Valentines Day 2023: ಈ ವ್ಯಾಲೆಂಟೈನ್ಸ್ ಡೇಯಲ್ಲಿ ನಿಮ್ಮ ಗರ್ಲ್ ಫ್ರೆಂಡ್ಗೆ ಈ ಗಿಫ್ಟ್ ನೀಡಿ ಪ್ರೀತಿ ವ್ಯಕ್ತಪಡಿಸಿ!
Valentines Day 2023: ಈ ವ್ಯಾಲೆಂಟೈನ್ಸ್ ಡೇಯಲ್ಲಿ ನಿಮ್ಮ ಗರ್ಲ್ ಫ್ರೆಂಡ್ಗೆ ಈ ಗಿಫ್ಟ್ ನೀಡಿ ಪ್ರೀತಿ ವ್ಯಕ್ತಪಡಿಸಿ!
ಸಾಂದರ್ಭಿಕ ಚಿತ್ರ
ಪ್ರೀತಿಯನ್ನು ವ್ಯಕ್ತಪಡಿಸುವ ವೇಳೆ ನಿಮ್ಮ ಸಂಗಾತಿಗೆ ಅತ್ಯಾಕರ್ಷಕವಾದ ಗಿಫ್ಟ್ ನೀಡಿ ಜೀವನದ ಪೂರ್ತಿ ಈ ಕ್ಷಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿ. ಸದ್ಯ ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಸುಂದರವಾದ ಉಡುಗೊರೆಗಳು ಬಂದಿದೆ.
ಪ್ರೇಮಿಗಳ ದಿನಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ವ್ಯಾಲೆಂಟೈನ್ಸ್ ಡೇ ದಿನದಂದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಳ್ಳೆಯ ಅವಕಾಶ ಸಿಕ್ಕಿದೆ. ಹಾಗಾಗಿ ನಿಮ್ಮ ಪ್ರೀತಿಪಾತ್ರರಿಗೆ ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸಿ. ಆದರೆ ಅದಕ್ಕೂ ಮುಂಚೆ ಗಿಫ್ಟ್ ತೆಗೆದುಕೊಳ್ಳುವುದು ಮರೆಯಬೇಡಿ
ಹೌದು, ಪ್ರೀತಿಯನ್ನು ವ್ಯಕ್ತಪಡಿಸುವ ವೇಳೆ ನಿಮ್ಮ ಸಂಗಾತಿಗೆ ಅತ್ಯಾಕರ್ಷಕವಾದ ಗಿಫ್ಟ್ ನೀಡಿ ಜೀವನದ ಪೂರ್ತಿ ಈ ಕ್ಷಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿ. ಸದ್ಯ ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಸುಂದರವಾದ ಉಡುಗೊರೆಗಳು ಬಂದಿದೆ.
ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನಿಮ್ಮ ಸಂಗಾತಿ ಇಷ್ಟಪಡುವ ಬೆಸ್ಟ್ ಉಡುಗೊರೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿಯೂ ಹಾರ್ಟ್ ಶೇಪ್ ಜ್ಯುವೆಲರಿ ಹೀಗೆ ಹಲವಾರು ಉಡುಗೊರೆಗಳನ್ನು ನೀಡಿ ನಿಮ್ಮ ಗರ್ಲ್ಫ್ರೆಂಡ್ಗೆ ಖುಷಿಪಡಿಸಿ. ಉಂಗುರಗಳು, ಬ್ರಾಸ್ ಲೆಟ್ಸ್, ಇಯರ್ ರಿಂಗ್ ಹೀಗೆ ಹಲವಾರು ರೀತಿಯ ಉಡುಗೊರೆಗಳನ್ನು ನೀಡಿ ಈ ವ್ಯಾಲೆಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಿ.
ಫಿಟ್ನೆಸ್ ಬ್ಯಾಂಡ್: ನಿಮ್ಮ ಗರ್ಲ್ ಫ್ರೆಂಡ್ಗೆ ಫಿಟ್ನೆಸ್ ಬ್ಯಾಂಡ್ ಬೆಸ್ಟ್ ಗಿಫ್ಟ್ ಎಂದೇ ಹೇಳಬಹುದು. ಇದು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಂತೆ ಕಾಣಿಸುತ್ತದೆ. ಫಿಟ್ನೆಸ್ ಬ್ಯಾಂಡ್ನಲ್ಲಿ ವಿವಿಧ ರೀತಿಯ ಡಿಸೈನ್ಗಳಿದೆ. ಅಲ್ಲದೇ ನಿಮಗೆ ಬೇಕಾದ ಬೆಲೆಯಲ್ಲಿ ಸಿಗುತ್ತದೆ.
ಹೆಡ್‌ಫೋನ್‌ಗಳು: ಬಹಳ ಮಂದಿ ಸಾಂಗ್ ಕೇಳಲು ಇಷ್ಟಪಡುತ್ತಾರೆ. ಎಲ್ಲೆ ಹೊರಗೆ ಹೋದಾಗ, ಏನಾದರೂ ಕೆಲಸವನ್ನು ಮಾಡುವಾಗ ಸಾಂಗ್ ಕೇಳಿಕೊಂಡು ಮಾಡುತ್ತಿರುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಬ್ರಾಂಡ್ಗಳ ಹೆಡ್ಫೋನ್ಗಳು ಲಭ್ಯವಿದೆ. ಖರೀದಿಸಿ.
ಸ್ಮಾರ್ಟ್ ವಾಚ್: ಈಗ ಎಲ್ಲರೂ ಟೆಕ್ನಾಲಜಿ ಪ್ರಿಯರೇ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅವರವರ ಆದ್ಯತೆಗಳಿಗೆ ತಕ್ಕಂತೆ ಬದಲಾಗುತ್ತಿದ್ದಾರೆ. ಈಗೀನ ಜನರೇಷನ್ನಲ್ಲಿ ಸ್ಮಾರ್ಟ್ ವಾಚ್ಗಳನ್ನು ಇಷ್ಟಪಡದವರೇ ಇಲ್ಲ. ಹಾಗಾಗಿ ನಿಮ್ಮ ಗೆಳತಿಗೆ ಕೆಲವು ದುಬಾರಿ ಸ್ಮಾರ್ಟ್ ವಾಚ್ಗಳನ್ನು ಗಿಫ್ಟ್ ಆಗಿ ನೀಡಿ ಪ್ರೀತಿಯನ್ನು ವ್ಯಕ್ತಪಡಿಸಿ.
ಬಟ್ಟೆ: ಕೆಲ ಹುಡುಗಿಯರಿಗೆ ಬಟ್ಟೆ ಬಗ್ಗೆ ತುಂಬಾ ಕ್ರೇಜ್ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ ಬಟ್ಟೆಯನ್ನು ಉಡುಗೊರೆಯಾಗಿ ನೀಡಿದಾಗ ಬೇಗ ಇಂಪ್ರೆಸ್ ಆಗುತ್ತಾರೆ. ಆದರೆ ಬಟ್ಟೆ ನೀಡುವಾಗ ಅವರಿಗೆ ಆಗುವ ಅಳತೆ, ಇಷ್ಟವಾಗುವ ಬಣ್ಣದ ಬಗ್ಗೆ ತಿಳಿದು ಗಿಫ್ಟ್ ನೀಡಿ.
ಉಂಗುರ: ಉಂಗುರ ಪ್ರೀತಿಯ ಸಂಕೇತ. ಹೀಗಾಗಿ ಪ್ರೇಮಿಗಳ ದಿನದ ಪ್ರಯುಕ್ತ ಉಂಗುರವನ್ನು ಗಿಫ್ಟ್ ಆಗಿ ನೀಡಬಹುದು. ಆದರೆ ಚಿನ್ನದ ಉಂಗುರವನ್ನೇ ಗಿಫ್ಟ್ ಆಗಿ ನೀಡಬೇಕು ಎಂದಲ್ಲ. ನಿಮ್ಮ ಆರ್ಥಿಕ ಮಟ್ಟಕ್ಕೆ ಅನುಕೂಲವಾಗುವಂತೆ ಹಲವಾರು ಡಿಸೈನ್ನ ಬೆಳ್ಳಿ ಉಂಗುವನ್ನು ಸಹ ನೀಡಬಹುದು.
ಸೌಂದರ್ಯ ವರ್ಧಕಗಳು: ಸಾಮಾನ್ಯವಾಗಿ ಹುಡುಗಿಯರಿಗೆ ಸೌಂದರ್ಯ ವರ್ಧಕಗಳ ಮೇಲೆ ಅದೇನೋ ಒಂದು ರೀತಿ ಕ್ರೇಜ್. ಹಾಗಾಗಿ ಲಿಪ್ಸ್ಟಿಕ್, ಕಾಡಿಗೆ, ನೈಲ್ ಪಾಲೀಶ್, ಹೇರ್ ಬ್ಯಾಂಡ್ಸ್ ಸೇರಿದಂತೆ ಹಲವಾರು ಗಿಫ್ಟ್ಗಳನ್ನು ನೀಡಿ ನಿಮ್ಮ ಗರ್ಲ್ಫ್ರೆಂಡ್ನ ಇಂಪ್ರೆಸ್ ಮಾಡಿ.
ಮೊಬೈಲ್: ಮೊಬೈಲ್ ಇಲ್ಲದೇ ಏನು ಕೂಡ ಇಲ್ಲ ಎನ್ನುವಂತಾಗಿದೆ. ಒಂದು ದಿನ ಮೊಬೈಲ್ ಬಿಟ್ಟು ಜನ ಇರದಂತೆ ಆಗಿದೆ. ಎಲ್ಲದಕ್ಕೂ ಅನಿವಾರ್ಯ ಆಗಿರುವ ಮೊಬೈಲ್ ಅನ್ನು ನೀಡಿ ನಿಮ್ಮ ಹುಡುಗಿಯನ್ನು ಸಂತೋಷ ಪಡಿಸಿ.
Published by:Monika N
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ