ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಊಟ (Meal) ಮಾಡಲು ಸಹ ಸಮಯ (Time) ಇರಲ್ಲ ಎಂದು ಹೇಳುತ್ತಾರೆ. ಹಾಗಾಗಿ ಬಹುತೇಕರು ಫಾಸ್ಟ್ ಫುಡ್ (Fast food) ಮೊರೆ ಹೋಗುತ್ತಾರೆ. ಇನ್ನೊಂದಿಷ್ಟು ಜನರು ಹೋಟೆಲ್ ಊಟದ (Hotel Food) ಮೇಲೆಯೇ ಅವಲಂಬಿತರಾಗುತ್ತಾರೆ. ಹೊರಗೆಯ ಊಟ ಮಾಡಿ ಅನಾರೋಗ್ಯಕ್ಕೆ (Health Problem) ತುತ್ತಾದ ನಂತರ ಮನೆ ಊಟವೇ ಬೆಸ್ಟ್ ಅಂತ ಗೊತ್ತಾಗುತ್ತದೆ. ಆಗ ಕಷ್ಟವಾದ್ರೂ ಪರವಾಗಿಲ್ಲ ಮನೆಯಲ್ಲಿಯೇ ಅಡುಗೆ (Cooking) ಮಾಡೋಣ ಎಂದು ಮುಂದಾಗುತ್ತಾರೆ. ಸಮಯದ ಅಭಾವದ ನಡುವೆ ಅಡುಗೆ ಮಾಡಿಕೊಳ್ಳೋರಿಗಾಗಿ ಇಂದು ನಾವು ವಿಶೇಷ ರೆಸಿಪಿ ತಂದಿದ್ದೇವೆ. ಈ ರೆಸಿಪಿಗೆ (Chutney Recipe) ಯಾವುದೇ ತರಕಾರಿ (Vegetable) ಸಹ ಬೇಕಾಗಲ್ಲ. ಹಿಂದೆ ಮನೆಯಲ್ಲಿ ಅಜ್ಜಿಯಂದಿರುವ (Grandmother) ಮೊಮ್ಮಕ್ಕಳಿಗಾಗಿ ಮಾಡಿಕೊಡುತ್ತಿದ್ದ ಚಟ್ನಿ ರೆಸಿಪಿ ಹೇಳುತ್ತಿದ್ದೇವೆ.
ಅಜ್ಜಿ ಮಾಡುತ್ತಿದ್ದ ಚಟ್ನಿ ಕೇವಲ ನಾಲ್ಕರಿಂದ ಐದು ನಿಮಿಷದಲ್ಲಿ ಸಿದ್ಧವಾಗುತ್ತದೆ. ಇದನ್ನು ಬಿಸಿಯಾದ ರೈಸ್ ಅಥವಾ ಚಪಾತಿ ಅಥವಾ ಜೋಳದ ರೊಟ್ಟಿ ಜೊತೆ ಸೇವಿಸಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಫೀಲ್ ಉಂಟಾಗುತ್ತದೆ. ಅಜ್ಜಿ ಮಾಡುತ್ತಿದ್ದ ಬೆಳ್ಳುಳ್ಳಿ-ಕೊಬ್ಬರಿ ಚಟ್ನಿ ರೆಸಿಪಿ ಇಲ್ಲಿದೆ.
ಬೆಳ್ಳುಳ್ಳಿ-ಕೊಬ್ಬರಿ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಒಣ ಕೊಬ್ಬರಿ: 50 ಗ್ರಾಂ
ಬೆಳ್ಳುಳ್ಳಿ: 5 ರಿಂದ 6 ಎಸಳು
ಜೀರಿಗೆ: ಅರ್ಧ ಟೀ ಸ್ಪೂನ್
ಎಣ್ಣೆ: 1 ಟೀ ಸ್ಪೂನ್
ಅಚ್ಚ ಖಾರದ ಪುಡಿ: 1 ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ-ಕೊಬ್ಬರಿ ಚಟ್ನಿ ಮಾಡುವ ವಿಧಾನ
*ಮೊದಲಿಗೆ ಒಣಕೊಬ್ಬರಿ ಉದ್ದವಾಗಿ ಕತ್ತಿರಿಸಿಕೊಳ್ಳಿ. ಒಲೆ ಆನ್ ಮಾಡ್ಕೊಂಡು ಕಡಿಮೆ ಉರಿಯಲ್ಲಿ ಕತ್ತರಿಸಿದ ಒಣಕೊಬ್ಬರಿಯನ್ನು ಹುರಿದುಕೊಳ್ಳಿ. (ಒಂದು ವೇಳೆ ಸೌದೆ ಒಲೆ ಬಳಕೆ ಮಾಡುತ್ತಿದ್ರೆ ಕೊಬ್ಬರಿಯನ್ನು ಕತ್ತರಿಸದೇ ಹಾಗೇ ಉರಿಯುತ್ತಿರುವ ಕಟ್ಟಿಗೆ ಪಕ್ಕ ಇರಿಸಿ ಸುಡಬೇಕು.)
*ಸೌದೆ ಒಲೆ ರೀತಿ ಕೊಬ್ಬರಿ ಫ್ರೈ ಮಾಡಬೇಕು ಅಂತ ಅನ್ನಿಸಿದ್ರೆ ಗ್ಯಾಸ್ ಸ್ಟೌವ್ ಮೇಲೆ ಸ್ಟ್ಯಾಂಡ್ ಇರಿಸಿ ಒಲೆ ಜೋರು ಇರಿಸಿ ಕೊಬ್ಬರಿಯನ್ನು ಸುಟ್ಟುಕೊಳ್ಳಿ.
*ಫ್ರೈ ಮಾಡಿರುವ ಕೊಬ್ಬರಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚ ಖಾರದ ಪುಡಿ ಸೇರಿದಿ ಚೆನ್ನಾಗಿ ರುಬ್ಬಿಕೊಳ್ಳಿ.
*ಚೆನ್ನಾಗಿ ರುಬ್ಬಿದ ನಂತರ ಮಿಶ್ರಣವನ್ನು ಒಂದು ಬೌಲ್ಗೆ ಹಾಕಿ. ಈಗ ಅದಕ್ಕೆ ಅಡುಗೆ ಎಣ್ಣೆ ಸೇರಿಸಿ ಚೆನ್ನಾಗಿ ಕಲಕಿದ್ರೆ ಬಿಸಿಯಾದ ಬೆಳ್ಳುಳ್ಳಿ-ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ.
ಇದನ್ನೂ ಓದಿ: Chapati : ಅಮ್ಮ ಮಾಡಿದಂತೆ ಮೃದುವಾದ ಚಪಾತಿ ಮಾಡಬೇಕಾ? ಈ ಟಿಪ್ಸ್ ಫಾಲೋ ಮಾಡಿ
ಸಾಂಪ್ರದಾಯಿಕ ಶೈಲಿಯಲ್ಲಿ ಚಟ್ನಿ ಮಾಡಿ
ಮೊದಲಿಗೆ ಎಲ್ಲರ ಮನೆಯಲ್ಲಿ ಮಿಕ್ಸಿ ಇರುತ್ತಿರಲಿಲ್ಲ. ಆ ಸಮಯದಲ್ಲಿ ಯಾವುದೇ ಚಟ್ನಿಯನ್ನು ಗುಂಡುಕಲ್ಲಿನಲ್ಲಿ ಕುಟ್ಟುತ್ತಿದ್ದರು. ಹೀಗೆ ಮಾಡೋದರಿಂದ ಚಟ್ನಿಯ ರುಚಿ ಹೆಚ್ಚಾಗುತ್ತಿತ್ತು ಎಂದು ಹೇಳುತ್ತಾರೆ. ಬೆಂಕಿಯಲ್ಲಿ ಅರೆಬರೆಯಾಗಿ ಬೆಂದು ಬರುತ್ತಿದ್ದ ಕೊಬ್ಬರಿ ಮೇಲೆ ಭಾರವಾದ ಕಲ್ಲಿನಿಂದ ಏಟು ಬಿದ್ದಾಗ ಅದರಲ್ಲಿರುವ ಎಣ್ಣೆ ಅಂಶದಿಂದ ಚಟ್ನಿ ರುಚಿಯಾಗಿರುತ್ತಿತ್ತು.
ಒಂದು ವೇಳೆ ನಿಮ್ಮ ಮನೆಯಲ್ಲಿ ರುಬ್ಬುವ ಕಲ್ಲು ಮತ್ತು ಸಮಯ ಇದ್ರೆ ಅದರಲ್ಲಿಯೇ ಚಟ್ನಿಯನ್ನು ಕುಟ್ಟಿ ಮಾಡಿ. ಈ ಚಟ್ನಿಯನ್ನು ನಾಲ್ಕರಿಂದ ಐದು ದಿನಗಳವರೆಗೆ ಶೇಖರಿಸಿಡಬಹುದು.
ಇಂದು ಸಹ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಚಟ್ನಿ ಮಾಡುತ್ತಾರೆ. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿದ್ದಾಗ ನೀವು ಸಹ ಈ ಚಟ್ನಿಯನ್ನು ಮಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ