Drinking Water Benefits: ರಾತ್ರಿ ಮಲಗುವ ಮೊದಲು ನೀರು ಕುಡಿದು ಈ ಅದ್ಭುತ ಪ್ರಯೋಜನ ಪಡೆಯಿರಿ

ಮಲಗುವ ಮೊದಲು ನೀರು ಕುಡಿಯುವುದು ದೇಹದ ಆರೋಗ್ಯಕ್ಕೆ ಒಳ್ಳೆಯದು. ನಾವು ಮಲಗುವ ಒಂದು ಗಂಟೆಯ ಮೊದಲು ನೀರು ಕುಡಿಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೀರು (Water) ನಮ್ಮ ದೈನಂದಿನ ಚಟುವಟಿಕೆಗಳಲ್ಲಿ (Activities) ಅತ್ಯವಶ್ಯಕವಾಗಿ (Important) ಬೇಕೇ ಬೇಕು. ಅದರಲ್ಲೂ ನೀರು ಕುಡಿಯುವುದರಿಂದ ನಮ್ಮ ದೇಹ (Body) ಆರೋಗ್ಯವಾಗಿ (Health) ಇರುತ್ತದೆ. ನಾವು ನೀರನ್ನು ಹೆಚ್ಚು ಸೇವನೆ ಮಾಡಬೇಕು. ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನಾಂಶ ಕಡಿಮೆ ಆಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆಗ ನಾವು ನೀರು ಕುಡಿಯುತ್ತೇವೆ. ಆದರೆ ನೀರನ್ನು ಬಾಯಾರಿಕೆಯಾದಾಗ ಮಾತ್ರವಲ್ಲ.. ಸೇವಿಸುತ್ತಲೇ ಇರುವುದನ್ನು ನೀವು ರೂಢಿಸಿಕೊಳ್ಳಿ. ಇದು ನಿಮಗೆ ಅದ್ಭುತ (Awesome) ಪ್ರಯೋಜನಗಳನ್ನು ನೀಡಲಿದೆ. ಅದರಲ್ಲೂ ಮಲಗುವ ಮೊದಲು ನೀರು ಕುಡಿಯುವುದು ದೇಹದ ಆರೋಗ್ಯಕ್ಕೆ ಒಳ್ಳೆಯದು. ನಾವು ಮಲಗುವ ಒಂದು ಗಂಟೆಯ ಮೊದಲು ನೀರು ಕುಡಿಯಬೇಕು. ಮಲಗುವ ಮೊದಲು ನಾವು ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು (Benefits) ಇಲ್ಲಿವೆ.

    ಮಲಗುವ ಮೊದಲು ದೇಹವನ್ನು ಹೈಡ್ರೇಟ್ ಮಾಡಲು ಸಹಕಾರಿ

    ಮಲಗುವ ಮೊದಲು ದೇಹವನ್ನು ಹೈಡ್ರೇಟ್ ಮಾಡಬೇಕು. ಯಾಕೆಂದರೆ ನಾವು 6-8 ಗಂಟೆಗಳ ಕಾಲ ಮಲಗಿರುತ್ತೇವೆ ಮತ್ತು ಇದರ ಮಧ್ಯೆ ಎಚ್ಚರವಾದರೂ ನೀರು ಕುಡಿಯುವವರ ಸಂಖ್ಯೆ ತುಂಬಾ ಕಡಿಮೆ. ಇದರಿಂದ ಮಲಗುವ 6-8 ಗಂಟೆಗಳ ಕಾಲ ದೇಹವನ್ನು ಹೈಡ್ರೇಟ್ ಆಗಿಡಲು ನೀರು ಅತೀ ಅವಶ್ಯಕವಾಗಿದೆ. ನಿದ್ದೆಯ ಸಮಯದಲ್ಲಿ ದೇಹವು ದ್ರವಾಂಶವನ್ನು ಕಳೆದುಕೊಳ್ಳುತ್ತದೆ. ನಿದ್ದೆ ಮಾಡುವಾಗ ಕ್ಯಾಲೋರಿ ಬರ್ನ್ ಆಗುತ್ತದೆ. ಹಾಗಾಗಿ ಮಲಗುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

    ಸ್ನಾಯುಗಳು ಮತ್ತು ಮೂಳೆಗಳು ವಿಶ್ರಾಂತಿ

    ರಾತ್ರಿ ಮಲಗುವ ಮೊದಲು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ಇದು ವ್ಯಕ್ತಿ ಬೆಳಗ್ಗೆ ಎದ್ದ ಬಳಿಕ ಶಾಂತ ಮತ್ತು ಕ್ರಿಯಾಶೀಲರಾಗಿರುವರು.

    ಇದನ್ನೂ ಓದಿ: ಅತಿಯಾಗಿ ಮೊಬೈಲ್​, ಟಿವಿ ವೀಕ್ಷಿಸುವವರೇ ಕೇಳಿ.. ಸ್ಕ್ರೀನ್ ಅವಧಿಯನ್ನು ಕಡಿಮೆ ಮಾಡಲು ಇಲ್ಲಿದೆ ಸುಲಭ ಮಾರ್ಗ

    ದೇಹದಲ್ಲಿ ಹಾರ್ಮೋನ್ ಮಟ್ಟವು ಸಮತೋಲನದಲ್ಲಿ ಇರುತ್ತದೆ.  ವಿಟಮಿನ್‍ಗಳು ಮತ್ತು ಪೋಷಕಾಂಶಗಳ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಸ್ನಾಯುಗಳು ಮತ್ತು ಮೂಳೆಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ದೇಹವು ಮರುದಿನದ ಚಟುವಟಿಕೆಗಳಿಗೆ ಸಜ್ಜಾಗಲು ಅಥವಾ ಶಕ್ತಿಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

    ಅಂಗಾಂಗಗಳಿಗೆ ಒಳ್ಳೆಯ ಪೋಷಣೆ

    ಮಲಗುವ ಮೊದಲು ನೀರು ಕುಡಿಯುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ದೇಹವು ಚೆನ್ನಾಗಿ ಶುದ್ಧೀಕರಿಸಲ್ಪಡುವುದು. ಇದರಿಂದ ಅಂಗಾಂಗಗಳಿಗೆ ಒಳ್ಳೆಯ ಪೋಷಣೆ ಸಿಗುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಹಾಕಿ ಉಲ್ಲಾಸ ನೀಡುತ್ತದೆ.

    ರಾತ್ರಿ ಮಲಗುವ ಮೊದಲು ನೀರು ಕುಡಿಯುವುದರಿಂದ ದೇಹದಲ್ಲಿ ಇರುವ ಹೆಚ್ಚುವರಿ ಕ್ಯಾಲೋರಿ ಅಥವಾ ಕೊಬ್ಬನ್ನು ಕರಗಿಸಲು ಸಹಾಯಕವಾಗುತ್ತದೆ. ಚಯಾಪಚಯ ಕ್ರಿಯೆಯು ಸುಲಭವಾಗುತ್ತದೆ. ಜೀರ್ಣಕ್ರಿಯೆಯು ಸುಲಭವಾಗುವುದು ದೇಹದಲ್ಲಿ ಅನಗತ್ಯವಾದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುವುದು.

    ಮಿದುಳು ಮತ್ತು ಹಾರ್ಮೋನ್‍ಗಳ ಸಮತೋಲನ

    ಮಿದುಳು ಮತ್ತು ಹಾರ್ಮೋನ್‍ಗಳ ಸಮತೋಲನಕ್ಕೆ ಸಹಕಾರಿ. ಮನಃಸ್ಥಿತಿಯು ತಾಜಾ ಹಾಗೂ ಚೈತನ್ಯದಿಂದ ಕೂಡಿರುತ್ತದೆ.  ನೀರು ಅದರಲ್ಲೂ ಬಿಸಿ ನೀರನ್ನು ಕುಡಿಯುತ್ತಲಿದ್ದರೆ, ಆಗ ಅದು ದೇಹವನ್ನು ನಿರ್ವಿಷಗೊಳಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಮಾಡುವುದು. ನೀರು ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು ಮತ್ತು ವಿಷಕಾರಿ ಅಂಶವನ್ನು ವಿಘಟಿಸುವುದು. ಮಲಗುವ ಮೊದಲು ನೀರು ಕುಡಿಯುವುದರಿಂದ ತುಂಬಾ ಪ್ರಯೋಜನಗಳು ದೇಹಕ್ಕೆ ಒದಗಿ ಬರುತ್ತವೆ.

    ಇದು ಬೆವರುವುದು ಹಾಗೂ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಬಿಸಿ ನೀರು ಕುಡಿದರೆ, ಅದರಿಂದ ದೇಹವು ಹೈಡ್ರೇಟ್ ಆಗಿರುವುದು. ಇದು ರಾತ್ರಿ ವೇಳೆ ಕಂಡುಬರುವ ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ನಿಮ್ಗೆ Chocolate ಪೇಸ್ಟ್ರಿಯಿಂದ ಪಕೋಡಾ ಮಾಡೋಕೆ ಬರುತ್ತಾ? ತಿಂದವರು ಮರುಳಾಗುವರು!

    ದೇಹದ ಸಂಪೂರ್ಣ ಆರೋಗ್ಯಕ್ಕೆ ನೀರು

    ರಾತ್ರಿ ಒಂದು ಲೋಟ ಬಿಸಿ ನೀರು ಕುಡಿದರೆ ತೂಕ ಇಳಿಕೆಯಾಗುತ್ತದೆ. ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಷ್ಟೇ ಅಲ್ಲದೆ ರಕ್ತ ಸಂಚಲನ ಸರಿಯಾಗಿ ಹೃದಯ ಸಮಸ್ಯೆ ಕಾಡುವುದಿಲ್ಲ. ಹಾಗೇ ನೀರು ದೇಹದ ಖನಿಜ ಹಾಗೂ ಜೀವಸತ್ವವನ್ನು ಸಮತೋಲನದಲ್ಲಿಟ್ಟು ದೇಹದ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ.
    Published by:renukadariyannavar
    First published: