Weight Loss: ಈ ಕೆಲವು ಹಸಿರು ತರಕಾರಿಗಳಿಂದ ತೂಕ ಇಳಿಸಿಕೊಳ್ಳಿ, ಆರೋಗ್ಯಕ್ಕೂ ಬೆಸ್ಟ್

ಹಸಿರು ತರಕಾರಿ ಸೇವನೆ ನಿಮಗೆ ಬೇಗ ಹೊಟ್ಟೆ ತುಂಬುತ್ತದೆ. ಜೊತೆಗೆ ದೀರ್ಘಕಾಲದವರೆಗೆ ಹೊಟ್ಟೆ ಹಸಿಯುವುದಿಲ್ಲ. ಅಲ್ಲದೆ ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಬಾಟಲ್ ಸೋರೆಕಾಯಿ ಮತ್ತು ಹೀರೆಕಾಯಿ ಎರಡನ್ನೂ ಸೇವನೆ ಮಾಡುವುದು ಅನೇಕ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಸಿರು ತರಕಾರಿಗಳು (Green Vegetables) ಮನುಷ್ಯನ ಆರೋಗ್ಯಕ್ಕೆ (Health) ತುಂಬಾ ಪ್ರಯೋಜನ (Benefits) ನೀಡುತ್ತವೆ. ಅದರಲ್ಲೂ ವೇಟ್ ಲಾಸ್ (Weight Loss) ಮಾಡಲು ಆಹಾರ ಕ್ರಮ ತುಂಬಾ ಪ್ರಯೋಜನ ನೀಡುತ್ತವೆ. ಹಸಿರು ತರಕಾರಿಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಹಸಿರು ತರಕಾರಿಗಳು ಆರೋಗ್ಯಕ್ಕೆ ಖನಿಜ, ಫೈಬರ್ ನೀಡುತ್ತವೆ. ವೇಟ್ ಲಾಸ್ ಮಾಡುವುದು ಸುಲಭದ ಕೆಲಸವಲ್ಲ. ಕೆಲವು ಆಹಾರ ಪದಾರ್ಥಗಳ ನಿಯಮಿತ ಸೇವನೆ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಬಹುತೇಕ ಹಸಿರು ತರಕಾರಿಗಳು, ಖನಿಜ, ಜೀವಸತ್ವ, ಫೈಬರ್ ಅನ್ನು ದೇಹಕ್ಕೆ ಒದಗಿಸುವ ಮೂಲಕ ಸೂಕ್ತ ಪೋಷಣೆ ನೀಡುತ್ತವೆ. ಹಸಿರು ತರಕಾರಿ ಸೇವನೆ ನಿಮಗೆ ಬೇಗ ಹೊಟ್ಟೆ ತುಂಬುತ್ತದೆ.

    ಬಾಟಲ್ ಸೋರೆಕಾಯಿ ಮತ್ತು ಹೀರೆಕಾಯಿ ಸೇವನೆ

    ಜೊತೆಗೆ ದೀರ್ಘಕಾಲದವರೆಗೆ ಹೊಟ್ಟೆ ಹಸಿಯುವುದಿಲ್ಲ. ಅಲ್ಲದೆ ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಬಾಟಲ್ ಸೋರೆಕಾಯಿ ಮತ್ತು ಹೀರೆಕಾಯಿ ಎರಡನ್ನೂ ಸೇವನೆ ಮಾಡುವುದು ಅನೇಕ ಪ್ರಯೋಜನ ನೀಡುತ್ತದೆ.

    ಈ ಎರಡರಲ್ಲಿ ಯಾವುದು ತೂಕ ಇಳಿಕೆಗೆ ಸಹಕಾರಿ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಸೋರೆಕಾಯಿ ಮತ್ತು ಹೀರೆಕಾಯಿ ತರಕಾರಿಗಳಲ್ಲಿ ಯಾವುದು ತೂಕ ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

    ಸೋರೆಕಾಯಿಯಲ್ಲಿ ಕಂಡು ಬರುವ ಪೋಷಕಾಂಶಗಳು

    116 ಗ್ರಾಂ ಹಸಿ ಸೋರೆಕಾಯಿ 16 ಗ್ರಾಂ ಕ್ಯಾಲೋರಿ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಅಂಶವು 13% ಮತ್ತು ಸತುವು 7.3 ಪ್ರತಿಶತದಷ್ಟಿದೆ. ಜೊತೆಗೆ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ, ರೈಬೋಫ್ಲಾವಿನ್ ಮತ್ತು ಕಬ್ಬಿಣದಂತಹ ಘಟಕಗಳು ಸೋರೆಕಾಯಿಯಲ್ಲಿ ಕಂಡು ಬರುತ್ತವೆ. ಸೋರೆಕಾಯಿ 96% ನೀರನ್ನು ಹೊಂದಿರುತ್ತದೆ ಮತ್ತು 1% ಮಾತ್ರ ಕೊಬ್ಬು ಹೊಂದಿದೆ.

    ಸೋರೆಕಾಯಿ ಸೇವನೆಯ ಪ್ರಯೋಜನಗಳು

    ಸೋರೆಕಾಯಿಯಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ. ಆದರೆ ಅವುಗಳಲ್ಲಿ ಇರುವ ಜೀವಸತ್ವಗಳು ಮತ್ತು ಖನಿಜಗಳು ಚಯಾಪಚಯ ಪ್ರಕ್ರಿಯೆ ಹೆಚ್ಚಿಸುತ್ತವೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    ಬಾಟಲ್ ಸೋರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದು ತೂಕ ಕಡಿಮೆ ಮಾಡಲು ಮತ್ತು ನಿದ್ರೆ ಚೆನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.

    ಹೀರೆಕಾಯಿ ಸೇವನೆಯ ಪ್ರಯೋಜನಗಳು

    ಹೀರೆಕಾಯಿ ಬೇಸಿಗೆ ಕಾಲದಲ್ಲಿ ಹೆಚ್ಚು ಕಂಡು ಬರುತ್ತದೆ. ಇದು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕಂಡುಬರುವ ಖನಿಜಗಳು ಚಯಾಪಚಯ ದರ ಹೆಚ್ಚಿಸುತ್ತವೆ.

    ಹಾಗಾಗಿ ಸೋರೆಕಾಯಿಯಂತೆ, ಹೀರೆಕಾಯಿ ಕೂಡ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹಿಸಲು ಬಿಡುವುದಿಲ್ಲ. ಹೀರೆಕಾಯಿ ತಿನ್ನುವುದರಿಂದ ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಸಹ ನಿಯಂತ್ರಣದಲ್ಲಿರುತ್ತದೆ.

    ಹೀರೆಕಾಯಿಯಲ್ಲಿ ಕಂಡು ಬರುವ ಪೋಷಕಾಂಶಗಳು

    ಡಯೆಟರಿ ಫೈಬರ್ ಹೀರೆಕಾಯಿನಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ಸತು, ಕಬ್ಬಿಣ, ರೈಬೋಫ್ಲಾವಿನ್, ಮೆಗ್ನೀಸಿಯಮ್, ಫಾಸ್ಫರಸ್, ಥಯಾಮಿನ್ ಮುಂತಾದ ಖನಿಜಗಳಲ್ಲಿ ಹೇರಳವಾಗಿದೆ. ಹೀರೆಕಾಯಿಯಲ್ಲಿ ಕ್ಯಾಲೋರಿಗಳು ಮತ್ತು ಕೊಬ್ಬು ಸಂಪೂರ್ಣವಾಗಿ ನಗಣ್ಯ. 100 ಗ್ರಾಂ ಹೀರೆಕಾಯಿ 15 ಗ್ರಾಂ ಕ್ಯಾಲೊರಿ ಮತ್ತು 96% ನೀರನ್ನು ಹೊಂದಿದೆ. ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಕೂಡ ಹೇರಳವಾಗಿದೆ.

    ಇದನ್ನೂ ಓದಿ: ಅಸ್ತಮಾ ಇದ್ದೋರು ಹಾಲು ಕುಡಿಯಬಹುದಾ? ಅವರಿಗೆ ಈ 2 ಐಟಂಗಳಿಗಿಂತ ದೊಡ್ಡ ಮದ್ದೇ ಇಲ್ಲ

    ಯಾವ ತರಕಾರಿ ಹೆಚ್ಚು ಪ್ರಯೋಜನಕಾರಿ

    ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಎರಡೂ ತರಕಾರಿ ಕ್ಯಾಲೊರಿ ಮತ್ತು ಕೊಬ್ಬನ್ನು ಹೊಂದಿಲ್ಲ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ದರಕ್ಕೆ ಉತ್ತಮ. ಎರಡರಲ್ಲೂ ಎಲ್ಲಾ ರೀತಿಯ ಸತ್ವವಿದೆ. ನಿಮ್ಮ ಆಹಾರದಲ್ಲಿ ಈ ಎರಡನ್ನೂ ಸೇರಿಸಿಕೊಳ್ಳಬಹುದು.
    Published by:renukadariyannavar
    First published: