ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದೀರಾ? ಹೌದು ಎಂದು ಹೇಳುವುದಾದರೆ, ನೀವು ಕೆಲವು ದೇಹದ ಒಳಗೆ ಅಂದ್ರೆ ಆಂತರಿಕ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂಬ ಸಂಕೇತ ನೀಡುತ್ತದೆ.  ಅದರ ಬಗ್ಗೆ ನಿಮಗೆ ಮಾಹಿತಿ ತಿಳಿದಿರುವುದಿಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಬ್ರಕ್ಸಿಸಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರೆ ಈ ರೀತಿಯ ಸಂಕೇತಗಳು ಸಿಗುತ್ತವೆ. ವೈದ್ಯಕೀಯ ಭಾಷೆಯಲ್ಲಿ ಈ ರೋಗವನ್ನು ಹಲ್ಲು ಕಡಿಯುವುದು ಎಂದು ಹೇಳುತ್ತಾರೆ.

  ಹಲ್ಲುಗಳನ್ನು ಕಡಿಯುವ ಕಾಯಿಲೆ

  ಇದು ಒಬ್ಬ ವ್ಯಕ್ತಿಯು ನಿದ್ರೆಯಲ್ಲಿ ತನ್ನ ಹಲ್ಲುಗಳನ್ನು ಕಡಿಯುವ ಕಾಯಿಲೆ ಅಥವಾ ಹಲ್ಲುಗಳಿಂದ ಕಟ ಕಟ ಎಂಬ ಶಬ್ದ ಬರುತ್ತದೆ. ಇದರಲ್ಲಿ ನಿಮ್ಮ ಹಲ್ಲುಗಳು ಹೆಚ್ಚು ಸೂಕ್ಷ್ಮವಾಗುತ್ತವೆ.  ಹಾನಿ ಉಂಟಾಗುತ್ತವೆ. ದವಡೆ ಸ್ನಾಯುಗಳು ಇದರಿಂದ ನೋಯುತ್ತವೆ. ಮತ್ತು ನೀವು ತಲೆನೋವಿನಿಂದ ಬಳಲಬಹುದು. ಹೀಗಾಗಿ ಈ ಸ್ಥಿತಿಗೆ ತಕ್ಷಣ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ.

  ಈ ರೋಗವು ಸ್ಲೀಪ್ ಅಪ್ನಿಯ ಎಂಬ ಕಾಯಿಲೆ ಉಂಟು ಮಾಡುವುದಕ್ಕೆ ಸಂಬಂಧಪಟ್ಟಿದೆ. ಈ ರೋಗವು ನಿದ್ರಾಹೀನತೆಗೆ ಸಹ ಸಂಬಂಧ ಪಟ್ಟಿದೆ. ಗಂಟಲಿನ ಸ್ನಾಯುಗಳು ರಾತ್ರಿಯಲ್ಲಿ ವಿಶ್ರಾಂತಿ ಪಡೆದಾಗ ಮತ್ತು ಶ್ವಾಸನಾಳಕ್ಕೆ ಅಡ್ಡಿಪಡಿಸಿದಾಗ ಇದು ಸಂಭವಿಸುತ್ತದೆ. ಇದು ಉಸಿರಾಟದ ಅಡಚಣೆ ಉಂಟು ಮಾಡುತ್ತದೆ.

  ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

  ಇದರರ್ಥ ನೀವು ಬ್ರಕ್ಸಿಸಮ್ನಿಂದ ಪರಿಹಾರ ಪಡೆಯಲು ಬಯಸಿದರೆ, ನಿಮ್ಮ ನಿದ್ರೆಯ ಗುಣಮಟ್ಟವನ್ನು ನೀವು ಸುಧಾರಿಸಬೇಕು. ಇದಕ್ಕಾಗಿ ನೀವು ಹಲವು ವಿಧಾನ ಪ್ರಯತ್ನಿಸಿ.

  ಕೆಫೀನ್ ಸೇವನೆ ತಪ್ಪಿಸಿ

  ನಿಮ್ಮ ಹಲ್ಲುಗಳ ಆರೋಗ್ಯವು ನೀವು ತಿನ್ನುವ ಆಹಾರದಿಂದ ಪ್ರಭಾವಿತವಾಗಿವೆ. ಕಾಫಿ, ಕೋಲಾ ಮತ್ತು ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಕೆಫೀನ್ ಹೆಚ್ಚಿರುತ್ತದೆ. ಅವುಗಳನ್ನು ಕಡಿಮೆ ಸೇವನೆ ಮಾಡಲು ಪ್ರಯತ್ನಿಸಿ. ಈ ವಿಷಯಗಳು ನಿಮ್ಮನ್ನು ತುಂಬಾ ಪ್ರಕ್ಷುಬ್ಧ ಮತ್ತು ಕ್ರಿಯಾಶೀಲರನ್ನಾಗಿ ಮಾಡಬಹುದು. ನೀವು ಮಲಗಿರುವಾಗ ಈ ಸಮಸ್ಯೆ ಎದುರಿಸಬಹುದು.

  ಒತ್ತಡ ಕಡಿಮೆ ಮಾಡುತ್ತದೆ

  ಒತ್ತಡವು ಬ್ರಕ್ಸಿಸಮ್ಗೆ ಸಾಮಾನ್ಯ ಕಾರಣ ಆಗಿದೆ. ಒತ್ತಡ ತೊಡೆದು ಹಾಕಲು ಪರಿಣಾಮಕಾರಿ ಯೋಜನೆ ಮಾಡಿ. ಉತ್ತಮ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಯೋಗ ಮತ್ತು ಧ್ಯಾನ ಮಾಡಿ. ತ್ವರಿತ ಆಹಾರ, ಸೋಡಾ ಪಾನೀಯ ಮತ್ತು ಸಕ್ಕರೆ ಆಹಾರ ಸೇವನೆ ತಪ್ಪಿಸಿ.

  ಅನಗತ್ಯ ವಸ್ತುಗಳ ಅಗಿಯುವಿಕೆ ತಪ್ಪಿಸಿ

  ಅನೇಕ ಜನರು ಉಗುರು, ಕಬ್ಬಿಣ, ಬಟ್ಟೆ ಅಥವಾ ರಬ್ಬರ್ ಮುಂತಾದ ವಸ್ತುಗಳನ್ನು ಜಗಿಯುವ ಅಭ್ಯಾಸ ಹೊಂದಿದ್ದಾರೆ. ಈ ಅಭ್ಯಾಸವು ನಿಮ್ಮ ಹಲ್ಲುಗಳನ್ನು ಪುಡಿ ಮಾಡಲು ನೇರವಾಗಿ ಸಂಬಂಧಿಸಿದೆ ಮತ್ತು ಅದನ್ನು ತಪ್ಪಿಸಬೇಕು. ಬದಲಾಗಿ ದಿನಕ್ಕೆ ಹಲವು ಬಾರಿ ಚೂಯಿಂಗ್ ಗಮ್, ಪುದೀನ ಅಥವಾ ಲಘು ಆಹಾರ ತಿನ್ನಲು ಪ್ರಯತ್ನಿಸಿ.

  ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಪದಾರ್ಥಗಳನ್ನು ಸೇವಿಸಿ

  ಈ ರೋಗವು ನಿಮಗೆ ಕೆಲವು ಪೂರಕಗಳ ಕೊರತೆ ಸೂಚಿಸುತ್ತದೆ. ಜೀವಸತ್ವಗಳು ಮತ್ತು ಪೂರಕಗಳನ್ನು ಸೇವನೆ ಮಾಡಿ. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧ ಆಹಾರ ಸೇವನೆ ಮಾಡಿ.

  ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

  ಮಲಗುವ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯಿರಿ

  ಬ್ರಕ್ಸಿಸಂನಿಂದ ಪರಿಹಾರ ಪಡೆಯಲು, ಮಲಗುವ ಮುನ್ನ ನೀವು ಶಾಂತವಾಗಿರಿ. ಮತ್ತು ವಿಶ್ರಾಂತಿ ಪಡೆಯಬೇಕು. ಮಲಗುವ ಮುನ್ನ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಬಳಸುವುದು ಅಪಾಯವನ್ನು ಹೆಚ್ಚಿಸುತ್ತದೆ. ನೀವು ಗಿಡಮೂಲಿಕೆ ಚಹಾವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಕುತ್ತಿಗೆ, ಭುಜಗಳು ಮತ್ತು ಮುಖವನ್ನು ಮಸಾಜ್ ಮಾಡಬಹುದು.
  Published by:renukadariyannavar
  First published: