Weight Loss: ಗ್ರೀನ್ ಟೀ ಕುಡಿಯಿರಿ, ತೂಕ ಇಳಿಸಿಕೊಳ್ಳಿ! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಹಸಿರು ಚಹಾವು ಒಂದು ರೀತಿಯ ಕ್ಯಾಟೆಚಿನ್ ಎಂಬ ಸಂಯುಕ್ತ ವಸ್ತುಗಳನ್ನು ಹೊಂದಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿ. ಈ ಗಿಡಮೂಲಿಕೆ ಚಹಾವು ಇತರ ಹಲವು ರೀತಿಯ ಗುಣ ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸ್ಥೂಲಕಾಯ (Obesity) ಹೊಂದಿದವರು ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಕೆಯ (Weight Loss) ಸಕಾರಾತ್ಮಕ ಫಲಿತಾಂಶ  ಪಡೆಯದಿದ್ದಾಗ ನಿರಾಶೆ ಆಗುತ್ತಾರೆ. ಅವರು ತೂಕ ಇಳಿಸಲು ಸಾಧ್ಯವಿಲ್ಲ ಎಂದು ಅವರು ಭಾವಿಸುತ್ತಾರೆ. ವ್ಯಾಯಾಮ ಮತ್ತು ಆಹಾರದ (Exercise And Food) ಜೊತೆಗೆ ಚಹಾ (Tea) ಕುಡಿಯುವ ಅಭ್ಯಾಸ ಬದಲಾಯಿಸಿದರೆ ಬೊಜ್ಜು ಕಡಿಮೆಯಾಗುತ್ತದೆ ಎಂದು ತಿಳಿಯುತ್ತಾರೆ. ಇದು ನಿಜವೆನ್ನುತ್ತಾರೆ ತಜ್ಞರು. ಯಾಕೆಂದರೆ ತೂಕ ಇಳಿಕೆಗೆ ಗ್ರೀನ್ ಟೀ ಸಹಕಾರಿ ಎಂಬ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಸಿರು ಚಹಾವು ತೂಕ ಕಡಿಮೆ ಮಾಡುತ್ತದೆ. ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ.  ವಿವಿಧ ರೀತಿಯ ಕ್ಯಾನ್ಸರ್, ಹೃದ್ರೋಗ ಮತ್ತು ಯಕೃತ್ತಿನ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

    ತೂಕ ಇಳಿಕೆಗೂ, ಗ್ರೀನ್ ಟೀಗೂ ಸಂಬಂಧವಿದೆಯೇ?

    ಹಸಿರು ಚಹಾವು epigallocatechin-3-gallate ಎಂಬ ಒಂದು ರೀತಿಯ ಕ್ಯಾಟೆಚಿನ್ ಎಂಬ ಸಂಯುಕ್ತ ಹೊಂದಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿ. ಈ ಗಿಡಮೂಲಿಕೆ ಚಹಾವು ಇತರ ಹಲವು ರೀತಿಯ ಗುಣ ಹೊಂದಿದೆ. ಉತ್ಕರ್ಷಣ ನಿರೋಧಕವಾಗಿದೆ. ಇದು ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಕಡಿಮೆ ಮಾಡುತ್ತದೆ. ವ್ಯಾಯಾಮದ ನಂತರ ಗ್ರೀನ್ ಟೀ ಸೇವಿಸಿದರೆ ಕೊಬ್ಬನ್ನು ಕಡಿಮೆ ಮಾಡುತ್ತದೆ.

    ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದ ಸಂಶೋಧನೆಯನ್ನು NCBI ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಗ್ರೀನ್ ಟೀ ಕುಡಿಯುವುದು ಬೊಜ್ಜು ಸಂಬಂಧಿತ ಸಮಸ್ಯೆ ನಿವಾರಿಸುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ. ಚಯಾಪಚಯ ದರ ಹೆಚ್ಚಿಸುವ ಮೂಲಕ ಕ್ಯಾಲೊರಿ ಕಡಿಮೆ ಮಾಡುತ್ತದೆ. ಇದರ ಸಂಯುಕ್ತಗಳು ಕೊಬ್ಬನ್ನು ಸುಡುವ ಹಾರ್ಮೋನ್ ಅನ್ನು ಸಕ್ರಿಯಗೊಳಿಸುತ್ತದೆ.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಕಡಿಮೆ ಕ್ಯಾಲೋರಿ

    ಆಹಾರದಲ್ಲಿ ಹೆಚ್ಚಿನ ಕ್ಯಾಲೋರಿ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇದು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ಕಪ್ ಹಸಿರು ಚಹಾ ಅಂದರೆ 245 ಗ್ರಾಂ ಕೇವಲ 2.45 ಕ್ಯಾಲೋರಿ ಹೊಂದಿದೆ. ಕಡಿಮೆ ಕ್ಯಾಲೋರಿ ಇರುವ ಗ್ರೀನ್ ಟೀ ಸೇವನೆ ತೂಕ ಹೆಚ್ಚಾಗಲ್ಲ. ಇದು ತೂಕ ಕಡಿಮೆ ಮಾಡುತ್ತದೆ.

    ಕ್ಯಾಟೆಚಿನ್ ಭರಿತ ಹಸಿರು ಚಹಾ

    ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ಹಸಿರು ಚಹಾದಲ್ಲಿದೆ. ಕ್ಯಾಟೆಚಿನ್ಸ್ ಚಹಾದಲ್ಲಿ ಕಂಡು ಬರುವ ಫೀನಾಲಿಕ್ ಸಂಯುಕ್ತ. ಹಸಿರು ಚಹಾವು ಒಟ್ಟು ಕ್ಯಾಟೆಚಿನ್‌ಗಳಲ್ಲಿ 50 ರಿಂದ 80 ಪ್ರತಿಶತ EGCG ಅನ್ನು ಹೊಂದಿದೆ. ಗ್ರೀನ್ ಟೀಯಲ್ಲಿರುವ ಈ ಇಜಿಸಿಜಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ, ಆಂಟಿಬೆಸಿಟಿ, ಕ್ಯಾನ್ಸರ್ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ.

    ಹಸಿವನ್ನು ಕಡಿಮೆ ಮಾಡುತ್ತದೆ

    ಗ್ರೀನ್ ಟೀ ಸೇವನೆ ಹಸಿವು ಕಡಿಮೆಯಾಗುತ್ತದೆ. ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಎಂಬ ಸಂಯುಕ್ತವು ಹಸಿವನ್ನು ಕಡಿಮೆ ಮಾಡುತ್ತದೆ. NCBI ಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸ್ವೀಡಿಷ್ ವಿಜ್ಞಾನಿಗಳ ಸಂಶೋಧನೆ ಹಸಿರು ಚಹಾದ ಸೇವನೆಯು ಹಸಿವಿನ ಮಟ್ಟ ಕಡಿಮೆ ಮಾಡುತ್ತದೆ.

    ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ

    ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಹೆಚ್ಚಿದ ಹೊಟ್ಟೆಯ ಕೊಬ್ಬು, ಬೊಜ್ಜು ಮಧುಮೇಹ, ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್‌ ಕಾಯಿಲೆಗೆ ಕಾರಣವಾಗುತ್ತದೆ. ಹಸಿರು ಚಹಾ ಇದನ್ನು ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಸ್ಥೂಲಕಾಯ ಜೀನ್‌ ನಿಯಂತ್ರಿಸುತ್ತದೆ

    ಹಸಿರು ಚಹಾದಲ್ಲಿರುವ ಪಾಲಿಫಿನಾಲ್‌ಗಳು ಸ್ಥೂಲಕಾಯ ನಿಯಂತ್ರಿಸುತ್ತದೆ. ಹಸಿರು ಚಹಾದ ಪಾಲಿಫಿನಾಲ್‌ಗಳು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ಸ್ಥೂಲಕಾಯ ಜೀನ್‌ಗಳನ್ನು ನಿಯಂತ್ರಿಸುತ್ತದೆ.
    Published by:renukadariyannavar
    First published: