• Home
 • »
 • News
 • »
 • lifestyle
 • »
 • Baby And Tea: ಮಗುವಿಗೆ ಚಹಾ ಕುಡಿಸುವುದು ಎಷ್ಟು ಸರಿ? ಈ ಬಗ್ಗೆ ತಜ್ಞರು ಹೇಳೋದೇನು?

Baby And Tea: ಮಗುವಿಗೆ ಚಹಾ ಕುಡಿಸುವುದು ಎಷ್ಟು ಸರಿ? ಈ ಬಗ್ಗೆ ತಜ್ಞರು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಗಾಗ್ಗೆ ಮಗು ಶೀತ ಅನುಭವಿಸಿದರೆ ಪಾಲಕರು ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ಮನೆಮದ್ದುಗಳನ್ನು ಮಾಡಲು ಮುಂದಾಗುತ್ತಾರೆ. ಇವುಗಳಲ್ಲಿ ಒಂದು ಮಗುವಿಗೆ ಚಹಾ ನೀಡುವುದು ಆಗಿದೆ. ಮಗುವನ್ನು ನೆಗಡಿ ಮತ್ತು ಕೆಮ್ಮಿನಿಂದ ರಕ್ಷಿಸಲು ಚಹಾ ಕುಡಿಸಲು ಸಲಹೆ ನೀಡಲಾಗುತ್ತದೆ. ಇಷ್ಟು ಚಿಕ್ಕ ಮಗುವಿಗೆ ಟೀ ಕೊಡುವುದು ಸರಿ ಎಂದು ಇಲ್ಲಿ ತಿಳಿಯೋಣ.

ಮುಂದೆ ಓದಿ ...
 • Share this:

  ಚಳಿಗಾಲ (Winter) ಈಗಾಗಲೇ ಶುರುವಾಗಿದೆ. ಚಳಿಗಾಲವು ಅನೇಕ ಆರೋಗ್ಯ ಸಮಸ್ಯೆ (Health Problem) ಹೊತ್ತು ತರುತ್ತದೆ. ಇಂತಹ ಋತುಮಾನದ ಬದಲಾವಣೆಯಲ್ಲಿ ಮಕ್ಕಳ (Children’s) ಹಾಗೂ ಶಿಶುಗಳ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಚಳಿಗಾಲ ಶಿಶುಗಳಲ್ಲಿ ನೆಗಡಿ, ಶೀತ, ಚರ್ಮದ ಸಮಸ್ಯೆ (Skin Problem) ಮತ್ತು ಕೆಮ್ಮು ಸಮಸ್ಯೆ ಹೆಚ್ಚಿಸುತ್ತದೆ. ಹೀಗೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದು ಪೋಷಕರನ್ನು ನಿದ್ದೆಗೆಡಿಸುತ್ತದೆ. ಚಿಕ್ಕ ಮಕ್ಕಳು ಹಾಗೂ ಶಿಶುಗಳ ಆರೈಕೆ ವಿಷಯದಲ್ಲಿ ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಆಗಾಗ್ಗೆ ಮಗು ಶೀತ ಅನುಭವಿಸುತ್ತದೆ. ಕೆಮ್ಮು, ಜ್ವರ ಬರುತ್ತದೆ ಎಂದು ಕಾಳಜಿ ತೆಗೆದುಕೊಳ್ತಾರೆ. ಆದರೆ ಶಿಶುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ಸವಾಲಿನ ಸಂಗತಿಯೇ ಸರಿ.


  ಮಗುವಿಗೆ ಚಹಾ ನೀಡುವುದು ಎಷ್ಟು ಸರಿ?


  ಇನ್ನು ಪಾಲಕರು ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ಮನೆಮದ್ದುಗಳನ್ನು ಮಾಡಲು ಮುಂದಾಗುತ್ತಾರೆ. ಇವುಗಳಲ್ಲಿ ಒಂದು ಮಗುವಿಗೆ ಚಹಾ ನೀಡುವುದು ಆಗಿದೆ. ಮಗುವನ್ನು ನೆಗಡಿ ಮತ್ತು ಕೆಮ್ಮಿನಿಂದ ರಕ್ಷಿಸಲು ಚಹಾ ಕುಡಿಸಲು ಸಲಹೆ ನೀಡಲಾಗುತ್ತದೆ.


  ಚಿಕ್ಕ ಮಗುವಿಗೆ ಚಹಾ ಕುಡಿಸುವುದು ಹೊಟ್ಟೆಗೆ ಮಾತ್ರವಲ್ಲದೇ ಹೃದಯದ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹವಾಮಾನವು ತಂಪಾಗಲು ಆರಂಭಿಸಿದೆ. ಅಂತಹ ವೇಳೆ ಶಿಶುಗಳು ವೇಗವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತವೆ. ಮೊದಲು ಮಗು ಶೀತ ಅನುಭವಿಸುತ್ತದೆ.


  ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


  ಮಗುವಿನ ಆರೋಗ್ಯ ನೋಡಿಕೊಳ್ಳಲು ಕೆಲವು ಪೋಷಕರು ಅವರಿಗೆ ಚಹಾ ನೀಡಲು ಮುಂದಾಗ್ತಾರೆ. ಇದು ಮಗುವಿನ ದೇಹಕ್ಕೆ ಬೆಚ್ಚಗಿನ ಅಂಶಕ್ಕೆ ಕಾರಣವಾಗುತ್ತದೆ. ಆದರೆ ಇಷ್ಟು ಚಿಕ್ಕ ಮಗುವಿಗೆ ಟೀ ಕೊಡುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ.


  ಶಿಶುಗಳಿಗೆ ಚಹಾ ನೀಡುವುದು ಎಷ್ಟರ ಮಟ್ಟಿಗೆ ಸರಿ?


  ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫೀನ್ ನೀಡಬಾರದು. ಚಹಾದಲ್ಲಿ ಕೆಫೀನ್ ಇದೆ ಎಲ್ಲರಿಗೂ ತಿಳಿದಿದೆ. 12 ರಿಂದ 18 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 100 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸಬಾರದು ಎಂದು ಸಲಹೆ ನೀಡಲಾಗಿದೆ.


  ಮಗುವಿಗೆ ಚಹಾವನ್ನು ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ರೋಸ್‌ ವಾಕ್ ಹೆಲ್ತ್‌ ಕೇರ್‌ ನ ಪೌಷ್ಟಿಕ ತಜ್ಞರಾದ ರಾಶಿ ಚಹಲ್ ಏನು ಹೇಳಿದ್ದಾರೆ ನೋಡೋಣ.


  ಮಗುವಿಗೆ ಚಹಾ ನೀಡಬೇಕೇ ಅಥವಾ ಬೇಡವೇ?


  ಪೌಷ್ಟಿಕ ತಜ್ಞರಾದ ರಾಶಿ ಚಹಲ್ ಅವರ ಪ್ರಕಾರ, ಕೆಫೀನ್ ಮಕ್ಕಳ ಹೃದಯ, ಮೂತ್ರಪಿಂಡ, ಯಕೃತ್ತು ಮತ್ತು ಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಆದರೆ ಇದು ಅವರ ಮನಸ್ಥಿತಿಯ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ.


  ಚಹಾ ಮತ್ತು ಕಾಫಿ ಎರಡರಲ್ಲೂ ಕೆಫೀನ್ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಅಲ್ಲದೆ ಎನ್‌ ಸಿಬಿಐ ಪ್ರಕಾರ, ಇದರಲ್ಲಿರುವ ಕೆಫೀನ್ ದೇಹದಲ್ಲಿನ ಇತರೆ ಪೋಷಕಾಂಶ ಹೀರಿಕೊಳ್ಳುವುದನ್ನು ತಡೆಯುತ್ತದೆ. ಮಗುವಿನ ಬೆಳವಣಿಗೆಗೆ ಜೀವಸತ್ವ ಮತ್ತು ಖನಿಜಗಳ ಅಗತ್ಯವಿದೆ. ಮತ್ತು ಚಹಾ ಸೇವನೆ ಇದಕ್ಕೆ ಅಡ್ಡಿ ಆಗಬಹುದು.


  ಚಹಾ ಮಕ್ಕಳಲ್ಲಿ ಯಾವ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


  ಮಗುವಿಗೆ ಚಹಾ ಕುಡಿಸುವುದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ರಾತ್ರಿ ಮಲಗಲು ಕಷ್ಟವಾಗುತ್ತದೆ. ಮೂತ್ರದ ಉತ್ಪಾದನೆ ಹೆಚ್ಚಿಸುತ್ತದೆ.


  ಅಲರ್ಜಿ ಸಮಸ್ಯೆ


  ಮಗುವಿಗೆ ಚಹಾ ಕುಡಿಸಿದರೆ ಕೆಲವು ರೀತಿಯ ಅಲರ್ಜಿ ಸಮಸ್ಯೆ ಕಾಡುತ್ತವೆ. ಎದೆ ಹಾಲು ಕುಡಿಯುವ ಮಗುವಿಗೆ ಚಹಾದಲ್ಲಿರುವ ಗಿಡಮೂಲಿಕೆಗಳು ಹಾನಿಯನ್ನುಂಟು ಮಾಡುತ್ತವೆ. ಉಸಿರಾಟದ ತೊಂದರೆ ಮತ್ತು ಗಂಟಲು, ತುಟಿಗಳು, ನಾಲಿಗೆ ಮತ್ತು ಮುಖದ ಊತ ಕಂಡು ಬರುತ್ತದೆ.


  ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


  ಮಗುವಿನ ಫೀಡಿಂಗ್ ಬಾಟಲಿಗೆ ಚಹಾ ಸೇರಿಸಿದಾಗ ಕೆಫೀನ್ ಯಕೃತ್ತು, ಹೃದಯದ ಆರೋಗ್ಯ ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಆಗಾಗ್ಗೆ ಕೆಫೀನ್ ಸೇವಿಸುವ ಮಕ್ಕಳು ಇತರ ಶಿಶುಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

  Published by:renukadariyannavar
  First published: