Gluten Free Breakfast: ಇಲ್ಲಿವೆ ನೋಡಿ 7 ಗ್ಲುಟೆನ್-ಮುಕ್ತ ಬ್ರೇಕ್​ಫಾಸ್ಟ್ ರೆಸಿಪಿಗಳು

ಬೆಳಗಿನ ಉಪಾಹಾರವನ್ನು ತಯಾರಿಸುವುದು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು ಅಂತ ನಾವು ಹೇಳುತ್ತೇವೆ. ಏಕೆಂದರೆ ಈ ಪಾಕವಿಧಾನಗಳು ಸಿದ್ಧವಾಗಲು ಕೇವಲ 30 ನಿಮಿಷಗಳನ್ನು ಮಾತ್ರ ತೆಗೆದು ಕೊಳ್ಳುತ್ತವೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಇದನೊಮ್ಮೆ ಪೂರ್ತಿಯಾಗಿ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಬಹುತೇಕರು ತಮ್ಮ ದೈನಂದಿನ ಉಪಾಹಾರಕ್ಕೆ (Breakfast) ಪರಾಠಾ, ಟೋಸ್ಟ್, ಸ್ಯಾಂಡ್ವಿಚ್ ಗಳಂತಹ ಹೆಚ್ಚು ಗ್ಲುಟೆನ್ (Gluten) ಅಂಶ ತುಂಬಿದ ಆಹಾರಗಳನ್ನು ಒಂದೇ ರೀತಿಯಾಗಿ ತಯಾರಿಸಿಕೊಳ್ಳುತ್ತಾರೆ. ಎಂದರೆ ಒಂದೇ ರೀತಿಯ ಪಾಕವಿಧಾನಗಳಿಗೆ ಅಂಟಿಕೊಂಡಿದ್ದೆವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ, ನಾವು ವಿವಿಧ ಪದಾರ್ಥಗಳ ನಡುವೆ ಬದಲಾಯಿಸುವ ಮತ್ತು ನಮ್ಮ ಆಹಾರದಲ್ಲಿ ಆರೋಗ್ಯಕರ (Healthy Food), ಗ್ಲುಟೆನ್ ಮುಕ್ತ ಧಾನ್ಯಗಳನ್ನು ಸೇರಿಸುವ ಪ್ರಯೋಜನಗಳ ಬಗ್ಗೆ ನಿಧಾನವಾಗಿ ತಿಳಿದುಕೊಳ್ಳುತ್ತಿದ್ದೇವೆ. ಹೌದು.. ಈಗ ಜನರು ಗ್ಲುಟೆನ್ ಅಲರ್ಜಿಗಳು (Allergies) ಮತ್ತು ಇತರ ಗ್ಲುಟೆನ್ ಸಂಬಂಧಿತ ರೋಗಗಳ ರೋಗಲಕ್ಷಣಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಂತೆ, ಗ್ಲುಟೆನ್-ಮುಕ್ತ ಪದಾರ್ಥಗಳ ಬೇಡಿಕೆಯೂ ಹೆಚ್ಚಾಗಿದೆ ಎಂದು ಹೇಳಬಹುದು.

ರಾಗಿ, ಓಟ್ಸ್ ಮತ್ತು ಹೆಚ್ಚಿನವು ಆರೋಗ್ಯಕರ, ಗ್ಲುಟೆನ್ ಮುಕ್ತ ಮತ್ತು ರುಚಿಕರವಾದ ಉಪಾಹಾರವನ್ನು ತಯಾರಿಸಲು ಮಾರುಕಟ್ಟೆಯಲ್ಲಿ ಅನೇಕ ಪದಾರ್ಥಗಳು ಲಭ್ಯವಿವೆ. ಈ ಪದಾರ್ಥಗಳನ್ನು ಬಳಸಿಕೊಂಡು ಉಪಾಹಾರವನ್ನು ತಯಾರಿಸುವುದು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು ಅಂತ ನಾವು ಹೇಳುತ್ತೇವೆ. ಏಕೆಂದರೆ ಈ ಪಾಕವಿಧಾನಗಳು ಸಿದ್ಧವಾಗಲು ಕೇವಲ 30 ನಿಮಿಷಗಳನ್ನು ಮಾತ್ರ ತೆಗೆದು ಕೊಳ್ಳುತ್ತವೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಇದನೊಮ್ಮೆ ಪೂರ್ತಿಯಾಗಿ ಓದಿ.

ಇಲ್ಲಿವೆ ನೋಡಿ 7 ಗ್ಲುಟೆನ್-ಮುಕ್ತ ಉಪಾಹಾರದ ರೆಸಿಪಿಗಳು:
1. ರಾಗಿ ಚಿಲ್ಲಾ
ಈ ರಾಗಿ ಮತ್ತು ದಾಲ್ ಮೊಳಕೆ ಕಾಳುಗಳ ಚಿಲ್ಲಾವು ನಿಮಗೆ ತೃಪ್ತಿಕರವಾದ ಉಪಾಹಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಉತ್ತಮ ರುಚಿ ಮತ್ತು ಆರೋಗ್ಯದಿಂದ ತುಂಬಿದೆ. ಇದಲ್ಲದೆ, ನೀವು ಕೆಲವು ಕತ್ತರಿಸಿಕೊಂಡ ತರಕಾರಿಗಳನ್ನು ಹೊಂದಿದ್ದರೆ, ಈ ರಾಗಿ ಚಿಲ್ಲಾ ಪಾಕವಿಧಾನವು ಸಿದ್ಧವಾಗಲು ಕೇವಲ 5 ರಿಂದ 6 ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:  Bamboo Shoot Benefits: ಮಳೆಗಾಲದಲ್ಲಿ ಒಮ್ಮೆಯಾದ್ರೂ ಬಿದಿರಿನ ಕಳಲೆ ತಿನ್ನಲೇಬೇಕು, ಆರೋಗ್ಯಕ್ಕೆ ಬಹಳ ಒಳ್ಳೆಯದಿದು!

2. ಓಟ್ಸ್ ಇಡ್ಲಿ
 ನೀವು ದಕ್ಷಿಣ ಭಾರತದ ಉಪಾಹಾರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರೆ, ಒಟ್ಸ್ ಇಡ್ಲಿ ಪಾಕವಿಧಾನವನ್ನು ನೀವು ಮನೆಯಲ್ಲಿ ಟ್ರೈ ಮಾಡಲೇಬೇಕು. ಕಡಿಮೆ ಕ್ಯಾಲೋರಿಗಳು ಮತ್ತು ಅತ್ಯಂತ ಆರೋಗ್ಯಕರವಾದ ಈ ಇಡ್ಲಿಗಳನ್ನು ಓಟ್ಸ್ ಮತ್ತು ತುರಿದ ಕ್ಯಾರೆಟ್ ಗಳಿಂದ ತಯಾರಿಸಲಾಗುತ್ತದೆ. ಕ್ಯಾಲೋರಿ ಬಗ್ಗೆ ತುಂಬಾನೇ ತಲೆ ಕೆಡೆಸಿಕೊಳ್ಳುವವರು ನೀವಾಗಿದ್ದರೆ ಇದು ಸೂಕ್ತವಾದ ಉಪಹಾರವಾಗಿರುತ್ತದೆ.

3. ಇರಾನಿಯನ್ ಆಮ್ಲೆಟ್
ಮೊಟ್ಟೆಗಳಿಂದ ತಯಾರಿಸಿದಂತಹ ಉಪಾಹಾರಗಳೆಂದರೆ ಇಷ್ಟ ಪಡುವ ಜನರಿಗೆ ಇರಾನಿಯನ್ ಆಮ್ಲೆಟ್ ಒಂದು ಉತ್ತಮವಾದ ಉಪಾಹಾರ. ಇದು ನಿಜಕ್ಕೂ ರುಚಿಕರವಾದ ಆಮ್ಲೆಟ್ ಪಾಕವಿಧಾನವನ್ನು ಹೊಂದಿದೆ ಎಂದು ಹೇಳಬಹುದು. ಪ್ರತಿದಿನ ಅದೇ ಹಳೆಯ ಮಸಾಲಾ ಆಮ್ಲೆಟ್ ಅನ್ನು ತಿಂದು ತಿಂದು ಬೋರಾಗಿದ್ದರೆ ಈ ಹೊಸ ಆಮ್ಲೆಟ್ ಅನ್ನು ಟ್ರೈ ಮಾಡಲೇಬೇಕು.

4. ಅವಲಕ್ಕಿ (ಪೊಹಾ)
ಇದು ದಕ್ಷಿಣ ಭಾರತದ ಇನ್ನೊಂದು ಜನಪ್ರಿಯ ಉಪಾಹಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಭಕ್ಷ್ಯವನ್ನು ಅಸಂಖ್ಯಾತ ರೀತಿಯಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಚಪ್ಪಟೆಯಾದ ಅಕ್ಕಿ, ಈರುಳ್ಳಿ, ಟೊಮೆಟೊ ಮತ್ತು ಕೆಲವು ಮಸಾಲೆಗಳಿಂದ ತಯಾರಿಸಲಾಗುವ ಅವಲಕ್ಕಿಯು ಹಗುರವಾದ, ತಯಾರಿಸಲು ಸುಲಭ ಮತ್ತು ರುಚಿಕರವಾದ ಉಪಾಹಾರವಾಗಿರುತ್ತದೆ ಎಂದು ಹೇಳಬಹುದು. ಬೆಳಗಿನ ಉಪಾಹಾರಕ್ಕೆ ಹಗುರವಾದದ್ದನ್ನು ಏನನ್ನಾದರೂ ನೀವು ಸೇವಿಸಲು ಬಯಸಿದರೆ, ಅವಲಕ್ಕಿ ಮಾಡಿಕೊಂಡು ತಿನ್ನಬಹುದು.

5. ರಾಗಿ ಪರಾಠಾ:
ನೀವು ಉಪಾಹಾರದಲ್ಲಿ ರಾಗಿ ಪರಾಠಾವನ್ನು ಸಹ ಮಾಡಿಕೊಂಡು ತಿನ್ನಬಹುದು. ರಾಗಿಯಿಂದ ಮಾಡಿದಂತಹ ಈ ಪರಾಠಾ ಸಂಪೂರ್ಣ ಪೌಷ್ಠಿಕಾಂಶಭರಿತ ಉಪಾಹಾರ ಎಂದು ಹೇಳಬಹುದು. ಇದರಲ್ಲಿ ಅನೇಕ ರೀತಿಯ ತರಕಾರಿಗಳನ್ನು ಸಹ ಹಾಕಿಕೊಂಡು ತಯಾರಿಸಿಕೊಳ್ಳಬಹುದು.

ಇದನ್ನೂ ಓದಿ:  Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗಾಗಿ ಹೆಲ್ದಿ ಪಾಲಕ್ ಕಿಚಡಿ

6. ಪನ್ನೀರ್ ಬೇಸನ್ ಚೀಲಾ
 ಪನೀರ್ ಬೇಸನ್ ಚೀಲಾ ಅಥವಾ ಕಡಲೆ ಹಿಟ್ಟನ್ನು ತುರಿದ ಪನೀರ್ ನೊಂದಿಗೆ ಸಂಯೋಜಿಸಿ ಅತ್ಯುತ್ತಮ ಉಪಾಹಾರವಾಗಿ ತಯಾರಿಸಲಾಗುತ್ತದೆ. ಬೆಳಗಿನ ಉಪಾಹಾರಕ್ಕಾಗಿ ಇದನ್ನು ಸೇವಿಸುವುದರ ಜೊತೆಗೆ, ಮಸಾಲೆಯುಕ್ತ ಚಟ್ನಿಗಳು ಅಥವಾ ಉಪ್ಪಿನಕಾಯಿಗಳೊಂದಿಗೆ ಸಂಜೆಯ ಉಪಾಹಾರವಾಗಿಯೂ ಸಹ ನೀವು ಇದನ್ನು ಆನಂದಿಸಬಹುದು.

7. ಸೋಯಾಬೀನ್ ಉಪ್ಮಾ
ಸೊಯಾಬೀನ್, ಕುರುಕಲು ಕಡಲೆಕಾಯಿ ಮತ್ತು ರುಚಿಕರವಾದ ತರಕಾರಿಗಳೊಂದಿಗೆ ಸುವಾಸನೆಯುಕ್ತ ಮಸಾಲೆಗಳು ಮತ್ತು ಮೆಣಸಿನಕಾಯಿಗಳನ್ನು ಸೇರಿಸಿ ಮಾಡಿಕೊಂಡ ಈ ಉಪ್ಮಾ ರುಚಿ ಮತ್ತು ಆರೋಗ್ಯದ ಪರಿಪೂರ್ಣ ಸಂಯೋಜನೆಯಾಗಿದೆ.
Published by:Ashwini Prabhu
First published: