Children Food: ಮಕ್ಕಳಿಗೆ ಈ ಸಿಹಿ ತಿನಿಸುಗಳನ್ನು ಕೊಡಬಹುದು! ಇದರ ಬಗ್ಗೆ ತಜ್ಞರು ಹೇಳಿದ್ದೇನು?

ಮಕ್ಕಳಿಗೆ ಯಾವ ಆಹಾರ ನೀಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗೊಂದಲ ಅನೇಕ ಪೋಷಕರಲ್ಲಿ ಇರುವುದು ತುಂಬಾನೇ ಸಹಜವಾದ ವಿಷಯ. ಆದರೆ, ಆ ಗೊಂದಲವನ್ನು ಎಷ್ಟು ಬೇಗನೆ ನಿವಾರಿಸಿಕೊಳ್ಳುತ್ತೇವೆಯೋ, ಅಷ್ಟು ಒಳ್ಳೆಯದು ಎಂದು ಹೇಳುತ್ತಾರೆ ಪೌಷ್ಟಿಕತಜ್ಞರು

ಸಾಂಕೇತಿಕ ಚಿತ್ರ:

ಸಾಂಕೇತಿಕ ಚಿತ್ರ:

  • Share this:
ಮಕ್ಕಳಿಗೆ (Children) ಯಾವ ಆಹಾರ (Food) ನೀಡಿದರೆ ಆರೋಗ್ಯಕ್ಕೆ (Health) ಒಳ್ಳೆಯದು ಎಂಬ ಗೊಂದಲ ಅನೇಕ ಪೋಷಕರಲ್ಲಿ (Parents) ಇರುವುದು ತುಂಬಾನೇ ಸಹಜವಾದ ವಿಷಯ (Natural thing). ಆದರೆ, ಆ ಗೊಂದಲವನ್ನು (Confusion) ಎಷ್ಟು ಬೇಗನೆ ನಿವಾರಿಸಿಕೊಳ್ಳುತ್ತೇವೆಯೋ, ಅಷ್ಟು ಒಳ್ಳೆಯದು ಎಂದು ಹೇಳುತ್ತಾರೆ ಪೌಷ್ಟಿಕತಜ್ಞರು (Nutritionists). ನಿಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ (Growth) ಎಂದರೆ ಮಾನಸಿಕ (Psychological) ಮತ್ತು ದೈಹಿಕ ಬೆಳವಣಿಗೆಗೆ (Physical development) ಯಾವ ರೀತಿಯ ಪೌಷ್ಟಿಕ ಆಹಾರ (Nutrition Food) ನೀಡಬೇಕು ಎಂಬುದನ್ನು ನೀವು ಪೌಷ್ಟಿಕತಜ್ಞರೊಂದಿಗೆ ಸಮಾಲೋಚಿಸಿ ತಿಳಿದುಕೊಳ್ಳುವುದು ಸೂಕ್ತ (Suitable).

ಈಗಂತೂ ಚಿಕ್ಕ ಮಕ್ಕಳು ಹೆಚ್ಚಾಗಿ ಸಿಹಿ ತಿಂಡಿ ಎಂದರೆ ಯಾವಾಗಲೂ ಚಾಕೊಲೇಟ್ ಗಳು ಮತ್ತು ಐಸ್‌ಕ್ರೀಮ್ ಗಳನ್ನೇ ತಿನ್ನುತ್ತಾರೆ. ಆದರೆ ಈ ಭಕ್ಷ್ಯಗಳು ಮತ್ತು ಸಿಹಿ ತಿಂಡಿಗಳನ್ನು ಸರಿಯಾದ ರೀತಿಯ ಪೌಷ್ಟಿಕಾಂಶದೊಂದಿಗೆ ಸಮತೋಲನಗೊಳಿಸುವ ವಿಷಯಕ್ಕೆ ಬಂದಾಗ, ಪೋಷಕರು ಆಗಾಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.

ಮಕ್ಕಳ ಆಹಾರದ ಬಗ್ಗೆ ಪೌಷ್ಟಿಕತಜ್ಞರು ಹೇಳಿದ್ದೇನು?
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಪೌಷ್ಟಿಕತಜ್ಞರಾದ ಶ್ವೇತಾ ಶಾ ಅವರು "ನಿಮ್ಮ ಮಗುವು ಸಕ್ಕರೆಯನ್ನು ಒಳಗೊಂಡಿರುವ ಸಿಹಿಯಾದ ಆಹಾರಗಳನ್ನು ಹೆಚ್ಚಾಗಿ ಸೇವಿಸಿದಾಗ ಅವರಿಗೆ ಈ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಡೈರಿ ಮತ್ತು ತೆಳ್ಳಗಿನ ಪ್ರೋಟೀನ್ ನಂತಹವುಗಳು ಬೆಳೆಯುತ್ತಿರುವ ಮಗುವಿನ ದೇಹಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರಗಳನ್ನು ಸೇವಿಸಲು ಅವರ ಹೊಟ್ಟೆಯಲ್ಲಿ ಕಡಿಮೆ ಸ್ಥಳಾವಕಾಶವಿರಬಹುದು. ಎಲ್ಲದರಂತೆಯೇ, ಬಾಲ್ಯದಲ್ಲಿ ಅತಿಯಾದ ಸಕ್ಕರೆಯು ಸೇವಿಸುವುದರಿಂದ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅನಾರೋಗ್ಯಕರ ಬಯಕೆಗಳಿಗೆ ಕಾರಣವಾಗಬಹುದು" ಎಂದು ಹೇಳುತ್ತಾರೆ.

ಇದನ್ನೂ ಓದಿ: Tomato Flu Symptoms: ಐದು ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೊ ಜ್ವರದ ಸೋಂಕಿನ ಲಕ್ಷಣಗಳೇನು?

ಅನಾರೋಗ್ಯಕರ ತಿಂಡಿ ಸೇವನೆಯು ನಂತರದ ಹಂತದಲ್ಲಿ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು. ಆದರೆ ಸ್ನ್ಯಾಕಿಂಗ್ ಅನ್ನು ವಿನೋದಗೊಳಿಸುವುದು ಮತ್ತು ಪೌಷ್ಠಿಕಾಂಶಯುಕ್ತವಾಗುವುದರ ನಡುವೆ ಸರಿಯಾದ ಸಮತೋಲನವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು? ಮಕ್ಕಳು ತಮ್ಮ ಆಹಾರವನ್ನು ಆನಂದಿಸುವಾಗ ಅವರ ಪೌಷ್ಠಿಕಾಂಶದ ಪ್ರಮಾಣವನ್ನು ಸಹ ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ತಿಂಡಿ ಮತ್ತು ಅವುಗಳ ಪದಾರ್ಥಗಳನ್ನು ಬದಲಾಯಿಸುವುದು ಒಳ್ಳೆಯದು ಎಂದು ಶ್ವೇತಾ ಶಾ ಸಲಹೆ ನೀಡಿದರು.

ಪೌಷ್ಟಿಕತಜ್ಞರು ಸೂಚಿಸಿದ ಕೆಲವು ಪರ್ಯಾಯ ಸಿಹಿ ತಿನಿಸುಗಳು ಇಲ್ಲಿವೆ ನೋಡಿ

1. ತೆಂಗಿನ ಹಾಲು ಥಂಡೈ:
ತೆಂಗಿನಕಾಯಿ, ಬೆಲ್ಲ ಮತ್ತು ಆರೋಗ್ಯಕರ ಕೊಬ್ಬಿನಾಮ್ಲಗಳ ಒಳ್ಳೆಯತನದಿಂದ ತುಂಬಿರುವ ಈ ಥಂಡೈ ಸಾಮಾನ್ಯ ಹಾಲು ಮತ್ತು ಸಕ್ಕರೆಯ ಒಂದು ಉತ್ತಮವಾದ ಪರ್ಯಾಯ ಸಿಹಿ ತಿನಿಸಾಗಿದೆ.

ಇದನ್ನೂ ಓದಿ:  Weight Loss: ಹೆರಿಗೆಯ ನಂತರ ಹೊಟ್ಟೆಯ ಬೊಜ್ಜನ್ನು ಕರಗಿಸಲು ಈ ಸೂಪರ್ ವ್ಯಾಯಾಮ ಮಾಡಿ

2. ಚಿಯಾ ತಿನಿಸುಗಳು:
ಸಾಮಾನ್ಯ ಬಿಳಿ ಸಕ್ಕರೆಯನ್ನು ಮಕ್ಕಳಿಗೆ ತಿನ್ನಿಸುವ ಬದಲು, ಪುಡ್ಡಿಂಗ್ ಗಾಗಿ ಚಿಯಾ ಬೀಜಗಳು ಮತ್ತು ಮಾಗಿದ ಬಾಳೆಹಣ್ಣನ್ನು ನಿಮ್ಮ ಮಕ್ಕಳಿಗೆ ನೀಡಿ.

3. ಸಾತ್ವಿಕ ಖೀರ್:
ಸಾತ್ವಿಕವಾದ ಖೀರ್ ಹಾಲು ಮತ್ತು ಸಕ್ಕರೆಯಿಂದ ಮಾಡಲಾಗುತ್ತದೆ. ಸಕ್ಕರೆಯ ಬದಲು ಕ್ವಿನೋವಾ ಮತ್ತು ಬೆಲ್ಲದಿಂದ ಇದನ್ನು ಬದಲಾಯಿಸಬೇಕು. ಇದು ಸಾಮಾನ್ಯ ಅಕ್ಕಿ ಖೀರ್ ಗಿಂತಲೂ ಆರೋಗ್ಯಕರವಾಗಿರುತ್ತದೆ.

4. ಕುಲ್ಫಿ:
ಬೇಸಿಗೆಕಾಲದಲ್ಲಿ ಈ ಕುಲ್ಫಿಗಳು ಬಾಯಿಗೆ ತುಂಬಾನೇ ರುಚಿಯನ್ನು ನೀಡುತ್ತವೆ ಮತ್ತು ಆದರೆ ಹಾಲನ್ನು ಮತ್ತು ಸಕ್ಕರೆಯನ್ನು ತಪ್ಪಿಸಲು ತೆಂಗಿನ ಹಾಲು ಮತ್ತು ಖರ್ಜೂರದಿಂದ ಬದಲಾಯಿಸಲು ಸೂಚಿಸಲಾಗಿದೆ.

5. ಸಿಹಿಯಾದ ಆಲೂಗಡ್ಡೆ ಬ್ರೌನಿ:
ಈ ತಿಂಡಿಯು ಮಗುವಿನ ನೆಚ್ಚಿನ ಆಹಾರ ಪುಸ್ತಕದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಪದಾರ್ಥಗಳನ್ನು ಹೊಂದಿರುತ್ತದೆ. ಇಲ್ಲಿ ಸಿಹಿ ಆಲೂಗಡ್ಡೆ, ಬೆಲ್ಲ, ಖರ್ಜೂರದಿಂದ ಕೋಕೋ ಪುಡಿ ಇರುತ್ತದೆ.

ಇದನ್ನೂ ಓದಿ: Dental Facts: ನಿಮ್ಮ ಹಲ್ಲುಗಳ ಆರೈಕೆ ನಿಮ್ಮ ಕೈಯಲ್ಲಿದೆ, ದಂತ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

ಒಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ನೀಡುವ ಸಿಹಿ ತಿನಿಸುಗಳಲ್ಲಿ ಹಾಲನ್ನು ಬಳಸುವ ಬದಲಿಗೆ ತೆಂಗಿನ ಹಾಲನ್ನು ಬಳಸಿ ಮತ್ತು ಸಕ್ಕರೆಯನ್ನು ಬಳಸುವ ಸ್ಥಳದಲ್ಲಿ ಬೆಲ್ಲವನ್ನು ಸೇರಿಸಿ ಮಾಡಿರಿ. ಇಂತಹ ಸಣ್ಣ ಸಣ್ಣ ಟ್ರಿಕ್ ಗಳು ನಿಮ್ಮ ಮಕ್ಕಳ ದೇಹದಲ್ಲಿ ಸಕ್ಕರೆ ಮತ್ತು ಹಾಲು ಹೋಗುವುದನ್ನು ತಪ್ಪಿಸುತ್ತದೆ" ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
Published by:Ashwini Prabhu
First published: