Weight Loss Tips: ವ್ಯಾಯಾಮ ಮಾಡಲು ಬೇಸರ ಆಗಿದ್ಯಾ? ಹಾಗಿದ್ರೆ ಈ ಆಟ ಆಡ್ತಾ ತೂಕ ಇಳಿಸಿಕೊಳ್ಳಿ!

ಯಾರಿಗೆ ವ್ಯಾಯಾಮ ಮತ್ತು ಯೋಗ ಮಾಡುವುದು ಬೇರೊಂದು ಗ್ರಹಕ್ಕೆ ಹೋದಂತೆ ಭಾಸವಾಗುತ್ತದೆಯೋ ಅಂತಹವರು ಆಟ ಆಡುತ್ತ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅರೇ ಅದು ಹೇಗೇ? ಆಡ್ತಾ ಆಡ್ತಾ ತೂಕ ಕಳೆದುಕೊಳ್ಳುವುದು ಹೇಗಪ್ಪಾ ಅಂತೀರಾ? ಅನುಮಾನ ಬೇಡ, ಈ ಸುದ್ದಿಯನ್ನ ಸಂಪೂರ್ಣವಾಗಿ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಕ್ಕಳಂತೆ (Children's), ದೊಡ್ಡವರೂ ಸಹ ಕ್ರೀಡೆಗಳನ್ನು ಪ್ರೀತಿಸುತ್ತಾರೆ (Love). ಆದರೆ ದೊಡ್ಡವರಾದ ಮೇಲೆ ನಮ್ಮ ಜೀವನಶೈಲಿ (Life Style) ಬದಲಾಗುತ್ತದೆ. ಜವಾಬ್ದಾರಿ, ಕೆಲಸ ಹೀಗೆ ನಾವೆಲ್ಲರೂ ನಮ್ಮ ಜೀವನದಲ್ಲಿ (Life) ನಿರತರಾಗಿ ಬಿಡುತ್ತೇವೆ. ಬಾಲ್ಯದಲ್ಲಿ ಕ್ರೀಡೆ (Game) ನಮಗೆ ಒಂದು ಚಟುವಟಿಕೆಯಾಗಿತ್ತು. ಈಗ ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಕ್ರೀಡೆ ಮನರಂಜನೆಯ ಉತ್ತಮ ಮೂಲವಾಗಿದೆ. ಮಾತ್ರವಲ್ಲದೆ, ನಮ್ಮ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು, ಹೊಸ ವಿಷಯವನ್ನು ಕಲಿಯಲು ಮತ್ತು ಉತ್ತಮ ಸಮಯವನ್ನು ಕಳೆಯಲು ನಮಗೆ ಸಹಾಯ ಮಾಡುತ್ತದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ (Health) ಕ್ರೀಡೆಗಳು ಅನೇಕ ಪ್ರಯೋಜನಗಳನ್ನು ತಂದು ಕೊಡುತ್ತವೆ ಎಂಬುದನ್ನು ಸದಾ ನೆನಪಿನಲ್ಲಿ ಇಡಬೇಕು.

  ಆದರೆ ಇತ್ತೀಚಿನ ವರ್ಷಗಳಲ್ಲಿ, ಕಚೇರಿ ಒತ್ತಡ ಮತ್ತು ಸ್ಮಾರ್ಟ್‌ಫೋನ್, ಆನ್‌ಲೈನ್ ಆಟಗಳು ಜನರ ದಿನಚರಿಯಿಂದ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಿದೆ. ಕ್ರೀಡೆಗಳು ನಮ್ಮನ್ನು ಸದೃಢವಾಗಿಡುವುದಲ್ಲದೆ, ಒತ್ತಡದಿಂ ದೂರವಿಡುತ್ತದೆ. ಮತ್ತು ರೋಗಗಳು ಬರುವುದಿಲ್ಲ. ಈ ಲೇಖನದಲ್ಲಿ, ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗುವ ಅಂತಹ ಕೆಲವು ಕ್ರೀಡೆಗಳ ಬಗ್ಗೆಹೇಳಲಾಗಿದೆ.

  ವ್ಯಾಯಾಮ ಮಾಡಲು ಬೇಸರ ಎಂದಾದರೆ ಆಟವಾಡುತ್ತ ತೂಕ ಇಳಿಸಿಕೊಳ್ಳಿ

  ಯಾರಿಗೆ ವ್ಯಾಯಾಮ ಮತ್ತು ಯೋಗ ಮಾಡುವುದು ಬೇರೊಂದು ಗ್ರಹಕ್ಕೆ ಹೋದಂತೆ ಭಾಸವಾಗುತ್ತದೆಯೋ ಅಂತಹವರು ಆಟ ಆಡುತ್ತ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಹೆಚ್ಚುತ್ತಿರುವ ತೂಕದಿಂದ ನೀವು ತೊಂದರೆಗೊಳಗಾಗಿದ್ದು, ಮತ್ತು ಸಾಧ್ಯವಾದಷ್ಟು ಬೇಗ ಕೊಬ್ಬನ್ನು ಕಡಿಮೆ ಮಾಡಲು ಬಯಸುತ್ತೀದ್ದೀರಿ ಎಂದಾದರೆ

  ಇದನ್ನೂ ಓದಿ: ತುಪ್ಪ ಸೇವನೆ ಮುಂಚೆ ಅದರ ಲಾಭ-ನಷ್ಟಗಳ ಬಗ್ಗೆ ಕೂಡ ಇರಲಿ ಅರಿವು

  ನಿಮ್ಮ ದೈನಂದಿನ ಜೀವನದಲ್ಲಿ ಈ ನಾಲ್ಕು ಕ್ರೀಡೆಗಳನ್ನು ಸೇರಿಸಿಕೊಳ್ಳಿ. ಇದರೊಂದಿಗೆ, ನಿಮ್ಮ ಕೊಬ್ಬು ಕೂಡ ವೇಗವಾಗಿ ಕಡಿಮೆಯಾಗುತ್ತದೆ. ನಿಮ್ಮ ಮೂಡ್ ಮತ್ತು ಫಿಟ್‌ನೆಸ್ ಎರಡನ್ನೂ ಯಂಗ್ ಆಗಿ ಇರಿಸುವ ಈ ನಾಲ್ಕು ಆಟಗಳನ್ನು ನೋಡೋಣ.

  ಈಜುವುದು- ತೂಕವನ್ನು ಕಳೆದುಕೊಳ್ಳಿ

  ಈಜುವ ಮೂಲಕ, ನಿಮ್ಮ ಹೆಚ್ಚುತ್ತಿರುವ ತೂಕವನ್ನು ನೀವು ಸುಲಭವಾಗಿ ನಿಯಂತ್ರಿಸಬಹುದು. ಈಜುವ ಸಮಯದಲ್ಲಿ ಇಡೀ ದೇಹವು ಸಕ್ರಿಯವಾಗಿರುತ್ತದೆ. ಮತ್ತು ಈ ಕಾರಣದಿಂದಾಗಿ ಈ ಕ್ರೀಡೆಯಲ್ಲಿ ಬಹಳಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.

  ಬೇಸಿಗೆ ಕಾಲ ಬಂದಿದೆ, ಆದ್ದರಿಂದ ನೀವು ಈಜುವುದನ್ನು ನಿಮ್ಮ ಫಿಟ್‌ನೆಸ್ ದೈನಂದಿನ ಭಾಗವಾಗಿ ಮಾಡಬಹುದು. ಈಜುವಿಕೆಯ ವಿವಿಧ ಸ್ಟ್ರೋಕ್‌ಗಳನ್ನು ಮಾಡುವ ಮೂಲಕ, ನೀವು ಒಂದು ಗಂಟೆಯಲ್ಲಿ 500 ರಿಂದ 900 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.

  ಬ್ಯಾಡ್ಮಿಂಟನ್

  ಬ್ಯಾಡ್ಮಿಂಟನ್ ಒಂದು ಕ್ರೀಡೆಯಾಗಿದ್ದು, ಇದರಲ್ಲಿ ನಿಮ್ಮ ಇಡೀ ದೇಹವು ಸಕ್ರಿಯವಾಗಿ ಉಳಿಯುತ್ತದೆ. ಆದರೆ ನೀವು ನಿರಂತರವಾಗಿ ಜಿಗಿಯುತ್ತಿರುತ್ತೀರಿ ಮತ್ತು ಓಡುತ್ತಿರುತ್ತೀರಿ. ಈ ಚಟುವಟಿಕೆಗಳು ನಿಮ್ಮನ್ನು ವೇಗವಾಗಿ ಬೆವರುವಂತೆ ಮಾಡುತ್ತದೆ.

  ದೇಹದಲ್ಲಿ ನಿಮ್ಮ ಕೊಬ್ಬು ಕಡಿಮೆಯಾಗುತ್ತದೆ. ಮತ್ತು ಬೊಜ್ಜು ನಿರಂತರವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರತಿದಿನ ಒಂದು ಗಂಟೆ ಬ್ಯಾಡ್ಮಿಂಟನ್ ಆಡುವ ಮೂಲಕ, ಕೇವಲ 1 ತಿಂಗಳಲ್ಲಿ ನಿಮ್ಮ ರೂಪದಲ್ಲಿ ಅದ್ಭುತ ಸುಧಾರಣೆಯನ್ನು ನೀವು ಕಾಣಬಹುದು.

  ರನ್ನಿಂಗ್

  ಸಂಶೋಧನೆಯ ಪ್ರಕಾರ, ಒಂದು ಗಂಟೆ ಓಡುವುದರಿಂದ 260 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.  ಅಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡಲು, ನೀವು ನಡೆದರೆ, ನೀವು ಸುಮಾರು 5 ಕಿಲೋಮೀಟರ್ ನಡೆಯಬೇಕು.

  ಅಂದರೆ, ಪ್ರತಿದಿನ ಒಂದು ಗಂಟೆ ಓಡುವ ಮೂಲಕ, ವಾಕಿಂಗ್‌ಗಿಂತ 4 ಪಟ್ಟು ಕಡಿಮೆ ಸಮಯದಲ್ಲಿ ನಿಮ್ಮ ಕೊಬ್ಬನ್ನು ಕಡಿಮೆ ಮಾಡಬಹುದು. ಹಾಗಾದ್ರೆ ಏನು ತಡ, ನಿಮ್ಮ ಶೂ ರೆಪ್ಪೆಗಳನ್ನು ಕಟ್ಟಿಕೊಂಡು ಇಂದು ಸಂಜೆಯಿಂದಲೇ ಈ ಒಳ್ಳೆಯ ಕೆಲಸವನ್ನು ಆರಂಭಿಸಿ.

  ಸೈಕ್ಲಿಂಗ್

  ಹೆಚ್ಚಿನ ಜನರು ಸೈಕಲ್ ಓಡಿಸಲು ಇಷ್ಟ ಪಡುತ್ತಾರೆ. ಇಂದಿನ ಕಾಲದಲ್ಲಿ ಎಷ್ಟೇ ಹೈಟೆಕ್ ಬೈಕ್, ವಾಹನಗಳು ಬಂದಿದ್ದರೂ ಸೈಕಲ್ ಗೆ ತನ್ನದೇ ಆದ ಕ್ರೇಜ್ ಇದೆ. ಇದೇ ಕಾರಣಕ್ಕೆ ಒಂದಲ್ಲ ಒಂದು ಮಾದರಿಯ ಸೈಕಲ್‌ಗಳು ಮಾರುಕಟ್ಟೆಗೆ ಬರುತ್ತವೆ.

  ಇದನ್ನೂ ಓದಿ: ಆರೋಗ್ಯಕರ ಜೀವನಕ್ಕೆ 8 ಗಂಟೆ ನಿದ್ದೆ ಅಲ್ಲ, 'ಒಳ್ಳೆಯ ನಿದ್ದೆ' ಮಾಡಬೇಕು ಅಂತಾರೆ ತಜ್ಞರು!

  ನಿಧಾನಗತಿಯಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ನೀವು ಒಂದು ಗಂಟೆಯಲ್ಲಿ 330 ಕ್ಯಾಲೊರಿಗಳನ್ನು ಸುಡಬಹುದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಆದರೆ ನೀವು ಒಂದು ಗಂಟೆಯ ಕಾಲ ಅತಿ ಹೆಚ್ಚು ವೇಗದಲ್ಲಿ ಸೈಕಲ್ ಓಡಿಸಿದರೆ, ನೀವು 1300 ಕ್ಯಾಲೊರಿಗಳನ್ನು ಸುಡಬಹುದು.
  Published by:renukadariyannavar
  First published: