Coffee: ಕಾಫಿ ಪ್ರಿಯರಿಗೆ ಗುಡ್ ನ್ಯೂಸ್! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ನಿಯಂತ್ರಣ

Health Tips: ಮಧುಮೇಹ ಕಾಯಿಲೆ ಬಂದ ವ್ಯಕ್ತಿ ಸಿಹಿ ಪದಾರ್ಥ ಸೇವನೆ ಬಿಡಬೇಕಾಗುತ್ತದೆ. ಆಹಾರ ಪಥ್ಯ ಅನುಸರಿಸಬೇಕಾಗುತ್ತದೆ. ಆದರೆ, ಕಾಫಿ ಸೇವನೆಯಿಂದ ಸಕ್ಕರೆ ಕಾಯಿಲೆಯನ್ನು ದೂರವಿಡಬಹುದು ಎಂದು ಹೊಸ ಅಧ್ಯಯನವು ಹೇಳುತ್ತಿದೆ.

ಕಾಫಿ

ಕಾಫಿ

  • Share this:
ನಮ್ಮ ಪೂರ್ವಜರ ಕಾಲದಲ್ಲಿ ಸೇವಿಸುತ್ತಿದ್ದ ಗುಣಮಟ್ಟದ ಹಾಗೂ ಸತ್ವಯುತವಾದ ಆಹಾರ ಈಗ ಸಿಗುತ್ತಿಲ್ಲ. ಹೈಬ್ರಿಡ್, ರಾಸಾಯನಿಕಯುಕ್ತ ಬೆಳೆ, ಜಂಕ್‌ ಫುಡ್ - ಫಾಸ್ಟ್ ಫುಡ್ ಗಳ ದುನಿಯಾದಲ್ಲಿ ಜನರು ಕೇವಲ ತಮ್ಮ ನಾಲಿಗೆ ಚಪಲಕ್ಕೋಸ್ಕರ ಸತ್ವಯುತವಾದ ಆಹಾರದ ಕ್ರಮವನ್ನೇ ತ್ಯಜಿಸಿದ್ದಾರೆ. ಒಂದು ಕಾಲದಲ್ಲಿ ಶ್ರೀಮಂತರ ಕಾಯಿಲೆ ಎಂದೇ ಕರೆಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆಯು ಈಗ ಎಲ್ಲ ವರ್ಗದ ಜನರಲ್ಲಿ ಕಂಡು ಬರುವ ಸಾಮಾನ್ಯ ರೋಗವಾಗಿದೆ. ಈಗಂತೂ ಸಣ್ಣ ಮಕ್ಕಳೂ ಸಹ ಸಕ್ಕರೆ ಕಾಯಿಲೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿ.

ಮಧುಮೇಹ ಕಾಯಿಲೆ ಬಂದ ವ್ಯಕ್ತಿ ಸಿಹಿ ಪದಾರ್ಥ ಸೇವನೆ ಬಿಡಬೇಕಾಗುತ್ತದೆ. ಆಹಾರ ಪಥ್ಯ ಅನುಸರಿಸಬೇಕಾಗುತ್ತದೆ. ದೇಹದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ನಿಯಂತ್ರಿಸಲು ಮಧುಮೇಹಿಗಳು ಇನ್ಸೂಲಿನ್, ಡಯಾಬಿಟಿಸ್‌ ಗುಳಿಗೆ ಸೇವನೆ ಮಾಡುತ್ತಾರೆ. ಆದರೆ, ಅತಿಯಾಗಿ ಇನ್ಸೂಲಿನ್ ಮಾಡಿಕೊಳ್ಳುವುದರಿಂದ ಅಡ್ಡ ಪರಿಣಾಮ ಸಂಭವ ಹೆಚ್ಚು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಆದರೆ, ಕಾಫಿ ಸೇವನೆಯಿಂದ ಸಕ್ಕರೆ ಕಾಯಿಲೆಯನ್ನು ದೂರವಿಡಬಹುದು ಎಂದು ಹೊಸ ಅಧ್ಯಯನವು ಹೇಳುತ್ತಿದೆ.

3 ಕಪ್ ಫಿಲ್ಟರ್ ಕಾಫಿಯಿಂದ ಮಧುಮೇಹ ನಿಯಂತ್ರಣ..!
ಪ್ರತಿದಿನ 3 ಕಪ್ ಕಾಫಿ ಸೇವನೆಯಿಂದ ಟೈಪ್ 2 ಡಯಾಬಿಟಿಸ್‌ನಿಂದ ದೂರವಿರಬಹುದೆಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಫಿಲ್ಟರ್ ಕಾಫಿಯ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Health Tips: ವಿಟಮಿನ್ ಡಿ 3 ಕೊರತೆಯ ಲಕ್ಷಣಗಳೇನು? ಇದಕ್ಕೇನು ಪರಿಹಾರ? ಇಲ್ಲಿದೆ ಮಾಹಿತಿ

ಟೆಕ್ನಾಲಜಿ ವಿಶ್ವವಿದ್ಯಾಲಯ ಮತ್ತು ಉಮಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಪರೀಕ್ಷೆಯಲ್ಲಿ ಬಯೋಮಾರ್ಕರ್‌ಗಳನ್ನು ಬಳಸಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಅವರ ಅಣುಗಳಂತಹ ಬಯೋಮಾರ್ಕರ್‌ಗಳಿಂದ ವಿವಿಧ ರೀತಿಯ ಕಾಫಿಯನ್ನು ಕುಡಿಯುವ ಸುಳಿವು ಸಿಕ್ಕಿದೆ. ಇವರು ಸೇವಿಸುತ್ತಿದ್ದ ಫಿಲ್ಟರ್ ಕಾಫಿಯಿಂದಲೇ ಟೈಪ್ -2 ಮಧುಮೇಹದ ಅಪಾಯವನ್ನು ಹೆಚ್ಚಿಸುವುದನ್ನು ತಡೆಯುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಫಿಲ್ಟರ್ ಕಾಫಿ ಸೇವನೆಯಿಂದ ಕಂಡು ಬಂದ ಫಲಿತಾಂಶವೇನು ಗೊತ್ತಾ..?
ದಿನವೊಂದಕ್ಕೆ ಒಂದು ಕಪ್ ಫಿಲ್ಟರ್ ಕಾಫಿ ಕುಡಿಯುವವರಿಗಿಂತ ಎರಡು ಮೂರು ಕಪ್ ಫಿಲ್ಟರ್ ಕಾಫಿಯನ್ನು ಕುಡಿಯುವವರು ಟೈಪ್ -2 ಮಧುಮೇಹ ಬರುವ ಸಾಧ್ಯತೆ 60% ಕಡಿಮೆ ಇರುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ.

ಫಿಲ್ಟರ್ ಕಾಫಿಯ ಪ್ರಯೋಜನ..!
ಕಾಫಿಯನ್ನು ಫಿಲ್ಟರ್‌ ಮಾಡಿದಾಗ ಡಿಟರ್ಪೆನ್ಸ್ ಫಿಲ್ಟರ್‌ನಲ್ಲೇ ಉಳಿಯುತ್ತದೆ. ಇದರಿಂದ ಕಾಫಿಯ ಎಲ್ಲಾ ಹಾನಿಕಾರಕ ಅಂಶಗಳನ್ನು ನಿರ್ನಾಮವಾಗುವುದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಆದ್ದರಿಂದ ಪ್ರತಿದಿನ 2 ರಿಂದ 3 ಕಪ್ ಫಿಲ್ಟರ್ ಕಾಫಿಯನ್ನು ಕುಡಿಯುತ್ತಿದ್ದರೆ, ಸಕಾರಾತ್ಮಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕೇವಲ ಫಿಲ್ಟರ್ ಕಾಫಿ ಮಾತ್ರವಲ್ಲದೇ ಈ ರೀತಿಯಾಗಿ ಮಧುಮೇಹದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಇನ್ನೂ ಉತ್ತಮ ಮಾರ್ಗಗಳಿವೆ. ಇಲ್ಲಿ ನೋಡಿ..

- ಸ್ಥೂಲಕಾಯದಿಂದ ದೂರವಿರಿ.
- ಬಿಳಿ ಸಕ್ಕರೆ ಮತ್ತು ಸಿಹಿ ಪದಾರ್ಥಗಳ ಸೇವನೆ ಮಾಡದಿರಿ.
- ಪ್ರತಿದಿನ ಯೋಗಾಭ್ಯಾಸ ಮಾಡಿ.
- ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
- ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.
- ಸಕ್ರಿಯ ಜೀವನ ಶೈಲಿಯನ್ನು ರಚಿಸಿ.
- ಪ್ಯಾಕ್ ಮಾಡಿದ ಆಹಾರ ಸೇವನೆ ಬೇಡ.
- ಆಹಾರದಲ್ಲಿ ಫೈಬರ್ ಅಂಶವುಳ್ಳ ಆಹಾರ ಸೇವನೆ ಮಾಡಿ.

(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸುದ್ದಿ ಮೂಲದಿಂದ ಪಡೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ)
Published by:Sushma Chakre
First published: