Hair Care: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

ಸೌಂದರ್ಯದ ವಿಷಯದಲ್ಲಿ ಕಡಲೆ ಹಿಟ್ಟು ಚರ್ಮದ ಆರೈಕೆಗೆ ತುಂಬಾ ಮುಖ್ಯ ಎಂದು ಹೇಳಲಾಗುತ್ತದೆ. ಕಡಲೆ ಹಿಟ್ಟನ್ನು ಚರ್ಮದ ಆರೈಕೆಗೆ ಬೆಸ್ಟ್ ರೆಮಿಡಿ ಎನ್ನುತ್ತಾರೆ. ಕಡಲೆ ಹಿಟ್ಟಿನ ಪ್ಯಾಕ್ ಅಥವಾ ಪೇಸ್ಟ್ ಕೂದಲ ಆರೈಕೆಗೂ ಚೆನ್ನಾಗಿ ವರ್ಕೌಟ್ ಆಗುತ್ತೆ ಅನ್ನೋದು ತಜ್ಞರ ಮಾತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉದ್ದ (Long) ಹಾಗೂ ಕಪ್ಪು (Black) ಮತ್ತು ದಟ್ಟವಾದ ಕೂದಲು (Hair) ಯಾರಿಗೆ ತಾನೆ ಬೇಡ ಹೇಳಿ? ದಪ್ಪ ಮತ್ತು ಉದ್ದ ಕೂದಲು ಹೊಂದಲು ಜನರು (People) ಸಾಕಷ್ಟು ಪ್ರಯತ್ನ ಪಡುತ್ತಾರೆ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಕೂದಲು ರಕ್ಷಣೆಗೆ ಹಲವರು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಇಂಟರ್ನೆಟ್ ನಲ್ಲಿ ಕೂದಲು ಆರೋಗ್ಯದ ಹಲವು ಅಂಶಗಳನ್ನು ಹೆಕ್ಕಿ ತೆಗೆದು ಆ ರೆಮಿಡಿ ಫಾಲೋ ಮಾಡುತ್ತಾರೆ. ಕೂದಲು ಪುರುಷ ಮತ್ತು ಮಹಿಳೆಯರ ಅಂದವನ್ನು ದ್ವಿಗುಣಗೊಳಿಸುತ್ತದೆ. ದಪ್ಪ ಮತ್ತು ಕಪ್ಪು ಕೇಶರಾಶಿ ಹೊಂದಿದವರು ಸಾಕಷ್ಟು ಆಕರ್ಷಕವಾಗಿ ಕಾಣುತ್ತಾರೆ.

    ಕಡಲೆ ಹಿಟ್ಟು ಮತ್ತು ಚರ್ಮದ ಆರೈಕೆ

    ಸೌಂದರ್ಯದ ವಿಷಯದಲ್ಲಿ ಕಡಲೆ ಹಿಟ್ಟು ಚರ್ಮದ ಆರೈಕೆಗೆ ತುಂಬಾ ಮುಖ್ಯ ಎಂದು ಹೇಳಲಾಗುತ್ತದೆ. ಕಡಲೆ ಹಿಟ್ಟನ್ನು ಚರ್ಮದ ಆರೈಕೆಗೆ ಬೆಸ್ಟ್ ರೆಮಿಡಿ ಎಂದು ಹೇಳಲಾಗುತ್ತದೆ. ಕಡಲೆ ಹಿಟ್ಟಿನ ಪ್ಯಾಕ್ ಅಥವಾ ಪೇಸ್ಟ್ ಕೂದಲ ಆರೈಕೆಗೂ ಚೆನ್ನಾಗಿ ವರ್ಕೌಟ್ ಆಗುತ್ತೆ ಅನ್ನೋದು ತಜ್ಞರ ಮಾತು. ಕಡಲೆ ಹಿಟ್ಟನ್ನು ಚರ್ಮದ ಮೇಲೆ ಮಾತ್ರವಲ್ಲ, ಅದನ್ನು ಕೂದಲಿಗೂ ಬಳಕೆ ಮಾಡಬಹುದು.

    ಹಾಗಾಗಿ ಇಂದು ನಾವು ನಿಮ್ಮ ಕೂದಲಿಗೆ ಕಡಲೆ ಹಿಟ್ಟನ್ನು ಬಳಸುವುದು ಹೇಗೆ ಎಂಬ ವಿಧಾನವನ್ನು ಹೇಳುತ್ತಿದ್ದೇವೆ. ಹಾಗೆಯೇ ಕಡಲೆ ಹಿಟ್ಟನ್ನು ಕೂದಲಿಗೆ ಹಚ್ಚುವುದರಿಂದ ಸಿಗುವ ಲಾಭಗಳ ಬಗ್ಗೆಯೂ ಇಲ್ಲಿ ಹೇಳಲಾಗಿದೆ. ಕಡಲೆ ಹಿಟ್ಟಿನಿಂದ ಕೂದಲು ಫೇಸ್ ಪ್ಯಾಕ್ ತಯಾರಿಸಲು, ನಿಮ್ಮ ಅಡುಗೆ ಮನೆಯಲ್ಲಿ ಆಗಾಗ್ಗೆ ಬಳಸುವ ಪದಾರ್ಥಗಳು ನಿಮಗೆ ಸಹಾಯ ಮಾಡಲಿವೆ. ಅವು ಯಾವವು ಎಂದು ಇಲ್ಲಿ ನೋಡೋಣ.

    ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?

    ಕಡಲೆ ಹಿಟ್ಟಿನಿಂದ ಕೂದಲು ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಪದಾರ್ಥಗಳು

    ಮೊಟ್ಟೆಯ ಬಿಳಿ

    ಮೊಸರು

    ಬಾದಾಮ್ ಎಣ್ಣೆ

    ವಿಟಮಿನ್-ಇ ಒಂದು ಕ್ಯಾಪ್ಸುಲ್

    ಇವೆಲ್ಲವನ್ನೂ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಮತ್ತು ಈ ಕೂದಲು ಮಾಸ್ಕ್ ನ್ನು ನಿಮ್ಮ ಕೂದಲಿಗೆ 30 ರಿಂದ 35 ನಿಮಿಷಗಳ ಕಾಲ ಅನ್ವಯಿಸಿ. ಅದರ ನಂತರ ಕೂದಲನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಸೌಮ್ಯವಾದ ಶಾಂಪೂ ಬಳಸಿ.

    ಕಡಲೆ ಹಿಟ್ಟಿನ ಪ್ರಯೋಜನಗಳು

    ಕಡಲೆ ಹಿಟ್ಟನ್ನು ರುಬ್ಬುವ ಮೂಲಕ ತಯಾರು ಮಾಡಲಾಗುತ್ತದೆ. ಇದು ಪ್ರೋಟೀನ್, ಕಬ್ಬಿಣ ಮತ್ತು ಸ್ವಲ್ಪ ಪ್ರಮಾಣದ ಕ್ಯಾಲ್ಸಿಯಂನ್ನು ಒದಗಿಸುತ್ತದೆ. ಈ ಪೋಷಕಾಂಶಗಳು ನಿಮ್ಮ ಕೂದಲಿಗೆ ಬಲ ನೀಡುತ್ತದೆ.

    ಕೂದಲಿನ ಹೊಳಪು ಹೆಚ್ಚಿಸುತ್ತದೆ.

    ಕಬ್ಬಿಣದ ಪೋಷಣೆ ಕೂದಲು ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟು ನೈಸರ್ಗಿಕ ಗುಣ ಹೊಂದಿದೆ. ಇದು ಚರ್ಮದ ಆಳವಾದ ಶುಚಿಗೊಳಿಸುವಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನಿಮ್ಮ ನೆತ್ತಿಯಲ್ಲಿ ಸಂಗ್ರಹವಾಗಿರುವ ಕೊಳೆ, ಸತ್ತ ಜೀವಕೋಶಗಳು ಮತ್ತು ಮೇದೋಗ್ರಂಥಿಗಳ ಸ್ರಾವವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಹೀಗಾಗಿ ಕೂದಲಿನ ಆರೋಗ್ಯ ಬೇಗ ಸುಧಾರಿಸುತ್ತದೆ.

    ನಿಮ್ಮ ಕೂದಲು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿದ್ದರೆ ನೀವು ಈ ಹೇರ್ ಮಾಸ್ಕ್ ನ್ನು ಬಳಸಬೇಕು. ಈ ಹೇರ್ ಮಾಸ್ಕ್ ನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಿ. ತುಂಬಾ ಒಣ ಕೂದಲು ಹೊಂದಿದ್ದರೆ, ಈ ಹೇರ್ ಮಾಸ್ಕ್ ಬಳಸಿದ ನಂತರ, ಕೂದಲಿಗೆ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆ ಬಳಸಿ.

    ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

    ಕೂದಲಿನ ಬೇರುಗಳಿಗೆ ಎಣ್ಣೆ ಹಚ್ಚಿದ ನಂತರ 30 ರಿಂದ 45 ನಿಮಿಷಗಳಲ್ಲಿ ಶಾಂಪೂ ಮಾಡಿ. ಇದು ಕೂದಲು ಆರೋಗ್ಯಕರ ಮತ್ತು ದಪ್ಪ ಆಗಲು ಸಹಾಯ ಮಾಡುತ್ತದೆ.
    Published by:renukadariyannavar
    First published: