• Home
  • »
  • News
  • »
  • lifestyle
  • »
  • Alzheimer: ನರಕೋಶದಲ್ಲಿರುವ ಈ ಒಂದು ವಸ್ತು ಆಲ್ಝೈಮರ್ ಕಾಯಿಲೆ ಬರದಂತೆ ತಡೆಯುತ್ತೆ

Alzheimer: ನರಕೋಶದಲ್ಲಿರುವ ಈ ಒಂದು ವಸ್ತು ಆಲ್ಝೈಮರ್ ಕಾಯಿಲೆ ಬರದಂತೆ ತಡೆಯುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gene May reduce the chance of Alzheimer: ನರಕೋಶಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ಜೀನ್ KIF11 ನ ಅತಿಯಾದ ಒತ್ತಡವು ಆಲ್ಝೈಮರ್‌ನ ಕಾಯಿಲೆಯಿರುವ ಮಾನವರಲ್ಲಿ ಅರಿವಿನ ನಷ್ಟವನ್ನು ತಡೆಯುತ್ತದೆ. 

  • Share this:

ಕೊಲೊರಾಡೋ ವಿಶ್ವವಿದ್ಯಾಲಯದ ಅನ್ಶುಟ್ಜ್ ವೈದ್ಯಕೀಯ ಕ್ಯಾಂಪಸ್ ವಿಜ್ಞಾನಿಗಳ ಹೊಸ ಅಧ್ಯಯನದ ಪ್ರಕಾರ ಕೋಶ ವಿಭಜನೆ ಮತ್ತು ನರಕೋಶಗಳ ರಚನೆ (Neuronal Structure and Function) ಮತ್ತು ಕಾರ್ಯನಿರ್ವಹಣೆಯೊಂದಿಗೆ ಜೀನ್‌ನ (Gene) ಅತಿಯಾದ ಒತ್ತಡವು ಆಲ್ಝೈಮರ್‌ನ ಕಾಯಿಲೆ (Alzheimer) ಇರುವ ಮಾನವರಲ್ಲಿ  ನೆನಪಿನ ಶಕ್ತಿ ಕಡಿಮೆಯಾಗುವುದನ್ನ ತಡೆಯಬಹುದು ಎಂದು ತಿಳಿಸಿದ್ದಾರೆ. ಈ ಪ್ರಯೋಗವನ್ನು ಅಧ್ಯಯನ ತಂಡವು ಇಲಿಗಳ ಮೇಲೆ ಪ್ರಯೋಗ ಮಾಡಿದೆ.  ಪ್ಲೇಕ್ ಎಂಬುದು ಆಲ್ಝೈಮರ್ ಕಾಯಿಲೆಯಲ್ಲಿ ಮೆದುಳಿನ ಅಂಗಾಂಶದ ಶೇಖರಣೆಯಿಂದ ಉಂಟಾಗುವ ಸಣ್ಣ, ವಿಭಿನ್ನವಾದ, ವಿಶಿಷ್ಟವಾಗಿ ಬೆಳೆದ ಪ್ಯಾಚ್ ಅಥವಾ ಪ್ರದೇಶವಾಗಿದೆ. ಆಲ್ಝೈಮರ್ ಕಾಯಿಲೆ ಇರುವವರ ಮೆದುಳಿನಲ್ಲಿರುವ ಪ್ಲೇಕ್‌ಗಳ (ಕೊಬ್ಬಿನ ನಿಕ್ಷೇಪ) ಮುಖ್ಯ ಭಾಗವಾದ ಅಮಿಲಾಯ್ಡ್ ಬೀಟಾ (ಅಬೆಟಾ) ಉಪಸ್ಥಿತವಿದ್ದರೂ ಕಿನೆಸಿನ್-5 ಅಥವಾ KIF11 ಜೀನ್ ಅರಿವಿನ ನಷ್ಟವನ್ನು ತಡೆಯುತ್ತದೆ.


ಈ ಅಧ್ಯಯನವನ್ನು ಐಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. "ಇಲಿಗಳಲ್ಲಿ ಜೀನ್ KIF11 ಅನ್ನು ಅತಿಯಾಗಿ ವ್ಯಕ್ತಪಡಿಸುವುದು ಮೆದುಳಿನಲ್ಲಿನ ಅಮಿಲಾಯ್ಡ್ ಮಟ್ಟಗಳ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅಧ್ಯಯನದ ಸಹ-ಹಿರಿಯ ಲೇಖಕ ಹಂಟಿಂಗ್ಟನ್ ಪಾಟರ್ ತಿಳಿಸಿದ್ದಾರೆ.


KIF11 ಒಂದು ಮೋಟಾರು ಪ್ರೋಟೀನ್ ಆಗಿದೆ


ಕೊಬ್ಬಿನ ಸಂಗ್ರಹಣೆಯ (ಪ್ಲೇಕ್‌ಗಳ) ಹೊರತಾಗಿಯೂ ಅವುಗಳಲ್ಲಿ (ಇಲಿಗಳು) ಅರಿವಿನ ನಷ್ಟವುಂಟಾಗಿರಲಿಲ್ಲ. ಹಾಗಾಗಿ ಕೊಬ್ಬಿನ ಸಂಗ್ರಹಣೆಗಳನ್ನು ತೆಗೆದುಗಾಕದೆಯೇ ನೀವು ಅರಿವನ್ನು ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ ಎಂದು ಪಾಟರ್ ತಿಳಿಸಿದ್ದಾರೆ.


KIF11 ಒಂದು ಮೋಟಾರು ಪ್ರೋಟೀನ್ ಆಗಿದ್ದು, ಮೈಟೊಸಿಸ್ ಅಥವಾ ನರಕೋಶಗಳಲ್ಲದ ಜೀವಕೋಶಗಳಲ್ಲಿ ಕೋಶ ವಿಭಜನೆಯಲ್ಲಿ ಹೆಸರುವಾಸಿಯಾಗಿದೆ. ನ್ಯೂರಾನ್‌ಗಳ ಡೆಂಡ್ರೈಟ್‌ಗಳು ಮತ್ತು ಡೆಂಡ್ರಿಟಿಕ್ ಸ್ಪೈನ್‌ಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಇತರ ನರಕೋಶಗಳೊಂದಿಗೆ ಸಂವಹನ ಮಾಡಲು ಬಳಸಲ್ಪಡುತ್ತದೆ ಹಾಗೂ ಕಲಿಕೆ ಮತ್ತು ಸ್ಮರಣೆಗೆ ಮುಖ್ಯವಾಗಿದೆ. ಆಲ್ಜೈಮರ್ ಪ್ಲೇಕ್‌ಗಳ ಮೂಲ ಅಂಶವಾದ ಅಬೆಟಾವು KIF11 ಅನ್ನು ಪ್ರತಿಬಂಧಿಸುತ್ತದೆ ಮತ್ತು ಈ ರಚನೆಗಳಿಗೆ ಹಾನಿಯನ್ನುಂಟುಮಾಡುತ್ತದೆ.


ಇದನ್ನೂ ಓದಿ: ಮಕ್ಕಳ ರೂಂನಲ್ಲಿ ಈ ವಸ್ತುಗಳನ್ನು ಇಡಲೇಬಾರದಂತೆ, ಆರೋಗ್ಯಕ್ಕೆ ಹಾನಿಕರ ಅಂತಾರೆ ತಜ್ಞರು


ಅರಿವಿನ ನಷ್ಟವನ್ನು ತಡೆಯಬಹುದು ಎಂದು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತದೆ


ಮಾನವ ಅಂಕಿಅಂಶಗಳನ್ನು ವಿಶ್ಲೇಷಿಸುವ ಅಧ್ಯಯನದ ಫಲಿತಾಂಶಗಳು ಹೆಚ್ಚು ಮಟ್ಟದ KIF11 ಅಮಿಲಾಯ್ಡ್‌ನೊಂದಿಗೆ ಉತ್ತಮ ಅರಿವಿನ ಕಾರ್ಯಕ್ಷಮತೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಕೊಲೊರಾಡೋ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಲೇಖಕ ಎಸ್ಟೆಬಾನ್ ಲುಸೆರೊ ತಿಳಿಸಿದ್ದಾರೆ.




ಹಾಗಾಗಿ, ಹೆಚ್ಚುವರಿ KIF11 ಮಟ್ಟಗಳು ಮಾನವರಲ್ಲಿ ಆಲ್ಜೈಮರ್ ಅವಧಿಯಲ್ಲಿ ಕಂಡುಬರುವ ಅರಿವಿನ ನಷ್ಟವನ್ನು ತಡೆಯಬಹುದು ಎಂದು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತದೆ ಎಂದು ಎಸ್ಟೆಬಾನ್ ಹೇಳಿದ್ದಾರೆ. ಅಲ್ಜೈಮರ್ ಇರುವ ಪ್ರಾಣಿ ಮಾದರಿಗಳಲ್ಲಿ KIF11 ನ ಇರುವಿಕೆಯು ಸಂಶೋಧನೆಗಳೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ಲುಸೆರೊ ತಿಳಿಸಿದ್ದಾರೆ.


ಈ ಮಾಹಿತಿಯನ್ನು ಬಳಸಿಕೊಂಡು ಕಾಯಿಲೆಗೆ ಅಸ್ತಿತ್ವದಲ್ಲಿರುವ ಔಷಧಗಳನ್ನು ಪ್ರಯೋಗಿಸಲು ಹೊಸ ವಿಧಾನ ದೊರೆಯುತ್ತದೆ ಎಂದು ನರವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮತ್ತು ಕೊಲೊರಾಡೋ ಆಲ್ಝೈಮರ್ಸ್ ಮತ್ತು ಕಾಗ್ನಿಷನ್ ಸೆಂಟರ್‌ನ ಅಭಿವೃದ್ಧಿ ನಿರ್ದೇಶಕರು ತಿಳಿಸಿದ್ದಾರೆ.


ಪ್ರಸ್ತುತ, ಆಲ್ಝೈಮರ್‌ನ ಅನೇಕ ಪ್ರಾಯೋಗಿಕ ಚಿಕಿತ್ಸೆಗಳು ಅಬೆಟಾ ಉತ್ಪಾದನೆಯನ್ನು ಕಡಿಮೆ ಮಾಡಲು ಹಾಗೂ ಅಬೆಟಾ ಪ್ಲೇಕ್‌ಗಳ ತೆರವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಚಿಯಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: ನಿಮ್ಮ ಮದುವೆ ಮೇಕಪ್ ಮಾಡಿಸುವಾಗ ಈ ತಪ್ಪುಗಳನ್ನು ಮಾಡ್ಬೇಡಿ


ಈ ವಿಧಾನಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ಅರಿವಿನ ಕುಸಿತವನ್ನು ತಡೆಗಟ್ಟಲು ಹಾಗೂ ನಿವಾರಿಸಲು ವಿಫಲವಾಗಿದೆ. ಆಲ್ಝೈಮರ್‌ನ ಚಿಕಿತ್ಸೆಗಳ ಅಭಿವೃದ್ಧಿಗೆ ಪರ್ಯಾಯ ವಿಧಾನಗಳು ಅಗತ್ಯವಿದೆ ಎಂದು ಚಿಯಾಲ್ ತಿಳಿಸಿದ್ದಾರೆ. ನರಕೋಶಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ಜೀನ್ KIF11 ನ ಅತಿಯಾದ ಒತ್ತಡವು ಆಲ್ಝೈಮರ್‌ನ ಕಾಯಿಲೆಯಿರುವ ಮಾನವರಲ್ಲಿ ಅರಿವಿನ ನಷ್ಟವನ್ನು ತಡೆಯುತ್ತದೆ ಎಂದಾಗಿದೆ.

Published by:Sandhya M
First published: