Gowri Festival 2021 Decoration Ideas: ಗೌರಿ ಗಣೇಶ ಹಬ್ಬಕ್ಕೆ ಡೆಕೋರೇಟ್ ಮಾಡಲು ಇಲ್ಲಿವೆ ಸಖತ್ ಐಡಿಯಾಗಳು

ನಿಮಗೂ ಸಹ ಸ್ವರ್ಣ ಗೌರಿ ವ್ರತದಂದು ಗೌರಿಗೆ ವಿಶೇಷ ಅಲಂಕಾರ ಮಾಡಬೇಕೆಂದು ಅನ್ನಿಸುತ್ತಿದೆಯಾ..? ಈ ಹಿನ್ನೆಲೆ ಈ ವರ್ಷದ ಗೌರಿ ಹಬ್ಬಕ್ಕೆ ಅಲಂಕಾರಕ್ಕಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ವಿಡಿಯೋಗಳನ್ನು ಆಯ್ಕೆ ಮಾಡಿದ್ದು, ಹಾಗೂ ಫೋಟೋಗಳ ಸಂಗ್ರಹವನ್ನೂ ನಿಮಗೆ ನೀಡಿದ್ದೇವೆ

ಗೌರಿ ಗಣೇಶ ಹಬ್ಬಕ್ಕೆ ಅಲಂಕಾರ

ಗೌರಿ ಗಣೇಶ ಹಬ್ಬಕ್ಕೆ ಅಲಂಕಾರ

  • Share this:
ಹಿಂದೂಗಳಿಗೆ ವರ್ಷವಿಡೀ ನಾನಾ ಹಬ್ಬಗಳು ಬರುತ್ತವೆ. ಹಬ್ಬಗಳೆಂದ್ರೆ ಸಂಭ್ರಮಕ್ಕೆ ಕೊರತೆ ಎಲ್ಲಿರುತ್ತೆ ಅಲ್ವ. ಹಬ್ಬಗಳೆಂದ್ರೆ ಮಕ್ಕಳು, ಹುಡುಗಿಯರು ಹಾಗೂ ಮಹಿಳೆಯರಲ್ಲಂತೂ ಇನ್ನೂ ಹೆಚ್ಚು ಸಡಗರವಿರುತ್ತದೆ. ಮಹಿಳೆಯರು ಹಬ್ಬಗಳಿಗೆ ವಿಶೇಷವಾದ ಅಡುಗೆ ಮಾಡುವುದು, ತಾವು ಹೊಸ ಬಟ್ಟೆ ಧರಿಸುವುದು ಹಾಗೂ ಮಕ್ಕಳಿಗೆ ಹೊಸ ಉಡುಪುಗಳನ್ನು ರೆಡಿ ಮಾಡುವುದು ಅಂದರೆ ಅವರಿಗೆ ಇಷ್ಟ. ಇನ್ನು, ಹಬ್ಬಗಳೆಂದ್ರೆ ಮನೆಗೆ, ದೇವರಿಗೆ ಅಲಂಕಾರವೂ ಇರುತ್ತಲ್ವಾ. ಹಬ್ಬದ ದಿನ ತಮ್ಮ ಮನೆಯಲ್ಲಿ ಬೇರೆಯವರ ಮನೆಗಿಂತ ಚೆನ್ನಾಗಿ ಕಾಣುವಂತೆ ದೇವರ ಮನೆ, ದೇವರನ್ನು ಅಲಂಕಾರ ಮಾಡಲು ಹಲವರು ಹಾತೊರೆಯುತ್ತಾರೆ. ಈಗಂತೂ ಬಹುತೇಕ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್‌, ಮನೆಯಲ್ಲಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಇರುತ್ತದೆ. ಇದರಲ್ಲಿ ಹಬ್ಬಕ್ಕೆ ವಿಶೇಷವಾದ ಅಲಂಕಾರದ ಐಡಿಯಾಗಳು ಹಾಗೂ ವಿಶೇಷವಾದ ಹಬ್ಬದ ಅಡುಗೆ ಮಾಡಲು ಯೂಟ್ಯೂಬ್‌ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೆ ಪಡೆಯುತ್ತಾರೆ.

ಇದೇ ರೀತಿ, ಸೆಪ್ಟೆಂಬರ್ 9, 2021ರಂದು ಅಂದರೆ ಗುರುವಾರದಂದು ದಕ್ಷಿಣ ಭಾರತದ ಹಲವು ರಾಜ್ಯಗಳ ವಿವಿಧ ಭಾಗಗಳಲ್ಲಿ ಸ್ವರ್ಣ ಗೌರಿ ವ್ರತ ಅಥವಾ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮುಖ್ಯವಾಗಿ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಗಣೇಶ ಚತುರ್ಥಿಗೆ ಒಂದು ದಿನ ಮುಂಚಿತವಾಗಿ ಆಚರಿಸಲಾಗುವ ಜನಪ್ರಿಯ ಹಿಂದೂ ಹಬ್ಬವಾಗಿದೆ. ಗೌರಿ ಹಬ್ಬವನ್ನು ಗೌರಿ ಗಣೇಶ ಹಬ್ಬ ಅಥವಾ ಗೌರಿ ಗಣೇಶ ಹಬ್ಬ ಎಂದೂ ಕರೆಯುತ್ತಾರೆ.

ಇದನ್ನೂ ಓದಿ:Ganesh Chaturthi 2021: ನಿಮಗಿರುವ ವಿಘ್ನಗಳು ನಿವಾರಣೆಯಾಗಲು ವರಸಿದ್ಧಿ ವಿನಾಯಕನ ವ್ರತ ಮಾಡಿ, ಗರಿಕೆಯನ್ನು ಸಮರ್ಪಿಸಿ

ಉತ್ತರ ಭಾರತದಲ್ಲಿ ಹರತಾಲಿಕ ತೀಜ್ ಆಚರಣೆ ಮಾಡಿದಂತೆ ಅದೇ ದಿನ ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶನ ತಾಯಿ ದೇವಿ ಗೌರಿ ಅಥವಾ ಪಾರ್ವತಿಯ ಗೌರವಾರ್ಥವಾಗಿ ಆಚರಣೆ ಮಾಡಲಾಗುತ್ತದೆ.

ಇನ್ನು, ಗೌರಿ ಹಬ್ಬದ ಒಂದು ಪ್ರಮುಖ ಅಂಶವೆಂದರೆ ಅದರ ವಿಶಿಷ್ಟ ಅಲಂಕಾರಗಳು. ಜನರು ಗೌರಿ ಹಬ್ಬದ ಅಲಂಕಾರಗಳನ್ನು ಎದುರು ನೋಡುತ್ತಾರೆ ಮತ್ತು ಹಬ್ಬದ ಋತುವಿನಲ್ಲಿ ಹೊಸ ಅಲಂಕಾರ ಕಲ್ಪನೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಾರೆ. ಕಳೆದ ವರ್ಷಗಳಿಗಿಂತ ಈ ಬಾರಿ ಹಬ್ಬಕ್ಕೆ ವಿಶೇಷ ಅಲಂಕಾರ ಮಾಡಬೇಕೆಂದು ಹಲವರು ಬಯಸುತ್ತಾರೆ.

ನಿಮಗೂ ಸಹ ಇದೇ ರೀತಿ ಸ್ವರ್ಣ ಗೌರಿ ವ್ರತದಂದು ಗೌರಿಗೆ ವಿಶೇಷ ಅಲಂಕಾರ ಮಾಡಬೇಕೆಂದು ಅನ್ನಿಸುತ್ತಿದೆಯಾ..? ಈ ಹಿನ್ನೆಲೆ ಈ ವರ್ಷದ ಗೌರಿ ಹಬ್ಬಕ್ಕೆ ಅಲಂಕಾರಕ್ಕಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ವಿಡಿಯೋಗಳನ್ನು ಆಯ್ಕೆ ಮಾಡಿದ್ದು, ಹಾಗೂ ಫೋಟೋಗಳ ಸಂಗ್ರಹವನ್ನೂ ನಿಮಗೆ ನೀಡಿದ್ದೇವೆ. ಕೇವಲ ಗೌರಿ ಅಲಂಕಾರ ಮಾತ್ರವಲ್ಲ, ಇದರಲ್ಲಿ ಗೌರಿ - ಗಣೇಶ ಮೂರ್ತಿ ಅಥವಾ ವಿಗ್ರಹಗಳನ್ನು ಇರಿಸುವ ಮಂಟಪದ ಅಲಂಕಾರವನ್ನು ಒಳಗೊಂಡಿದೆ.

ಇದನ್ನೂ ಓದಿ:Swarna Gowri Vratha 2021: ಸ್ವರ್ಣಗೌರಿ ವ್ರತದ ಆಚರಣೆಯ ಹಿಂದಿದೆ ಬಲವಾದ ನಂಬಿಕೆ; ಹಬ್ಬದ ಮಹತ್ವವನ್ನು ಇಲ್ಲಿ ತಿಳಿಯಿರಿ

ಈ ಬಾರಿಯ ಅಂದರೆ ಗೌರಿ ಗಣೇಶ ಹಬ್ಬ 2021ನ ಅಲಂಕಾರದ ವಿಡಿಯೋ ನೀವೇ ನೋಡಿ..




ಈ ವಿಡಿಯೋಗಳನ್ನು ನೋಡಿಕೊಂಡು ಈ ಬಾರಿಯ ಗೌರಿ - ಗಣೇಶ ಹಬ್ಬಕ್ಕೆ ವಿಶೇವಾಗಿ ಅಲಂಕಾರ ಮಾಡಿ, ನಿಮ್ಮ ಮನೆಯ ಮೆರುಗು, ಸಂಭ್ರಮ, ಕಳೆಯನ್ನು ಹೆಚ್ಚಿಸಿಕೊಳ್ಳಿ.

ಇನ್ನ, ಹಬ್ಬ ಅಂದ್ರೆ ಅಲಂಕಾರಕ್ಕೆ ಕೊರತೆ ಇರುತ್ತಾ..? ಮಹಿಳೆಯರು ತಮ್ಮ ಅತ್ಯುತ್ತಮ ಅಲಂಕಾರವನ್ನು ಧರಿಸುತ್ತಾರೆ ಮತ್ತು ಅವರ ಪೋಷಕರು ಕಳಿಸಿದ ವಸ್ತುಗಳೊಂದಿಗೆ ಪೂಜೆ ಮಾಡುತ್ತಾರೆ. ಮದುವೆಯಾದ ಮಹಿಳೆಯರು ಸಿಂಧೂರ, ಅರಿಶಿಣ, ಕುಂಕುಮ, ಹೂವುಗಳು, ಬಳೆಗಳು, ಬಾಚಣಿಗೆ, ಕನ್ನಡಿ ಇತ್ಯಾದಿ ವಸ್ತುಗಳನ್ನು ಹಾಗೂ ಹಣ್ಣುಗಳು, ಪಾನ್, ಇಡೀ ತೆಂಗಿನಕಾಯಿ ಮತ್ತು ದಕ್ಷಿಣೆಯನ್ನು ಮರದಲ್ಲಿಟ್ಟು ಸ್ವರ್ಣಗೌರಿ ದೇವಿಗೆ ಬಾಗಿನ ನೀಡುತ್ತಾರೆ. ಹಾಗೂ ಹಲವು ಮಹಿಳೆಯರು 16 ಸುಮಂಗಲಿಯರಿಗೆ (ವಿವಾಹಿತ ಮಹಿಳೆಯರು) ಬಾಗಿನ ನೀಡುತ್ತಾರೆ. ಇದನ್ನು ಮಂಗಳಕರ ಸೂಚಕ ಎಂದು ನಂಬಲಾಗಿದೆ.
Published by:Latha CG
First published: