HOME » NEWS » Lifestyle » GODS IN DREAM KNOW WHAT IT MEANS WHEN YOU SEE LORD GANESHA IN YOUR DREAM VB

ಕನಸಿನಲ್ಲಿ ಗಣೇಶ ದೇವರು ಕಾಣಿಸಿಕೊಂಡರೆ ಏನರ್ಥ..?: ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರ

ಕನಸಿನಲ್ಲಿ ಭಗವಾನ್‌ ಗಣೇಶನನ್ನು ನೋಡಿದರೆ ಇದರಿಂದ ನೀವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಂತೋಷವನ್ನು ಪಡೆಯುವಿರಿ.

news18-kannada
Updated:November 17, 2020, 3:44 PM IST
ಕನಸಿನಲ್ಲಿ ಗಣೇಶ ದೇವರು ಕಾಣಿಸಿಕೊಂಡರೆ ಏನರ್ಥ..?: ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರ
ಭಗವಾನ್‌ ಗಣೇಶ
  • Share this:
ಪ್ರತಿ ಒಬ್ಬರಿಗೂ ಕೂಡಾ ನಿತ್ಯ ಜೀವನದಲ್ಲಿ ಕನಸುಗಳು ಬರುವುದು ಸಹಜ. ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ.

ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. ಕನಸು ಅನೇಕ ಮುನ್ಸೂಚನೆಗಳನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಕನಸಿನಲ್ಲಿ ಗಣೇಶ ದೇವರು ಬಂದರೆ ಏನು ಸೂಚನೆ, ಏನು ಫಲಗಳನ್ನು ಪಡೆಯುತ್ತೀರಿ ಎಂದು ನೋಡುವುದಾದರೆ.

Freelance Jobs - ನಿರುದ್ಯೋಗ, ಹಣಕಾಸು ಸಮಸ್ಯೆಯೇ? ಇಲ್ಲಿವೆ ಹಣ ಮಾಡುವ ಮಾರ್ಗೋಪಾಯಗಳು

ಕನಸಿನಲ್ಲಿ ಭಗವಾನ್‌ ಗಣೇಶನನ್ನು ನೋಡಿದರೆ ಇದರಿಂದ ನೀವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಂತೋಷವನ್ನು ಪಡೆಯುವಿರಿ. ನಿಮ್ಮ ವೈವಾಹಿಕ ಜೀವನವು ಕೂಡ ಸುಖಕರವಾಗಿರುತ್ತದೆ. ನಿಮಗೆ ಕೆಲಸ ಮಾಡಲು, ಉದ್ಯೋಗದಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕರಿಸುತ್ತದೆ. ಕನಸಿನಲ್ಲಿ ನೀವು ಗಣೇಶನನ್ನು ಕಂಡರೆ ನಿಮ್ಮ ಮುಂದಿನ ದಿನಗಳು ಶುಭವಾಗಲಿದೆ.

ಸಾಕ್ಷಾತ್ ಗಮಪತಿಯೇ ನಿಮ್ಮ ಎಲ್ಲಾ ಕೆಲಸಗಳಲ್ಲಿ ವಿಘ್ನವನ್ನು ನಿವಾರಣೆ ಮಾಡಿ ಕೆಲಸವನ್ನು ಮಾಡುವ ಹಾಗೇ ಕೃಪೆ ತೋರುತ್ತಾನೆ. ನಿಮಗೆ ಮುಂದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಉನ್ನತ ಸ್ಥಾನಕ್ಕೆ ಇರಬೇಕು ಎಂದು ಅಂದುಕೊಂಡಿದ್ದರೆ, ಗಣೇಶ ನಿಮ್ಮ ಕನಸಲ್ಲಿ ಬರುವುದರಿಂದ ನೀವು ಅಂದುಕೊಂಡಿರುವ ಎಲ್ಲಾ ಕನಸುಗಳು ಈಡೇರುತ್ತವೆ ಎಲ್ಲ ಕೆಲಸಗಳು ಸಾಕಾರಗೊಳ್ಳುತ್ತವೆ. ಹಾಗೇ ನೀವು ಯಾವುದಾದರೂ ಕೆಲಸವನ್ನೂ ನನ್ನಿಂದ ಮಾಡಲು ಸಾಧ್ಯ ಇಲ್ಲ ಎಂದು ಬಿಟ್ಟಿದ್ದರೆ ಅಂತಹ ಕೆಲಸಗಳು ಸಹ ಪೂರ್ಣಗೊಳಿಸುವ ಸೂಚನೆ ಈ ಕನಸು ನೀಡತ್ತೆ.

Coffee: ಕಾಫಿ ಕುಡಿಯೊದಕ್ಕೂ ಒಂದು ಸಮಯವಿದೆ; ಯಾವಾಗ?

ಇನ್ನೂ ಕನಸಿನಲ್ಲಿ ಭಗವಾನ್‌ ವಿಷ್ಣು ದೇವರನ್ನು ಕಂಡರೆ ನಿಮ್ಮ ಮನೆಯಲ್ಲಿ ಶೀಘ್ರದಲ್ಲೇ ಕೆಲವು ಮಂಗಳ ಕಾರ್ಯವು ನಡೆಯಲಿದೆ ಎನ್ನುವುದನ್ನು ಸೂಚಿಸುತ್ತದೆ. ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಕನಸುಗಳು ನಿಮಗೆ ಮೋಕ್ಷವನ್ನು ನೀಡುತ್ತದೆ. ಹಾಗೂ ವಿಷ್ಣುವನ್ನು ಕನಸಿನಲ್ಲಿ ಕಾಣುವುದರಿಂದ ಆದಷ್ಟು ಬೇಗ ನಿಮಗೆ ಸಂಪತ್ತು, ಧನಾಗಮನ, ಲಾಭ, ಸಮೃದ್ಧಿ ದೊರೆಯಲಿದೆ.ಇದು ಲೇಖಕ ವ್ಯಕ್ತಪಡಿಸಿದ ಅಭಿಪ್ರಾಯಗಳು. ವೈಯಕ್ತಿಕವಾಗಿ ಯಾವುದೇ ರೀತಿಯಲ್ಲಿ ನೆಟ್‌ವರ್ಕ್18‌ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ.
First published: November 17, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories