Health Tips: ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

Health Goals: ಒಂದೊಂದು ತರಕಾರಿಯೂ ಒಂದೊಂದು ಪೋಷಕಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಒಂದೇ ತರಕಾರಿಯ ಅಂಶಗಳು ದೇಹದಲ್ಲಿ ಮಿತಿಮೀರಿ ಶೇಖರಣೆಗೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನುಷ್ಯ ಆರೋಗ್ಯವಾಗಿ(Health) ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು(Food Habit) ಸಹ ಮುಖ್ಯ.. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು(Physical Activity) ಇರುತ್ತವೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು(Immunity) ಪಡೆದುಕೊಳ್ಳಬೇಕು ಎಂದರೆ ಪ್ರತಿನಿತ್ಯ ಪೌಷ್ಟಿಕಾಂಶಗಳು ವಿಟಮಿನ್ ಗಳು ಜೀವಸತ್ವಗಳು ಇರುವ ಆಹಾರವನ್ನು ತಪ್ಪದೇ ಸೇವಿಸುವುದು ಸೂಕ್ತ.. ಹೀಗಾಗಿಯೇ ಹಸಿರು ತರಕಾರಿ(Vegetables), ಸೊಪ್ಪು ಹಣ್ಣುಗಳು(Fruits), ಬೇಳೆಕಾಳುಗಳನ್ನು ತಪ್ಪದೇ ಸೇವನೆ ಮಾಡಬೇಕು.. ಆದರೆ ಕೆಲವೊಬ್ಬರು ಆರೋಗ್ಯವಾಗಿರಲು ಈ ಪದಾರ್ಥಗಳನ್ನು ತಿನ್ನಬೇಕು ಎಂದುಕೊಂಡು ಪ್ರತಿನಿತ್ಯ ಒಂದೇ ರೀತಿಯ ಆಹಾರ ಪದ್ಧತಿಯ ಕ್ರಮ ಇಟ್ಟುಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬದಲು ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ..

  ಪ್ರತಿನಿತ್ಯ ಒಂದೇ ರೀತಿಯ ಆಹಾರ ಕ್ರಮ ಸೂಕ್ತವಲ್ಲ

  ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಪ್ರತಿನಿತ್ಯ ಒಂದೇ ರೀತಿಯ ಆಹಾರ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿರುವುದು ಸೂಕ್ತವಲ್ಲ.. ಹೌದು ಕೆಲವರು ಕ್ಯಾರೆಟ್ ಹಾಗೂ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಹಲವು ಪೌಷ್ಟಿಕಾಂಶಗಳು ವಿಟಮಿನ್ಗಳು ಸಿಗುತ್ತದೆ ಎಂದು ಪ್ರತಿನಿತ್ಯ ಅದನ್ನೇ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ.. ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೇರೆ ತರಕಾರಿಗಳಿಂದ ಸಿಗಬೇಕಾದ ಪೌಷ್ಟಿಕಾಂಶಗಳು ಲಭಿಸುವುದಿಲ್ಲ..

  ಇದನ್ನೂ ಓದಿ: ಆರೋಗ್ಯಕ್ಕೆ ಮಾತ್ರವಲ್ಲ, ಬಿಳಿ ಕೂದಲಿನ ಸಮಸ್ಯೆಗೆ ತುಳಸಿ ಎಲೆಯಲ್ಲಿದೆ ಪರಿಹಾರ

  ಒಂದೊಂದು ತರಕಾರಿಯೂ ಒಂದೊಂದು ಪೋಷಕಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಒಂದೇ ತರಕಾರಿಯ ಅಂಶಗಳು ದೇಹದಲ್ಲಿ ಮಿತಿಮೀರಿ ಶೇಖರಣೆಗೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸಾಧುವಲ್ಲ. ಜೊತೆಗೆ ಉಳಿದೆಲ್ಲಾ ತರಕಾರಿಗಳಲ್ಲಿ ಇರುವ ಪೋಷಕಾಂಶಗಳು ದೇಹ ಸೇರುವುದಿಲ್ಲ. ಅದಕ್ಕಾಗಿ ತಿಂಗಳ ಅವಧಿಯಲ್ಲಿ ಎಲ್ಲಾ ತರಕಾರಿಗಳು, ಹಣ್ಣುಗಳು ನಮ್ಮ ಜೀರ್ಣಾಂಗದಲ್ಲಿ ಹಾದು ಹೋಗುವಂತೆ ಮಾಡುವ ಜಾಣ್ಮೆ ನಮ್ಮಲ್ಲಿರಬೇಕು.

  ಪ್ರತಿನಿತ್ಯ ಆಹಾರ ಸೇವನೆ ಮಾಡುವುದು ಸೂಕ್ತವಲ್ಲ..

  ಇನ್ನು ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ.. ಅದರಂತೆಯೇ ಆಯುರ್ವೇದದ ಪ್ರಕಾರ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಪ್ರತಿನಿತ್ಯ ಸೇವನೆ ಮಾಡದಿರುವುದೇ ಸೂಕ್ತ.. ಅದರಲ್ಲೂ ಪ್ರಮುಖವಾಗಿ ಒಣಗಿದ ತರಕಾರಿ, ತಾವರೆಗಡ್ಡೆ, ತಾವರೆದಂಟು, ಕುದಿಸಿದ ಮಜ್ಜಿಗೆ, ಹಾಲನ್ನು ಒಡೆದು ಮಾಡುವ ಪನ್ನೀರ್, ಮೊಸರು, ಉದ್ದು, ಉಷ್ಣವೀರ್ಯ ಹೊಂದಿದ ಯಮಕವೆಂಬ ಒಂದು ವಿಧವಾದ ಅಕ್ಕಿ, ಒಣಮಾಂಸ, ರೋಗದಿಂದ ಬಳಲುತ್ತಿರುವ ಪ್ರಾಣಿಯ ಮಾಂಸ, ಹಂದಿ ಮಾಂಸ, ದನದ ಮಾಂಸ, ಎಮ್ಮೆಯ ಮಾಂಸ ಹಾಗೂ ಮೀನು- ಇವುಗಳನ್ನು ದಿನವೂ ಬಳಸಿದ್ದೇ ಆದರೆ ಅನೇಕ ರೋಗಗಳು ನಮಗೇ ಗೊತ್ತಿಲ್ಲದೇ ನಮ್ಮ ಬೆನ್ನು ಹತ್ತಲಿವೆ.

  ಯಾವುದೇ ಕಾರಣಕ್ಕೂ ಈ ಪದಾರ್ಥಗಳ ಜೊತೆಗೆ ಇವುಗಳನ್ನು ಸೇವನೆ ಮಾಡಬೇಡಿ

  ಇನ್ನು ಕೆಲವರಿಗೆ ಊಟದಲ್ಲಿ ಕೆಲವೊಂದಷ್ಟು ಮಿಶ್ರಣ ಮಾಡಿಕೊಂಡು ತಿನ್ನುವ ಅಭ್ಯಾಸವಿರುತ್ತದೆ.ಸಿಹಿಯಾದ ಜೊತೆಗೆ ಖಾರದ ಪದಾರ್ಥ ಹುಳಿಯ ಜೊತೆಗೆ ಒಗರಿನ ಪದಾರ್ಥ ಸೇವನೆ ಅಭ್ಯಾಸ ಇಟ್ಟುಕೊಂಡಿರುತ್ತಾರೆ.. ಹೇಗೆ ಮೊಸರಿನ ಜೊತೆಗೆ ಸಕ್ಕರೆ, ಮೀನು ಸೇವನೆಯ ಬಳಿಕ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಅಷ್ಟೊಂದು ಸೂಕ್ತವಲ್ಲ ಹಾಗೆಯೇ ಕೆಲವೊಂದಷ್ಟು ಆಹಾರ ಪದಾರ್ಥಗಳ ಜೊತೆಗೆ ಮತ್ತೊಂದಷ್ಟು ಆಹಾರ ಪದಾರ್ಥಗಳನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ.

  ಇದನ್ನೂ ಓದಿ: ತೂಕ ಇಳಿಸೋಕೆ ಕಷ್ಟಪಡಬೇಡಿ- ಸುಲಭವಾದ ಈ ಟಿಪ್ಸ್ ಫಾಲೋ ಮಾಡಿ

  ಹೌದು ಪ್ರತಿನಿತ್ಯ ಎಲ್ಲರೂ ಮನೆಯಲ್ಲಿ ಎಮ್ಮೆ ಹಾಲಿನ ಬಳಕೆ ಮಾಡುತ್ತಾರೆ.. ಹೀಗಾಗಿ ಎಮ್ಮೆ ಹಾಲಿನ ಸೇವನೆಯ ಬಳಿಕ ಕುಂಬಳಕಾಯಿ ತರಕಾರಿ, ಮೊಳಕೆ ಬರಿಸಿದ ಧಾನ್ಯ, ಅಣಬೆ, ಎಳೆಬಿದಿರು, ಹುಳಿಯಾದ ಹಣ್ಣು, ಉಪ್ಪು, ಮೊಸರು, ಹುರಳಿಕಾಳು, ಎಣ್ಣೆ, ಅಕ್ಕಿಹಿಟ್ಟು, ಒಣತರಕಾರಿ, ನೇರಳೆಹಣ್ಣು, ಮದ್ಯ, ಆಡು, ಕುರಿ, ಹಂದಿಮಾಂಸ ಹಾಗೂ ಮೀನುಗಳನ್ನು ಸೇವಿಸಕೂಡದು ಎಂದು ಆಯುರ್ವೇದ ಹೇಳಿದೆ. ಹೀಗೆ ಸೇವನೆ ಮಾಡುವುದರಿಂದ ದೇಹ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿ ಅನಾರೋಗ್ಯಕ್ಕೆ ಕಾರಣವಾಗಬಹುದು. ತಕ್ಷಣಕ್ಕೆ ಇವುಗಳಿಂದ ರೋಗಗಳು ಕಾಣಿಸಿಕೊಳ್ಳದೆ ಇದ್ದರೂ ಸಹ ಮುಂದೆ ದೀರ್ಘಕಾಲದ ರೋಗಗಳಿಂದ ಬಳಲಬಹುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
  Published by:ranjumbkgowda1 ranjumbkgowda1
  First published: