Health tips: ನೀವು ಅಸಿಡಿಟಿಯಿಂದ ಬಳಲುತ್ತಿದ್ರೆ, ಕೂಡಲೇ ಇದನೆಲ್ಲ ಬಿಟ್ಟುಬಿಡಿ-ಇಲ್ಲದಿದ್ರೆ ಡೇಂಜರ್​!

ಅತಿಯಾದ ಪ್ರಮಾಣದಲ್ಲಿ ಬೆಳ್ಳುಳ್ಳಿ, ಉಪ್ಪು, ಎಣ್ಣೆ, ಮೆಣಸಿನಕಾಯಿ ಇತ್ಯಾದಿಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಡಿ. ಆದಷ್ಟು ಮಟ್ಟಿಗೆ ಮಾಂಸಹಾರದಿಂದ ದೂರವಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏನಪ್ಪಾ ಇದು ಅಸಿಡಿಟಿ(Acidity) ಅಂತ ಪರಿತಪಿಸುವುದನ್ನು ನಾವು ಪ್ರತಿದಿನ ಕೇಳಿರುತ್ತೇವೆ ಎಂದರೆ ತಪ್ಪಾಗುವುದಿಲ್ಲ, ಅದರಲ್ಲೂ ಈ ಚಳಿಗಾಲವು(Winter) ನಿಮಗಿರುವ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗಳನ್ನು(Abdominal Problems) ಇನ್ನಷ್ಟು ಹದಗೆಡಿಸಬಹುದು.ಬೆಳಗ್ಗೆ ತುಂಬಾ ಚಳಿ ಇದೆ ಎಂದು ನಾವು ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡದೆ ಇರುವುದು ಮತ್ತು ಹೆಚ್ಚಿನ ಆಹಾರ ಸೇವನೆ ಇವೆರಡೂ ಅಂಶಗಳು ನಿಮ್ಮ ಅಸಿಡಿಟಿ ಸಮಸ್ಯೆಯನ್ನು ಇನ್ನಷ್ಟು ಜಾಸ್ತಿ ಮಾಡುತ್ತವೆ. ಇದರ ಜೊತೆಗೆ, ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು, ತಿಂದ ತಕ್ಷಣ ಮಲಗುವುದು ಮತ್ತು ಸಾಕಷ್ಟು ಮಸಾಲೆಯುಕ್ತ(Spicy Foods) ಆಹಾರವನ್ನು ಸೇವಿಸುವುದು ಮುಂತಾದ ಕೆಲವು ಅನಾರೋಗ್ಯಕರ (Unhealthy Habits) ಅಭ್ಯಾಸಗಳಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಸಮತೋಲಿತ ಆಹಾರ ಇರಲಿ
ಅಸಿಡಿಟಿ ಮತ್ತು ಅದರೊಂದಿಗೆ ಬರುವ ಅಸ್ವಸ್ಥತೆಗಳಿಂದ ತಪ್ಪಿಸಿಕೊಳ್ಳಲು ನಾವು ತುಂಬಾನೇ ಸಕ್ರಿಯವಾಗಿರಬೇಕು, ಸಮತೋಲಿತ ಆಹಾರವನ್ನು ತಿನ್ನಬೇಕು ಮತ್ತು ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು. ಅಸಿಡಿಟಿಗೆ ಒಳಗಾಗುವ ಜನರು ಆಹಾರವನ್ನು ಮಿತವಾಗಿ ಸೇವಿಸಬೇಕು.ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು, ಉತ್ತಮ ನಿದ್ರೆ, ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಂತಾದ ಜೀವನಶೈಲಿ ಮಾರ್ಪಾಡುಗಳನ್ನು ಮಾಡುವುದು ನಿಮ್ಮ ಅಸಿಡಿಟಿಯ ಸಮಸ್ಯೆಯನ್ನು ಹೋಗಲಾಡಿಸಬಹುದು.

ಆಯುರ್ವೇದ ತಜ್ಞ ಡಾ. ದೀಕ್ಷಿತ್ ಭಾವಸರ್‌ ಅವರು ಅಸಿಡಿಟಿ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಹೇಗೆ ಎಂದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನೋಡಿ.

1. ಅತಿಯಾದ ಮಸಾಲೆಯುಕ್ತ, ಹುಳಿ, ಉಪ್ಪು, ಹುರಿದ ಮತ್ತು ಜಂಕ್‌ಫುಡ್‌ಗಳನ್ನು ಸೇವಿಸುವುದನ್ನು ಬಿಡಬೇಕು. ಈ ಆಹಾರಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ ಮತ್ತು ಇವುಗಳು ಎದೆಯುರಿಯನ್ನು ಪ್ರಚೋದಿಸಬಹುದು.

2. ಅತಿಯಾಗಿ ತಿನ್ನಬೇಡಿ, ಹುಳಿ ಹಣ್ಣುಗಳಿಂದ ದೂರವಿರಲು ಪ್ರಯತ್ನಿಸಿ ಮತ್ತು ಕಿತ್ತಳೆ ಮತ್ತು ಬೆರ್ರಿಗಳಂತಹ ಕೆಲವು ಹುಳಿ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಎದೆಯುರಿ ಉಂಟಾಗಬಹುದು.

ಇದನ್ನೂ ಓದಿ: Hair Care: ಎಲ್ಲ ರೀತಿಯ ಕೂದಲಿನ ಸಮಸ್ಯೆಗಳಿಗೆ ತೆಂಗಿನೆಣ್ಣೆ ರಾಮಬಾಣ..!

3. ನೀವು ತುಂಬಾ ಹೊತ್ತಿನವರೆಗೆ ಹಸಿವಿನಿಂದ ಇರಬೇಡಿ, ಇದು ಸಹ ನಿಮ್ಮ ಅಸಿಡಿಟಿಗೆ ಕಾರಣವಾಗಬಹುದು. ನೀವು ಹಸಿವಾದಾಗ ಊಟ ಮಾಡಿ ಮುಗಿಸಿ. ತುಂಬಾ ಹೊತ್ತಿನವರೆಗೆ ಹೊಟ್ಟೆ ಖಾಲಿಯಾಗಿ ಇರಿಸಿಕೊಳ್ಳಬೇಡಿ.

4. ಅತಿಯಾದ ಪ್ರಮಾಣದಲ್ಲಿ ಬೆಳ್ಳುಳ್ಳಿ, ಉಪ್ಪು, ಎಣ್ಣೆ, ಮೆಣಸಿನಕಾಯಿ ಇತ್ಯಾದಿಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಡಿ. ಆದಷ್ಟು ಮಟ್ಟಿಗೆ ಮಾಂಸಹಾರದಿಂದ ದೂರವಿರಿ.

5. ಆಹಾರದ ನಂತರ ಮತ್ತು ಕೂಡಲೇ ಮಲಗಬೇಡಿ, ಅಂಗಾತ ಮಲಗದೆ ನೀವು ಎಡಕ್ಕೆ ಬಾಗಿ ಮಲಗುವುದು ಸೂಕ್ತ.

6. ಧೂಮಪಾನ, ಮದ್ಯಪಾನ, ಚಹಾ, ಕಾಫಿ ಮತ್ತು ಆಸ್ಪಿರಿನ್ ಔಷಧಿಗಳನ್ನು ಸೇವಿಸಬೇಡಿ.

7. ಅಸಿಡಿಟಿಯನ್ನು ನಿಯಂತ್ರಣದಲ್ಲಿಡಲು ಕೊನೆಯ ಮತ್ತು ಬಹಳ ಮುಖ್ಯವಾದ ಅಂಶವೆಂದರೆ ಒತ್ತಡ ತೆಗೆದುಕೊಳ್ಳಬೇಡಿ.

ನಿಮ್ಮ ಅಸಿಡಿಟಿ ಸಮಸ್ಯೆಗೆ ಮನೆಮದ್ದುಗಳು:

1. ಕೊತ್ತಂಬರಿ ನೀರಿನ ಕಷಾಯವನ್ನು ದಿನವಿಡೀ ಕುಡಿಯಿರಿ. ಇದನ್ನು ತಯಾರಿಸಲು, ಪುಡಿ ಮಾಡಿದ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಸೇರಿಸಿ ರಾತ್ರಿಯಿಡೀ ಇಡಬೇಕು. ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಅದಕ್ಕೆ ಸೇರಿಸಿ ಮಿಶ್ರಣ ಮಾಡಿ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಿರಿ.

2. ಅರ್ಧ ಚಮಚ ಸೋಂಪು ಬೀಜಗಳನ್ನು ಆಹಾರದ ನಂತರ ಜಗಿಯುವುದು ಸಹಾಯ ಮಾಡುತ್ತದೆ.

3. ಬೆಳಗ್ಗೆ ಎಳನೀರು ಕುಡಿಯುವುದು ಉತ್ತಮ

4. ನೀವು ಮಧ್ಯಾಹ್ನ ಸೋಂಪು ಬೀಜಗಳ ರಸವನ್ನು ಮಾಡಿಕೊಂಡು ಕುಡಿಯಬಹುದು. ಸೋಂಪು ಬೀಜಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಮಿಶ್ರಣ ಮಾಡಿ.

5. ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿ ಮತ್ತು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ.

6. ಮಲಗುವ ಸಮಯಕ್ಕೆ ಉಗುರು ಬೆಚ್ಚಗಿನ ಹಾಲಿನಲ್ಲಿ ಒಂದು ಚಮಚ ಹಸುವಿನ ತುಪ್ಪವನ್ನು ಸೇರಿಸಿ ಕುಡಿಯಿರಿ. ಇದು ನಿದ್ರಾಹೀನತೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

7. ರೋಸ್ ವಾಟರ್ ಮತ್ತು ಪುದೀನಾ ನೀರು ಕುಡಿಯಿರಿ ಮತ್ತು ಇದು ಜೀರ್ಣಕ್ರಿಯೆಗೂ ನೆರವಾಗುತ್ತದೆ.

8. ಸಿಹಿ ದಾಳಿಂಬೆ, ಬಾಳೆಹಣ್ಣು, ಬೇಯಿಸಿದ ಸೇಬು, ಪ್ಲಮ್, ಒಣದ್ರಾಕ್ಷಿ ಮತ್ತು ತೆಂಗಿನಕಾಯಿ ಅಸಿಡಿಟಿಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ.

ಇದನ್ನೂ ಓದಿ: White Hair: ಬಿಳಿ ಕೂದಲಿನ ಸಮಸ್ಯೆಗೆ ಅಂಗೈನಲ್ಲಿದೆ ಪರಿಹಾರ

9. ದಿನಕ್ಕೆ ಎರಡು ಬಾರಿ 15-20 ಮಿ.ಲೀ ಲೀಟರ್ ಆಮ್ಲಾ ರಸವನ್ನು ತೆಗೆದುಕೊಳ್ಳಿ. ನೀವು ಇದನ್ನು ಪುಡಿ ರೂಪದಲ್ಲಿ ಸೇವಿಸುತ್ತಿದ್ದರೆ, ದಿನಕ್ಕೆ ಎರಡು ಬಾರಿ ಊಟಕ್ಕೆ ಮೊದಲು ಅರ್ಧ ಚಮಚ ತೆಗೆದುಕೊಳ್ಳಿರಿ.

10. ಒಂದು ಚಮಚ ಶತಾವರಿಯನ್ನು ದಿನಕ್ಕೆ ಎರಡು ಬಾರಿ ಹಾಲಿನೊಂದಿಗೆ ಹಾಕಿಕೊಂಡು ಕುಡಿಯಿರಿ.

11. ಅರ್ಧ ಚಮಚ ಯಸ್ಟಿಮಧು ಅಥವಾ ಲಿಕೊರೈಸ್ ಬೇರಿನ ಪುಡಿಯನ್ನು ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ.

12. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಮತ್ತು ಸಂಜೆ 20 ಮಿಲೀ ಲೀಟರ್ ಅಲೋವೆರಾ ಜ್ಯೂಸ್ ಅನ್ನು ಕುಡಿಯಿರಿ.

13. ಅಸಿಡಿಟಿಗಾಗಿ ನೀವು ಪ್ರಯತ್ನಿಸಬಹುದಾದ ಪ್ರಾಣಾಯಾಮವೆಂದರೆ ಶೀತಲಿ, ಶಿತ್ಕರಿ, ಅನುಲೋಮಾ ವಿಲೋಮಾ ಮತ್ತು ಭ್ರಾಮರಿ.
Published by:vanithasanjevani vanithasanjevani
First published: