• Home
  • »
  • News
  • »
  • lifestyle
  • »
  • Digestive problems: ಯಾವಾಗ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸ್ತೀರಾ? ಹೀಗೆ ಮಾಡಿ ಸಾಕು, ಎಲ್ಲಾ ಕ್ಲಿಯರ್ ಆಗುತ್ತೆ!

Digestive problems: ಯಾವಾಗ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸ್ತೀರಾ? ಹೀಗೆ ಮಾಡಿ ಸಾಕು, ಎಲ್ಲಾ ಕ್ಲಿಯರ್ ಆಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀರ್ಣಕ್ರಿಯೆಯು ದೇಹದ ಪ್ರಮುಖ ಕಾರ್ಯವಾಗಿದೆ. ಮನುಷ್ಯನ  ದೇಹವು ಸುಸ್ಥಿರವಾಗಿ  ಕಾರ್ಯುನಿರ್ವಹಿಸಬೇಕಾದರೆ ಅವನು  ಸೇವಿಸಿದ ಆಹಾರವು ಉತ್ತಮವಾಗಿ ಜೀರ್ಣವಾಗಬೇಕು, ಹಾಗಿದ್ದಲ್ಲಿ ಮಾತ್ರ ದೇಹದ ಉಳಿದ  ಭಾಗಗಳು ಸುಲಲಿತವಾಗಿ ಕಾರ್ಯನಿರ್ವಹಿಸಲು ಸಾಧ್ಯ.

  • Share this:

ನೀವು ಜೀರ್ಣಕ್ರಿಯೆಯಲ್ಲಿ ಏನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸರಳ ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಂಡು ಜೀರ್ಣಕ್ರಿಯೆಯಲ್ಲಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಪೌಷ್ಠಿಕ ತಜ್ಞೆ ಭಕ್ತಿ ಕಪೂರ್ ಹೇಳಿದ್ದಾರೆ. ಆರೋಗ್ಯವೇ (Health) ನಿಜವಾದ ಸಂಪತ್ತು. ಆರೋಗ್ಯ ಸರಿಯಿದ್ದಲ್ಲಿ ಮಾತ್ರ ಉಳಿದ ಎಲ್ಲಾ ಸಂಪತ್ತುಗಳನ್ನು ಗಳಿಕೆ ಮಾಡಿಕೊಳ್ಳಬಹುದು. ಮಾನವನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವನಲ್ಲಿ ಎಷ್ಟೇ ದುಡ್ಡು, ಬಂಗಾರ, ಆಸ್ತಿ (Property) ಪಾಸ್ತಿಗಳಿದ್ದರೆ ಏನೂ ಪ್ರಯೋಜನವಿಲ್ಲ . ಮನುಷ್ಯ ಆರೋಗ್ಯವಾಗಿದ್ದಾಗ ಮಾತ್ರ ಅವನು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಅಂದರೆ ಮಾನವನಿಗೆ ಉತ್ತಮ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಇಂದಿನ ಜೀವನ ಕ್ರಮ (lifestyle),  ಆಹಾರ ಪದ್ಧತಿಗಳು (food style) ನೇರವಾಗಿ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪ್ರಭಾವವನ್ನು (effect) ಬೀರುತ್ತಿದೆ.


ಆದ್ದರಿಂದ ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ನಾನಾರೀತಿಯ ಕಾಯಿಲೆಗಳಿಂದ (disease) ಬಳಲುತ್ತಿದ್ದಾನೆ. ಮಾನವನು ಎದುರಿಸುವ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಸಾಮಾನ್ಯ ಸಮಸ್ಯೆಗಳಲ್ಲಿ ಪ್ರಮುಖವಾದವು ಒಂದು ಜೀರ್ಣಕ್ರಿಯೆಯ ಸಮಸ್ಯೆ.


ಜೀರ್ಣಕ್ರಿಯೆಯು ದೇಹದ ಪ್ರಮುಖ ಕಾರ್ಯ


ಜೀರ್ಣಕ್ರಿಯೆಯು ದೇಹದ ಪ್ರಮುಖ ಕಾರ್ಯವಾಗಿದೆ. ಮನುಷ್ಯನ  ದೇಹವು ಸುಸ್ಥಿರವಾಗಿ  ಕಾರ್ಯನಿರ್ವಹಿಸಬೇಕಾದರೆ  ಅವನು  ಸೇವಿಸಿದ ಆಹಾರವು ಉತ್ತಮವಾಗಿ ಜೀರ್ಣವಾಗಬೇಕು, ಹಾಗಿದ್ದಲ್ಲಿ ಮಾತ್ರ ದೇಹದ ಉಳಿದ  ಭಾಗಗಳು ಸುಲಲಿತವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಅಂದರೆ ಜೀರ್ಣಕ್ರಿಯೆಯು ದೇಹದ ಉಳಿದ ಎಲ್ಲಾ ಭಾಗಗಳ ಮೇಲೆ ಪ್ರಭಾವ ಬೀರುತ್ತದೆ. ದೈಹಿಕ ಆರೋಗ್ಯ ಸಮಸ್ಯೆಗಳ ಜೊತೆಗೆ ಇದು ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ಪರಿಣಾಮಗಳನ್ನು ಬೀರುತ್ತದೆ.


ಆದ್ದರಿಂದ ಜೀರ್ಣಾಂಗ ಅಂಗಗಳ ಮೇಲೆ ಗಮನಹರಿಸುವುದು ಮುಖ್ಯವಾಗಿರುತ್ತದೆ. ಪೌಷ್ಠಿಕ ತಜ್ಞೆ ಭಕ್ತಿ ಕಪೂರ್ ಅವರ ಪ್ರಕಾರ, ನೀವು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದರ ಪರಿಹಾರಕ್ಕಾಗಿ ಕೆಲವು ಕ್ರಮಗಳಿವೆ ಆದರೆ ಅದರ ಬಗ್ಗೆ ತಿಳಿಯುವ ಮೊದಲು ಜೀರ್ಣಕ್ರಿಯೆಯಲ್ಲಿನ ಸಮಸ್ಯೆಗಳು ಅಥವ ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಕಪೂರ್ ಅವರು ಜೀರ್ಣಕ್ರಿಯೆಯ ಸಮಸ್ಯೆ ಎದುರಾದಾಗ ಸಂಭವಿಸುವ ಕೆಲವು ಲಕ್ಷಣಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: Health Tips: ರೋಗ ನಿರೋಧಕ ಶಕ್ತಿ, ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುವ ಈ ಆಹಾರಗಳನ್ನು ಮಿಸ್ ಮಾಡಬೇಡಿ


ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣಗಳು:


1. ಹಸಿವಿನ ಕೊರತೆ/ ಹಸಿವು ಕಡಿಮೆಯಾಗುವುದು


2. ಎದೆಯುರಿ


3. ಹೊಟ್ಟೆನೋವು


4. ಹೊಟ್ಟೆ ಉಬ್ಬುವುದು


5. ಗ್ಯಾಸ್ 


ಆರೋಗ್ಯಕರ ಮನುಷ್ಯನಿಗೆ ಕಾಲಕಾಲಕ್ಕೆ ಅಥವ ಸಮಯಕ್ಕನುಗುಣವಾಗಿ ಹಸಿವು ಆಗುತ್ತದೆ. ಒಂದು ವೇಳೆ ಹಸಿವಿನ ಪ್ರಮಾಣ ಕಡಿಮೆಯಾಯಿತು ಎಂದಾದರೆ ಅವನು ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿದ್ದಾನೆ ಎಂದು ಅರ್ಥ ಏಕೆಂದರೆ ಹಸಿವಿನ ಕೊರತೆಯು ಜೀರ್ಣಕ್ರಿಯೆ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ.


ಸಾಮಾನ್ಯವಾಗಿ ಜೀರ್ಣಕ್ರಿಯೆ ಸಮಸ್ಯೆ ಪ್ರಾರಂಭವಾದಾಗ ಮಾನವನ ದೇಹವು ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಅವನು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಪದೇ ಪದೇ ಎದೆಯುರಿ ಕಾಣಿಸಿಕೊಳ್ಳುವುದು, ಹೊಟ್ಟೆ ಉಬ್ಬಿಕೊಳ್ಳುವುದು, ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಅಥವ ಗ್ಯಾಸ್ಟಿಕ್ ಸಮಸ್ಯೆ ಎದುರಾಗುವುದು ಹೀಗೆ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ತಜ್ಞರ ಪ್ರಕಾರ, ಎಂಬ್ರೆಸಿಂಗ್  ಗ್ಯಾಸ್ನಿಂದ ಅಹಿತಕರ ಎದೆಯುರಿ ಉಂಟಾಗುತ್ತದೆ, ಇದರಿಂದ ಜನರು ಕಾಲಕಾಲಕ್ಕೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಅವರ ಸರಳ ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯು ಅವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.


ಜೀರ್ಣಕ್ರಿಯೆ ಸಮಸ್ಯೆಯ ನಿವಾರಣಾ ಮಾರ್ಗಗಳು


 ಜೀರ್ಣಕ್ರಿಯೆ ಸಮಸ್ಯೆ ನಿವಾರಣಾ ಮಾರ್ಗಗಳು ಅವರು ಜೀರ್ಣಕ್ರಿಯೆಯ ಸಮಸ್ಯೆಯ ಪರಿಹಾರವಾಗಿ ಕೆಲವು ಪುರಾವೆ ಆಧಾರಿತ(ಎವಿಡೆನ್ಸ್ ಬೇಸ್ಡ್) ಮಾರ್ಗಗಳನ್ನು ಸೂಚಿಸಿದರು, ಅವುಗಳೆಂದರೆ;


⦁ ಉತ್ತಮ ಆಹಾರದ ಸೇವನೆ/ ಪೌಷ್ಠಿಕಾಂಶಯುಕ್ತ ಆಹಾರದ ಸೇವನೆ


⦁ ಡೈಯೆಟ್ನಲ್ಲಿ ಹೆಲ್ದಿ ಪ್ಯಾಟ್ಸ್ ಸೇರಿಸುವುದು (ಅ್ಯಡಿಂಗ್ ಹೆಲ್ದಿ ಪ್ಯಾಟ್ಸ್ ಟು ಡೈಯೆಟ್)


⦁ ಒತ್ತಡವನ್ನು ನಿರ್ವಹಿಸುವುದು. ಅಂದರೆ  ಮಾನಸಿಕ, ದೈಹಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು


⦁ ಧೂಮಪಾನ, ಮಧ್ಯಪಾನ, ತಡರಾತ್ರಿಯಲ್ಲಿ ಆಹಾರ ಸೇವನೆ ಹೀಗೆ ಇಂತಹ ಕೆಟ್ಟ ಅಭ್ಯಾಸಗಳನ್ನು ಕಡಿಮೆಮಾಡಿಕೊಳ್ಳುವುದು


⦁ ಗ್ಲುಟಾಮಿನ್, ಪ್ರೋಬಿಯಾಟಿಕ್ ಮತ್ತು ಝಿಂಕ್ (ಸತು) ನಂತಹ ಕರುಳಿನ ಪೋಷಾಕಾಂಶಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು


ಇದನ್ನೂ ಓದಿ: Health Tips: ಮಲಬದ್ಧತೆ ಸಮಸ್ಯೆ ನಿವಾರಿಸಲು ಆಯುರ್ವೇದ ಔಷಧಿ! 


ನೀವು ಸಾಂಧರ್ಭಿಕವಾಗಿ ಅಥವ ದೀರ್ಘಕಾಲದಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸರಳ ಅಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಸುಧಾರಿಸಕೊಳ್ಳಬಹುದು ಎಂದು ಪೌಷ್ಠಿಕ ತಜ್ಞೆ ಕಪೂರ್ ಹೇಳಿದರು.

Published by:Nalini Nalini
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು