• Home
  • »
  • News
  • »
  • lifestyle
  • »
  • Winter Season: ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್​ಫುಡ್​ಗಳನ್ನು ತಿನ್ನಿಸಿದ್ರೆ ಇಮ್ಯುನಿಟಿ ಹೆಚ್ಚಾಗುತ್ತಂತೆ!

Winter Season: ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್​ಫುಡ್​ಗಳನ್ನು ತಿನ್ನಿಸಿದ್ರೆ ಇಮ್ಯುನಿಟಿ ಹೆಚ್ಚಾಗುತ್ತಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಮಕ್ಕಳಲ್ಲಿಯೂ ಈ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸೂಪರ್ ಫುಡ್ ಗಳು ಅತ್ಯಗತ್ಯವಾಗಿವೆ.

  • Share this:

ಪ್ರತಿಯೊಬ್ಬರೂ ಚಳಿಗಾಲ(Winter) ಬಂತೆಂದರೆ ಸಾಕು ಮನೆಯ ಅಟ್ಟದ ಮೇಲಿಟ್ಟ ಬ್ಯಾಗ್ ನಲ್ಲಿರುವ ತಮ್ಮ ಸ್ವೆಟರ್(Sweater), ಶಾಲು ಮತ್ತು ತಲೆಗೆ ಹಾಕಿಕೊಳ್ಳುವ ಟೋಪಿಗಳನ್ನು ಹೊರಗೆ ತೆಗೆಯುತ್ತಾರೆ. ಇಷ್ಟನ್ನು ಹಾಕಿಕೊಂಡರೆ ನಾವು ಚಳಿಗಾಲದಲ್ಲಿ ಆಗುವ ಚಳಿಯನ್ನು ಸಮರ್ಥವಾಗಿ ಎದುರಿಸಬಹುದೇ ಎಂಬ ಪ್ರಶ್ನೆ ನಮಗೆ ಕಾಡುತ್ತಲೇ ಇರುತ್ತದೆ ಅಂತ ಹೇಳಬಹುದು. ಹೌದು.. ಮಕ್ಕಳಿಗೆ ಈ ಚಳಿಗಾಲದಲ್ಲಿ ಮೈಕೊರೆಯುವ ಚಳಿಗೆ ಶೀತ(Cold), ಕೆಮ್ಮು(Cough) ಮತ್ತು ನೆಗಡಿ ಆಗಾಗ್ಗೆ ಬಂದು ಹೋಗುತ್ತಲೇ ಇರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಮಕ್ಕಳಲ್ಲಿ ಹೀಗೆ ಆಗಾಗ್ಗೆ ಬಂದು ಹೋಗುವ ಶೀತ, ನೆಗಡಿ ಮತ್ತು ಕೆಮ್ಮು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಅಂತ ಬಹುತೇಕರಿಗೆ ಗೊತ್ತೇ ಇರುತ್ತದೆ. ಈಗಾಗಲೇ ನಾವು ಎರಡೂವರೆ ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಿದ್ದೇವೆ. ಚಳಿಗಾಲ ಸಹ ಈಗ ಅದರ ಜೊತೆಗೆ ಸೇರಿಕೊಂಡಿದೆ.  ಚಳಿಗೆ ಹೆಚ್ಚು ಜನರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುತ್ತಾರೆ. ಈ ಅಸ್ವಸ್ಥತೆಗಳು ನಮ್ಮಿಂದ ಬೇರೆಯವರಿಗೂ ಹರಡುವ ಸಾಧ್ಯತೆಗಳು ತುಂಬಾನೇ ಇರುತ್ತವೆ.


ಇದೆಲ್ಲದರ ವಿರುದ್ದ ಸಮರ್ಥವಾಗಿ ಹೋರಾಡಬೇಕು ಅಂತ ಹೇಳಿದರೆ, ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವುದು. ಜ್ವರ ಅಥವಾ ಮತ್ತೊಂದು ಋತುಮಾನದ ವೈರಸ್ ಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ನಿಮ್ಮ ಮಕ್ಕಳಲ್ಲಿಯೂ ಈ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸೂಪರ್ ಫುಡ್ ಗಳು ಅತ್ಯಗತ್ಯವಾಗಿವೆ.


ಇದನ್ನೂ ಓದಿ: Brain Disease: ಮೆದುಳಿನ ಕಾಯಿಲೆ ಅಪಸ್ಮಾರ ಎಂದರೇನು? ಉಂಟಾಗಲು ಕಾರಣ ಮತ್ತು ತಡೆಗಟ್ಟುವುದು ಹೇಗೆ?


ಚಳಿಗಾಲದಲ್ಲಿ ಮಕ್ಕಳಿಗಾಗಿ ಇಲ್ಲಿವೆ 7 ಸೂಪರ್‌ಫುಡ್ ಗಳು


1. ಸಿಹಿ ಆಲೂಗಡ್ಡೆ: ಇದು ಜೀವಸತ್ವಗಳು, ಫೈಬರ್ ಮತ್ತು ಇತರ ನಿರ್ಣಾಯಕ ಅಂಶಗಳ ಪ್ರಬಲ ಮೂಲವಾಗಿದೆ. ಇದು ಉತ್ತಮ ರುಚಿಯನ್ನು ಮಾತ್ರವಲ್ಲದೆ, ನಿಮ್ಮ ಮಗುವಿನ ಆರೋಗ್ಯವನ್ನು ಸಹ ಬಲಪಡಿಸುತ್ತದೆ.


2. ಬೆಲ್ಲ: ಸ್ವೀಟ್ ಡಿಲೈಟ್ ಎಂದು ಕರೆಯಲ್ಪಡುವ ಬೆಲ್ಲವನ್ನು ಅನಾರೋಗ್ಯಕರ ಸಕ್ಕರೆಯೊಂದಿಗೆ ಬದಲಿಸಿ. ಪ್ರೋಟೀನ್, ಕೋಲಿನ್, ಬೆಟೈನ್, ವಿಟಮಿನ್ ಬಿ12, ಬಿ6, ಫೋಲೇಟ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ಹಲವಾರು ಖನಿಜಗಳು ನಮಗೆ ಈ ಬೆಲ್ಲದಲ್ಲಿ ಸಿಗುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಕಾರಣದಿಂದಾಗಿ ಬೆಲ್ಲವು ನಿಮ್ಮ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.


3. ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಜ್ವರ, ನೆಗಡಿ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ಸಾಮಾನ್ಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ.


4. ಖರ್ಜೂರಗಳು: ಖರ್ಜೂರಗಳು ಹಾರ್ಮೋನ್ ನಿಯಂತ್ರಣ, ಉರಿಯೂತದ ಇಳಿಕೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಪ್ರಚೋದನೆಯನ್ನು ಬೆಂಬಲಿಸುತ್ತವೆ. ಇದು ಫೈಟೋನ್ಯೂಟ್ರಿಯಂಟ್ ಗಳನ್ನು ಹೊಂದಿರುತ್ತದೆ, ಅವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಸ್ಯ-ಆಧಾರಿತ ಪದಾರ್ಥಗಳಾಗಿವೆ.


5. ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ನಿಂಬೆ ಹಣ್ಣು ಮತ್ತು ದ್ರಾಕ್ಷಿ ಹಣ್ಣುಗಳು ಸೇರಿದಂತೆ ಸಿಟ್ರಸ್ ಹಣ್ಣುಗಳು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಗಣನೀಯವಾಗಿ ಸಹಾಯ ಮಾಡುತ್ತವೆ. ನಿಮ್ಮ ಮಕ್ಕಳಿಗೆ ಈ ಹಣ್ಣುಗಳನ್ನು ನೀಡುವುದು ತುಂಬಾನೇ ಒಳ್ಳೆಯದು ಎಂದು ಹೇಳಬಹುದು.


6. ಬೀಟ್ರೂಟ್: ಬೀಟ್ರೂಟ್ ಜೀರ್ಣಕಾರಿ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ, ಏಕೆಂದರೆ ಅವುಗಳಲ್ಲಿ ನಾರಿನಂಶವು ಹೆಚ್ಚಾಗಿರುತ್ತದೆ. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ ಮತ್ತು ರೋಗಗಳ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: Night Cough Remedy: ರಾತ್ರಿ ಕಾಡುವ ಕೆಮ್ಮಿಗೆ ಈ ಮನೆಮದ್ದುಗಳನ್ನು ಬಳಸಿ ಸಾಕು


7. ಟರ್ನಿಪ್ (ಗಡ್ಡೆಕೋಸು): ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಇದು ಆಸ್ಕಾರ್ಬಿಕ್ ಆಮ್ಲ ಮತ್ತು ವಿಟಮಿನ್ ಸಿ ಅನ್ನು ಹೊಂದಿರುವುದರಿಂದ, ಇದು ಬಾಹ್ಯ ಸೋಂಕುಗಳಿಂದ ನಮ್ಮ ದೇಹವನ್ನು ರಕ್ಷಿಸುವ ಪ್ರಬಲ ಉತ್ಕರ್ಷಣ ನಿರೋಧಕಗಳಾಗಿವೆ.

Published by:Latha CG
First published: