ಕರಿಬೇವಿನ ಎಲೆಯಲ್ಲಿ (Curry Leaf) ಕಬ್ಬಿಣ (Iron) ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದೆ. ಕರಿಬೇವಿನ ಎಲೆ ದೇಹದಲ್ಲಿ (Body) ರಕ್ತದ ಕೊರತೆ (Blood Deficiency) ಮಾತ್ರವಲ್ಲದೆ, ಇದು ರಕ್ತವನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತ ಹೀರಿಕೊಳ್ಳುವ ದೇಹದ ಅಸಮರ್ಥತೆ ಹೋಗಲಾಡಿಸುತ್ತದೆ. ಫೋಲಿಕ್ ಆಮ್ಲವು ರಕ್ತವನ್ನು ಹೀರಿಕೊಳ್ಳಲು ಸಹಾಯ ಮಾಡುವ ಅತ್ಯಗತ್ಯ ಅಂಶ. ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಅದನ್ನು ಹೋಗಲಾಡಿಸಲು ಪ್ರತಿದಿನ ಕರಿಬೇವಿನ ಎಲೆ ಸೇವಿಸಿ. ಜನರು ತೂಕ ಇಳಿಸಿಕೊಳ್ಳಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ತೂಕ ನಷ್ಟಕ್ಕೆ ಕರಿಬೇವಿನ ಎಲೆಯ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಆಹಾರದಲ್ಲಿ ಹಣ್ಣು ಮತ್ತು ತರಕಾರಿ ರಸ ಸೇರಿಸಬೇಕು.
ಆಹಾರ ಮತ್ತು ಜ್ಯೂಸ್ ತಯಾರಿಕೆಯಲ್ಲಿ ಕರಿಬೇವಿನ ಎಲೆ ಬಳಕೆ
ಕರಿಬೇವಿನ ಎಲೆಗಳನ್ನು ಆಹಾರದಲ್ಲಿ ಮತ್ತು ಜ್ಯೂಸ್ ತಯಾರಿಕೆಯಲ್ಲಿ ಬಳಸಬಹುದು. ಬಹುತೇಕ ಎಲ್ಲರ ಮನೆಗಳಲ್ಲಿ ಕರಿಬೇವಿನ ಎಲೆಗಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದು ಸಾಕಷ್ಟು ಪ್ರಯೋಜನ ನೀಡುತ್ತದೆ.
ಕರಿಬೇವಿನ ಎಲೆಗಳು ಮಧುಮೇಹ ರೋಗಿಗಳಿಗೆ ರಾಮಬಾಣ. ನಿತ್ಯವೂ ಕರಿಬೇವಿನ ಸೊಪ್ಪು ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಹೊರಹಾಕಿ ತೂಕ ಕಡಿಮೆಯಾಗಲು ಸಹಕಾರಿ.
ಇದನ್ನೂ ಓದಿ: ಮುಖದ ಕ್ಲೆನ್ಸಿಂಗ್ ಗೆ ದುಬಾರಿ ವಸ್ತುಗಳ ಮೊರೆ ಹೋಗುವುದು ಬಿಡಿ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೋಡಿ
ಕರಿಬೇವಿನ ರಸದ ಪ್ರಯೋಜನಗಳು
ಜೀರ್ಣಕ್ರಿಯೆಗೆ ಸಹಕಾರಿ
ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಿದರೆ, ದೇಹದ ಮೇಲೆ ಕೊಬ್ಬು ಸಂಗ್ರಹವಾಗುವುದಿಲ್ಲ. ಮತ್ತು ತೂಕವೂ ಕಡಿಮೆಯಾಗುತ್ತದೆ. ಕರಿಬೇವಿನ ಎಲೆ ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
ಇದರಿಂದ ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆ ಇರುವುದಿಲ್ಲ. ಇದಲ್ಲದೇ ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಕರುಳಿಗೆ ಪ್ರಯೋಜನವಾಗುತ್ತದೆ. ಇದರಿಂದ ನಮ್ಮ ಹೊಟ್ಟೆಯು ಆರೋಗ್ಯಕರವಾಗಿರುತ್ತದೆ. ಈ ಎಲ್ಲಾ ವಸ್ತುಗಳು ತೂಕವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ.
ದೇಹವನ್ನು ಡಿಟಾಕ್ಸ್ ಮಾಡಿ
ಪ್ರತಿದಿನ ಕರಿಬೇವಿನ ಎಲೆ ತಿನ್ನುವುದು ನಿಮ್ಮ ದೇಹವು ಸ್ವಾಭಾವಿಕವಾಗಿ ನಿರ್ವಿಷಗೊಳ್ಳುವಂತೆ ಮಾಡುತ್ತದೆ. ಕರಿಬೇವಿನ ಎಲೆ ಜಗಿಯುವುದು ದೇಹವನ್ನು ಶುದ್ಧಗೊಳಿಸುತ್ತದೆ. ಮತ್ತು ದೇಹದಿಂದ ಹಾನಿಕಾರಕ ವಿಷ ತೆಗೆದು ಹಾಕುತ್ತದೆ.
ಕರಿಬೇವಿನ ಎಲೆಗಳು ಕ್ಯಾಲೊರಿ ವೇಗವಾಗಿ ಕಡಿಮೆ ಮಾಡುತ್ತದೆ. ಇದು ದೇಹದ ಮೇಲೆ ಕೊಬ್ಬಿನ ಶೇಖರಣೆ ತಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಕರಿಬೇವಿನ ಎಲೆಯ ರಸ ಅಥವಾ ಚಹಾ ಕುಡಿಯುವುದು ನಿಮ್ಮ ಶಕ್ತಿಯ ಮಟ್ಟ ಮತ್ತು ಚಯಾಪಚಯ ಎರಡನ್ನೂ ಹೆಚ್ಚಿಸುತ್ತದೆ.
ಕೊಬ್ಬು ಕಡಿಮೆ ಮಾಡಲು ಸಹಕಾರಿ
ಕರಿಬೇವಿನ ಎಲೆಗಳು ತೂಕವನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿ. ಕರಿಬೇವಿನ ಎಲೆಗಳು ವೇಗವರ್ಧಕವಾಗಿ ಕೆಲಸ ಮಾಡುತ್ತವೆ. ಇದು ಆಲ್ಕಲಾಯ್ಡ್ಗಳನ್ನು ಹೊಂದಿದೆ. ಇದು ಬೊಜ್ಜು ವಿರೋಧಿ ಮತ್ತು ಲಿಪಿಡ್-ಕಡಿಮೆಗೊಳಿಸುವ ಗುಣಲಕ್ಷಣ ಹೊಂದಿದೆ.
ಕರಿಬೇವಿನ ಎಲೆ ತಿನ್ನುವುದು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ಕಡಿಮೆ ಮಾಡುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುತ್ತದೆ. ಅಲ್ಲದೆ ಕರಿಬೇವಿನ ಸೊಪ್ಪು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ. ದೇಹದಲ್ಲಿನ ಸಕ್ಕರೆಯ ಮಟ್ಟವು ತೂಕ ಹೆಚ್ಚಾಗುವುದು ಮತ್ತು ತೂಕ ನಷ್ಟದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಈ ಕಾಯಿಲೆಗಳು ಸಾಕಷ್ಟು ಸಂಕಷ್ಟ ತಂದೊಡ್ಡುತ್ತವೆ!
ಕರಿಬೇವಿನ ಎಲೆಯ ರಸ ತಯಾರಿಸುವುದು ಹೇಗೆ?
ಕರಿಬೇವಿನ ಎಲೆ ರಸ ತಯಾರಿಸಲು, ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಹೊತ್ತು ಕುದಿಸಿದ ನಂತರ ಶೋಧಿಸಿ ಕುಡಿಯಿರಿ. ಇಲ್ಲದಿದ್ದರೆ ಕುದಿಸಿದ ನೀರು ತಣ್ಣಗಾದ ಮೇಲೆ ಎಲೆಯೊಂದಿಗೆ ರುಬ್ಬಿ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಮಾತ್ರ ಈ ರಸ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ