ಗಂಡಸರೇ ಹೆಚ್ಚು ಡ್ರಗ್ಸ್​ ಸೇವನೆ ಮಾಡ್ತಾರೆ ಅಂದ್ಕೊಂಡಿದ್ದೀರಾ?; ಹಾಗಿದ್ರೆ ನಿಮ್ಮ ತಿಳುವಳಿಕೆ ತಪ್ಪು

ಮೇಲ್ನೋಟಕ್ಕೆ ಪುರುಷರು ಡ್ರಗ್​ಗೆ ಬಲಿಪಶುಗಳಾಗುತ್ತಿರುವುದು ಕಂಡು ಬರುತ್ತದೆ. ಆದರೆ, ವಸ್ತುಸ್ಥಿತಿ ಬೇರೆ ರೀತಿಯಲ್ಲೇ ಇದೆ ಎನ್ನುತ್ತಾರೆ ವೈದ್ಯರು.

news18-kannada
Updated:March 25, 2020, 3:10 PM IST
ಗಂಡಸರೇ ಹೆಚ್ಚು ಡ್ರಗ್ಸ್​ ಸೇವನೆ ಮಾಡ್ತಾರೆ ಅಂದ್ಕೊಂಡಿದ್ದೀರಾ?; ಹಾಗಿದ್ರೆ ನಿಮ್ಮ ತಿಳುವಳಿಕೆ ತಪ್ಪು
ಸಾಂದರ್ಭಿಕ ಚಿತ್ರ
  • Share this:
ಮಾದಕ ವ್ಯಸನದ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ. ಅದರಲ್ಲೂ ಯುವ ಜನತೆ ಇದರ ಬಲಿಪಶು ಆಗುತ್ತಿರುವುದು ಬೇಸರದ ಸಂಗತಿ. ಈಗ ಹೊಸ ಅಧ್ಯಯನ ಮತ್ತೊಂದು ಆತಂಕಕಾರಿ ವಿಚಾರ ಹೊರ ಹಾಕಿದೆ. ಅದೇನೆಂದರೆ, ಗಂಡಸರಿಗಿಂತ ಹೆಂಗಸರು ಬಹುಬೇಗ ಡ್ರಗ್​ನ ದಾಸರಾಗುತ್ತಾರಂತೆ.

ಮೇಲ್ನೋಟಕ್ಕೆ ಪುರುಷರು ಡ್ರಗ್​ಗೆ ಬಲಿಪಶುಗಳಾಗುತ್ತಿರುವುದು ಕಂಡು ಬರುತ್ತದೆ. ಆದರೆ, ವಸ್ತುಸ್ಥಿತಿ ಬೇರೆ ರೀತಿಯಲ್ಲೇ ಇದೆ ಎನ್ನುತ್ತಾರೆ ವೈದ್ಯರು. ಮಹಿಳೆಯರು ಒಮ್ಮೆ ಡ್ರಗ್​ ತೆಗೆದುಕೊಂಡರೆ, ಅದರಿಂದ ಹೊರ ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವೈದ್ಯರು. ಅದಕ್ಕೆ ಕಾರಣ ಅವರ ಹಾರ್ಮೋನ್​ ಸೈಕಲ್​.

“ಮಹಿಳೆಯರ ಹಾರ್ಮೋನ್​ ಸೈಕಲ್​ನಿಂದಾಗಿ ಮಾದಕ ವಸ್ತುಗಳಿಗೆ ಅಂಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಒಮ್ಮೆ ಡ್ರಗ್​ ತ್ಯಜಿಸಿದರೂ, ಮತ್ತೆ ಮತ್ತೆ ಬೇಕು ಎನ್ನುವ ಹಂಬಲ ಅವರಲ್ಲಿ ಹೆಚ್ಚಾಗಿ ಕಾಡುತ್ತದೆ. ಇದು ತೀರಾ ಅಪಾಯಕಾರಿ. ಇದರಿಂದ ಅವರು ಹೊರ ಬರುವುದು ಕಷ್ಟದ ವಿಚಾರ,” ಎಂಬುದು ತಜ್ಞರ ಅಭಿಪ್ರಾಯ. ಇನ್ನು, ಇಂದಿನ ಯುವಜನತೆ ಸದಾ ಒತ್ತಡದಲ್ಲಿರುತ್ತದೆ. ಡ್ರಗ್​ ರಿಲೀಫ್​​ ನೀಡುತ್ತದೆ ಎನ್ನುವ ತಪ್ಪು ನಂಬಿಕೆ​ ಕೂಡ ಡ್ರಗ್​ಗೆ ಬಲಿಯಾಗಲು ಮುಖ್ಯ ಕಾರಣವಂತೆ.

ಇದನ್ನೂ ಓದಿ: 21 ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ 9 ಲಕ್ಷ ಕೋಟಿ ನಷ್ಟ ಅನುಭವಿಸಲಿದೆ; ಆತಂಕ ವ್ಯಕ್ತಪಡಿಸಿದ ಆರ್ಥಿಕ ತಜ್ಞರು

“ಪುರುಷರು ಹಾಗೂ ಮಹಿಳೆಯರು ಡ್ರಗ್​ ತೆಗೆದುಕೊಂಡಾಗ ಉಂಟಾಗುವ ಪರಿಣಾಮಗಳಲ್ಲಿ ವ್ಯತ್ಯಾಸವಿದೆ. ಹಾಗಾಗಿ ಇಬ್ಬರಿಗೂ ನೀಡುವ ಚಿಕಿತ್ಸೆಯ ಕ್ರಮ ಬೇರೆ ರೀತಿಯಲ್ಲೇ ಇರಬೇಕು” ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸಿದ ವೈದ್ಯರು. ಈ ಬಗ್ಗೆ ತಜ್ಞರು ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲ, ಇದನ್ನು ತಡೆಯವುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳುತ್ತಿದ್ದಾರೆ.
First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading