Geeta Basra: ಗರ್ಭಪಾತದ ನೋವು ಬಿಚ್ಚಿಟ್ಟ ಹರ್ಭಜನ್ ಸಿಂಗ್ ಪತ್ನಿ

ಹರ್ಭಜನ್​ ಸಿಂಗ್​ ಕುಟುಂಬ

ಹರ್ಭಜನ್​ ಸಿಂಗ್​ ಕುಟುಂಬ

ಜೋವಾನ್ ಜನನವಾಗುವ ಮೊದಲು ಎರಡು ಬಾರಿ ಗರ್ಭಪಾತವಾಗಿತ್ತು ಎಂದು ಹೇಳಿಕೊಂಡಿದ್ದಾರೆ

  • Share this:

ಟೀಮ್ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಮೂರು ವಾರಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆಗಮನದ ಸಂತಸದಲ್ಲಿರುವ ಇವರು ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ನನ್ನ ಮಗನ ಹೆಸರು ಜೋವಾನ್ ಎಂದು ಇನ್‍ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದರು.ಇದೀಗ ಗೀತಾ ಬಸ್ರೂರು ಮಗುವಿನ ಜನನವಾಗುವ ಹಿಂದೆ ಅನುಭವಿಸಿದ ಸಮಸ್ಯೆಗಳನ್ನು ಅಂದರೆ ತಮ್ಮ ಅನುಭವವನ್ನು ಮೊಟ್ಟ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಜೋವಾನ್ ಜನನವಾಗುವ ಮೊದಲು ಎರಡು ಬಾರಿ ಗರ್ಭಪಾತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಯಾವುದೇ ಸಮಯದಲ್ಲಿ ಮಹಿಳೆಯರು ಭರವಸೆ ಕಳೆದುಕೊಳ್ಳಬಾರದು ಎಂದೂ ಸಲಹೆ ನೀಡಿದ್ದಾರೆ.


ಎರಡು ವರ್ಷಗಳ ಹಿಂದೆ ನನ್ನ ಬದುಕಿನಲ್ಲಿ ಆಘಾತಕಾರಿ ಘಟನೆ ಸಂಭವಿಸಿತು. ಆದರೆ ನಾನು ಅದರಿಂದ ಕುಗ್ಗಿ ಹೋಗದಂತೆ ಸ್ವಯಂ ನಿಯಂತ್ರಿಸಿಕೊಂಡೆ. ಗರ್ಭಪಾತದ ನಂತರ ಮಹಿಳೆಯರ ದೇಹ ಮೊದಲಿನಂತಿರುವುದಿಲ್ಲ. ಹಾರ್ಮೋನುಗಳಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗುತ್ತದೆ. ಈ ವೇಳೆ ಮಹಿಳೆ ಸಮಾಧಾನ ಕಾಯ್ದುಕೊಳ್ಳುವುದು ಅಸಾಧ್ಯವಾಗುತ್ತದೆ. ಆ ಸಂದರ್ಭದಲ್ಲಿ ಮೊದಲು ನನ್ನನ್ನು ನಾನು ಮಾನಸಿಕವಾಗಿ ಬಲಗೊಳಿಸಿಕೊಂಡೆ, ಈ ಘಟನೆಯಿಂದ ಕುಗ್ಗದಂತೆ ನಿಭಾಯಿಸಿಕೊಂಡೆ ಎಂದು ಹೇಳಿದ್ದಾರೆ.


"ನಾನು ಮೊದಲ ತ್ರೈಮಾಸಿಕದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದೆ. ನಾನು ನನ್ನ ದೇಹಕ್ಕೆ ಬೇಕಾದ ವಿಟಮಿನ್‍ಗಳನ್ನು ತೆಗೆದುಕೊಂಡೆ ಮತ್ತು ಮೊದಲ ಮೂರು ತಿಂಗಳುಗಳವರೆಗೆ ಗರ್ಭಧಾರಣೆ ಬಗ್ಗೆ ಸಮಾಧಾನದಿಂದ ಕಾಯುತ್ತಿದ್ದೆ. ಅದರ ನಂತರ, ನಾವು ಮುಂಬೈಗೆ ಬಂದೆವು, ಸ್ವಲ್ಪ ಸಮಯದ ನಂತರ, ನಾನು ಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡೆ. ಯೋಗಾಭ್ಯಾಸ ನನಗೆ ತುಂಬಾ ಸಹಾಯ ಮಾಡಿತು. ಕಳೆದ ತ್ರೈಮಾಸಿಕದಲ್ಲಿ ಸುದೀರ್ಘವಾದ ಕೆಲಸಗಳನ್ನು ಮಾಡಿದೆ" ಎಂದು ಹೇಳಿದ್ದಾರೆ.


ಇದನ್ನು ಓದಿ: ಸರ್ಕಾರಿ ಮಹಿಳಾ ಸಿಬ್ಬಂದಿಗೆ 180 ದಿನ ಶಿಶುಪಾಲನಾ ರಜೆ; ಸದುಪಯೋಗವಾಗುವುದೇ?

ಗೀತಾ ಬಸ್ರಾ ತಾವು ಮಗುವಿಗೆ ಜನ್ಮ ನೀಡಿದ ಖುಷಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ನಾವು ಹಿಡಿದಿರುವ ಒಂದು ಹೊಸ ಪುಟ್ಟ ಕೈ, ಅವನ ಪ್ರೀತಿ ದೊಡ್ಡದು, ಚಿನ್ನದಂತೆ ಅಮೂಲ್ಯ, ಅದ್ಭುತ ಕೊಡುಗೆ, ತುಂಬಾ ವಿಶೇಷ ಮತ್ತು ಸಿಹಿ. ನಮ್ಮ ಹೃದಯ ತುಂಬಿದೆ, ನಮ್ಮ ಜೀವನ ಪೂರ್ಣಗೊಂಡಿದೆ. ಆರೋಗ್ಯವಂತ ಗಂಡು ಮಗುವನ್ನು ನಮಗೆ ನೀಡಿದ ಸರ್ವಶಕ್ತನಿಗೆ ಧನ್ಯವಾದಗಳು, ನಾವು ಸಂತೋಷದಿಂದ ತೇಲುತ್ತಿದ್ದೇವೆ ಮತ್ತು ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಮಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಈ ಮೂಲಕ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎಂಬ ಬರಹದಡಿ ಶೇರ್ ಮಾಡಿದ್ದರು.


ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಅವರು 29ನೇ ಅಕ್ಟೋಬರ್ 2015ರಂದು ವಿವಾಹ ಜೀವನಕ್ಕೆ ಕಾಲಿರಿಸಿದ್ದರು. ಅವರಿಗೆ 27 ಜುಲೈ 2016 ರಂದು ಹಿನಾಯಾ ಹೀರ್ ಎಂಬ ಮಗಳಿಗೆ ಜನ್ಮ ನೀಡಿದರು. ಮತ್ತು ಈಗ ಅಂದರೆ 10 ಜುಲೈ 2021 ರಂದು ಗೀತಾ ಗಂಡು ಮಗುವಿಗೆ ಜನ್ಮ ನೀಡಿದರು.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

First published: