Night Urine Problem: ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗುವುದು ಗಂಭೀರ ಕಾಯಿಲೆಯ ಲಕ್ಷಣ!

ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಹೋಗುವುದು ಅಧಿಕ ರಕ್ತದೊತ್ತಡದ ಸಂಕೇತವಾಗಿದೆ. ಅಧಿಕ ರಕ್ತದೊತ್ತಡ ಸಂಶೋಧನಾ ಜರ್ನಲ್‌ನಲ್ಲಿ 2021 ರ ವಿಮರ್ಶೆಯ ಪ್ರಕಾರ, ನೀವು ರಾತ್ರಿ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆ ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ಕೆಲವರು ತುಂಬಾ ಸಾರಿ ಮೂತ್ರ ವಿಸರ್ಜನೆಗೆ (Urine) ಹೋಗುತ್ತಾರೆ. ಕೆಲವರು ಹೆಚ್ಚು ನೀರು (Water) ಕುಡಿದಾಗ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಆದರೆ ರಾತ್ರಿ (Night) ಅತೀ ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಅನಾರೋಗ್ಯದ (Unhealthy) ಲಕ್ಷಣ ಎಂದು ಹೇಳಲಾಗುತ್ತದೆ. ಜನರು ರಾತ್ರಿ ಮಲಗುವಾಗ ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆ ಎದುರಿಸಿದರೆ ಅದು ಕಾಯಿಲೆಯನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ. ಇದೇ ರೀತಿ ರಾತ್ರಿ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗುವ ಸಮಸ್ಯೆಯನ್ನು ನೀವು ಅನುಭವಿಸಿದರೆ, ಅದು ಗಂಭೀರ ಅನಾರೋಗ್ಯದ ಸೂಚನೆ ಆಗಿದೆ.

    ರಾತ್ರಿ ಅತೀ ಹೆಚ್ಚು ಮೂತ್ರ ವಿಸರ್ಜನೆಗೆ ಹೋಗುವುದು

    ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಹೋಗುವುದು ಅಧಿಕ ರಕ್ತದೊತ್ತಡದ ಸಂಕೇತವಾಗಿದೆ. ಅಧಿಕ ರಕ್ತದೊತ್ತಡ ಸಂಶೋಧನಾ ಜರ್ನಲ್‌ನಲ್ಲಿ 2021 ರ ವಿಮರ್ಶೆಯ ಪ್ರಕಾರ, ನೀವು ರಾತ್ರಿ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆ ಎದುರಿಸಿದರೆ ಅದು ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತದೆ.

    ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಹೆಚ್ಚಿನ ಪ್ರಮಾಣದ ಉಪ್ಪು ಸೇವಿಸಿದಾಗ, ಅವರ ದೇಹವು ಹಗಲಿನಲ್ಲಿ ಉಪ್ಪನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ರಾತ್ರಿ ಮೂತ್ರ ವಿಸರ್ಜಿಸಲು ಹೋಗಬೇಕಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

    ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

    ಅಮೇರಿಕನ್ ಹಾರ್ಟ್ ಅಸೋಸಿಯೇಷನ್  ಪ್ರಕಾರ, ಹೆಚ್ಚು ಉಪ್ಪು ಸೇವಿಸಿದಾಗ, ನಿಮ್ಮ ದೇಹವು ನಿಮ್ಮ ರಕ್ತನಾಳಗಳಿಂದ ನೀರನ್ನು ಹೊರ ತೆಗೆಯಲು ಪ್ರಾರಂಭಿಸುತ್ತದೆ ಎಂದು ​​ಹೇಳುತ್ತದೆ. ಇದಲ್ಲದೆ, ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆ ಎದುರಿಸಲು ಅನೇಕ ಕಾರಣಗಳಿವೆ. ಅದರ ಬಗ್ಗೆ ತಿಳಿಯೋಣ.

    ಪಾಲಿಯುರಿಯಾ ಕಾಯಿಲೆ

    ಕೆಲವೊಮ್ಮೆ ರಾತ್ರಿ ಪಾಲಿಯುರಿಯಾ ಕಾಯಿಲೆ ಉಂಟಾದಾಗ, ರಾತ್ರಿ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅಮೇರಿಕನ್ ಸೊಸೈಟಿ ಆಫ್ ನೆಫ್ರಾಲಜಿ ಪ್ರಕಾರ, ರಾತ್ರಿಯ ಪಾಲಿಯುರಿಯಾ ಒಂದು ರೋಗ ಲಕ್ಷಣ ಆಗಿದೆ. ಇದರಲ್ಲಿ ಹಗಲು ಮತ್ತು ರಾತ್ರಿಯಲ್ಲಿ ಮೂತ್ರದ ಉತ್ಪಾದನೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತದೆ.

    ರಾತ್ರಿಯ ಪಾಲಿಯುರಿಯಾ ಹೊಂದಿರುವ ರೋಗಿಗಳು ರಾತ್ರಿಯಲ್ಲಿ ಶೇಕಡಾ 33 ಕ್ಕಿಂತ ಹೆಚ್ಚು ಮೂತ್ರ ಉತ್ಪಾದನೆಯ ಸಮಸ್ಯೆ ಹೊಂದಿರುತ್ತಾರೆ.

    ಗಾಳಿ ಗುಳ್ಳೆಯ ಸಾಮರ್ಥ್ಯ

    ರಾತ್ರಿ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವುದು ನಿಮ್ಮ ಮೂತ್ರಕೋಶದ ಸಾಮರ್ಥ್ಯ ಕಡಿಮೆಯಾಗಿದೆ ಎಂದು ತಿಳಿಸುತ್ತದೆ. ಇದಕ್ಕೆ ಸೋಂಕು ಅಥವಾ ಉರಿಯೂತ ಮುಂತಾದ ಹಲವು ಕಾರಣಗಳು ಇರಬಹುದು.

    ಈ ಕಾರಣ ನೀವು ಪದೇ ಪದೆ ಮೂತ್ರ ವಿಸರ್ಜನೆ ಅಗತ್ಯ ಅನುಭವ ಆಗುತ್ತದೆ. ಇದರ ಹೊರತಾಗಿ, ಮೂತ್ರಕೋಶದ ಅತಿಯಾದ ಕ್ರಿಯಾಶೀಲತೆ ಮತ್ತು ಮೂತ್ರಕೋಶದ ಅಡಚಣೆ ಕಡಿಮೆ ಮೂತ್ರಕೋಶದ ಸಾಮರ್ಥ್ಯಕ್ಕೆ ಕಾರಣ ಆಗಬಹುದು.

    ನೋಕ್ಟೂರಿಯಾ ಕಾಯಿಲೆ

    BMJ ಜರ್ನಲ್‌ನ ವರದಿಯ ಪ್ರಕಾರ, ನೋಕ್ಟೂರಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಸಾಮಾನ್ಯವಾಗಿ ರಾತ್ರಿಯ ಪಾಲಿಯುರಿಯಾ ಮತ್ತು ಕಡಿಮೆ ಮೂತ್ರಕೋಶದ ಸಾಮರ್ಥ್ಯ ಎರಡನ್ನೂ ಎದುರಿಸುತ್ತಾರೆ.

    ರಾತ್ರಿ ಆಗಾಗ್ಗೆ ನಿದ್ರೆ ಹಾಳಾಗುವುದು

    ಕೆಲವರು ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಏಕೆಂದರೆ ಅವರು ಮಧ್ಯರಾತ್ರಿ ಅಗತ್ಯಕ್ಕಿಂತ ಹೆಚ್ಚಾಗಿ ಎಚ್ಚರಗೊಳ್ಳುತ್ತಾರೆ. ಹೆಚ್ಚಾಗಿ ಏಳುವುದು ಹೆಚ್ಚು ಮೂತ್ರ ವಿಸರ್ಜನೆಗೆ ಹೋಗುವಂತೆ ಮಾಡುತ್ತದೆ. ಆದರೆ ಅವರ ಮೂತ್ರಕೋಶ ಆರೋಗ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

    ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ಆದರೆ ಏನು ಮಾಡಬೇಕು?

    ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆ ಇದ್ದವರು ವೈದ್ಯರನ್ನು ಸಂಪರ್ಕಿಸಿ. ಇದು ಸೋಂಕನ್ನು ಸಮಯಕ್ಕೆ ಸರಿಯಾಗಿ ಕಂಡು ಹಿಡಿಯಲು ಸಹಕಾರಿ. ಕೆಲವರು ಯಾವುದೇ ರೋಗ ಹೊಂದಿರದ್ದರೂ ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಜೀವನಶೈಲಿ ಚೆನ್ನಾಗಿರಿಸಿಕೊಳ್ಳಿ.

    ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

    ಮೂತ್ರವು ತ್ವರಿತವಾಗಿ ರೂಪುಗೊಳ್ಳಲು ಕಾರಣವಾಗುವ ವಸ್ತುಗಳಿಂದ ದೂರವಿರಿ. ಹಾಗೆಯೇ ದಿನವಿಡೀ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ರಾತ್ರಿ ಕಾಫಿ ಸೇವನೆ ಮೂತ್ರಕೋಶದ ತೊಂದರೆಗೆ ಕಾರಣವಾಗುತ್ತದೆ.
    Published by:renukadariyannavar
    First published: