• Home
  • »
  • News
  • »
  • lifestyle
  • »
  • Children’s Health: ಟೀ ಜೊತೆ ಮಕ್ಕಳಿಗೆ ತಿನ್ನಲು ಬಿಸ್ಕೆಟ್​​ ಕೊಡುವ ಮುನ್ನ ಎಚ್ಚರ!

Children’s Health: ಟೀ ಜೊತೆ ಮಕ್ಕಳಿಗೆ ತಿನ್ನಲು ಬಿಸ್ಕೆಟ್​​ ಕೊಡುವ ಮುನ್ನ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳಿಗೆ ನೀಡುವ ಕುಕ್ಕೀಸ್ ಗಳು ಹಲವು ಆರೋಗ್ಯ ಸಮಸ್ಯೆ‘ಗಳನ್ನು ತಂದೊಡ್ಡುತ್ತವೆ. ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

  • Share this:

    ಪ್ರತೀ ಮನೆಗಳಲ್ಲಿ (Every Home) ಜನರು (People) ಚಹಾ (Tea) ಕುಡಿಯುವಾಗ ಬಿಸ್ಕತ್ತು ಮತ್ತು ಬ್ರೆಡ್ (Bread) ಹಾಗೂ ಇತ್ತೀಚಿನ ದಿನಗಳಲ್ಲಿ ಟೋಸ್ಟ್ ಮತ್ತು ಕುಕೀಸ್ (Cookies) ತಿನ್ನುತ್ತಾರೆ. ಮಕ್ಕಳೂ (Children’s) ಸಹ ಹೆಚ್ಚಾಗಿ ಕುಕೀಸ್ ತಿನ್ನಲು ಇಷ್ಟ ಪಡುತ್ತಾರೆ. ಹಾಗೆಯೇ ಬೆಳಗಿನ ತಿಂಡಿ, ಚಹಾ ಜೊತೆ, ಸಂಜೆ ಚಹಾ ಜೊತೆ ಮಕ್ಕಳು ಕುಕೀಸ್ ತಿನ್ನುತ್ತಾರೆ. ಹೆಚ್ಚಿನ ತಾಯಂದಿರು ಮಕ್ಕಳಿಗೆ ಇಷ್ಟ ಅನ್ನೋ ಕಾರಣಕ್ಕೆ ಕುಕೀಸ್ ನೀಡುತ್ತಾರೆ. ಕೆಲವರು ಕುಕೀಸ್ ಗಳು ಆರೋಗ್ಯಕರ ಮತ್ತು ಶಕ್ತಿಯುತ ಆಹಾರ ಎಂದು ಭಾವಿಸಿದ್ದಾರೆ. ಆದರೆ ಕುಕೀಸ್ ಆರೋಗ್ಯಕರ ಅಲ್ಲ ಎಂಬುದನ್ನು ತಿಳಿಯುವುದು ಮುಖ್ಯ.


    ಮಕ್ಕಳು ತಿನ್ನುವ ಕುಕೀಸ್ ಎಷ್ಟು ಆರೋಗ್ಯಕರ?


    ಮಕ್ಕಳಿಗೆ ನೀಡುವ ಕುಕ್ಕೀಸ್ ಗಳು ಹಲವು ಆರೋಗ್ಯ ಸಮಸ್ಯೆ ತಂದೊಡ್ಡುತ್ತವೆ. ಇದು ಮಕ್ಕಳ ಆರೋಗ್ಯಕ್ಕೆ ಅನೇಕ ಅಪಾಯಕಾರಿ ಅಂಶಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಕುಕೀಸ್ ತಿನ್ನುವ ಆರೋಗ್ಯದ ಅಪಾಯಗಳ ಬಗ್ಗೆ ತಿಳಿಯಿರಿ. ದಿನಕ್ಕೆ ಒಂದರಿಂದ ಎರಡು ಕುಕೀಸ್ ತಿನ್ನುವುದು ಉತ್ತಮ. ಆದರೆ ಅದನ್ನು ಅತಿಯಾಗಿ ಸೇವಿಸಿದರೆ ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆ ಉಂಟಾಗುತ್ತವೆ.


    ಮಕ್ಕಳಲ್ಲಿ ಮಧುಮೇಹ ಕಾಯಿಲೆ ಸಂಭವನೀಯತೆ


    ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಧುಮೇಹ ಹಾಗೂ ಕೆಲ ಕಾಯಿಲೆಗಳ ಗಂಭೀರ ಅಪಾಯ ಹೆಚ್ಚಿದೆ. ಗಂಭೀರ ಕಾಯಿಲೆಗಳನ್ನು ತಪ್ಪಿಸಲು, ಸಿಹಿ ತಿಂಡಿ, ಕುಕೀಸ್ ಗಳಿಂದ ಮಕ್ಕಳನ್ನು ದೂರವಿಡಬೇಕು. ಇದು ಉತ್ತಮ ಮತ್ತು ಸಂಭವನೀಯ ಪರಿಹಾರ ಆಗಿದೆ. ಹಾಗಾಗಿ ಪೋಷಕರು ಮಗುವಿನ ಆರೋಗ್ಯಕರ ಆಹಾರ ಪದ್ಧತಿ ಕಾಪಾಡಬೇಕು.




    ಡಯೆಟಿಷಿಯನ್ ನೇಹಾ ಪಠಾನಿಯಾ ಅವರ ಪ್ರಕಾರ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಮಧುಮೇಹದ ಅಪಾಯ ಗಮನಾರ್ಹವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣ ಜಂಕ್ ಮತ್ತು ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆ ಎಂದಿದ್ದಾರೆ. ಪಿಜ್ಜಾ ಅಥವಾ ಬರ್ಗರ್ ಹಾಗೂ ಕುಕೀಸ್, ಮಿಠಾಯಿ, ಬಿಸ್ಕತ್ತು ಸಹ ಸೇರಿವೆ.


    ಕುಕೀಸ್ ಸೇವನೆಯಿಂದಾಗುವ ಆರೋಗ್ಯದ ಅಪಾಯಗಳು


    ಜೀರ್ಣಕಾರಿ ಸಮಸ್ಯೆ


    ಕುಕೀಸ್ ಗಳಲ್ಲಿ ಹೆಚ್ಚು ಮೈದಾ ಹಿಟ್ಟು ಬಳಸಿರುತ್ತಾರೆ. ಇದರಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಹೀಗಾಗಿ ಇದು ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡುತ್ತದೆ. ಇದರ ನಿರಂತರ ಮತ್ತು ಅತಿಯಾದ ಸೇವನೆ ಮಕ್ಕಳ ಆರೋಗ್ಯ ಹದಗೆಡಿಸುತ್ತದೆ. ಮತ್ತು ಹಸಿವಿನ ಕೊರತೆ, ರುಚಿಯ ಕೊರತೆ ಮತ್ತು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ.


    ಪೋಷಕಾಂಶಗಳ ಕೊರತೆ


    ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಬೇಕು. ಆದರೆ ಬಿಸ್ಕತ್ತು ಮತ್ತು ಕುಕೀಸ್ ಮೈದಾಹಿಟ್ಟಿನಿಂದ ತಯಾರಿಸುತ್ತಾರೆ. ಹಾಗಾಗಿ ಇದು ಮಕ್ಕಳ ಕರುಳಿನ ಆರೋಗ್ಯಕ್ಕೆ ತುಂಬಾ ಹಾನಿಕರ. ಪೋಷಣೆ ಸಿಗುವುದಿಲ್ಲ. ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


    ತೂಕ ಹೆಚ್ಚಳ


    ಕುಕೀಸ್ ಗಳಲ್ಲಿ ಹೆಚ್ಚಿನ ಕ್ಯಾಲೋರಿ ಇದೆ. ಇದು ಮಕ್ಕಳ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತ್ವರಿತ ತೂಕ ಹೆಚ್ಚಾಗಲು ಕಾರಣ. ಬೊಜ್ಜಿನ ಸಮಸ್ಯೆ ಮಕ್ಕಳಲ್ಲಿ ಬಾಲ್ಯವನ್ನೇ ಕಸಿಯುತ್ತದೆ. ಮಾನಸಿಕ ಮತ್ತು ದೈಹಿಕ ಕುಗ್ಗುವಿಕೆಗೆ ಕಾರಣವಾಗುತ್ತದೆ.


    ಮಧುಮೇಹ ಅಪಾಯ ಹೆಚ್ಚುತ್ತದೆ


    ಅನೇಕ ದೇಶಗಳಲ್ಲಿ ಮಕ್ಕಳಲ್ಲಿ ಟೈಪ್ -2 ಮಧುಮೇಹ ಅಪಾಯ ಹೆಚ್ಚಿದೆ ಎಂದು ಸಂಶೋಧನೆಗಳು ಹೇಳಿವೆ. ಮಕ್ಕಳ ಆರೋಗ್ಯಕ್ಕಾಗಿ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಪ್ಯಾಕೇಜ್ಡ್ ಕುಕೀಸ್ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು.


    ಇದನ್ನೂ ಓದಿ:ಡಯಟ್ ಮತ್ತು ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಇಲ್ಲಿವೆ ಸುಲಭ ವಿಧಾನಗಳು..!


    ಆರೋಗ್ಯಕರ ಕುಕೀಸ್ ಯಾವವು?


    ಮಕ್ಕಳ ಆರೋಗ್ಯಕ್ಕೆ ಒಣಗಿದ ಹಣ್ಣುಗಳು ಮತ್ತು ಇತರ ಪೌಷ್ಟಿಕ ಪದಾರ್ಥಗಳು ಬೇಕು. ಕುಕೀಸ್ ಕೊಡಲೇಬೇಕು ಎನ್ನಿಸಿದರೆ, ನೀವೇ ಮನೆಯಲ್ಲಿ ತಯಾರಿಸಿದ ಧಾನ್ಯ, ಬೀಜಗಳು ಮತ್ತು ಒಣ ಹಣ್ಣುಗಳ ಕುಕೀಸ್ ಮಾಡಿ ಕೊಡಿ. ಬೀಜಗಳಿಂದ ಮಾಡಿದ ಲಡ್ಡೂ ನೀಡಿ. ಇದು ಫೈಬರ್ ಮತ್ತು ಪೋಷಕಾಂಶಗಳನ್ನು ಪೂರೈಸುತ್ತದೆ.

    Published by:renukadariyannavar
    First published: