Gram Flour: ಕಡಲೆ ಹಿಟ್ಟು ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಬೆಸ್ಟ್, ಬಳಕೆ ಹೇಗೆ?

ಕಡಲೆ ಹಿಟ್ಟಿನಲ್ಲಿ ಇರುವಂತಹ ಕೆಲವೊಂದು ಗುಣಗಳಿಂದಾಗಿ ಇದನ್ನು ಹಿಂದಿನಿಂದಲೂ ಸೌಂದರ್ಯ ವರ್ಧಕವಾಗಿ ಬಳಸಿಕೊಳ್ಳಲಾಗುತ್ತಿತ್ತು.

Gram flour

Gram flour

 • Share this:
  ಕಡಲೆ ಹಿಟ್ಟು (Gram Flour) ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು. ಕಡಲೆ ಹಿಟ್ಟಿನಲ್ಲಿ ಇರುವಂತಹ ಕೆಲವೊಂದು ಗುಣಗಳಿಂದಾಗಿ ಇದನ್ನು ಹಿಂದಿನಿಂದಲೂ ಸೌಂದರ್ಯ ವರ್ಧಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಮಾರುಕಟ್ಟೆ (Market) ಯಲ್ಲಿ ಸಿಗುವಂತಹ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವ ಬದಲು ಕಡಲೆಹಿಟ್ಟನ್ನು ಬಳಸಿದರೆ ಅದರಿಂದ ಹಲವಾರು ರೀತಿಯ ಸೌಂದರ್ಯ (Beauty) ಲಾಭಗಳು ನಿಮಗೆ ಸಿಗುವುದು. ವೈವಿಧ್ಯಮಯ ಗುಣಗಳನ್ನು ಹೊಂದಿರುವಂತಹ ಕಡಲೆಹಿಟ್ಟನ್ನು ಬೇರೆ ಸಾಮಗ್ರಿಗಳ ಜತೆಗೆ ಮಿಶ್ರಣ ಮಾಡಿಕೊಂಡು ಬಳಸಿದರೆ ಆಗ ಅದರಿಂದ ಹಲವಾರು ಲಾಭಗಳು ತ್ವಚೆಗೆ ಸಿಗುವುದು. ಕಡಲೆಹಿಟ್ಟನ್ನು ಬಳಸಿಕೊಂಡು ಅದರಿಂದ ಮಾಸ್ಕ್ ನ್ನು ತಯಾರಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಚರ್ಮ (Skin) ದ ಸಮಸ್ಯೆಗಳಿಗೆ ಇದರಿಂದ ನೆರವಾಗುವುದು.

   ದೇಹದ ಭಾಗಗಳಿಗೆ ಕಡಲೆ ಹಿಟ್ಟಿನ ಮಾಸ್ಕ್

  ಪಾದಗಳು, ಮೊಣಕಾಲು, ಮೊಣಕೈ ಮತ್ತು ಕೈಗಳನ್ನು ನಾವು ಯಾವಾಗಲೂ ಕಡೆಗಣಿಸುತ್ತೇವೆ ಮತ್ತು ಈ ಎಲ್ಲಾ ಭಾಗಗಳು ಇದ್ದರೆ ಆಗ ದೇಹದ ಸೌಂದರ್ಯವು ತುಂಬಾ ಚೆನ್ನಾಗಿ ಕಾಣುವುದು. ಪಾದಗಳು ಮತ್ತು ಕೈಗಳ ಬಗ್ಗೆ ಗಮನಹರಿಸದೆ ಇದ್ದರೆ ಆಗ ಅದು ತುಂಬಾ ಕೆಟ್ಟದಾಗಿ ಕಾಣಿಸುವುದು. ಮನೆಯಿಂದ ಹೊರಗಡೆ ಹೋಗುವಾಗ ಹಾಗೂ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವ ವೇಳೆ ದೇಹದ ಕೆಲವು ಭಾಗಗಳು ಬಿಸಿಲಿಗೆ ಕಪ್ಪಾಗುವುದು. ಇದರಿಂದ ಕಡಲೆ ಹಿಟ್ಟನ್ನು ಬಳಸಿಕೊಂಡರೆ ಆಗ ಇದು ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವುದು.

  ಇದನ್ನೂ ಓದಿ: Bad Cholesterol: ಡೆಡ್ಲಿ ರೋಗಗಳಿಗೆ ಕಾರಣವಾಗೋ ಕೆಟ್ಟ ಕೊಲೆಸ್ಟ್ರಾಲ್​ಗೆ ದೇಹದಲ್ಲಿ ಜಾಗ ಕೊಡಬೇಡಿ, ಕಡಿಮೆ ಮಾಡೋದು ಹೇಗೆ?

  ಕೋಮಲ ಚರ್ಮಕ್ಕೆ ಕಡಲೆ ಹಿಟ್ಟು

  ವೈವಿಧ್ಯಮಯ ಗುಣಗಳನ್ನು ಹೊಂದಿರುವಂತಹ ಕಡಲೆಹಿಟ್ಟನ್ನು ಬೇರೆ ಸಾಮಗ್ರಿಗಳ ಜತೆಗೆ ಮಿಶ್ರಣ ಮಾಡಿಕೊಂಡು ಬಳಸಿದರೆ ಆಗ ಅದರಿಂದ ಹಲವಾರು ಲಾಭಗಳು ತ್ವಚೆಗೆ ಸಿಗುವುದು. ಕಡಲೆಹಿಟ್ಟನ್ನು ಬಳಸಿಕೊಂಡು ಅದರಿಂದ ಮಾಸ್ಕ್ ನ್ನು ತಯಾರಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಇದರಿಂದ ನೆರವಾಗುವುದು. ಇದು ಮಾರುಕಟ್ಟೆಯಲ್ಲಿ ತುಂಬಾ ಸುಲಭವಾಗಿ ಸಿಗುವ ಕಾರಣದಿಂದ ಇದನ್ನು ತ್ವಚೆಯ ಆರೈಕೆಯಲ್ಲಿ ಬಳಸಿಕೊಂಡು ಅದರ ಲಾಭ ಪಡೆಯಿರಿ.

  ಕಲೆ ಇರುವ ಚರ್ಮಕ್ಕಾಗಿ

  ಕಲೆಗಳು ಚರ್ಮಕ್ಕೆ ಅಸಮವಾದ ಟೋನ್ ನೀಡುತ್ತದೆ ಮತ್ತು ಕೊಳಕು ಮತ್ತು ಧೂಳುಗಳು ತೆರೆದ ರಂಧ್ರಗಳು ಮೊಡವೆ ಹೆಚ್ಚಾಗಲು ಕಾರಣವಾಗುತ್ತದೆ. ಇದಕ್ಕಾಗಿ, ಕಡಲೆ ಹಿಟ್ಟು ಮತ್ತು ಸೌತೆಕಾಯಿ ರಸದ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಅದು ಒಣಗುವವರೆಗೆ ಕೆಲವು ನಿಮಿಷಗಳ ಕಾಲ ಬಿಡಿ. ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

  ಕಡಲೆ ಹಿಟ್ಟು ಕೂದಲಿಗೆ ಮಲ್ಟಿವಿಟಮಿನ್

  ಕಡಲೆ ಹಿಟ್ಟು ಕೂದಲಿಗೆ ಮಲ್ಟಿವಿಟಮಿನ್ ಆಗಿದೆ, ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಫೋಲಿಕ್ ಆಮ್ಲ ಫೋಲಿಕ್ ಆಮ್ಲ, ಕಬ್ಬಿಣ, ತಾಮ್ರ, ಸತು, ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ನಿಯಾಸಿನ್ಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳಿಂದ ಕೂದಲನ್ನು ರಕ್ಷಿಸುತ್ತದೆ.

  ಇದನ್ನೂ ಓದಿ: Hair Problem tips: ಈ ಆಹಾರಗಳನ್ನು ಸೇವಿಸಿದರೆ ಕೂದಲು ಉದುರುವುದು ಫಟಾಫಟ್ ಅಂತ ನಿಲ್ಲುತ್ತೆ

  ಮುಖದ ಮೇಲಿನ ಮೊಡವೆಗಳಿಗೆ ರಾಮಬಾಣ

  ಒಣ ಚರ್ಮದ ಸಮಸ್ಯೆ ಇದ್ದವರಿಗೆ ಚರ್ಮದ ಮೇಲೆ ಕೆಲವೊಮ್ಮೆ ರಂದ್ರಗಳು ಕಾಣಿಸಲು ಪ್ರಾರಂಭವಾಗುತ್ತವೆ. ಕೆಲವು ಬಾರಿ ಕಾಳಜಿ ವಹಿಸಲು ನಿರ್ಲಕ್ಷ ತೋರಿದಾಗ ಮೊಡವೆಗಳು ಸಹ ಉಂಟಾಗುತ್ತವೆ. ಹಾಗಾಗಿ ಮೊದಲು ತ್ವಚೆಯ ಸ್ವಚ್ಛತೆಗೆ ಗಮನಹರಿಸಬೇಕು. ಸಂಪೂರ್ಣ ತ್ವಚೆಯ ರಕ್ಷಣೆ ಮಾಡಲು ಮುಂದಾದಾಗ ಮಾತ್ರ ಇಂತಹ ಸಮಸ್ಯೆಗಳಿಂದ ದೂರವಾಗಲು ಅನುಕೂಲವಾಗುತ್ತದೆ.

  ಇದಕ್ಕಾಗಿ ನೀವು ಕಡಲೆ ಹಿಟ್ಟನ್ನು ನೀರು ಹಾಕಿ ಕಲಸಿಕೊಂಡು ಮುಖದ ಮೇಲೆ ಅನ್ವಯಿಸಿ ಸುಮಾರು ಇಪ್ಪತ್ತು ನಿಮಿಷಗಳು ಹಾಗೇ ಬಿಡಬೇಕು. ಪ್ರತಿ ದಿನವೂ ಇದೇ ರೀತಿ ಮಾಡುವುದರಿಂದ ಕೇವಲ ಕೆಲವೇ ದಿನಗಳಲ್ಲಿ ನಿಮಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ.
  Published by:Swathi Nayak
  First published: