Ganesh Chaturthi 2022: ಜಿಪಿಎಸ್​ನಲ್ಲಿ ಮೂಡಿ ಬಂದ ಗಣೇಶ, ಫುಲ್ ವೈರಲ್ ಆಗ್ತಿದೆ ವಿಡಿಯೋ

GPS Ganesha: ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಜಿಪಿಎಸ್ ಮೂಲಕ ಗಣೇಶನ ಮೂರ್ತಿ ಶೆಪ್​ನಲ್ಲಿ ಬೆಂಗಳೂರಿನ ಸುತ್ತ ಮುತ್ತ ಓಡಾಡಿದ್ದು, ನಂತರ ಅದರ ಫೋಟೋ ಮಾತ್ರ ಅದ್ಭುತವಾಗಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬಗಳೆಂದರೆ (Festival) ಅದೇನೋ ಒಂದು ಸಡಗರ, ಸಂಭ್ರಮ ಇದ್ದೇ ಇರುತ್ತೆ ಅಲ್ವ. ಬಹುತೇಕ ಎಲ್ಲ ಹಬ್ಬಗಳಿಗೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಆದರೂ, ಗೌರಿ - ಗಣೇಶ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಂಭ್ರಮ ಹೆಚ್ಚಾಗೇ ಇರುತ್ತದೆ. ಗೌರಿ - ಗಣೇಶನ ಮೂರ್ತಿ ತರುವುದು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ತರುವುದು, ಗೌರಿ - ಗಣೇಶನಿಗೆ (Gowri Ganesha) ನೈವೇದ್ಯ ಮಾಡಲು ಸಿಹಿ ತಿಂಡಿಗಳು (Sweets), ಪೂಜೆ ಮಾಡುವುದು ಹಾಗೂ ಬೇರೆಯವರ ಮನೆಗೆ ಹೋಗಿ ಗೌರಿ - ಗಣೇಶನ ಮೂರ್ತಿ ನೋಡುವುದು ಹಾಗೂ ಆಶೀರ್ವಾದ ತೆಗೆದುಕೊಳ್ಳುವುದೂ ಒಂದು ಸಂಭ್ರಮವೇ. ಗಣೇಶ ಅಂದ್ರೆ ಮಕ್ಕಳಿಗಂತೂ ಸ್ವಲ್ಪ ಜಾಸ್ತಿನೇ ಇಷ್ಟ ಇರುತ್ತೆ. ಗಣೇಶ ಹಬ್ಬವನ್ನು ಒಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಆದರೆ ಜಿಪಿಎಸ್​ ಗಣೇಶನ ಬಗ್ಗೆ ಗೊತ್ತಾ?

ಜಿಎಎಸ್​ ಗಣೇಶ ಮಾತ್ರ ಸೂಪರ್

ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಜಿಪಿಎಸ್ ಮೂಲಕ ಗಣೇಶನ ಮೂರ್ತಿ ಶೆಪ್​ನಲ್ಲಿ ಬೆಂಗಳೂರಿನ ಸುತ್ತ ಮುತ್ತ ಓಡಾಡಿದ್ದು, ನಂತರ ಅದರ ಫೋಟೋ ಮಾತ್ರ ಅದ್ಭುತವಾಗಿ ಬಂದಿದೆ. ಸೈಕಲ್​ನಲ್ಲಿ ವ್ಯಕ್ತಿಯೊಬ್ಬರು ಬೆಳಗ್ಗೆ 4.30ರಿಂದ ಬೆಂಗಳೂರಿನ ಸುತ್ತ ಹೋಗಿದ್ದು, 113 ಕಿಮೀ ರೈಡ್​ ಮಾಡಿ ಸುಂದರವಾದ ಗಣೇಶನ ಜಿಪಿಎಸ್​ ಆರ್ಟ್ ರೆಡಿ ಮಾಡಿದ್ದಾರೆ.  6 ಗಂಟೆ 5 ನಿಮಿಷದಲ್ಲಿ ಸುಮಾರು 113 ಕಿಮೀ ಸುತ್ತಿದ್ದು, ಬೊಮ್ಮನ ಹಳ್ಳಿ, ಅತ್ತಿಬೆಲೆ ಸರ್ಜಾಪುರ ಮೂಲಕ ಹಾದು ಹೋಗಿದ್ದು, ಕೊನೆಯಲ್ಲಿ ಅದರ ರಿಸ್ಟಲ್​ ಅದ್ಭುತವಾಗಿದೆ.

ಗಣೇಶ ಚತುರ್ಥಿ ಹಿಂದೂ ಹಬ್ಬಗಳಲ್ಲಿ ಒಂದು. ಆಗಸ್ಟ್​ 30ನೇ ತಾರೀಖು ಚೌತಿ ಹಬ್ಬವನ್ನು ಆಚರಿಸುತ್ತಾರೆ. ದೇಶದಾದ್ಯಂತ ಪ್ರತಿಯೊಬ್ಬರ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಾರೆ. ಹಿಂದೆ 10 ದಿನಗಳ ಕಾಲ ಆಚರಣೆ ಮಾಡುತ್ತಿದ್ದರು. ಪ್ರಸ್ತುತ ಕೆಲವು ದಿನಗಳವರೆಗೆ ಆಚರಣೆ ಮಾಡುತ್ತಾರೆ. ಉತ್ತರ ಪ್ರದೇಶ, ಮುಂಬೈನಲ್ಲಿ ತಿಂಗಳುಗಳ ಕಾಲ ಭರ್ಜರಿಯಾಗಿ ಆಚರಣೆ ಮಾಡುತ್ತಾರೆ.


ಗಣೇಶನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ರಿದ್ಧಿ, ಸಿದ್ಧಿ, ಸಂಪತ್ತನ್ನು ನೀಡುವ ದೇವರು. ಹಾಗಾಗಿ ಗಣಪನಿಗೆ ಇಷ್ಟವಾದ ಗರಿಕೆ, ಹಣ್ಣು ಹಂಪಲುಗಳನ್ನು, ಸಿಹಿ ತಿಂಡಿ, ಮೋದಕ ಅರ್ಪಿಸಿ ತಮ್ಮ ಇಷ್ಟಗಳನ್ನು ಬೇಡಿಕೊಳ್ಳುತ್ತಾರೆ. ಆದರೆ ಗಣೇಶನ ವಿಗ್ರಹವನ್ನು ಮನೆಗೆ ತರುವಾಗ ಮತ್ತು ವಿಗ್ರಹವನ್ನು ಮನೆಯಲ್ಲಿ ಇರಿಸುವಾಗ ಕೆಲವು ನಿಯಮಾವಳಿಗಳಿವೆ ಈ ಬಗ್ಗೆ ಮಾಹಿತಿ ಇಲ್ಲಿದೆ

ಕೆಲ ನಿಯಮಗಳು ಇಲ್ಲಿದೆ

ವಾಸ್ತು ನಿಯಮದ ಪ್ರಕಾರ ಕೆಲವು ಗಣೇಶನ ವಿಗ್ರಹಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಸುವಿನ ಸೆಗಣಿ ಮತ್ತು ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಮನೆಗೆ ತಂದರೆ ಉತ್ತಮ.



ಹಳದಿ ಬಣ್ಣದ ಮತ್ತು ಬಿಳಿಯ ಬಣ್ಣದ ವಿಗ್ರಹ ಅದೃಷ್ಠವನ್ನು ನೀಡುತ್ತದೆ. ಬೆಳ್ಳಿಯ ಗಣೇಶನ ವಿಗ್ರಹ ಮನೆಯ ಮಾಲೀಕನ ಖ್ಯಾತಿಯನ್ನು ಹೆಚ್ಚಿಸುತ್ತದೆ. ಹಿತ್ತಾಳೆಯ ವಿಗ್ರಹ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮರದ ಗಣೇಶನ ವಿಗ್ರಹ ಸಂತೋಷವನ್ನು ನೀಡುತ್ತದೆ.

ವಿಗ್ರಹವನ್ನು ಇಡಲು ಸರಿಯಾದ ಸ್ಥಳ: ಗಣೇಶನ ವಿಗ್ರಹವನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಅಥವಾ ಶೌಚಾಲಯಕ್ಕೆ ನೇರವಾಗಿ ಜೋಡಿಸಿರುವ ಅಥವಾ ವಾಶ್​ ರೂಂ ಗೋಡೆಯಗಳಿಗೆ ತಾಗಿರುವ ಗೋಡೆಗಳ ಬದಿಯಲ್ಲಿ ಇಡಬಾರದು. ಮೆಟ್ಟಿಲಿನ ಕೆಲಗೆ ಇಡುವುದು ಸೂಕ್ತವಲ್ಲ. ಗಣೇಶನ ವಿಗ್ರಹವನ್ನು ಮನೆಯ ಬಾಗಿಲಿಗೆ ಮುಖ ಮಾಡಿದಂತೆ ಇರಿಸಿದರೆ ಉತ್ತಮ.
Published by:Sandhya M
First published: