ಜರ್ಮನ್​ ಚಾಕೊಲೇಟ್​ ಕೇಕಿಗೆ ಒಂದು ದಿನ ಮೀಸಲು!

news18
Updated:June 11, 2018, 4:07 PM IST
ಜರ್ಮನ್​ ಚಾಕೊಲೇಟ್​ ಕೇಕಿಗೆ ಒಂದು ದಿನ ಮೀಸಲು!
news18
Updated: June 11, 2018, 4:07 PM IST
ಸುಜಾತಾ ನಾರಾಯಣ ರಾವ್, ನ್ಯೂಸ್ 18 ಕನ್ನಡ

ಚಾಕೊಲೇಟ್ ಚಿಕ್ಕಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಚಾಕೊಲೇಟ್ ಅಷ್ಟೇ ಅಲ್ಲ ಇದರಿಂದ ತಯಾರಿಸುವ ತಿನಿಸುಗಳಿಗೂ ಸಹ ಬೇಡಿಕೆ ಹೆಚ್ಚು. ಚಾಕೊಲೇಟಿನಿಂದ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಹೆಚ್ಚು ಜನಪ್ರಿಯವಾದದ್ದು ಜರ್ಮನ್ ಚಾಕೊಲೇಟ್ ಕೇಕ್. ಈ ಕೇಕ್​ನ ಜನಪ್ರಿಯತೆಗಾಗಿ ಒಂದು ದಿನವನ್ನೇ ಮೀಸಲಿಡಲಾಗಿದೆ.

ಪ್ರತಿವರ್ಷ ಜೂನ್ 11 ರಂದು ಬಹುತೇಕ ದೇಶಗಳಲ್ಲಿ ಜರ್ಮನ್ ಚಾಕೊಲೇಟ್ ಕೇಕ್ ದಿನವನ್ನು ಆಚರಿಸುತ್ತಾರೆ. ಜರ್ಮನ್ ಚಾಕೊಲೇಟ್ ಕೇಕ್ ಅಂದರೆ ಜರ್ಮನಿಯಲ್ಲಿ ತಯಾರಾಗುವ ಕೇಕ್ ಅಲ್ಲ ಅಥವಾ ಈ ಕೇಕಿಗೂ ಜರ್ಮನಿಗೂ ಯಾವುದೇ ಸಂಬಂಧವಿಲ್ಲ. ಈ ಕೇಕ್ ಅನ್ನು ಮೊದಲ ಬಾರಿಗೆ ತಯಾರಿಸಿದ ಸಾಮ್ಯುಯಲ್​ ಜರ್ಮನ್ ರ ಗೌರವಾರ್ಥವಾಗಿ ಇದಕ್ಕೆ ಜರ್ಮನ್ ಚಾಕೊಲೇಟ್ ಕೇಕ್ ಎಂದು ಹೆಸರಿಡಲಾಗಿದೆ.

ಜರ್ಮನ್‌ ಚಾಕೊಲೇಟ್‌ ಕೇಕ್ ರೆಸಿಪಿ 1957 ರಲ್ಲಿ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು, ನಂತರ ಇದನ್ನು ಸಾಮ್ಯೂಯೆಲ್ ಜರ್ಮನ್ ಅವರು ತಯಾರಿಸಿ ಎಲ್ಲರ ಗಮನ ಸೆಳೆದಿದ್ದರು. ಪದರು ಪದರಾಗಿರುವ ಈ ಕೇಕ್​ಗೆ ಕ್ಯಾರಮೆಲ್, ಪಿಕಾನ್ಸ್ ಮತ್ತು ತೆಂಗಿನ ಪುಡಿಯ ಟಾಪಿಂಗ್ಸ್​ನಿಂದ ಅಲಂಕರಿಸುತ್ತಾರೆ.

ಈ ಕೇಕ್ ನ ಸ್ವಾದಿಷ್ಟ ರುಚಿಗೆ ಮಾರುಹೋದ ಜನ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವ, ಸಕ್ಸಸ್ ಪಾರ್ಟಿ ಇನ್ನಿತರ ಖುಷಿಯ ಸಂದರ್ಭಗಳ ಆಚರಣೆಯಲ್ಲಿ ಬೇರೆಲ್ಲ  ಸಿಹಿ ತಿನಿಸುಗಳಿಗಿಂತ ಜರ್ಮನ್‌ ಚಾಕೊಲೇಟ್‌ ಕೇಕ್​ಗೆ ಮೊದಲ ಆದ್ಯತೆ.

ಈ ದಿನದಂದು ಸ್ನೇಹಿತರು, ಬಂಧುಗಳು ಎಲ್ಲರೂ ಒಟ್ಟಾಗಿ ಸೇರಿ ಜರ್ಮನ್ ಚಾಕೊಲೇಟ್ ಕೇಕ್ ಕತ್ತಿರಿಸಿ ಸವಿದು ಸಂಭ್ರಮಿಸುತ್ತಾರೆ. ಇನ್ನೂ ಕೆಲವರು ಈ ಕೇಕ್ ಅನ್ನು ಮನೆಯಲ್ಲೇ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ಜರ್ಮನ್ ಚಾಕೊಲೇಟ್ ಡೇ ಶುಭಾಶಯ ತಿಳಿಸಿ ಸಂಭ್ರಮಿಸುತ್ತಾರೆ.

 

 

 
First published:June 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ