• Home
  • »
  • News
  • »
  • lifestyle
  • »
  • Green vs Red Apple: ಯಾವ ಬಣ್ಣದ ಸೇಬು ಆರೋಗ್ಯಕ್ಕೆ ಉತ್ತಮ? ತಜ್ಞರು ಹೇಳ್ತಾರೆ ಕೇಳಿ

Green vs Red Apple: ಯಾವ ಬಣ್ಣದ ಸೇಬು ಆರೋಗ್ಯಕ್ಕೆ ಉತ್ತಮ? ತಜ್ಞರು ಹೇಳ್ತಾರೆ ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Which is Healthy Apple; ಮಾರುಕಟ್ಟೆಯಲ್ಲಿ ಹಸಿರು ಬಣ್ಣ ಮತ್ತು ಕೆಂಪು ಬಣ್ಣದ ಆ್ಯಪಲ್​ಗಳನ್ನು ಮಾರುತ್ತಾರೆ. ಅನೇಕರು ಎರಡು ಬಣ್ಣದ ಆ್ಯಪಲ್​ಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಇವೆಡರಲ್ಲಿ ಆರೋಗ್ಯಕ್ಜೆ ಉತ್ತಮವಾದದ್ದು ಯಾವುದು? ಇದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಗೊತ್ತಾ?. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಸೇಬುಗಳು (Apple) ವರ್ಷವಿಡೀ ಮಾರುಕಟ್ಟೆಯಲ್ಲಿ (Market) ಲಭ್ಯವಿರುತ್ತವೆ. ಒಂದು ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅದೇನೆಂದರೆ ದಿನಾಲು ಒಂದು ಸೇಬು ಹಣ್ಣನ್ನು (Fruits)  ತಿನ್ನುವುದರಿಂದ, ನಾವು ರೋಗಗಳಿಂದ ದೂರವಿರಬಹುದು ಅಂತಾರೆ.  ಸೇಬು ಹಣ್ಣುಗಳು ಪೋಷಕಾಂಶಗಳು ಮತ್ತು ರುಚಿಗೆ ಹೆಸರುವಾಸಿಯಾಗಿವೆ. ಮಾರುಕಟ್ಟೆಯಲ್ಲಿ ಹಸಿರು ಬಣ್ಣ (Green Apple) ಮತ್ತು ಕೆಂಪು ಬಣ್ಣದ (Red Apple) ಆ್ಯಪಲ್​ಗಳನ್ನು ಮಾರುತ್ತಾರೆ. ಅನೇಕರು ಎರಡು ಬಣ್ಣದ ಆ್ಯಪಲ್​ಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಇವೆಡರಲ್ಲಿ ಆರೋಗ್ಯಕ್ಜೆ ಉತ್ತಮವಾದದ್ದು ಯಾವುದು? ಇದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಗೊತ್ತಾ?. ಈ ಬಗ್ಗೆ ಮಾಹಿತಿ ಇಲ್ಲಿದೆ.


ಈ ಸೇಬು ಹಣ್ಣುಗಳಲ್ಲಿಯೂ ಸಹ ಎರಡು ವಿಧಗಳಿವೆ. ಅವುಗಳೇಂದರೆ ಕೆಂಪು ಮತ್ತು ಹಸಿರು ಸೇಬು. ನಿಮಗೆ ಎರಡು ವಿಧದ ಸೇಬು ಹಣ್ಣುಗಳು ಇಷ್ಟವೆಂದ್ರೆ, ಅವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ ಅಂತ ನೀವು ಯೋಚ್ನೆ ಮಾಡ್ತಿದ್ರೆ, ನಿಮಗೆ ಸೂಕ್ತ ಉತ್ತರವನ್ನು ಡಯೆಟಿಷಿಯನ್ ಶಿಖಾ ಕುಮಾರಿ ಅವರು ಈ ಲೇಖನದಲ್ಲಿಂದು ನೀಡಲಿದ್ದಾರೆ.


ಡಯೆಟಿಷಿಯನ್‌ ಶಿಖಾ ಕುಮಾರಿ ಹೇಳುವುದೇನು?


“ಹಸಿರು ಸೇಬುಗಳು ರುಚಿಯಲ್ಲಿ ಹುಳಿ ಮತ್ತು ಅವುಗಳ ಸಿಪ್ಪೆಯು ಸಹ ದಪ್ಪವಾಗಿರುತ್ತದೆ. ಇದರಿಂದ ಹಸಿರು ಸೇಬು ತಿನ್ನಲು ಗರಿ ಗರಿಯಾಗಿರುತ್ತವೆ. ಮತ್ತೊಂದೆಡೆ ಕೆಂಪು ಸೇಬುಗಳು ಸಿಹಿ, ರಸಭರಿತ ಮತ್ತು ತೆಳುವಾದ ಸಿಪ್ಪೆಯನ್ನು ಹೊಂದಿರುತ್ತವೆ. ಇದರ ಕಾರಣವಾಗಿ ಜನರು ಹಸಿರು ಸೇಬುಗಳಿಗಿಂತ ಕೆಂಪು ಸೇಬುಗಳನ್ನು ಇಷ್ಟಪಡುತ್ತಾರೆ ”ಎಂದು ಡಯೆಟಿಷಿಯನ್‌ ಶಿಖಾ ಕುಮಾರಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಇವೆರಡು ಹಣ್ಣುಗಳ ಪೌಷ್ಟಿಕಾಂಶದಲ್ಲಿ ವ್ಯತ್ಯಾಸವೇನಿದೆ?


ಎರಡು ವಿಧದ ಸೇಬು ಹಣ್ಣುಗಳ ನಡುವೆ ಪೌಷ್ಟಿಕಾಂಶದ ವಿಷಯದಲ್ಲಿ ಸಣ್ಣ ವ್ಯತ್ಯಾಸಗಳಿವೆ. ಹಸಿರು ಸೇಬು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲ.


ಇದನ್ನೂ ಓದಿ: ಈ ಮನೆಮದ್ದು ಬಳಸಿ ಡಾರ್ಕ್ ಸರ್ಕಲ್ ಸಮಸ್ಯೆಗೆ ಬೈಬೈ ಹೇಳಿ


ಅಲ್ಲದೆ ಹಸಿರು ಸೇಬು ಹೆಚ್ಚು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳನ್ನು ಸಹ ಹೊಂದಿದೆ. ಗ್ರೀನ್‌ ಆ್ಯಪಲ್ ಸೇವಿಸುದರಿಂದ ಸತ್ವಗಳು ದೇಹಕ್ಕೆ ಸಿಗುತ್ತದೆ. ಅಷ್ಟು ಮಾತ್ರವಲ್ಲ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ.




"ಒಟ್ಟಾರೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ನೀವು ಪ್ರಯತ್ನಿಸುತ್ತಿದ್ದರೆ ಕೆಂಪು ಸೇಬು ಹಣ್ಣುಗಳಿಂದ ಹಸಿರು ಸೇಬುಗಳಿಗೆ ಬದಲಾಯಿಸಿಕೊಳ್ಳುವುದು ಉತ್ತಮ. ಮತ್ತೊಂದೆಡೆ, ಕೆಂಪು ಸೇಬುಗಳು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚು ರುಚಿಕರವಾಗಿರುತ್ತವೆ, ”ಎಂದು ಕುಮಾರಿ ಹೇಳುತ್ತಾರೆ.


ಹಾಗಿದ್ರೆ, ಕೆಂಪು ಸೇಬಿಗಿಂತ ಹಸಿರು ಸೇಬು ಆರೋಗ್ಯಕರವೇ?


“ಹಸಿರು ಸೇಬು ಕೆಂಪು ಸೇಬಿಗಿಂತ ಹೆಚ್ಚು ಪ್ರಯೋಜನಕಾರಿಯಲ್ಲದಿದ್ದರೂ ಎರಡೂ ಸಮಾನವಾದ ಪೌಷ್ಟಿಕಾಂಶವನ್ನೆ ದೇಹಕ್ಕೆ ನೀಡುತ್ತವೆ. ಕೆಂಪು ಸೇಬುಗಳನ್ನು ಎಲ್ಲರೂ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಪ್ರತಿ ಮನೆಯಲ್ಲಿಯೂ ಅವುಗಳನ್ನೆ ಸೇವಿಸುವ ಸಾಧ್ಯತೆ ಹೆಚ್ಚು.


ಆದ್ದರಿಂದ ದೀರ್ಘಾವಧಿಯಲ್ಲಿ, ಹಸಿರು ಸೇಬುಗಳು ಸ್ವಲ್ಪ ಉತ್ತಮ ಪೌಷ್ಟಿಕಾಂಶವನ್ನು ಹೊಂದಿದ್ದರೂ ಸಹ ಹಸಿರು ಮತ್ತು ಕೆಂಪು ಸೇಬುಗಳು ದೇಹದ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತವೆ” ಎಂದು ಕುಮಾರಿ ಹಂಚಿಕೊಂಡಿದ್ದಾರೆ.


ಪೌಷ್ಟಿಕಾಂಶದ ಪ್ರೊಫೈಲ್ ಕುರಿತು ಪ್ರತಿಕ್ರಿಯಿಸಿದ ಪೌಷ್ಟಿಕತಜ್ಞ ಮತ್ತು ಆಹಾರ ತರಬೇತುದಾರರಾದ ಅನುಪಮಾ ಮೆನನ್ ಅವರು “ಕೆಂಪು ಮತ್ತು ಹಸಿರು ಸೇಬು ಹಣ್ಣುಗಳು ಪೌಷ್ಠಿಕಾಂಶದ ವಿಷಯದಲ್ಲಿ ಒಂದೇ ಆಗಿದ್ದು, ಕೆಂಪು ಸೇಬು ಹಣ್ಣಿಗಿಂತ ಹಸಿರು ಸೇಬು ಹಣ್ಣುಗಳು ಹೆಚ್ಚಿನ ಪೌಷ್ಟಿಕಾಂಶದ ಅಂಶಗಳನ್ನು ಹೊಂದಿವೆ.


ಇದನ್ನೂ ಓದಿ: ಒಡೆದ ಹಿಮ್ಮಡಿ ಸಮಸ್ಯೆಗೆ ಕೇವಲ ಜೇನುತುಪ್ಪ ಸಾಕಂತೆ, ಹೀಗೆ ಬಳಸಿ ನೋಡಿ


"ಹಸಿರು ಸೇಬುಗಳು ಕೆಂಪು ಸೇಬುಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ವಿಟಮಿನ್ ಎ ಅನ್ನು ಹೊಂದಿರುತ್ತವೆ. ಪರಿಣಾಮವಾಗಿ, ಹಸಿರು ಸೇಬುಗಳು ದೃಷ್ಟಿ ಹೆಚ್ಚಿಸುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಮೊಡವೆಗಳ ಅಪಾಯವನ್ನು ಕಡಿಮೆ ಮಾಡುವ ಮತ್ತು ಮೂಳೆಯ ಆರೋಗ್ಯವನ್ನು ಉತ್ತೇಜಿಸುವ ಹೆಚ್ಚು ಪೋಷಕಾಂಶಗಳನ್ನು ನೀಡುವ ಪ್ರಮುಖ ಮೂಲವಾಗಿದೆ” ಎಂದು ಮೆನನ್ ಉಲ್ಲೇಖಿಸಿದ್ದಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು