ಚಳಿಗಾಲದಲ್ಲಿ (Winter) ಹೊಟ್ಟೆ ಸಂಬಂಧಿ ಸಮಸ್ಯೆಗಳು (Stomach Related Problems) ಹೆಚ್ಚು ಬಾಧಿಸುತ್ತವೆ. ಹೀಗೆ ಕಾಡುವ ಸಮಸ್ಯೆಯಲ್ಲಿ ಗ್ಯಾಸ್ಟ್ರಿಕ್ (Gastric) ಕೂಡ ಒಂದಾಗಿದೆ. ಚಳಿಗಾಲದ ತಂಪು ವಾತಾವರಣದಲ್ಲಿ ಬಿಸಿ ಪದಾರ್ಥ, ಮಸಾಲೆ ಪದಾರ್ಥ, ಜಂಕ್ ಫುಡ್, ದೈಹಿಕ ಚಟುವಟಿಕೆ ಇಲ್ಲದಿರುವುದು, ಕರಿದ ಪದಾರ್ಥಗಳ ಸೇವನೆ ಮಾಡುವುದು ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿಸುತ್ತದೆ. ಕೆಟ್ಟ ಆಹಾರ ಪದ್ಧತಿಯು ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಕೆಟ್ಟ ಜೀವನಶೈಲಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಗ್ಯಾಸ್ಟ್ರಿಕ್ ಸಮಸ್ಯೆಗೆ ತುತ್ತಾಗಿದ್ದಾರೆ. ಆಮ್ಲೀಯತೆಯ ನಂತರ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದು ಮುಂದೆ ಕ್ಯಾನ್ಸರ್ ರೂಪ ಪಡೆಯುವ ಅಪಾಯವು ಹೆಚ್ಚಿದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್
ಬೆಳಗಿನ ಉಪಾಹಾರ ಸರಿಯಾದ ಸಮಯಕ್ಕೆ ತಿನ್ನದೇ ಇರುವುದು, ಉಪಹಾರದಲ್ಲಿ ಪೋಷಕಾಂಶ ಭರಿತ ಪದಾರ್ಥ ಸೇರಿಸಿ, ಸೇವನೆ ಮಾಡದೇ ಇರುವುದು, ಹಾಗೂ ಯಾವುದೇ ವ್ಯಾಯಾಮ ಮಾಡದಿರುವುದು, ಅತಿಯಾಗಿ ಕರಿದ ಮತ್ತು ಸಿಹಿ ಪದಾರ್ಥ ತಿನ್ನುವುದು ಆ್ಯಸಿಡಿಟಿ, ಹುಳಿ ಬೆಲ್ಚಿಂಗ್, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮುಂದೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಆಗುತ್ತದೆ.
ಸಾಮಾನ್ಯ ಭಾಷೆಯಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅನ್ನು ಹೊಟ್ಟೆಯ ಕ್ಯಾನ್ಸರ್ ಎಂದು ಕರೆಯುತ್ತಾರೆ. ಭಾರತದ ದಕ್ಷಿಣ ಭಾಗ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಸಮಸ್ಯೆ ಹೆಚ್ಚು ಕಂಡು ಬರುತ್ತದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳಿವು
ಹಸಿವು ಆಗದಿರುವುದು, ಆಹಾರ ನುಂಗುವಾಗ ತೊಂದರೆ, ಹೊಟ್ಟೆ ನೋವು, ಹೊಟ್ಟೆಯಲ್ಲಿ ಉರಿ ಉಂಟಾಗುವುದು, ಅಜೀರ್ಣ ಸಮಸ್ಯೆ, ತೂಕ ಇಳಿಕೆ, ರಕ್ತ ವಾಂತಿ, ತಿಂದ ನಂತರ ಹೊಟ್ಟೆ ಉಬ್ಬರ ಸಮಸ್ಯೆ, ಕಡಿಮೆ ತಿಂದರೂ ಹೊಟ್ಟೆ ತುಂಬಿದ ಅನುಭವ ಆಗುವುದು ಇವೆಲ್ಲವೂ ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳಾಗಿವೆ.
ಮುಂಬೈನ ಡಾ. ಸುಹಾಸ್ ಅಗ್ರೆ ಅವರು ಹೇಳುವ ಪ್ರಕಾರ, ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡೆಗೆ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕು. ಧೂಮಪಾನ ಮತ್ತು ಅತಿಯಾದ ಆಲ್ಕೊಹಾಲ್ ಸೇವನೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
ಮಹಿಳೆಯರಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಕಡಿಮೆ
ಅದಾಗ್ಯೂ ಪುರುಷರಿಗಿಂತ ಮಹಿಳೆಯರಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ. ಅಂದ ಹಾಗೇ ಗ್ಯಾಸ್ಟ್ರಿಕ್ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲು ಅಥವಾ ರೋಗ ನಿರ್ಣಯಕ್ಕೆ ವೈದ್ಯರು, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ, ಜಿಐ ಎಂಡೋಸ್ಕೋಪಿ, ಬಯಾಪ್ಸಿ ಪರೀಕ್ಷೆಗೆ ಸೂಚಿಸುತ್ತಾರೆ. ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆ ಹಚ್ಚಿ, ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗಬಹುದು.
ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡೆಯಲು ಯಾವ ಪದಾರ್ಥ ಸೇವಿಸಬೇಕು?
ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ತಡೆಯಲು ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾಡಬೇಕು. ಇದು ಗ್ಯಾಸ್ಟ್ರಿಕ್ ಕ್ಯಾನ್ಸರ್ ನಿಂದ ಜನರನ್ನು ದೂರವಿರಿಸುತ್ತದೆ ಅಂತಾರೆ ವೈದ್ಯರು.
ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆ ಮಾಡಿ
ಹೊಟ್ಟೆಯ ಕ್ಯಾನ್ಸರ್ ತಡೆಗೆ ಕ್ಯಾರೊಟಿನಾಯ್ಡ್ಗಳಲ್ಲಿ ಸಮೃದ್ಧ ಆಹಾರ ಸೇವಿಸಬೇಕು. ಪಪ್ಪಾಯಿ, ಕುಂಬಳಕಾಯಿ, ಜೋಳ, ಮೊಟ್ಟೆಯ ಹಳದಿ ಲೋಳೆ, ಪಾಲಕ್ ಕಿತ್ತಳೆ, ಮೆಣಸು, ಸ್ಟ್ರಾಬೆರಿ, ಕೋಸುಗಡ್ಡೆ, ಆಲೂಗಡ್ಡೆ, ಕ್ಯಾಪ್ಸಿಕಂ, ಟೊಮ್ಯಾಟೊ, ಮಾವಿನಹಣ್ಣು ಸೇವನೆ ಮಾಡಿದ್ರೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ನಿಂದ ದೂರವಿರಬಹುದು.
ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡೆಗೆ ವಿಟಮಿನ್ ಸಿ ಬೇಕು
ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡೆಯಲು ವಿಟಮಿನ್ ಸಿ ಸಮೃದ್ಧ ಆಹಾರ ಸೇವನೆ ಮಾಡಿ. ಇದು ಉತ್ಕರ್ಷಣ ನಿರೋಧಕ ಹೊಂದಿದೆ. ಸಿಟ್ರಸ್ ಹಣ್ಣು ಮತ್ತು ಬೆರ್ರಿ ಸೇವಿಸಿ. ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ ಕರುಳಿನ ಕ್ಯಾನ್ಸರ್ ತಡೆಗೆ ಪ್ರಯೋಜನಕಾರಿ.
ಇದನ್ನೂ ಓದಿ: ಸ್ಥೂಲಕಾಯ ಸಮಸ್ಯೆ ತೊಡೆದು ಹಾಕಲು ಆಯುರ್ವೇದ ಪರಿಹಾರ ಹೀಗಿದೆ!
ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ಗಳು ಉತ್ಕರ್ಷಣ ನಿರೋಧಕಗಳಾಗಿವೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ನಾಶ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ