HOME » NEWS » Lifestyle » GREEN TEA TO HELP YOU BURN BELLY FAT AND WEIGHT LOSS HG

ಸೊಂಟದ ಕೊಬ್ಬು ಕರಗಿಸಲು ಪ್ರತಿನಿತ್ಯ ಗ್ರೀನ್​ ಟೀ ಸೇವಿಸಿರಿ

ಗ್ರೀನ್​ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್​​ ಸತ್ವ ಅಧಿಕವಾಗಿದ್ದು, ಇದನ್ನು ಕ್ಯಾಟೆಚಿನ್ಸ್​ ಎಂದು ಕರೆಯಲಾಗುತ್ತದೆ. ತೂಕ ಇಳಿಸಲು ಗ್ರೀನ್​ ಟೀ ಹೆಚ್ಚು ಸಹಕಾರಿಯಾಗಿದೆ.

news18-kannada
Updated:February 16, 2021, 3:53 PM IST
ಸೊಂಟದ ಕೊಬ್ಬು ಕರಗಿಸಲು ಪ್ರತಿನಿತ್ಯ ಗ್ರೀನ್​ ಟೀ ಸೇವಿಸಿರಿ
ಗ್ರೀನ್​ ಟೀ (Photo:Google)
  • Share this:
ಕೆಲವರು ಡೊಳ್ಳುಹೊಟ್ಟೆ ಸಮಸ್ಯೆಯಿಂದ ಪರದಾಡುತ್ತಿರುತ್ತದೆ. ಆದರೆ ಅದಕ್ಕೆ ಪರಿಹಾರ ಹುಡುಕುವಷ್ಟರಲ್ಲಿ ಸುಸ್ತಾಗಿರುತ್ತಾರೆ. ಆದರೆ ಮನೆಯಲ್ಲಿಯೇ ಇದ್ದುಕೊಂಡು ಡೊಳ್ಳುಹೊಟ್ಟೆಯನ್ನು ಕರಗಿಸಬಹುದಾಗಿದೆ.

ಅತಿಯಾದ ಸೇವನೆ ಮತ್ತು ಕ್ಯಾಲೊರಿ ಹೊಂದಿರುವ ಆಹಾರ ಸೇವಿಸಿದರೆ ಹೊಟ್ಟೆಯ ಸುತ್ತ ಬೊಜ್ಜು ಬೆಳಯುತ್ತದೆ. ಆದರೆ ಕೆಲವರು ವ್ಯಾಯಾಮ ಮಾಡುತ್ತಾ, ವೈದ್ಯರ ಸಹಾಯದಿಂದ ಬೊಜ್ಜನ್ನು ಕರಗಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಚಹಾದ ಮೂಲಕವೂ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾಗಿದು ಎಂಬುದು ತಿಳಿದಿದೆಯಾ?

ಗ್ರೀನ್​ ಟೀ ಪ್ರಯೋಜನ:

ಗ್ರೀನ್​ ಟೀ ಸೇಮಿಸುವುದರಿಂದ ಇಂತಹ ಸಮಸ್ಯೆಯಿಂದ ಪಾರಾಗಬಹುದು. ಗ್ರೀನ್​ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್​​ ಸತ್ವ ಅಧಿಕವಾಗಿದ್ದು, ಇದನ್ನು ಕ್ಯಾಟೆಚಿನ್ಸ್​ ಎಂದು ಕರೆಯಲಾಗುತ್ತದೆ. ತೂಕ ಇಳಿಸಲು ಗ್ರೀನ್​ ಟೀ ಹೆಚ್ಚು ಸಹಕಾರಿಯಾಗಿದೆ. ಜೊತೆಗೆ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಇದು ಕರಗಿಸುವ ಸಾಮರ್ಥ್ಯಹೊಂದಿದೆ.

ಅಷ್ಟು ಮಾತ್ರವಲ್ಲದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. 2008ರಲ್ಲಿ ನಡೆಸಿದ ಅಧ್ಯಯನದ ಮೂಲಕ 12 ವಾರಗಳ ಕಾಲ ಗ್ರೀನ್ ಟೀ ಸೇವಿಸಿದ ಸ್ಥೂಲಕಾಯದ ಜನರಿಗೆ ಉತ್ತಮ ಪ್ರಯೋಜನವನ್ನು ನೀಡಿದೆ. ತೂಕವನ್ನು ಇಳಿಸುವುದರ ಜೊತೆಗೆ, ಉರಿಮೂತ್ರದ ಸಮಸ್ಯೆಯನ್ನು ಹೋಗಲಾಡಿಸಿದೆ. ಗ್ರೀನ್​ ಟೀಯನ್ನು ಡಿಟಾಕ್ಸ್​ ಟೀ ಎಂದು ಪರಿಗಣಿಸಲಾಗಿದೆ.

ಗ್ರೀನ್​ ಟೀ ಮಾಡುವುದು ಹೇಗೆ?

-1 ಚಮಚ ಹಸಿರು ಗ್ರೀನ್​ ಟೀ-6-7 ಪುದೀನ ಎಲೆ

-ಅರ್ಧ ನಿಂಬೆ

-2-3 ಕಪ್​ ನೀರು

-1 ಚಮಚ ಜೇನುತುಪ್ಪ

ಬಾಣಲೆಯಲ್ಲಿ ನೀರು ಬಿಸಿ ಮಾಡಿ, ಅದನ್ನು ಕುದಿಸಬೇಕು. ನಂತರ ಗ್ರೀನ್​ ಟೀಯನ್ನು ಹಾಕಬೇಕು. ಪುದೀನ ಎಲೆ, ನಿಂಬೆ ಹಣ್ಣು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.ದಿನದಲ್ಲಿ 2-3 ಬಾರಿ ಗ್ರೀನ್​ ಟೀ ಸೇವಿಸುದರಿಂದ ಆರೋಗ್ಯವನ್ನು ಸರಿಯಾದ ಕ್ರಮದಲ್ಲಿರಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ತೂಕ ಕಡಿಮೆ ಮಾಡಲು ಬಯಸುವವರು ಮತ್ತು ಡೊಳ್ಳುಹೊಟ್ಟೆಯನ್ನು ಕರಗಿಸುವವರು ಗ್ರೀನ್​ ಟೀ ಕುಡಿಯುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದಾಗಿದೆ.
Published by: Harshith AS
First published: February 16, 2021, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories