Ginger Benefits: ಮಧುಮೇಹ ನಿಯಂತ್ರಣ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಶುಂಠಿ !

ಆಯುರ್ವೇದ ಜೊತೆಗೆ ವೈದ್ಯಕೀಯ ವಿಜ್ಞಾನವು ತನ್ನ ಆರೋಗ್ಯ ಪ್ರಯೋಜನಗಳನ್ನು ಅಧ್ಯಯನಗಳ ಆಧಾರದ ಮೇಲೆ ಸಾಬೀತು ಮಾಡಿ ತೋರಿಸಿದೆ. ಅಂತಹ ಆಯುರ್ವೇದಿಕ್ ಔಷಧೀಯ ಪದಾರ್ಥವೆಂದು ಶುಂಠಿಯನ್ನು ಕರೆಯುತ್ತಾರೆ. ಹಲವು ಕಾಯಿಲೆಗಳಿಗೆ ಶುಂಠಿಯನ್ನು ಮನೆ ಮದ್ದಾಗಿ ಬಳಕೆ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರಾಚೀನ ಕಾಲದಿಂದಲೂ (Ancient Times) ಭಾರತವು (India) ತನ್ನ ಪ್ರಬಲ ಔಷಧಗಳ (Medicinal) ಶ್ರೀಮಂತಿಕೆಯಿಂದಾಗಿ ಜಗತ್ತಿನಾದ್ಯಂತ (World) ಸಾಕಷ್ಟು ಪ್ರಸಿದ್ಧಿ (Famous) ಪಡೆದಿದೆ. ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ, ಜ್ವರ, ಕಫ, ಗಂಟಲು ನೋವು ಹೋಗಲಾಡಿಸಲು ಭಾರತೀಯರು ಮನೆಮದ್ದು ಬಳಸುತ್ತಾರೆ. ಅನೇಕ ಔಷಧೀಯ ಗುಣವುಳ್ಳ ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲೇ ಲಭ್ಯ ಇವೆ. ಈ ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಹಲವು ವಿಧದ ಔಷಧಿಗಳ ತಯಾರಿಕೆ ಜೊತೆ ಅನೇಕ ವರ್ಷಗಳಿಂದ ಮನೆಮದ್ದಾಗಿ ಬಳಕೆ ಮಾಡಲಾಗುತ್ತಿದೆ. ಅಂತಹ ಕೆಲವು ಪದಾರ್ಥಗಳನ್ನು ನಾವು ಪ್ರತಿನಿತ್ಯ ಔಷಧವಾಗಿ, ಹಾಗೂ ಸಾಂಬಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಲೇ ಇರುತ್ತೇವೆ.

    ಆಯುರ್ವೇದಿಕ್ ಔಷಧೀಯ ಪದಾರ್ಥ ಶುಂಠಿ

    ಆಯುರ್ವೇದ ಜೊತೆಗೆ ವೈದ್ಯಕೀಯ ವಿಜ್ಞಾನವು ತನ್ನ ಆರೋಗ್ಯ ಪ್ರಯೋಜನಗಳನ್ನು ಅಧ್ಯಯನಗಳ ಆಧಾರದ ಮೇಲೆ ಸಾಬೀತು ಮಾಡಿ ತೋರಿಸಿದೆ. ಅಂತಹ ಆಯುರ್ವೇದಿಕ್ ಔಷಧೀಯ ಪದಾರ್ಥವೆಂದು ಶುಂಠಿಯನ್ನು ಕರೆಯುತ್ತಾರೆ. ಹಲವು ಕಾಯಿಲೆಗಳಿಗೆ ಶುಂಠಿಯನ್ನು ಮನೆ ಮದ್ದಾಗಿ ಬಳಕೆ ಮಾಡುತ್ತಾರೆ.

    ಪ್ರತಿ ಮನೆಯಲ್ಲಿ ಶುಂಠಿಯನ್ನು ಚಟ್ನಿ, ಸಾಂಬಾರ್ ಹಾಗೂ ವಿವಿಧ ಪದಾರ್ಥಗಳ ತಯಾರಿಕೆಗೆ ಬಳಕೆ ಮಾಡುತ್ತಾರೆ. ಅಧ್ಯಯನಗಳಲ್ಲಿ ಹೇಳಿರುವ ಪ್ರಕಾರ, ಇದನ್ನು ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಎಲ್ಲಾ ಜನರು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಶುಂಠಿಯನ್ನು ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ.

    ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?

    ಶುಂಠಿಯನ್ನು ತಾಜಾ, ಒಣಗಿಸಿ, ಪುಡಿ ಮಾಡಿ ಅಥವಾ ಎಣ್ಣೆ ಅಥವಾ ರಸದ ರೂಪದಲ್ಲಿ ಬಳಕೆ ಮಾಡುತ್ತಾರೆ. ಭಕ್ಷ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಇದು ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನ ನೀಡುವ ಪ್ರಬಲ ಔಷಧ ಆಗಿದೆ.

    ಶುಂಠಿಯು ಸಾಂಪ್ರದಾಯಿಕ ಮತ್ತು ಪರ್ಯಾಯ ಔಷಧದ ವಿವಿಧ ರೂಪಗಳಲ್ಲಿ ಬಳಕೆಯ ದೀರ್ಘ ಇತಿಹಾಸ ಹೊಂದಿದೆ. ಶುಂಠಿ ವಿವಿಧ ಆರೋಗ್ಯ ಸಮಸ್ಯೆಗೆ ಮನೆಮದ್ದಾಗಿ ಬಳಕೆ ಮಾಡುತ್ತಾರೆ. ವೈದ್ಯಕೀಯ ವಿಜ್ಞಾನವು ಶುಂಠಿಯನ್ನು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂದು ಹೇಳಿದೆ. ಅದನ್ನು ಇಲ್ಲಿ ನೋಡೋಣ.

    ಶುಂಠಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

    ಸೋಂಕಿನಿಂದ ಸುರಕ್ಷೆ ನೀಡುತ್ತವೆ

    ನೋಯುತ್ತಿರುವ ಗಂಟಲು ಅಥವಾ ಶೀತದಂತಹ ಸಾಮಾನ್ಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಶುಂಠಿಯನ್ನು ಹಲವು ವರ್ಷಗಳಿಂದ ಬಳಕೆ ಮಾಡುತ್ತಾರೆ. ಶುಂಠಿಯು ಜಿಂಜರಾಲ್ ಎಂಬ ಸಂಯುಕ್ತ ಹೊಂದಿದೆ. ಅದು ಅನೇಕ ರೀತಿಯ ಸೋಂಕುಗಳ ಅಪಾಯ ಕಡಿಮೆ ಮಾಡಲು ಸಹಾಕಾರಿ.

    ಶುಂಠಿಯ ಸಾರವು ವಿವಿಧ ರೀತಿಯ ಬ್ಯಾಕ್ಟೀರಿಯಾಗಳ ಬೆಳವಣಿಗೆ ತಡೆಯುತ್ತದೆ. 2008 ರ ಅಧ್ಯಯನದ ಪ್ರಕಾರ, ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್ ಉಂಟು ಮಾಡುವ ಬಾಯಿಯ ಬ್ಯಾಕ್ಟೀರಿಯಾ ವಿರುದ್ಧ ಇದು ತುಂಬಾ ಪರಿಣಾಮಕಾರಿಯಾಗಿದೆ. ಉಸಿರಾಟದ ಸೋಂಕುಗಳಲ್ಲಿ ಶುಂಠಿಯು ತುಂಬಾ ಪರಿಣಾಮಕಾರಿಯಾಗಿದೆ.

    ಮಧುಮೇಹಿಗಳಿಗೆ ಪ್ರಯೋಜನಕಾರಿ

    ಮಧುಮೇಹಕ್ಕೆ ಸಂಬಂಧಿಸಿದ ತೊಡಕು ಕಡಿಮೆ ಮಾಡಲು ಶುಂಠಿ ಸೇವನೆ ಸಹಕಾರಿ. ಶುಂಠಿಯು ಪ್ರಬಲ ಮಧುಮೇಹ ವಿರೋಧಿ ಗುಣ ಹೊಂದಿದೆ. ದಿನಕ್ಕೆ 2 ಗ್ರಾಂ ಶುಂಠಿ ಪುಡಿ ಸೇವಿನೆ ಉಪವಾಸ ಗ್ಲೂಕೋಸ್ ಮಟ್ಟವನ್ನು 12% ರಷ್ಟು ಕಡಿಮೆ ಮಾಡಲು ಸಹಕಾರಿ. ಇದು ಹಿಮೋಗ್ಲೋಬಿನ್ A1c (HbA1c) ಅನ್ನು ಸುಧಾರಿಸುತ್ತದೆ.

    ವಾಕರಿಕೆ ಮತ್ತು ಜೀರ್ಣಕಾರಿ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿ

    ಸರಿಯಾದ ಜೀರ್ಣಕ್ರಿಯೆ ಕಾಪಾಡಲು ಶುಂಠಿ ಪ್ರಯೋಜನಕಾರಿ. ಗರ್ಭಾವಸ್ಥೆಗೆ ಸಂಬಂಧಿಸಿದ ವಾಕರಿಕೆ ಮತ್ತು ಬೆಳಗಿನ ಬೇನೆಯಿಂದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಾಕರಿಕೆ ಮತ್ತು ವಾಂತಿ ನಿವಾರಣೆಗೆ ಶುಂಠಿ ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ: ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇರಿಸಿ ಹೀಗೆ ತೂಕ ಇಳಿಸಿಕೊಳ್ಳಿ

    ತೂಕ ನಿಯಂತ್ರಣಕ್ಕೆ ಸಹಕಾರಿ

    ಶುಂಠಿ, ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರಲ್ಲಿ ಒಟ್ಟು ತೂಕ ಮತ್ತು ಸೊಂಟದ ಸುತ್ತಳತೆ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. 80 ಬೊಜ್ಜು ಮಹಿಳೆಯರ ಮೇಲೆ ನಡೆಸಿದ 2016 ರ ಅಧ್ಯಯನವು ಶುಂಠಿಯು ಬಾಡಿ ಮಾಸ್ ಇಂಡೆಕ್ಸ್ (BMI) ಮತ್ತು ರಕ್ತದ ಇನ್ಸುಲಿನ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
    Published by:renukadariyannavar
    First published: