• Home
  • »
  • News
  • »
  • lifestyle
  • »
  • Goa Food: ಮನೆಯಲ್ಲೇ ಮಾಡಿ ಗೋವಾದ 5 ಬಗೆಯ ಫುಡ್, ತುಂಬಾ ಸುಲಭ, ಸಖತ್ ರುಚಿ

Goa Food: ಮನೆಯಲ್ಲೇ ಮಾಡಿ ಗೋವಾದ 5 ಬಗೆಯ ಫುಡ್, ತುಂಬಾ ಸುಲಭ, ಸಖತ್ ರುಚಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೋವಾದಲ್ಲಿ ತುಂಬಾ ಜನಪ್ರಿಯವಾದ ಫುಡ್​ಗಳನ್ನು ಅಲ್ಲಿಯೇ ಹೋಗಿ ತಿನ್ನಬೇಕೆಂದೇನು ಇಲ್ಲ ಮನೆಯಲ್ಲಿಯೂ ಕೂಡ ನೀವು ಈ ಆಹಾರಗಳನ್ನು ಸುಲಭವಾಗಿ ತಯಾರಿಸಬಹುದು

  • Share this:

    ಗೋವಾ (Goa ) ಎಂದರೆ ನೆನಪಾಗೋದೇ ಅಲ್ಲಿನ ಬೀಚ್, ಗ್ರೀನರಿ, ಪ್ರವಾಸಿ ಸ್ಥಳಗಳು. ಇದರ ಹೊರತಾಗಿ ಗೋವಾದಲ್ಲಿ ತುಂಬಾ ಜನಪ್ರಿಯ ಅಲ್ಲಿನ ಫುಡ್ (Food). ಗೋವಾಕ್ಕೆ ಹೋದರೆ ಅಲ್ಲಿನ ಗೋವಾ ಮೂಲದ ಆಹಾರಗಳನ್ನು ಮಿಸ್ ಮಾಡದೇ ತಿನ್ನಿ. ಅಲ್ಲಿನ ಸ್ಥಳೀಯ ಕರಾವಳಿ ತೀರದ (Coastline) ವಿಭಿನ್ನ ರುಚಿಯ ಆಹಾರಗಳು (Tasty Food)ನಿಮಗೆ ಖಂಡಿತ ಇಷ್ಟವಾಗುತ್ತದೆ. ಗೋವಾಕ್ಕೆ ಹೋದಾಗ ಮಾತ್ರ ಆ ಆಹಾರಗಳನ್ನು ಸವಿಯ ಬೇಕಂತಿಲ್ಲ. ಮನೆಯಲ್ಲಿಯೂ ಕೂಡ ನೀವು ಈ ಆಹಾರಗಳನ್ನು ಸುಲಭವಾಗಿ ತಯಾರಿಸಬಹುದು ಮತ್ತು ನಿಮ್ಮ ಮೆನುವಿನಲ್ಲಿ ಈ ಪದಾರ್ಥಗಳಿದ್ದರೆ ಭೋಜನವಂತೂ ಆಹಾ ಎಂದೆನಿಸುತ್ತದೆ. ನೀವು ಮನೆಯಲ್ಲಿಯೇ ಮಾಡಬಹುದಾದ ಮತ್ತು ನಿಮ್ಮ ಮೆನುವಿನಲ್ಲಿ ಇರಬೇಕಾದ ಕೆಲವು ರುಚಿಕರವಾದ ಗೋವಾ ರೆಸಿಪಿಗಳು ಹೀಗಿವೆ.


    1) ಗೋವಾನ್ ಪೊಯ್
    ನೀವು ಬೀದಿ ಬದಿಯ ಆಹಾರವನ್ನು ಸವಿಯಲು ಬಯಸಿದರೆ ಗೋವಾನ್ ಪೊಯ್ ನಿಮ್ಮ ಆಯ್ಕೆ ಆಗಿರಲಿ. ಈ ಸಂಪೂರ್ಣ ಗೋಧಿಯಿಂದ ತಯಾರಿಸಿದ ಬನ್ ಬೆಣ್ಣೆ, ಚಾಯ್ ಮತ್ತು ಸಿಹಿ ಸ್ಪ್ರೆಡ್‌ಗಳಿಂದ ಕೂಡಿರುತ್ತದೆ. ಇದು ಗೋವಾದಲ್ಲಿ ಸಿಗುವ ಜನಪ್ರಿಯ ಬ್ರೆಡ್‌ ಆಗಿದೆ


    2) ರಾಸ್ ಆಮ್ಲೆಟ್
    ಇದು ಹಲವು ಮಸಾಲೆ, ತರಕಾರಿಗಳೊಂದಿಗೆ ಮಾಡಿದ ಮಸಾಲೆಯುಕ್ತ ಆಮ್ಲೆಟ್ ಆಗಿದೆ. ಇದನ್ನು ಸ್ಥಳೀಯವಾಗಿ ರಾಸ್ ಆಮ್ಲೆಟ್ ಎಂದು ಕರೆಯಲಾಗುತ್ತದೆ.


    ಆಮ್ಲೆಟ್‌ಗೆ ಬೇಕಿರುವ ಸಾಮಾಗ್ರಿ


    -4 ಮೊಟ್ಟೆಗಳು
    -2 ಕತ್ತರಿಸಿದ ಈರುಳ್ಳಿ
    -1 ಹಸಿರು ಮೆಣಸಿನಕಾಯಿ
    -1 ಕತ್ತರಿಸಿದ ಕೊತ್ತಂಬರಿ
    -ರುಚಿಗೆ ತಕ್ಕಷ್ಟು ಉಪ್ಪು
    -1 ಟೀಸ್ಪೂನ್ ಕರಿಮೆಣಸು


    ಗ್ರೇವಿ ಪದಾರ್ಥಗಳು


    -1 - 2 ಕತ್ತರಿಸಿದ ಈರುಳ್ಳಿ


    - ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
    1 ಕತ್ತರಿಸಿದ ಟೊಮ್ಯಾಟೋ
    1 ಕಪ್ ತೆಂಗಿನ ಹಾಲು
    -ಅರಿಶಿನ ಪುಡಿ ಅರ್ಧ ಚಮಚ
    1 ಟೀಸ್ಪೂನ್ ಸಾಸಿವೆ
    6-8 ಕರಿಬೇವಿನ ಎಲೆಗಳು
    1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
    1 ಟೀಸ್ಪೂನ್ ಗರಂ ಮಸಾಲಾ
    ಎಣ್ಣೆ


    ಮಾಡುವ ವಿಧಾನ
    ಎಣ್ಣೆ ಹೊರತು ಪಡಿಸಿ ಆಮ್ಲೆಟ್‌ಗೆ ಬಳಸುವ ಹೇಳಿರುವ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಮಿಕ್ಸ್ ಮಾಡಿಕೊಂಡು ಆಮ್ಲೆಟ್ ತಯಾರಿಸಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮ್ಯಾಟೋ ಸೇರಿಸಿ ಟೊಮ್ಯಾಟೋ ಮೃದುವಾಗುವವರೆಗೆ ಫ್ರೈ ಮಾಡಿ.


    ಇದನ್ನೂ ಓದಿ: Breakfast Recipe: ಆರೋಗ್ಯಕರ ಕ್ಯಾರೆಟ್​ ದೋಸೆ ಮಾಡುವ ರೆಸಿಪಿ ಇಲ್ಲಿದೆ

    ಬಳಿಕ ಉಪ್ಪು, ಅರಿಶಿನ ಪುಡಿ, ಗರಂ ಮಸಾಲಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಮಿಶ್ರಣಕ್ಕೆ ಸೇರಿಸಿ ಮತ್ತು ಮಸಾಲಾವನ್ನು ಚೆನ್ನಾಗಿ ಬೇಯಿಸಿ.


    ನಂತರ ತೆಂಗಿನ ಹಾಲನ್ನು ಸೇರಿಸಿ ಗ್ರೇವಿಯನ್ನು ಕುದಿಸಿ. ಆಮ್ಲೆಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ರಾಸ್ ಅಥವಾ ಗ್ರೇವಿಯಲ್ಲಿ ಹಾಕಿ ಬಿಡಿ..


    ಸ್ವಲ್ಪ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದಿಂದ ಅಲಂಕರಿಸಿ ಮತ್ತು ಬೆಣ್ಣೆಯಿಂದ ಮಾಡಿದ ಪಾವೊದೊಂದಿಗೆ ಬಡಿಸಿ.


    3) ಪೋರ್ಕ್ ವಿಂಡಾಲೂ
    ನೀವು ಮಸಾಲಭರಿತ ನಾನ್ ವೆಜ್ ತಿನ್ನಲು ಬಯಸಿದರೆ ಪೋರ್ಕ್ ವಿಂಡಾಲೂ ನಿಮ್ಮ ಮೆನುವಿನಲ್ಲಿರಲಿ.


    4) ಚಿಕನ್ ಕಟ್ಲೆಟ್
    ಚಿಕನ್ ಅನ್ನು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಶುಂಠಿ, ಗ್ರೀನ್ ಪೇಸ್ಟ್ನೊಂದಿಗೆ ಕನಿಷ್ಠ 1 ಗಂಟೆ ಮ್ಯಾರಿನೇಟ್ ಮಾಡಿ. ನಂತರಚಿಕನ್ ಅನ್ನು ತಟ್ಟಿ ರವೆಯೊಂದಿಗೆ ಲೇಪಿಸಿ ಗರಿಗರಿಯಾಗುವವರೆಗೆ ಎಣ್ಣೆಯಲ್ಲಿ ಬೇಯಿಸಿ. ನಂತರ ಮೊದಲೇ ತಯಾರಿಸಿಟ್ಟ ಬನ್ ಅನ್ನು ಸ್ವಲ್ಪ ಬಿಸಿ ಮಾಡಿ ಅದರ ಮಧ್ಯ ಚಿಕನ್ ಕಟ್ಲೆಟ್ ಇಟ್ಟು ಎಲೆಕೋಸಿನಿಂದ ಅಲಂಕರಿಸಿದರೆ ಚಿಕನ್ ಕಟ್ಲೆಟ್ ಸವಿಯಲು ಸಿದ್ಧ.


    ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ರುಚಿ ರುಚಿಯಾದ ಪನೀರ್ ಪರೋಟ ರೆಸಿಪಿ

    5) ಗಡ್‌ಬಡ್‌ ಐಸ್ ಕ್ರೀಮ್
    ಗಡ್‌ಬಡ್ ಐಸ್‌ಕ್ರೀಂ, ಗೋವಾದ ಸಿಹಿಭಕ್ಷ್ಯಗಳಲ್ಲಿ ಒಂದು. ಇದು ಫಲೂದಾ, ವರ್ಮಿಸೆಲ್ಲಿ, ಜೆಲ್ಲಿ ಅಥವಾ ಜಾಮ್‌ನೊಂದಿಗೆ ತಯರಾಗುವ ಐಸ್ ಕ್ರೀಮ್.


    ಬೇಕಿರುವ ಸಾಮಾಗ್ರಿ


    - 3 ಚಮಚ ಗುಲಾಬಿ ದಳದ ಐಸ್ ಕ್ರೀಮ್
    - 15 ಗ್ರಾಂ -ಒಣಗಿದ ತುಟ್ಟಿ ಫ್ರೂಟಿ
    - 20 ಗ್ರಾಂ ಕಿತ್ತಳೆ ಜೆಲ್ಲಿ
    - 4 ಗ್ರಾಂ ಬಾದಾಮಿ
    - 3 ಗ್ರಾಂ ಪಿಸ್ತಾ
    - 3 ಗ್ರಾಂ ಗೋಡಂಬಿ
    - 15 ಗ್ರಾಂ ಕೆಂಪು ಸೇಬು
    - 10 ಗ್ರಾಂ ಬಿಳಿ ಒಣದ್ರಾಕ್ಷಿ
    - 80 ಗ್ರಾಂ ಸಕ್ಕರೆ
    - 10 ದಾಳಿಂಬೆ ರಸ
    - 15ml ರೋಸ್ ಸಿರಪ್‌


    ಮಾಡುವ ವಿಧಾನ
    ಸೇಬುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಣದ್ರಾಕ್ಷಿಗಳೊಂದಿಗೆ ಸಕ್ಕರೆ ಪಾಕದಲ್ಲಿ ನೆನೆಸಿಡಿ ಇದನ್ನು ರೋಸ್ ಸಿರಪ್‌ನೊಂದಿಗೆ ಲೇಯರ್ ಮಾಡಿ, ನಂತರ ಸೇಬು ಮತ್ತು ಒಣದ್ರಾಕ್ಷಿ, ಕಿತ್ತಳೆ ಜೆಲ್ಲಿ, ಡ್ರೈ ಪ್ರೂಟ್ಸ್ ತುಟ್ಟಿ ಫ್ರೂಟಿ, ದಾಳಿಂಬೆ ಮತ್ತು ಒಂದು ಚಮಚ ರೋಸ್ ಐಸ್‌ಕ್ರೀಮ್‌ನ ಮಿಶ್ರಣದಿಂದ ಲೇಯರ್ ಮಾಡಿ ಮತ್ತು ಗ್ಲಾಸ್ ಮೇಲಿನವರೆಗೆ ಹೀಗೆ ಉನರಾವರ್ತಿಸುತ್ತಾ ತುಂಬಿರಿ.

    First published: