Foods for Sleeping: ಉತ್ತಮ ನಿದ್ದೆಗಾಗಿ ಏನು ತಿನ್ನಬೇಕು? ಇಲ್ಲಿದೆ ಓದಿ, ಟ್ರೈ ಮಾಡಿ, ನಿದ್ದೆ ಮಾಡಿ!

ಉತ್ತಮ ಆಹಾರ ಮತ್ತು ಪಾನೀಯದ ಸೇವನೆ ಜೊತೆ ಸಾಕಷ್ಟು ನಿದ್ರೆ ಮಾಡುವುದು ಮುಖ್ಯವಾಗಿದೆ. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ನಿದ್ದೆ ಬಾರದೇ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರಿಗೆ ಗಂಟೆಗಟ್ಟಲೆ ಹಾಸಿಗೆಯಲ್ಲಿ ಮಲಗಿದರೂ ನಿದ್ರೆ ಬರುವುದಿಲ್ಲ. ಅವರು ಏನ್ ಮಾಡ್ಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬರೂ (Everyone) ಆರೋಗ್ಯವಾಗಿರಲು (Healthy) ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಉತ್ತಮ ಆಹಾರ (Food) ಮತ್ತು ಪಾನೀಯ (Drink) ಸೇವನೆ ಹಾಗೂ ವ್ಯಾಯಾಮ ಮತ್ತು ನಿದ್ದೆ ತುಂಬಾ ಅತ್ಯಗತ್ಯ. ದೀರ್ಘ ಕಾಲ ಆರೋಗ್ಯವಾಗಿ ಇರಲು ಉತ್ತಮ ಮತ್ತು ಪೂರ್ಣ ಹಾಗೂ ಎಂಟು ಗಂಟೆಗಳ ನಿದ್ರೆ ಮಾಡುವುದು ತುಂಬಾ ಅತ್ಯಗತ್ಯ. ನಮ್ಮ ದೇಹವು ನಿದ್ರೆಯಿಂದ ಚಾರ್ಜ್ ಆಗುತ್ತದೆ. ಹೀಗಾಗಿ ನಾವು ಮಾರನೇ ದಿನವನ್ನು ಫ್ರೆಶ್ ಆಗಿ ಸ್ಟಾರ್ಟ್ ಮಾಡಬಹುದು. ಕೆಲವು ದಿನ ನಮಗೆ ಉತ್ತಮ ನಿದ್ರೆ ಬಾರದೇ ಇದ್ದರೆ ಅದರ ಪರಿಣಾಮ ನಮ್ಮ ಆರೋಗ್ಯ ಮತ್ತು ಪ್ರಕೃತಿ ಎರಡರ ಮೇಲೂ ಕಾಣಿಸಲು ಆರಂಭ ಆಗುತ್ತದೆ.

  ಉತ್ತಮ ಆಹಾರ ಮತ್ತು ಪಾನೀಯ

  ಹಾಗಾಗಿ ಉತ್ತಮ ಆಹಾರ ಮತ್ತು ಪಾನೀಯದ ಜೊತೆ ಸಾಕಷ್ಟು ನಿದ್ರೆ ಮಾಡುವುದು ಮುಖ್ಯವಾಗಿದೆ. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ನಿದ್ದೆ ಬಾರದೇ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರಿಗೆ ಗಂಟೆಗಟ್ಟಲೆ ಹಾಸಿಗೆಯಲ್ಲಿ ಮಲಗಿದರೂ ನಿದ್ರೆ ಬರುವುದಿಲ್ಲ. ಇದು ದೇಹದಲ್ಲಿ ಚಡಪಡಿಕೆ ಉಂಟು ಮಾಡುತ್ತದೆ.

  ಇದು ಒತ್ತಡ ಮತ್ತು ತೊಂದರೆ ಹೆಚ್ಚು ಮಾಡುತ್ತದೆ. ನಿದ್ರೆಯ ಸಮಸ್ಯೆಯಿಂದ ನೀವು ತೊಂದರೆಗೆ ಒಳಗಾಗಿದ್ದರೆ ನಂತರ ಜೀವನಶೈಲಿ ಮತ್ತು ಆಹಾರದಲ್ಲಿ ಕೆಲವು ಬದಲಾವಣೆ ಮಾಡಲು ಪ್ರಯತ್ನಿಸಿ. ಬಹುಶಃ ನಿಮ್ಮ ನಿದ್ರಾಹೀನತೆ ಸಮಸ್ಯೆ ಕೊನೆಗೊಳ್ಳುತ್ತದೆ. ಉತ್ತಮ ನಿದ್ರೆಗಾಗಿ ನೀವು ಏನು ಮಾಡಬೇಕು? ಯಾವ ಪದಾರ್ಥ ಸೇವನೆ ಮಾಡಬೇಕು ಎಂದು ಇಲ್ಲಿ ತಿಳಿಯಿರಿ.

  ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

  ಹಾಲು

  ನೀವು ರಾತ್ರಿ ಹಾಲು ಕುಡಿಯದೇ ಇದ್ದರೆ ನಂತರ ಅದನ್ನು ಅಭ್ಯಾಸ ಮಾಡಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲು ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ. ಹಾಲಿನಲ್ಲಿ ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಇದ್ದು ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಜೊತೆಗೆ ಹಾಲು ಕ್ಯಾಲ್ಸಿಯಂನ ಉತ್ತಮ ಮೂಲ. ಇದು ಒತ್ತಡ ದೂರ ಮಾಡುತ್ತದೆ.

  ಚೆರ್ರಿ

  ರಾತ್ರಿ ಮಲಗುವ ಮುನ್ನ ಒಂದು ಹಿಡಿ ಚೆರ್ರಿ ಹಣ್ಣು ಸೇವನೆ ಮಾಡಿ. ಇದು ನಿಮ್ಮ ನಿದ್ರೆ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಬಯಸಿದರೆ, ನೀವು ಚೆರ್ರಿ ರಸ ಸಹ ಸೇವನೆ ಮಾಡಬಹುದು. ಚೆರ್ರಿಗಳು ಮೆಲಟೋನಿನ್ ನ್ನು ಹೊಂದಿವೆ. ಇದು ದೇಹದ ಆಂತರಿಕ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

  ಬಾಳೆಹಣ್ಣು

  ಬಾಳೆಹಣ್ಣು ರುಚಿ ಮತ್ತು ಆರೋಗ್ಯದಿಂದ ಕೂಡಿದೆ. ಆದರೆ ಬಾಳೆಹಣ್ಣು ಸೇವನೆ ಮಾಡುವುದರಿಂದ ನಿದ್ರೆ ಕೂಡ ಸುಧಾರಿಸುತ್ತದೆ. ಬಾಳೆಹಣ್ಣು ಸ್ನಾಯು ವಿಶ್ರಾಂತಿ ನೀಡುತ್ತದೆ. ಬಾಳೆಹಣ್ಣು ತಿಂದರೆ ಚೆನ್ನಾಗಿ ನಿದ್ದೆ ಬರುತ್ತದೆ. ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ. ಇದು ನಿದ್ರೆಯನ್ನು ಉತ್ತೇಜಿಸುತ್ತದೆ.

  ಬಾದಾಮಿ

  ನೀವು ಶಾಂತಿಯುತವಾಗಿ ಮಲಗಲು ಬಯಸಿದರೆ, ಬಾದಾಮಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಬಾದಾಮಿಯಲ್ಲಿ ಮೆಗ್ನೀಸಿಯಮ್ ಇದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಬಾದಾಮಿ ಸೇವನೆ ಮಾಡುವುದು ಒತ್ತಡ ಕಡಿಮೆ ಆಗುತ್ತದೆ. ಮತ್ತು ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ.

  ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

  ಹರ್ಬಲ್ ಟೀ

  ನಿದ್ರೆಯ ಸಮಸ್ಯೆ ಇದ್ದವರು ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸಿ. ವಿಶೇಷವಾಗಿ ರಾತ್ರಿಯಲ್ಲಿ ಇವುಗಳ ಸೇವನೆ ಮಾಡುವುದರಿಂದ ನಿಮ್ಮ ನಿದ್ರೆಯನ್ನು ಕಡಿಮೆ ಮಾಡಬಹುದು. ಹೌದು ನೀವು ಏನನ್ನಾದರೂ ಕುಡಿಯಲು ಬಯಸಿದರೆ, ನೀವು ಹರ್ಬಲ್ ಚಹಾ ಸೇವನೆ ಮಾಡಬಹುದು. ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ.
  Published by:renukadariyannavar
  First published: