ನಿಮ್ಮ ಸ್ಥಳೀಯ ತರಕಾರಿ ಮಾರಾಟಗಾರರು ವಿಶೇಷವಾಗಿ ಚಳಿಗಾಲದಲ್ಲಿ ಹಸಿರು ಬಣ್ಣದ ಟೊಮ್ಯಾಟೋಗಳನ್ನು (Tomato) ಮಾರಾಟ ಮಾಡುವುದನ್ನು ನೀವು ನೋಡಿರಬೇಕು. ಹಲವಾರು ಜನರು (People) ಈ ಹಸಿರು ಟೊಮ್ಯಾಟೋದಿಂದ ಸಾಕಷ್ಟು ಬಗೆ ಬಗೆಯ ರೆಸಿಪಿಗಳನ್ನು (Recipe) ತಯಾರಿಸ್ತಾರೆ. ಅದರಲ್ಲೂ ವಿಶೇಷವಾಗಿ ಇದರಿಂದ ಮಾಡಿದ ಪಲ್ಯೆ ಹಾಗೂ ಚಟ್ನಿ ತುಂಬಾನೇ ರುಚಿಕರವಾಗಿರುತ್ತೆ. ಹಾಗಿದ್ರೆ ಈ ಹಸಿರು ಟೊಮ್ಯಾಟೋ ಆರೋಗ್ಯಕ್ಕೆ (Health) ಒಳ್ಳೆಯದಾ? ಇದರ ಬಗ್ಗೆ ತಜ್ಞರು ಏನು ಹೇಳ್ತಾರೆ ಅನ್ನೋದನ್ನು ನೋಡೋಣ.
ಆಹಾರ ತಜ್ಞ ಗರಿಮಾ ಗೋಯಲ್ ಅವರು ಹಸಿರು ಟೊಮ್ಯಾಟೋ ಆ್ಯಂಟಿಆಕ್ಸಿಡೆಂಟ್ ಅಥವಾ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದನ್ನು ಚಟ್ನಿ, ಉಪ್ಪಿನಕಾಯಿ, ಹುರಿದ ಮೇಲೋರಗ ಹೀಗೆ ಬೇರೆ ಬೇರೆ ವಿಧಾನದಲ್ಲಿ ಸೇವಿಸಬಹುದು ಎನ್ನುತ್ತಾರೆ.
ಇನ್ನು ಆಹಾರ ಚಿಕಿತ್ಸಕರಾದ ಡಾ. ರಿಯಾ ಬ್ಯಾನರ್ಜಿ ಅಂಕೋಲಾ ಅವರು ಇತ್ತೀಚಿಗೆ ಹಸಿರು ಟೊಮ್ಯಾಟೋ ಚಟ್ನಿ ಮಾಡೋದು ಹೇಗೆ ಅನ್ನೋದನ್ನು ಇನ್ ಸ್ಟಾಗ್ರಾಂ ನಲ್ಲಿ ತೋರಿಸಿಕೊಟ್ಟಿದ್ದಾರೆ. "ಹಸಿರು ಟೊಮೆಟೊಗಳು ತುಂಬಾ ಟೇಸ್ಟಿ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ ಅಂತಾನೂ ಅವರು ಹೇಳಿದ್ದಾರೆ. ಹಾಗಿದ್ರೆ ಅದನ್ನ ಹೇಗೆ ಮಾಡೋದು ಅನ್ನೋದನ್ನ ತಿಳಿದುಕೊಳ್ಳೋಣ.
ಹಸಿರು ಟೊಮೆಟೊ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
2 - ತಾಜಾ ಹಸಿರು ಟೊಮ್ಯಾಟೊ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಹಸಿ ಮೆಣಸಿನಕಾಯಿ
ನಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಶುಗರ್ ಕಂಟ್ರೋಲ್ಗೆ ಅಂತ ಈ ಎಲೆ ಸೇವಿಸಿದರೆ, ಸೈಡ್ ಎಫೆಕ್ಟ್ ಗ್ಯಾರಂಟಿ
ಮಾಡುವ ವಿಧಾನ
ಹಸಿರು ಟೊಮ್ಯಾಟೋವನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನೂ ಸೇರಿಸಿ ರುಬ್ಬಿಕೊಳ್ಳಿ ನಂತರ ಆ ಮಿಶ್ರಣಕ್ಕೆ ನಿಂಬೆ ರಸವನ್ನು ಹಾಕಿ. ಆಗ ರುಚಿಯಾದ ಚಟ್ನಿ ರೆಡಿ! ಚೆಂಬೂರ್ನ ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಹಾರ ತಜ್ಞರಾದ ಡಾ. ಪ್ರಿಯಾ ಪಾಲನ್ ಅವರ ಪ್ರಕಾರ, ಹಸಿರು ಟೊಮ್ಯಾಟೋಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ: ಹಸಿರು ಟೊಮ್ಯಾಟೋಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಶೀತ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹವು ಸಸ್ಯ ಆಧಾರಿತ ಆಹಾರದಿಂದ ಕಬ್ಬಿಣವನ್ನು ಉತ್ತಮವಾಗಿ ಹೀರಿಕೊಳ್ಳಲು ವಿಟಮಿನ್ ಸಿ, ಸಹಾಯ ಮಾಡುತ್ತದೆ.
ಕರುಳಿನ ಸ್ನೇಹಿತ: ಹಸಿರು ಟೊಮ್ಯಾಟೋ ಫೈಬರ್ನ ಉತ್ತಮ ಮೂಲಗಳಾಗಿವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ಕ್ಯಾನ್ಸರ್, ಹೃದಯ ಕಾಯಿಲೆಗಳು ಮತ್ತು ಮಧುಮೇಹ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಟೊಮೆಟೊಗಳಲ್ಲಿರುವ ಬೀಜ ಮತ್ತು ಸಿಪ್ಪೆಯು ಆಹಾರದ ಫೈಬರ್ ನ ಸಮೃದ್ಧ ಮೂಲವಾಗಿದೆ. ಈ ಆಹಾರದ ಫೈಬರ್ ಗಳು ಕರುಳಿನಲ್ಲಿ ಜೀರ್ಣವಾಗುವುದಿಲ್ಲ ಆದರೆ ಉತ್ತಮ ಕರುಳಿನ ಬ್ಯಾಕ್ಟೀರಿಯಾದ ಪ್ರಸರಣಕ್ಕೆ ಸಹಾಯ ಮಾಡುತ್ತದೆ.
ದೃಷ್ಟಿ ಸುಧಾರಿಸಲು: ಹಸಿರು ಟೊಮೆಟೊದಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಎ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ರಕ್ತದೊತ್ತಡ ಕಡಿಮೆ ಮಾಡುತ್ತದೆ: ಹಸಿರು ಟೊಮೆಟೊಗಳು ಪೊಟ್ಯಾಸಿಯಂ ನ ಉತ್ತಮ ಮೂಲವಾಗಿದೆ. ಇದು ಸೋಡಿಯಂನ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಾ. ಗೋಯಲ್ ಅವರ ಪ್ರಕಾರ, ಹಸಿರು ಟೊಮ್ಯಾಟೊ ರಕ್ತನಾಳದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಡೆಯಲು ಸಹಾಯ ಮಾಡುತ್ತದೆ. ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಒಳ್ಳೆಯದು: ಹಸಿರು ಟೊಮ್ಯಾಟೋಗಳ ಸೇವನೆ ಆರೋಗ್ಯಕರ, ಹೊಳೆಯುವ ಚರ್ಮಕ್ಕೆ ಸಹಕಾರಿ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಇವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಟೊಮೆಟೊಗಳಲ್ಲಿರುವ ಹೆಚ್ಚಿನ ಪ್ರಮಾಣದ ಟೊಮ್ಯಾಟಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುದಾಗಿ ಹೇಳಲಾಗುತ್ತವೆ.
ದೇಹವನ್ನು ಹೈಡ್ರೇಟ್ ಮಾಡುತ್ತದೆ: ಇವು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಆರೋಗ್ಯಕರ ಹಸಿವನ್ನು ಕಾಪಾಡಿಕೊಳ್ಳುವ 94 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ