Healthy Food: ನಿಮ್ಮ ಫೇವರೆಟ್‌ ತಿನಿಸುಗಳಿಗೆ ಈ ರೀತಿಯ ಆರೋಗ್ಯಕರ ಸ್ಪರ್ಶ ನೀಡಿ ಹೆಲ್ದಿ ಆಗಿರಿ

ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ರೋಗಗಳನ್ನು ದೂರವಿರಿಸಲು ಯಾವಾಗಲೂ ಸಮತೋಲಿತ ಆಹಾರವನ್ನು ಸೇವಿಸಬೇಕು ಮತ್ತು ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬಾರದು ಎಂದು ಆಗಾಗ ಹೇಳುತ್ತಲೇ ಇರುತ್ತೇವೆ. ಅದಕ್ಕೆ ತಕ್ಕಂತೆ ನಿಮ್ಮ‌ ನೆಚ್ಚಿನ ಆಹಾರಗಳನ್ನು ಆರೋಗ್ಯಕರವಾಗಿ ಬದಲಾಯಿಸಿ. ನಾವಿಲ್ಲಿ ನಿಮಗಾಗಿ 7 ಆರೋಗ್ಯಕರ ರೆಸಪಿಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕಚೋರಿ

ಕಚೋರಿ

  • Share this:
ನಾವು ಯಾವಾಗಲೂ ಆರೋಗ್ಯಕರವಾಗಿರಬೇಕು (Healthy) ಎಂದಾದರೆ ಅದಕ್ಕಾಗಿ ಒಳ್ಳೆಯ ಆಹಾರವನ್ನೇ ಸೇವಿಸಬೇಕು ಮತ್ತು ಆರೋಗ್ಯಕರ ದೇಹದ ತೂಕವನ್ನು (Body Weight) ಕಾಪಾಡಿಕೊಳ್ಳಲು ಮತ್ತು ರೋಗಗಳನ್ನು ದೂರವಿರಿಸಲು ಯಾವಾಗಲೂ ಸಮತೋಲಿತ ಆಹಾರವನ್ನು (Balanced Food) ಸೇವಿಸಬೇಕು ಮತ್ತು ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬಾರದು ಎಂದು ಆಗಾಗ ಹೇಳುತ್ತಲೇ ಇರುತ್ತೇವೆ. ಅದಕ್ಕೆ ತಕ್ಕಂತೆ ನಿಮ್ಮ‌ ನೆಚ್ಚಿನ ಆಹಾರಗಳನ್ನು ಆರೋಗ್ಯಕರವಾಗಿ ಬದಲಾಯಿಸಿ. ನಾವಿಲ್ಲಿ ನಿಮಗಾಗಿ 7 ಆರೋಗ್ಯಕರ ರೆಸಪಿಗಳ (Food Recipe) ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಆಹಾರ ನಿಮಗೆ ಉತ್ತಮ ಆರೋಗ್ಯದ ಜೊತೆ ಒಳ್ಳೆಯ ರುಚಿಯನ್ನೂ (Good Taste) ನೀಡುತ್ತದೆ.

ನಿಮಗಾಗಿ 7 ಆರೋಗ್ಯಕರ ರೆಸಪಿಗಳು ಇಲ್ಲಿವೆ:

1) ನೋ ಬಟರ್ ಚಿಕನ್
ಚಿಕನ್‌ ಅಂದ್ರೆ ಸಾಕು ನಾನ್‌ ವೆಜ್‌ ಆಹಾರ ಪ್ರಿಯರಿಗೆ ಬಾಯಲ್ಲಿ ನೀರೂರುತ್ತದೆ. ಇನ್ನು ಬಟರ್ ಚಿಕನ್ ತನ್ನದೇ ಆದ ಆಹಾರ ಪ್ರಿಯರನ್ನು ಹೊಂದಿದೆ ಎಂದು ಹೇಳಬಹುದು. ಆದರೆ ಕೆನೆ ಮತ್ತು ಬೆಣ್ಣೆಯಂತಹ ಪದಾರ್ಥಗಳನ್ನು ಮಾಡುವ ಅಡುಗೆಯು ನಮಗೆ ಹೆಚ್ಚಿನ ಕೊಬ್ಬಿನಾಂಶವನ್ನು ನೀಡುತ್ತದೆ. ಆದ್ದರಿಂದ ಇದಕ್ಕೆ ಪರಿಹಾರವಾಗಿ ಬೆಣ್ಣೆ ಇಲ್ಲದೇ ಈ ನೋ ಬಟರ್‌ ಚಿಕನ್‌ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

2) ಸೂಜಿ ರವಾ ಮಂಚೂರಿಯನ್ : ನಮ್ಮ ದೇಶದಲ್ಲಿ ಚೈನೀಸ್ ಆಹಾರಗಳನ್ನು ಹೆಚ್ಚಿನ ಜನರು ಸೇವಿಸುತ್ತಾರೆ. ಗೋಬಿ ತಿನ್ನುವವರು ಅಂತ್ರೂ ತಮ್ಮ ಅನ್ನ ಮತ್ತು ನೂಡಲ್ಸ್ ಜೊತೆಯಲ್ಲಿ ಮಂಚೂರಿಯನ್ ಇರಲೇಬೇಕು ಎಂದು ಬಯಸುತ್ತಾರೆ. ಆದರೆ ಮಂಚೂರಿಯನ್ ಹೆಚ್ಚು ಕಾಲ ಎಣ್ಣೆಯಲ್ಲಿ ಡೀಪ್ಡ್‌ ಫ್ರೈಡ್‌ ಆಗುವುದರಿಂದ ಅವು ಆರೋಗ್ಯಕ್ಕೆ ಉತ್ತಮವಾದವುಗಳು ಅಲ್ಲ. ಆದ್ದರಿಂದ ಸೂಜಿ ರವಾದಿಂದ ಮಂಚೂರಿಯನ್‌ ತಯಾರಿಸಿ ರುಚಿ ನೋಡಬಹುದು. ಸೂಜಿ ರವಾದ ಮಂಚೂರಿಯನ್‌ ಅನ್ನು ಆವಿಯಲ್ಲಿ ಬೇಯಿಸಿಕೊಂಡು ಕೂಡ ತಯಾರಿಸಬಹುದು.

ಇದನ್ನೂ ಓದಿ:  Protein And Health: ಆಹಾರ ಪದಾರ್ಥದಲ್ಲಿ ಎಷ್ಟು ಪ್ರೊಟೀನ್ ಇದೆ? ಪೌಡರ್ ಸೇವನೆ ಹಾನಿಕರವೇ?

3) ಮಲ್ಟಿಗ್ರೇನ್ ಪಿಜ್ಜಾ: ಈಗ ಎಲ್ಲರಿಗೂ ಇಷ್ಟವಾಗುವ ಆಹಾರವೆಂದರೆ ಪಿಜ್ಜಾ. ಆದರೆ ಅಂಗಡಿಗಳಲ್ಲಿ ದೊರಕುವ ಪಿಜ್ಜಾಗಳಲ್ಲಿ ಹೆಚ್ಚಿನ ಮಸಾಲೆಗಳನ್ನು ಬಳಸಿ ಮಾಡಿರುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮನೆಯಲ್ಲಿಯೇ ನಾವು ಉತ್ತಮ ಗುಣಮಟ್ಟದ ಹಲವು ಧ್ಯಾನಗಳಿಂದ ಕೂಡಿದ ಮಲ್ಟಿಗ್ರೇನ್‌ ಪಿಜ್ಜಾವನ್ನು ತಯಾರಿಸಿಕೊಂಡು ಖುಷಿಯಿಂದ ತಿನ್ನಬಹುದು. ಇದರಿಂದ ನಿಮ್ಮ ನಾಲಿಗೆಗೆ ಪಿಜ್ಜಾ ತಿಂದು ಖುಷಿ ಆದರೆ ಇತ್ತ ಕಡೆ ನಿಮ್ಮ ದೇಹಕ್ಕೂ ಉತ್ತಮ ಪೌಷ್ಠಿಕಾಂಶಗಳು ಸಹ ಸಿಗುತ್ತವೆ.

4) ಓಟ್ಸ್ ಮಸಾಲಾ ವಡಾ: ಗರಿಗರಿಯಾದ ವಡಾಗಳು ನಮ್ಮ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿವೆ ಮತ್ತು ವಡಾವನ್ನು ಸಾಮಾನ್ಯವಾಗಿ ಆಲಸಂದಿ ಮತ್ತು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಗೋಲ್ಡನ್ ಬ್ರೌನ್ ಬರೋವರೆಗೂ ಡೀಪ್ ಫ್ರೈ ಮಾಡಲಾಗುತ್ತದೆ. ಆದರೆ ಆಲಸಂದಿ ಮತ್ತು ಅಕ್ಕಿ ಹಿಟ್ಟಿನ ಬದಲಿಗೆ ಓಟ್ಸ್‌ ಅನ್ನು ಹಾಕಿ ವಡಾ ಮಾಡಿದರೆ ಹೇಗೆ ಇರುತ್ತೆ? ರುಚಿಯು ಸೂಪರ್‌ ..ಆರೋಗ್ಯವು ಸೂಪರ್‌. ಈ ಓಟ್ಸ್ ವಡಾಗಳಿಗೆ ಹಿಂದಿನ ರಾತ್ರಿಯೇ ಎಲ್ಲ ತಯಾರಿ ಮಾಡಿಕೊಳ್ಳಬೇಕೆಂದು ಏನು ಇಲ್ಲ. ತಕ್ಷಣಕ್ಕೆ ಇದನ್ನು ನಾವು ಸಿದ್ಧಪಡಿಸಬಹುದು. ಇವುಗಳನ್ನು ಕರಿಯುವ ಬದಲು ಬೇಯಿಸಿಕೊಂಡು ಆರೋಗ್ಯ ವಡಾಗಳನ್ನು ಸೇವಿಸಬಹುದು.

5) ಅಮರಂಥ್‌ ಕಿ ಟಿಕ್ಕಾ: ಇದು ಬೀದಿ ಬದಿಯ ಜನಪ್ರಿಯ ಫಾಸ್ಟ್‌ ಪುಡ್‌ ಆಗಿದೆ. ಈ ಟಿಕ್ಕಾವನ್ನು ಆರೋಗ್ಯಕರ ಪುಡ್‌ ಆಗಿ ಹೇಗೆ ಬದಲಿಸುವುದು? ಅದಕ್ಕೆ ಇಲ್ಲಿದೆ ಉತ್ತರ.. ಟಿಕ್ಕಾ ಆರೋಗ್ಯಕರ ಟ್ವಿಸ್ಟ್ ಅನ್ನು ಪಡೆದಾಗ, ಯಾರು ನಿರಾಕರಿಸಬಹುದು? ಆರೋಗ್ಯಕರ ಅಮರಂಥ್ ಬೀಜಗಳನ್ನು ಬಳಸಿ ಈ ಇದನ್ನು ತಯಾರಿಸಲಾಗುತ್ತದೆ. ಇದನ್ನು ಪ್ಯಾನ್-ಫ್ರೈಡ್ ಮಾಡಲಾಗುತ್ತದೆ.

6) ಕಚೋರಿ: ಕಚೋರಿಯನ್ನು ಇಷ್ಟಪಡದೇ ಇರುವ ಆಹಾರ ಪ್ರಿಯರೇ ಇಲ್ಲ. ಆದರೆ ಕಚೋರಿಯು ಹೆಚ್ಚಿನ ಕಾರ್ಬೊಹೈಡ್ರೆಟ್‌ಗಳನ್ನು ಹೊಂದಿರುತ್ತದೆ. ಆದರೆ ಇದನ್ನು ಕಡಿಮೆ ಕಾರ್ಬೊಹೈಡ್ರೆಟ್‌ ಇರುವ ಪದಾರ್ಥಗಳನ್ನು ಬಳಸಿ ತಯಾರಿಸಬಹುದು. ಬಾದಾಮಿ ಹಿಟ್ಟು ಬಳಸಿ ಇದನ್ನು ತಯಾರಿಸಬಹುದು. ಬೇಯಿಸಿ ನಂತರ ಈ ಆಹಾರವನ್ನು ಸೇವಿಸಬಹುದು.

ಇದನ್ನೂ ಓದಿ:  Breakfast Recipe: ಚಪಾತಿ ನೂಡಲ್ಸ್​ ಮಾಡಿಕೊಟ್ಟರೆ ಮಕ್ಕಳು ನೋ ಅನ್ನಲ್ಲ, ಇದು ಆರೋಗ್ಯಕರ ಕೂಡ

7) ರಾಗಿ ಸಮೋಸ: ರಾಗಿಯ ಬಗ್ಗೆ ನಿಮಗೆಲ್ಲರಿಗೂ ಗೊತ್ತೆ ಇದೆ. ರಾಗಿಯಲ್ಲಿ ಎಷ್ಟೆಲ್ಲ ಆರೋಗ್ಯ ಅಂಶಗಳು ಇವೆ ಎಂದು ಕೂಡ ನಿಮಗೆ ತಿಳಿದಿದೆ. ರಾಗಿ ಹಿಟ್ಟು ಮತ್ತು ಸೌತೆಕಾಯಿ, ಬಟಾಣಿ ಮತ್ತು ಗೋಡಂಬಿಯಿಂದ ತುಂಬಿದ ಈ ಆರೋಗ್ಯಕರ ಸಮೋಸವು ಚಹಾ ಸಮಯದಲ್ಲಿ ಉತ್ತಮ ಪುಡ್‌ ಆಗಿದೆ.
Published by:Ashwini Prabhu
First published: