Weight Loss Tips: ತೂಕ ಇಳಿಸೋಕೆ ಅಜ್ಜಿ ಹತ್ರ ಇದೆ ಸಖತ್ ಫಾರ್ಮುಲಾ, ಈ ವಿಧಾನ ಯಾವತ್ತೂ ಫೇಲ್ ಆಗೋದೇ ಇಲ್ಲ!

ನಮ್ಮ ರೈತ ಮತ್ತು ಅಜ್ಜಿ ನೀಡುವ ಆಹಾರವೇ ನಮ್ಮ ಆರೋಗ್ಯ. ನಮ್ಮ ಸಾಂಪ್ರದಾಯಿಕ, ಸಾಮೂಹಿಕ ಪಾಕಶಾಲೆಯ ಬುದ್ಧಿವಂತಿಕೆಯು ಅಮೂಲ್ಯವಾದುದು. ಆದರೆ ಸಾಮಾಜಿಕ ಮಾಧ್ಯಮ ಮತ್ತು ಬೃಹತ್ ಆಹಾರ ಮಾರುಕಟ್ಟೆ ವೆಚ್ಚಗಳ ಪ್ರಭಾವವು ಸ್ಥಳೀಯ ಆಹಾರ ಮತ್ತು ಪದ್ಧತಿಗಳ ಬಗ್ಗೆ ನಮ್ಮ ಗ್ರಹಿಕೆಗಳನ್ನು ಹಾಳುಗೆಡವಿದೆ.

ಹಣ್ಣು-ತರಕಾರಿ

ಹಣ್ಣು-ತರಕಾರಿ

 • Share this:

  Health Tips: 2008ರಲ್ಲಿ ಬಿಕಿನಿ ದೃಶ್ಯಕ್ಕಾಗಿ ಕರೀನಾ ಕಪೂರ್ ಝೀರೋ ಸೈಜ್ ಆಗಿ ಟ್ರೆಂಡ್​ ಸೆಟ್ ಮಾಡಿದ್ದು ಗೊತ್ತೇ ಇದೆ. ಈ ಝೀರೋ ಸೈಜ್​ನ ಹಿಂದಿನ ಗುರು, ಭಾರತದ ವೇಯ್ಟ್​ಲಾಸ್​ ಗುರು ಎಂದೇ ಖ್ಯಾತಿಯಾಗಿರುವ ಸೆಲೆಬ್ರಿಟಿ ನ್ಯೂಟ್ರಿಷಿಯನಿಸ್ಟ್​​ ರುಜುತಾ ದಿವೇಕರ್. 50 ದೇಶಗಳಲ್ಲಿ ರುಜುತಾ ಡಯೆಟ್ ಟಿಪ್ಸ್​ ಅನುಸರಿಸುವ ಗ್ರಾಹಕರಿದ್ದಾರೆ. ಬಾಲಿವುಡ್​ ತಾರೆಯರು, ವ್ಯಾಪಾರಿಗಳು, ಉದ್ಯಮಿಗಳು, ಸಿಇಓಗಳಿಂದ ಹಿಡಿದು ಬಹುತೇಕರು ರುಜುತಾ ಡಯೆಟ್​​ ಮಾರ್ಗದರ್ಶನಕ್ಕೆ ಶರಣಾಗಿದ್ದಾರೆ.


  13,000 ನುರಿತ ಆಹಾರ ತಜ್ಞರ ಆಗರ ಭಾರತ


  ಭಾರತದಲ್ಲಿ 13,000 ನೋಂದಾಯಿತ, ನುರಿತ ಆಹಾರ ತಜ್ಞರಿದ್ದಾರೆ. ಲಂಡನ್ ಮೂಲದ ಟ್ರೈಟಾನ್ ಮಾರುಕಟ್ಟೆ ಸಂಶೋಧನೆಯ ಪ್ರಕಾರ 502.7 ಮಿಲಿಯನ್ ಡಾಲರ್ ತೂಕ ಮತ್ತು ಆಹಾರದ ನಿರ್ವಹಣೆಯ ತೊಳಲಾಟದಲ್ಲಿದೆ. ಇವತ್ತಿನ ಕೀಟೋ ಡಯೆಟ್, ಒಪ್ಪೊತ್ತಿನ ಊಟ, ಡೀಟಾಕ್ಸ್ ಜ್ಯೂಸ್, ಪ್ಯಾಕೆಟ್​ ಆಹಾರದ ಬದಲಿಗೆ ನಮ್ಮ - ನಿಮ್ಮ ಅಜ್ಜಿಯಂತೆ ನೈಸರ್ಗಿಕವಾಗಿ, ಹಿತವಾಗಿ, ಮಿತವಾಗಿ ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವಿಸಿ ಎಂದಿದ್ದಾರೆ.


  ನಮ್ಮ ಡಯೆಟ್​ಗೆ ದೊಡ್ಡ ಕಂಪನಿಯ ಸಪ್ಲಿಮೆಂಟ್ ಬದಲಿಗೆ ನಮ್ಮ ಅಡುಗೆ ಮನೆ ಮತ್ತು ಕಿರಾಣಿ ಅಂಗಡಿಯ ಸಾಮಗ್ರಿ ಸಾಕು ಎನ್ನುವ ಭರವಸೆ ತುಂಬಿದ್ದಾರೆ. ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, 2040ರ ವೇಳೆಗೆ 30 ಪ್ರತಿಶತ ಭಾರತೀಯರು ಬೊಜ್ಜು ಹೊಂದುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ. ಒಬೆಸಿಟಿ ಇಂದು 24 ಬಿಲಿಯನ್ ಮೌಲ್ಯವನ್ನು ವೆಲ್​ನೆಸ್ ಉದ್ಯಮಕ್ಕೆ ನೀಡುತ್ತಿದ್ದು, ಆರೋಗ್ಯ ಆಹಾರ ಮಾರುಕಟ್ಟೆಮಾತ್ರ ಮುಂದಿನ ವರ್ಷದ ವೇಳೆಗೆ ಸುಮಾರು 9.35 ಬಿಲಿಯನ್ ಡಾಲರ್‌ ತಲುಪುವ ನಿರೀಕ್ಷೆಯಿದೆ. ಅರ್ನ್ಸ್ಟ್ & ಯಂಗ್ ಮತ್ತು ದಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.


  ಇದನ್ನೂ ಓದಿ: Weight Loss Tips: ದಿನಾ ಬೆಳಗ್ಗೆ ಹೀಗೆ ಮಾಡಿದ್ರೆ ದೇಹ ತೂಕ ಇಳಿಯೋದು ಗ್ಯಾರಂಟಿ!

  ನಮ್ಮ ರೈತ ಮತ್ತು ಅಜ್ಜಿ ನೀಡುವ ಆಹಾರವೇ ನಮ್ಮ ಆರೋಗ್ಯ. ನಮ್ಮ ಸಾಂಪ್ರದಾಯಿಕ, ಸಾಮೂಹಿಕ ಪಾಕಶಾಲೆಯ ಬುದ್ಧಿವಂತಿಕೆಯು ಅಮೂಲ್ಯವಾದುದು. ಆದರೆ ಸಾಮಾಜಿಕ ಮಾಧ್ಯಮ ಮತ್ತು ಬೃಹತ್ ಆಹಾರ ಮಾರುಕಟ್ಟೆ ವೆಚ್ಚಗಳ ಪ್ರಭಾವವು ಸ್ಥಳೀಯ ಆಹಾರ ಮತ್ತು ಪದ್ಧತಿಗಳ ಬಗ್ಗೆ ನಮ್ಮ ಗ್ರಹಿಕೆಗಳನ್ನು ಹಾಳುಗೆಡವಿದೆ. 2021 ರ ಹುರುನ್ ವರದಿಯ ಪ್ರಕಾರ, ವ್ಯಾಪಾರ ಮತ್ತು ಸಿನಿಮಾ ಗ್ಲಾಮರ್​ ಉದ್ಯಮವಾದ ಮುಂಬೈ 16,933 ಮಿಲಿಯನೇರ್‌ಗಳು ಮತ್ತು 60 ಶತಕೋಟ್ಯಾಧಿಪತಿಗಳನ್ನು ಹೊಂದಿದೆ. ಜೊತೆಗೆ ದೇಶದ 2.44 ಬಿಲಿಯನ್ ಡಾಲರ್‌ ಚಲನಚಿತ್ರೋದ್ಯಮದ ಅತ್ಯುನ್ನತ ಸ್ಥಾನದಲ್ಲಿದೆ. ಈ ಸೆಲೆಬ್ರಿಟಿಗಳು ರುಜುತಾ ಗ್ರಾಹಕರಾಗಿದ್ದು ಅವರ ಮಾತಿಗೆ ಓಕೆ ಎನ್ನುತ್ತಾರೆ.


  ಡೋಂಟ್ ಲೂಸ್​ ಯುವರ್​ ಮೈಂಡ್, ಲೂಸ್ ಯುವರ್ ವೇಯ್ಟ್!


  ತನ್ನ ಮಹಿಳಾ ತಂಡದೊಂದಿಗೆ ಆನ್​ಲೈನ್​ನಲ್ಲಿ ಅಗಾಧ ಬೇಡಿಕೆ ಹೊಂದಿದ್ದಾರೆ ರುಜುತಾ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಯೂಟೂಬ್‌ನಾದ್ಯಂತ 3.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಭಾರತದಲ್ಲಿ 1.5 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದ 9 ಪುಸ್ತಕಗಳ ಲೇಖಕಿಯೂ ಹೌದು. ನೀಲ್ಸನ್ ಬುಕ್ಸ್‌ಕ್ಯಾನ್ ಇಂಡಿಯಾ ಪ್ರಕಾರ, 13 ವರ್ಷಗಳ ನಂತರವೂ 'ಡೋಂಟ್ ಲೂಸ್​ ಯುವರ್​ ಮೈಂಡ್, ಲೂಸ್ ಯುವರ್ ವೇಯ್ಟ್ ' ಎನ್ನುವ ಪುಸ್ತಕ ಫಿಟ್‌ನೆಸ್ ಮತ್ತು ಡಯಟ್ ವಿಭಾಗದಲ್ಲಿ ಭಾರತದ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚು ಮಾರಾಟವಾದ ಎರಡನೇ ಆಹಾರ ಪುಸ್ತಕ ದಿವೇಕರ್ ಅವರ ಆಹಾರ ಪುಸ್ತಕವಾಗಿದೆ.


  ರುಜುತಾ ನಮ್ಮ ಭಾರತೀಯ ಆಹಾರ ಪದ್ಧತಿಗೆ ಮರಳಿ ಎಂದು ಹೇಳುತ್ತಿದ್ದಾರೆ. ಕ್ರ್ಯಾಶ್​ ಡಯೆಟ್ ಕೆಟ್ಟ ಸಂಗಾತಿಯಂತೆ ಇದು ದೀರ್ಘಕಾಲ ಉಳಿಯುವುದಿಲ್ಲ ಎಂದಿದ್ದಾರೆ. ನಟ ಅನುಪಮ್ ಖೇರ್ ತಾವು ದೀರ್ಘಕಾಲದಿಂದ ಸೇವಿಸುತ್ತಿದ್ದ ಇಷ್ಟದ ಆಹಾರವನ್ನು ಸೇವಿಸುತ್ತಲೇ 14 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. 66 ವರ್ಷದಲ್ಲೂ 60 ವರ್ಷದ ಹಿಂದಿಗಿಂತಲೂ ಹೆಚ್ಚಿನ ಲವಲವಿಕೆ ಪಡೆದಿದ್ದಾರೆ ಎನ್ನುತ್ತಾರೆ. ಆಹಾರವೇ ಜೀವನ, ಅದನ್ನು ಆನಂದಿಸಿ ಎಂದು ಅವರು ಹೇಳುತ್ತಾರೆ.


  ಇದನ್ನೂ ಓದಿ: Explained: ಮಕ್ಕಳನ್ನು ದತ್ತು ಪಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್​ ಅನುಮೋದನೆ ಸಾಲುತ್ತೆಯೇ? ಹೊಸಾ ನಿಯಮದಲ್ಲಿ ಏನಿದೆ?

  2 ತಿಂಗಳ ಕಾರ್ಯಕ್ರಮಕ್ಕಾಗಿ 20,000 ಡಾಲರ್​​ ಶುಲ್ಕವಿದ್ದು, ಕ್ಲೈಂಟ್‌ನೊಂದಿಗೆ ತಿಂಗಳಿಗೆ ಎರಡು ಬಾರಿ ಅರ್ಧ ಗಂಟೆಯವರೆಗೆ ಮಾತುಕತೆ ಇರುತ್ತದೆ. 1,666 ಡಾಲರ್​ ಶುಲ್ಕವಿದೆ. 2 ತಿಂಗಳು ಕಾಯಬೇಕಿರುತ್ತದೆ. ಆದರೆ ಇದು ನನಗೆ ಮೌಲ್ಯಯುತವಾದ ವೆಚ್ಚವೆನ್ನುತ್ತಾರೆ ಅನುಪಮ್​ ಖೇರ್​​.


  ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಸೇವಿಸಿ


  ಪ್ರೋಟೀನ್, ಫೈಬರ್ ಮತ್ತು ಕಾರ್ಬ್ಸ್​​ ಎನ್ನುವ ವರ್ಗೀಕರಣ ಬೇಡ. ಆಹಾರದಲ್ಲಿ ಭಾರತದ ಸಾಂಪ್ರದಾಯಿಕ ತಿನಿಸುಗಳು ಇರಲಿ. ಮಾವಿನ ಹಣ್ಣು, ಸ್ಥಳೀಯ ಡೈರಿಯ ಪದಾರ್ಥಗಳು, ಬಿಳಿ ಅಕ್ಕಿ, ಹಾಲು, ದಾಲ್​ಗೆ ತುಪ್ಪ, ಸಕ್ಕರೆ ಭರಿತ ಟೀ, ಕಬ್ಬಿನ ಹಾಲಿನ ಸೇವನೆ ಇರಲಿ ಎನ್ನುತ್ತಾರೆ. ಸೂರ್ಯೋದಯ ನೋಡಬೇಕು, ಎದ್ದ ಹತ್ತು ನಿಮಿಷದಲ್ಲಿ ಹಣ್ಣು, ಕಾಯಿ ತಿನ್ನಬೇಕು. ಪ್ರತಿ ಎರಡು ಗಂಟೆಗಳಿಗೊಮ್ಮೆ ಮನೆ ಆಹಾರ ಸೇವಿಸಬೇಕು. ನಿಮ್ಮ ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಸೇವಿಸಿ.


  ಮಹಾರಾಷ್ಟ್ರದ ಕುಟುಂಬದಲ್ಲಿ ಜನಿಸಿದ ದಿವೇಕರ್ ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಪದವೀಧರರಾಗಿದ್ದು ಕ್ರೀಡಾ ವಿಜ್ಞಾನ ಮತ್ತು ನ್ಯೂಟ್ರಿಷಿಯನ್​​ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಟಾಟಾ ಮುಂಬೈ ಮ್ಯಾರಥಾನ್​ಗಾಗಿ ವಿಶ್ವದ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿಯ ಕಿರಿಯ ಸಹೋದರ ಅನಿಲ್ ಅಂಬಾನಿಗೆ ತರಬೇತಿ ನೀಡಿದ್ದಾರೆ.
  2018ರಲ್ಲಿ 12 ವಾರಗಳ ಉಚಿತ ತೂಕ ಇಳಿಕೆ ಕಾರ್ಯಕ್ರಮ ನಡೆಸಿದ್ದು, 40 ದೇಶಗಳಿಂದ 75,000 ಜನರು ಇದರಲ್ಲಿದ್ದರು. ಆಹಾರ, ವ್ಯಾಯಾಮ, ವಿಡಿಯೋ, ಆಹಾರ ಪದ್ಧತಿ ತಿಳಿಸಲಾಗಿದೆ.


  ಭಾರತದ ಉಪ್ಪಿನಕಾಯಿ, ಮಾವಿನ ಹಣ್ಣು, ಸಕ್ಕರೆ ಪ್ರಯೋಜನ, ಅಡುಗೆ ಮನೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಆಹಾರದ ಬುದ್ಧಿವಂತಿಕೆ ಅತ್ಯಮೂಲ್ಯ. ಶತಮಾನಗಳಿಂದ ಪರಂಪರೆಯಾಗಿ ಪ್ರಯತ್ನಿಸಿ, ಪರೀಕ್ಷಿಸಲ್ಪಟ್ಟಿದೆ ಜೊತೆಗೆ ವೈಜ್ಞಾನಿಕವಾಗಿದೆ ಎಂದಿದ್ದಾರೆ.


  ಇದನ್ನೂ ಓದಿ: Viral Video: ನಡೆಯಲು ಸಾಧ್ಯವಾಗದ ಮಗನಿಗಾಗಿ ವಿಶೇಷ ಸಾಧನ ತಯಾರಿಸಿದ ತಂದೆ, 10 ವರ್ಷಗಳ ನಂತರ ಯಾರೂ ವೀಲ್​ಚೇರ್ ಬಳಸಬೇಕಿಲ್ಲ!

  ಶೋನಾಲಿ ಸಬರ್ವಾಲ್ ಸಸ್ಯಾಹಾರಿ, ಮ್ಯಾಕ್ರೋಬಯೋಟಿಕ್ ಅಡುಗೆಯವರು ಮತ್ತು ಮುಂಬೈನ ಪೌಷ್ಟಿಕತಜ್ಞರಾಗಿದ್ದಾರೆ. ಕತ್ರಿನಾ ಕೈಫ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಬಾಲಿವುಡ್ ತಾರೆಗಳಿಗೆ 9 ವರ್ಷಗಳ ಕಾಲ ಅಡುಗೆ ಕೇಟರಿಂಗ್ ಮಾಡಿದ್ದಾರೆ. ಆ್ಯಂಟಿ ಏಜಿಂಗ್​ನಲ್ಲಿ ಸಕ್ಕರೆ ಪ್ರಭಾವದ ಮಾತುಕತೆಗಳನ್ನು ನೆನಪಿಸಿಕೊಳ್ಳುತ್ತಾರೆ.
  ಸಾಂಪ್ರಾದಾಯಿಕ ಆಹಾರ ಪದ್ಧತಿ ಮರಳಿಸಿದ ಕೋವಿಡ್


  ಕೋವಿಡ್​​ನಿಂದ ಸಾಂಪ್ರಾದಾಯಿಕ, ನೈಸರ್ಗಿಕ ಆಹಾರ ಮರಳಿ ಬಂದಿದೆ. ಕಾರ್ಪೋರೇಟ್​ ಆಹಾರ ಪದ್ಧತಿ ನಮ್ಮನ್ನು ಆಳುತ್ತಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಮತ್ತು ಡಾಬರ್ ಇಂಡಿಯಾ ಹೊಸ ಆಹಾರ ಪದ್ಧತಿಗೆ ತೆರೆದುಕೊಳ್ಳುತ್ತಿವೆ. ಎಲ್ಲವೂ ಸಾವಯವವಾಗುತ್ತಿವೆ. ಇನ್ನಿತರ ಕಂಪನಿಗಳು ಬದಲಾಗುತ್ತಿವೆ. 'ಆಹಾರ ಬಹಳ ಪ್ರಿಯವಾದ ಸಂಗತಿ. ನಿಮ್ಮ ಜೀವನಪೂರ್ತಿ ಅದರೊಂದಿಗೆ ಅನುಬಂಧವಿರುತ್ತದೆ. ನನ್ನ ಗ್ರಾಹಕರ ಮೊಮ್ಮಕ್ಕಳು ಅನುವಂಶಿಕ ಆಹಾರ ಪದ್ಧತಿ ಪಡೆದು ಶ್ರೀಮಂತರಾಗಬೇಕೆನ್ನುವುದು ನನ್ನ ಮಹತ್ವಾಕಾಂಕ್ಷೆ' ಎನ್ನುತ್ತಾರೆ ರುಜುತಾ.

  Published by:Soumya KN
  First published: