Relationship Problem: ಆತ್ಮೀಯ ಸ್ನೇಹಿತೆಗೆ ಒಳಿತು ಮಾಡಿದ್ದೇ ತಪ್ಪಾಗಿ ಹೋಯ್ತು, ಅಷ್ಟಕ್ಕೂ ಸ್ನೇಹಿತೆ ಮಾಡಿದ್ದೇನು?

ಯಾವುದೇ ವ್ಯಕ್ತಿಯಿರಲಿ ಆತನಿಗೆ ಸ್ನೇಹ ಬಹಳ ಮುಖ್ಯ ಆಗುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಷಯಗಳನ್ನು ನೀವು ಸಾಮಾನ್ಯವಾಗಿ ಸ್ನೇಹಿತರ ಬಳಿ ಹೇಳಿಕೊಳ್ಳುತ್ತೀರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಂಬಂಧಗಳು (Relationship) ಕಗ್ಗಂಟಾದಾಗ ಎಲ್ಲವೂ ಕೆಟ್ಟು ಹೋಗುತ್ತದೆ. ಸ್ನೇಹ (Friendship) ಸಂಬಂಧದಲ್ಲಿ ಪ್ರೀತಿ (Love) ಉಂಟಾಗುವುದು ಸಾಮಾನ್ಯ. ಆದರೆ ಬೇರೊಬ್ಬರ ಅಥವಾ ಸ್ನೇಹಿತರ ಪತ್ನಿ (Wife) ಅಥವಾ ಪತಿಯ (Husband) ಮೇಲೆ ಕಣ್ಣು ಹಾಕುವುದು, ಅವರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಳ್ಳುವುದು ಒಪ್ಪಿಕೊಳ್ಳುವ ವಿಷಯವಲ್ಲ. ಇದು ಒಂದು ಕುಟುಂಬ ಮತ್ತು ಸಮಾಜವನ್ನು ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ವ್ಯಕ್ತಿ ಇರಲಿ ಆತನಿಗೆ ಸ್ನೇಹ ಬಹಳ ಮುಖ್ಯ ಆಗುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಷಯಗಳನ್ನು ನೀವು ಸಾಮಾನ್ಯವಾಗಿ ಸ್ನೇಹಿತರ ಬಳಿ ಹೇಳಿಕೊಳ್ಳುತ್ತೀರಿ. ಎಷ್ಟೇ ಬಂಧುಗಳಿದ್ದರೂ ಒಡಲ ಬೇಗೆ, ಖುಷಿಯನ್ನು ಸ್ನೇಹಿತರೇ ಹಂಚಿಕೊಳ್ಳುತ್ತಾರೆ. ನೀವು ಮಾಡುವ ಕೆಲಸಗಳನ್ನು ಮತ್ತು ನೋವನ್ನು ಸ್ನೇಹಿತರು ಹಂಚಿಕೊಳ್ಳುತ್ತಾರೆ.

    ಆದರೆ ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮನ್ನು ಪ್ರೀತಿಸಲು ಶುರು ಮಾಡಿದರೆ? ಸಂಬಂಧವೇ ಒಡೆದು ಹೋಗುತ್ತದೆ.  ಉತ್ತಮ ಸ್ನೇಹಿತರಲ್ಲಿ ಒಬ್ಬರು ನಿಮ್ಮ ಪ್ರೀತಿಯನ್ನು ನೋಡಲಾರಂಭಿಸಿದರೆ ಏನು? ಇದೇ ರೀತಿಯ ಘಟನೆ ಮಹಿಳೆಯೊಬ್ಬರ ಜೀವನದಲ್ಲಿ ಸಂಭವಿಸಿದೆ.

    ಆತ್ಮೀಯ ಸ್ನೇಹಿತೆಗೆ ಸಮಾಧಾನ ಮಾಡಿದ್ದೇ ತಪ್ಪಾಯ್ತು

    ಮಹಿಳೆಯು ತನ್ನ ಆತ್ಮೀಯ ಸ್ನೇಹಿತೆಗೆ ಸಮಾಧಾನ ಮಾಡಿದ್ದು, ಆಕೆಯ ನೋವನ್ನು ಹಂಚಿಕೊಂಡಿದ್ದೇ ಮುಳುವಾಗಿದೆ. ಜೊತೆಗೆ ಆಕೆ ಪತಿಗೆ ಮಾಡಿದ ಮೋಸ, ಆಘಾತಕಾರಿಯಾಗಿದೆ. ಇಡೀ ವಿಷಯ ಏನೆಂದು ತಿಳಿಯೋಣ. ಅಷ್ಟಕ್ಕೂ ಮಹಿಳೆಯ ಆತ್ಮೀಯ ಸ್ನೇಹಿತೆ ಮಾಡಿದ್ದು ಏನು? ಎಲ್ಲವನ್ನೂ ತಿಳಿಯೋಣ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ನನ್ನ ಮತ್ತು ನನ್ನ ಆತ್ಮಿಯ ಸ್ನೇಹಿತೆಯ ವಯಸ್ಸು 31 ವರ್ಷಗಳು ಮತ್ತು ನಾವು ವಿಶ್ವವಿದ್ಯಾಲಯದಲ್ಲಿ ಓದುವಾಗ ಆ ಸಮಯದಿಂದಲೂ ಒಟ್ಟಿಗೆ ಇದ್ದೇವೆ ಎಂದು ಮಹಿಳೆ ಹೇಳಿದ್ದಾರೆ. ಈಗ ನಾವು ಅದೇ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಕಳೆದ ತಿಂಗಳು ನನ್ನ ಆತ್ಮೀಯ ಸ್ನೇಹಿತೆಗೆ ತುಂಬಾ ಕಷ್ಟ ಹಾಗೂ ನೋವಿನ ದಿನಗಳು ಎದುರಾಗಿದ್ದವು. ಎಂದು ಮಹಿಳೆ ಹೇಳಿದ್ದಾರೆ.

    ಆತ್ಮೀಯ ಸ್ನೇಹಿತೆಯ ಪತಿ ವಿಚ್ಛೇದನ ಬಯಸುತ್ತಿದ್ದಾನೆ

    ಕಳೆದ ತಿಂಗಳು ನನ್ನ ಆತ್ಮೀಯ ಸ್ನೇಹಿತೆಯ ಪತಿ ಬೇರೆ ಮಹಿಳೆಗಾಗಿ ಮೋಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಈಗ ಅವನು ನನ್ನ ಆತ್ಮೀಯ ಸ್ನೇಹಿತೆಯಿಂದ ವಿಚ್ಛೇದನ ಬಯಸುತ್ತಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ನನ್ನ ಆತ್ಮೀಯ ಗೆಳತಿ ಇದರಿಂದ ತುಂಬಾ ಬೇಸರಗೊಂಡಿದ್ದಳು. ಮತ್ತು ಅವಳ ತೊಂದರೆ ನಿವಾರಿಸಲು ನಾನು ಅವಳನ್ನು ಆಫೀಸ್ ಪಾರ್ಟಿಗೆ ಆಹ್ವಾನಿಸಿದ್ದೆ.

    ಪಾರ್ಟಿಯಲ್ಲಿ ಸ್ನೇಹಿತೆ ನನ್ನ ಗಂಡನನ್ನು ಚುಂಬಿಸಿದಳು

    ಬಹುಶಃ ಆಕೆ ಪಾರ್ಟಿಗೆ ಬರುವುದು ಆಕೆಯ ಮನಸ್ಥಿತಿ ಸುಧಾರಿಸುತ್ತದೆ ಎಂದು ನಾನು ಭಾವಿಸಿದ್ದೆ. ಪಾರ್ಟಿಯ ವೇಳೆ ನನ್ನ ಪತಿಯೊಂದಿಗೆ ಆಕೆ ಡ್ಯಾನ್ಸ್ ಮಾಡುತ್ತಿದ್ದಳು. ಆಗ ಆಕೆ ತುಂಬಾ ಖುಷಿಯಾಗಿ ಕಾಣುತ್ತಿದ್ದಳು. ಆದರೆ ಸ್ವಲ್ಪ ಸಮಯದ ನಂತರ ಅವಳು ನನ್ನ ಗಂಡನನ್ನು ಚುಂಬಿಸಲು ಪ್ರಾರಂಭಿಸಿದಳು. ಅದನ್ನು ನಾನು ಕಣ್ಣಾರೆ ನೋಡಿದ್ದೆ. ಆಗ ನನ್ನ ಪತಿ ಅವಳನ್ನು ದೂರ ತಳ್ಳಿದನು.

    ಆದರೆ ಈಗ ಆ ದೃಶ್ಯ ನನ್ನ ಮನಸ್ಸಿನಿಂದ ದೂರವಾಗುತ್ತಿಲ್ಲ. ನನ್ನ ಆತ್ಮೀಯ ಸ್ನೇಹಿತೆ ಕೂಡ ಈ ಕೃತ್ಯಕ್ಕಾಗಿ ನನ್ನಲ್ಲಿ ಕ್ಷಮೆಯಾಚಿಸಿದ್ದಾಳೆ. ಆದರೆ ನಾನು ಅವಳನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಅವಳನ್ನು ಕ್ಷಮಿಸುವುದು ನನ್ನಿಂದ ಸಾಧ್ಯವಿಲ್ಲ. ನನ್ನ 13 ವರ್ಷಗಳ ಸ್ನೇಹವನ್ನು ಕೊನೆಗೊಳಿಸಲು ನಾನು ಬಯಸುವುದಿಲ್ಲ. ಆದರೆ ನನ್ನ ಆತ್ಮೀಯ ಸ್ನೇಹಿತೆಯ ಈ ಕೃತ್ಯದಿಂದ ನಾನು ತುಂಬಾ ಕೋಪಗೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ತಜ್ಞರ ಸಲಹೆ ಏನು?

    ಇಷ್ಟು ವರ್ಷಗಳ ಗೆಳೆತನ ಹೊಂದಿರುವವರು ಬಹಳ ಕಡಿಮೆ. ನಿಮ್ಮ ಉತ್ತಮ ಸ್ನೇಹಿತೆ ನಿಮ್ಮ ಪತಿಯನ್ನು ಚುಂಬಿಸಬಾರದಿತ್ತು. ಆದರೆ ನಿಮ್ಮ ಆತ್ಮೀಯ ಸ್ನೇಹಿತೆ ತುಂಬಾ ಕುಡಿದಿದ್ದಳು. ಇದಕ್ಕಾಗಿ ನಿಮ್ಮ 13 ವರ್ಷಗಳ ಸ್ನೇಹವನ್ನು ಕೊನೆಗೊಳಿಸುವುದು ಸರಿಯಲ್ಲ. ಕೃತ್ಯಕ್ಕಾಗಿ ಆಕೆ ನಿನ್ನಲ್ಲಿ ಕ್ಷಮೆ ಕೇಳಿದ್ದಾಳೆ. ಹಾಗಿದ್ದಾಗ ನೀವು ಅವಳನ್ನು ಕ್ಷಮಿಸಿ ಮುಂದುವರಿಯುವುದು ಉತ್ತಮ ಎಂದಿದ್ದಾರೆ.
    Published by:renukadariyannavar
    First published: