Green Almonds: ಹಸಿರು ಬಾದಾಮಿಯಲ್ಲಿದೆ ಹೇರಳ ಪೋಷಕಾಂಶಗಳು, ಇದರ ಆರೋಗ್ಯ ಪ್ರಯೋಜನಗಳೇನು ನೋಡಿ

ಹಸಿರು ಬಣ್ಣದ ಬಾದಾಮಿಗಳು ಟೋನ್ ಮತ್ತು ತುಂಬಾ ನಯವಾದ ವಿನ್ಯಾಸ ಹೊಂದಿವೆ. ಮತ್ತು ಒಳಭಾಗದಲ್ಲಿ ಜೆಲಾಟಿನಸ್ ಆಗಿವೆ. ಇದರ ಸಿಪ್ಪೆಯು ಕಹಿ ರುಚಿ ಹೊಂದಿದೆ. ಹಾಗಾಗಿ ಅದನ್ನು ತಿನ್ನುವ ಮೊದಲು ಅದನ್ನು ಸಿಪ್ಪೆ ತೆಗೆದು ಸೇವನೆಗೆ ಸೂಚಿಸಲಾಗುತ್ತದೆ. ಹಸಿರು ಬಣ್ಣದ ಬಾದಾಮಿ ಇದು ಆರೋಗ್ಯವನ್ನು ದ್ವಿಗುಣಗೊಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಾದಾಮಿ (Almonds) ಸೇವನೆ ಹಲವು ಆರೋಗ್ಯ ಪ್ರಯೋಜನ (Health Benefits) ತಂದು ಕೊಡುತ್ತದೆ. ಬಾದಾಮಿಯು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುವ ಪ್ರಮುಖ ಆಹಾರ ಪದಾರ್ಥ (Food Ingredients) ಆಗಿದೆ. ಅದು ಎಲ್ಲಾ ಅಗತ್ಯ ಪೋಷಕಾಂಶಗಳಿಂದ ಸಮೃದ್ಧ ಆಗಿದೆ. ಬಾದಾಮಿಯನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಲಾಗುತ್ತದೆ. ಅದಾಗ್ಯೂ, ನೀವು ಅದನ್ನು ಕಚ್ಚಾ ಅಥವಾ ನೆನೆಸಿಟ್ಟು ಸೇವನೆ ಮಾಡಬಹುದಾಗಿದೆ. ನೆನೆಸಿದ ಬಾದಾಮಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಕಂದು ಬಣ್ಣದ ಬಾದಾಮಿ ಸೇವನೆ ಮಾಡಿರುತ್ತೀರಿ. ಆದರೆ ಹಸಿರು ಬಣ್ಣದ ಬಾದಾಮಿ ಕೂಡ ಇದೆ. ಇದು ಆರೋಗ್ಯವನ್ನು ದ್ವಿಗುಣಗೊಳಿಸುತ್ತದೆ.

    ಹಸಿರು ಬಾದಾಮಿಯಲ್ಲಿರುವ ಪೋಷಕಾಂಶಗಳು ಯಾವುವು?

    ಹಸಿರು ಬಣ್ಣದ ಬಾದಾಮಿಗಳು, ಹಸಿರು ಬಣ್ಣದ ಟೋನ್ ಮತ್ತು ತುಂಬಾ ನಯವಾದ ವಿನ್ಯಾಸ ಹೊಂದಿವೆ. ಮತ್ತು ಒಳಭಾಗದಲ್ಲಿ ಜೆಲಾಟಿನಸ್ ಆಗಿವೆ. ಇದರ ಸಿಪ್ಪೆಯು ಕಹಿ ರುಚಿ ಹೊಂದಿದೆ. ಹಾಗಾಗಿ ಅದನ್ನು ತಿನ್ನುವ ಮೊದಲು ಅದನ್ನು ಸಿಪ್ಪೆ ತೆಗೆದು ಸೇವನೆಗೆ ಸೂಚಿಸಲಾಗುತ್ತದೆ.

    ಫ್ಯಾಟ್ ಟು ಸ್ಲಿಮ್ ಡೈರೆಕ್ಟರ್ ಮತ್ತು ನ್ಯೂಟ್ರಿಷಿಯನ್ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ಪ್ರಕಾರ, ನೀವು ಹಸಿರು ಬಾದಾಮಿ ಏಕೆ ಸೇವಿಸಬೇಕು ಅಂದ್ರೆ ಅದರಲ್ಲಿ ಫೋಲಿಕ್ ಆಮ್ಲದ ಉತ್ತಮ ಮೂಲ ಹೊಂದಿದೆ ಎಂದು ತಿಳಿಸುತ್ತಾರೆ.

    ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

    ಒಣಗಿದ ಬಾದಾಮಿಯು ವಿಟಮಿನ್ ಇ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಎಲ್-ಕಾರ್ನಿಟೈನ್ ಮತ್ತು ಮುಂತಾದ ಪೋಷಕಾಂಶ ಹೊಂದಿದೆ.

    ಫೈಬರ್ ನಲ್ಲಿ ಸಮೃದ್ಧವಾಗಿದೆ ಹಸಿರು ಬಾದಾಮಿ

    ಹೆಲ್ತ್‌ಲೈನ್ ವರದಿ ಪ್ರಕಾರ ಫೈಬರ್ ಭರಿತ ಅಂಶ ಹಸಿರು ಬಾದಾಮಿಯನ್ನು ಕರುಳಿನ ಆರೋಗ್ಯಕ್ಕೆ ಉತ್ತಮ ಮಾಡುತ್ತದೆ. ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಜೀರ್ಣಕ್ರಿಯೆ,

    ಚಯಾಪಚಯ ಮತ್ತು ನಿಯಮಿತ ಕರುಳಿನ ಚಲನೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಫೈಬರ್ ಹೆಚ್ಚು ಕಾಲ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ.

    ಉತ್ಕರ್ಷಣ ನಿರೋಧಕಗಳ ನಿಧಿ ಹಸಿರು ಬಾದಾಮಿ

    ಬಾದಾಮಿಯಲ್ಲಿರುವ ಸಮೃದ್ಧ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಿಂದ ವಿಷ ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಉರಿಯೂತದ ವಿರುದ್ಧ ಹೋರಾಡಲು ಮತ್ತು ಕಾಲೋಚಿತ ಶೀತ ಮತ್ತು ಜ್ವರ ಸೇರಿದಂತೆ ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

    ವಿಟಮಿನ್ ಇ ಯ ಉತ್ತಮ ಮೂಲವಾಗಿದೆ ಹಸಿರು ಬಾದಾಮಿ

    ವಿಟಮಿನ್ ಇ ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿ. ಇದು ನಮ್ಮ ದೇಹದ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಈ ಪೋಷಕಾಂಶವು ಯಕೃತ್ತಿನ ಆರೋಗ್ಯ, ಹೃದಯದ ಆರೋಗ್ಯ ಮತ್ತು ಶ್ವಾಸಕೋಶದ ಕಾರ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ಒಟ್ಟಾರೆ ಆರೋಗ್ಯ ಪ್ರಯೋಜನಕ್ಕೆ ಹಸಿರು ಬಾದಾಮಿ ಆಹಾರದಲ್ಲಿ ಸೇರಿಸಿ.

    ಹೃದಯದ ಆರೋಗ್ಯ ಕಾಪಾಡುತ್ತದೆ ಹಸಿರು ಬಾದಾಮಿ

    ಮೆಡಿಕಲ್ ನ್ಯೂಸ್ ಟುಡೇ ವರದಿ, ಹಸಿರು ಬಾದಾಮಿ ವಿಟಮಿನ್ ಇ ಮತ್ತು ಫೈಬರ್‌ನಿಂದ ತುಂಬಿದೆ. ಇವೆರಡೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಹಸಿರು ಬಾದಾಮಿ ಅಪರ್ಯಾಪ್ತ ಕೊಬ್ಬು, ಒಮೆಗಾ -3 ಕೊಬ್ಬಿನಾಮ್ಲ, ಸಸ್ಯ ಸ್ಟೆರಾಲ್ಗಳು ಇತ್ಯಾದಿಗಳಿಂದ ಕೂಡಿದೆ. ಇದು ಒಟ್ಟಾರೆ ಹೃದಯದ ಆರೋಗ್ಯ ಉತ್ತೇಜಿಸುತ್ತದೆ.

    ಚರ್ಮಕ್ಕೆ ಪ್ರಯೋಜನಕಾರಿ

    ಹಸಿರು ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ ಅಂಶವು ಚರ್ಮದ ಆರೋಗ್ಯ ಉತ್ತೇಜಿಸುತ್ತದೆ. ಆಹಾರದಲ್ಲಿ ಸೇರಿಸುವುದರಿಂದ ಚರ್ಮ ಸುಂದರಗೊಳಿಸಲು, ಮೊಡವೆ ಕಡಿಮೆ ಮಾಡಲು ಮತ್ತು ವಯಸ್ಸಾದ ಪ್ರಕ್ರಿಯೆ ನಿಧಾನಗೊಳಿಸುತ್ತದೆ.

    ಕೂದಲಿನ ಬೆಳವಣಿಗೆಗೆ ಉತ್ತೇಜನ

    ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಹಸಿರು ಬಾದಾಮಿ ರಕ್ತದ ಹರಿವು ಉತ್ತೇಜಿಸುತ್ತದೆ. ಕೂದಲಿನ ಬೆಳವಣಿಗೆಗೆ ಕಾರಣ.

    ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

    ಮೂಳೆ ಬಲಗೊಳ್ಳುತ್ತವೆ

    ಹಸಿರು ಬಾದಾಮಿ ಮೂಳೆಯ ಆರೋಗ್ಯಕ್ಕೆ ಸೂಪರ್ ಫುಡ್. ವಿಟಮಿನ್ ಕೆ, ಪ್ರೋಟೀನ್, ಸತು, ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಇತ್ಯಾದಿಗಳಲ್ಲಿ ಸಮೃದ್ಧ. ಆರೋಗ್ಯಕರ ಮೂಳೆಗಳನ್ನು ಉತ್ತೇಜಿಸುತ್ತದೆ.
    Published by:renukadariyannavar
    First published: