ಮಾರ್ಚ್, ಏಪ್ರಿಲ್ ತಿಂಗಳ ಬಂತೆಂದರೆ ವಿದ್ಯಾರ್ಥಿಗಳ (Students) ಭವಿಷ್ಯ ನಿರ್ಧಾರವಾಗುವ ಸಮಯ. ವರ್ಷ ಪೂರ್ತಿ ಮಾಡಿದ ಅಧ್ಯಯನ (Study) ಪರೀಕ್ಷೆಯ ಮೂಲಕ ಫಲಿತಾಂಶ ನೀಡುತ್ತದೆ. ಇನ್ನೇನು ಮಕ್ಕಳಿಗೆ ಪರೀಕ್ಷೆ (Exam) ಕೂಡ ಹತ್ತಿರವಾಗ್ತಿದೆ. ಹಾಗಾದರೆ ಪರೀಕ್ಷೆಯ ಹತ್ತಿರ ಸಮಯದಲ್ಲಿ (Exam Time) ವಿದ್ಯಾರ್ಥಿಗಳು ಏನೇನು ಮಾಡಬೇಕು, ಯಾವುದರಿಂದ ದೂರವಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಕೊನೆಯ ನಿಮಿಷದ ಅಧ್ಯಯನದಲ್ಲಿ ಏನು ಮಾಡಬೇಕು ಏನು ಮಾಡಬಾರದು ಅನ್ನೋ ಮಾಹಿತಿಯನ್ನು ತಿಳಿದುಕೊಳ್ಳಿ
1) ದಿನವಿಡಿ ಅಭ್ಯಾಸ ಮಾಡಬೇಡಿ
ಪರೀಕ್ಷೆಯ ಕೊನೆ ಘಳಿಗೆಯಲ್ಲಿ ದಿನ ಪೂರ್ತಿ ಓದುವ ಬದಲು ಕೊಂಚ ವಿರಾಮ ತೆಗೆದುಕೊಳ್ಳುವುದು ಉತ್ತಮ. ನಾಳೆ ಪರೀಕ್ಷೆ ಎಂದು ವಿರಾಮವಿಲ್ಲದೆ ಓದಿದರೆ ಅದು ನಿಮ್ಮ ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಸ್ವಲ್ಪ ವಿರಾಮ ತೆಗೆದುಕೊಂಡು ಅಧ್ಯಯನ ಮಾಡಿದರೆ ಸೂಕ್ತ.
2) ಸರಿಯಾದ ಯೋಜನೆ ಮಾಡಿ
ವಿದ್ಯಾರ್ಥಿಗಳು ತಮ್ಮ ಓದಿನ ಸರಿಯಾದ ವೇಳಾಪಟ್ಟಿಯನ್ನು ರೂಪಿಸಿ ಅದರ ಪ್ರಕಾರ ಅಧ್ಯಯನ ಮಾಡಿ. ಪ್ರತಿ ವಿಷಯಕ್ಕೆ ಎಷ್ಟು ಸಮಯವನ್ನು ನಿಗದಿಪಡಿಸಬೇಕು ಎಂಬುದನ್ನು ಪರಿಗಣಿಸುವ ಮೂಲಕ ವಿದ್ಯಾರ್ಥಿಗಳು ಅಭ್ಯಾಸವನ್ನು ಪ್ರಾರಂಭಿಸಬೇಕು. ನಿರ್ದಿಷ್ಟವಾಗಿ ಈ ಕೊನೆಯ ಹಂತದಲ್ಲಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಅನುಗುಣವಾಗಿ ಸಮಯವನ್ನು ನಿಗದಿಪಡಿಸುವ ಮೂಲಕ ಇದನ್ನು ಮೌಲ್ಯಮಾಪನ ಮಾಡಬೇಕು.
ಇದನ್ನೂ ಓದಿ: NEET ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಬುಡಕಟ್ಟು ಯುವಕ.. ಈತ ಎಂಥವರಿಗೂ ಸ್ಪೂರ್ತಿ
3) ಹಿಂದಿನ ದಿನದ ತಯಾರಿ ಸಹಾಸ ಬೇಡ
ಅಧ್ಯಯನ ವಿಷಯದಲ್ಲಿ ನಿಧಾನ ಮತ್ತು ಸ್ಥಿರತೆಯು ಗೆಲುವುನ್ನು ನೀಡುತ್ತದೆ. ಆದರೆ ವರ್ಷವಿಡೀ ತಯಾರಿ ಮಾಡದ ವಿದ್ಯಾರ್ಥಿಗಳಿಗೆ ಹಿಂದಿನ ದಿನದ ಹೆಚ್ಚಿನ ಓದು ಪರಿಣಾಮಕಾರಿಯಾದ ಫಲ ನೀಡುವುದಿಲ್ಲ.
ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಮಾಹಿತಿ ನೆನಪಿಟ್ಟು ಕೊಳ್ಳಲು ಪ್ರಯತ್ನಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಯನ್ನು ಕಡಿಮೆ ಮಾಡುತ್ತದೆ.ಹೀಗಾಗಿ ಹಿಂದಿನ ದಿನದ ಓದು ಕೇವಲ ರಿವಿಜನ್ ಗೆ ಮೀಸಲಿಡಿ.
4) ಅಭ್ಯಾಸ ಪರೀಕ್ಷೆಗಳನ್ನು ಮಾಡಿ
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉತ್ತಮ ಪರ್ಯಾಯವೆಂದರೆ ಅಭ್ಯಾಸ ಪರೀಕ್ಷೆಗಳು. ಪ್ರಶ್ನೆಗಳನ್ನು ಅನುಕರಿಸುವುದು ಪರೀಕ್ಷೆಗೆ ತಯಾರಾಗಲು ಉತ್ತಮ ಮಾರ್ಗವಾಗಿದೆ ಎಂದು ಅನೇಕ ಸಂಶೋಧಕರು ಮತ್ತು ಶಿಕ್ಷಣ ತಜ್ಞರು ಹೇಳುತ್ತಾರೆ.ಅಭ್ಯಾಸ ಪರೀಕ್ಷೆಗಳು ಪರೀಕ್ಷೆಯ ಆತಂಕವನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಮಾದರಿ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಿದೆ.
ಇದನ್ನೂ ಓದಿ: Exam ಎಂಬ ಆತಂಕ ಕಾಡುತಿದ್ಯಾ; ಈ 7 ಸಲಹೆ ಮೂಲಕ ನೆನಪಿನ ಶಕ್ತಿ ಜೊತೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
ಅಭ್ಯಾಸ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದು ಕೊಳ್ಳಲು ಸಹಾಯವಾಗುತ್ತದೆ. ಅಭ್ಯಾಸ ಪರೀಕ್ಷೆಗಳ ಮೂಲಕ ಅಧ್ಯಯನ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.
5) ಅತಿಯಾದ ಅಭ್ಯಾಸ ಮಾಡಬೇಡಿ
ನಮ್ಮ ಮಿದುಳುಗಳು ಪ್ರತಿ ದಿನವೂ ನಿಯಮಿತ ಮಾಹಿತಿಯನ್ನು ಮಾತ್ರ ತೆಗೆದುಕೊಳ್ಳುತ್ತದೆ. ಹಾಗಾಗಿ ಅತಿಯಾದ ಓದು ಹೆಚ್ಚಿನ ೊತ್ತಡ ನೀಡುತ್ತದೆ. ಪರೀಕ್ಷೆ ದಿನಗಳಲ್ಲಿ ತಡೆರಹಿತ ಅಧ್ಯಯನ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಇದು ಬಹುತೇಕ ಹತಾಶೆ ಮತ್ತು ಬಳಲಿಕೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಹುಭಾಗವನ್ನು ಹಗಲಿನಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಬೇಕು...
ಅಧ್ಯಯನದ ದಕ್ಷತೆಯು ರಾತ್ರಿಯಲ್ಲಿ ಕಡಿಮೆಯಾಗುತ್ತದೆ ಹೀಗಾಗಿ ಅಧ್ಯಯನ ಹಗಲಿನಲ್ಲಿ ಮಾಡುವುದು ಸೂಕ್ತ.
6) ಚೆನ್ನಾಗಿ ನಿದ್ರೆ ಮಾಡಿ
ವಿದ್ಯಾರ್ಥಿಗಳು ಪರೀಕ್ಷೆಯ ಅವಧಿಯಲ್ಲಿ ಚೆನ್ನಾಗಿ ನಿದ್ರೆ ಮಾಡುವುದು ಪ್ರಮುಖ ವಿಷಯಗಳಲ್ಲಿ ಒಂದು. ನಿದ್ರೆಯ ಅಭಾವ ಹೊಸ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ನಮ್ಮ ಸಾಮರ್ಥ್ಯವು ಗಮನಾರ್ಹವಾಗಿ ಕುಗ್ಗಿಸುತ್ತದೆ. ಹೀಗಾಗಿ ಉತ್ತಮ ನಿದ್ರೆ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಹೊಸ ಉತ್ತೇಜನ ನೀಡುತ್ತದೆ.
7) ಜಂಕ್ ಫುಡ್ ತಿನ್ನಬೇಡಿ
ಪರೀಕ್ಷೆಯ ಸಮಯದಲ್ಲಿ ಜಂಕ್ ಆಹಾರ ಸೇವಿಸಬಾರದು. ಜಂಕ್ ಫುಡ್ ಶಕ್ತಿಯ ಮಟ್ಟಗಳು, ಏಕಾಗ್ರತೆ ಮತ್ತು ನಾವು ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ವಿಧಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬುಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಪೂರ್ಣ, ಸಮತೋಲಿತ ಊಟವನ್ನು ಸೇವಿಸಬೇಕು. ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಸಣ್ಣ ಮಟ್ಟದ ನಿರ್ಜಲೀಕರಣದಿಂದಲೂ ಮೆದುಳಿನ ಕಾರ್ಯದಲ್ಲಿ ಅಡ್ಡಿಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ