ಇತ್ತೀಚಿನ ದಿನಗಳಲ್ಲಿ ಜನರು (People) ಹೆಚ್ಚು ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ (Gas And Acidity Problem) ಎದುರಿಸುತ್ತಿದ್ದಾರೆ. ಗ್ಯಾಸ್ ಸಮಸ್ಯೆಯು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಕೆಟ್ಟ ಆಹಾರ ಪದ್ಧತಿ (Bad Food). ಹೆಚ್ಚು ಹೋಟೆಲ್ ತಿಂಡಿ, ಸೋಡಾ ತಿಂಡಿ, ಮೈದಾ ಹಿಟ್ಟಿನ ಪದಾರ್ಥಗಳ ಸೇವನೆ ಮಾಡುವುದೇ ಕಾರಣವಾಗಿದೆ. ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಗೆ ಇದಷ್ಟೇ ಅಲ್ಲದೇ ಕಳಪೆ ಜೀವನಶೈಲಿ ಮತ್ತು ವ್ಯಾಯಾಮ ರಹಿತ ಜೀವನವೂ ಕಾರಣವಾಗಿದೆ. ಊಟ ಮಾಡಿದ ಕೂಡಲೇ ಮಲಗುವುದು, ಅತಿಯಾಗಿ ನಿದ್ರಿಸುವುದು, ರಾತ್ರಿ ತುಂಬಾ ಹೊತ್ತಿನವರೆಗೆ ಎಚ್ಚರವಾಗಿರುವುದು ಸಹ ಕಾರಣವಾಗಿದೆ.
ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ
ಕೆಲವೊಮ್ಮೆ ಕರಿದ ಹಾಗೂ ಹುರಿದ ಪದಾರ್ಥಗಳ ಅತಿಯಾದ ಸೇವನೆ, ಮಸಾಲೆಯುಕ್ತ ಪದಾರ್ಥಗಳ ಅತಿಯಾದ ಸೇವನೆ ಸಹ ಗ್ಯಾಸ್ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಇದೆಲ್ಲಾ ಕಾರಣಗಳಿಂದ ಕಳಪೆ ಜೀರ್ಣಕ್ರಿಯೆ ಸಮಸ್ಯೆ ಸಹ ಕಾಡುತ್ತದೆ. ಇದು ಗ್ಯಾಸ್ ಸಮಸ್ಯೆ ಎದುರಿಸುವಂತೆ ಮಾಡುತ್ತದೆ.
ಆಹಾರ ಸೇವನೆಯ ಬಳಿಕ ಎದೆಯಲ್ಲಿ ಉರಿಯುವುದು, ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಅನುಭವವಾಗುವುದು, ಹುಳಿ ಬೆಲ್ಚಿಂಗ್ ಸಮಸ್ಯೆ, ಹೊಟ್ಟೆಯುಬ್ಬರ ಹಾಗೂ ಕರುಳಿನ ಚಲನೆಯಲ್ಲಿ ತೊಂದರೆ ಉಂಟಾಗುತ್ತದೆ. ಚಯಾಪಚಯ ಕ್ರಿಯೆ ಸರಿಯಾಗಿ ಇಲ್ಲದೇ ಹೋದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ.
ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ದುರ್ಬಲ ಜೀರ್ಣಕ್ರಿಯೆಯ ಸಂಕೇತ
ಆಹಾರವನ್ನು ಸೇವಿಸಿದ ನಂತರ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ಕಾಡುವುದು ಸಾಮಾನ್ಯ ಸಮಸ್ಯೆ ಆಗಿದೆ. ಇದು ದುರ್ಬಲ ಜೀರ್ಣಕ್ರಿಯೆ ಲಕ್ಷಣ. ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ನಿವಾರಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲಿದಿದ್ದರೆ ಈ ಸಮಸ್ಯೆಯು ಮಲಬದ್ಧತೆ ಉಂಟಾಗುವಂತೆ ಮಾಡುತ್ತದೆ.
ಆದರೆ ನೀವು ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ನಿವಾರಿಸಲು ಯೋಗದ ಸಹಾಯ ಪಡೆಯಬಹುದು. ಕೆಲವು ಯೋಗ ಭಂಗಿಗಳು ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತವೆ.
ಆಹಾರ ಸೇವನೆಯ ಸರಿಯಾದ ವಿಧಾನ ಯಾವುದು?
ಆಹಾರ ಸೇವನೆಗೆ ಕೆಲವರು ಡೈನಿಂಗ್ ಟೇಬಲ್ ಬಳಸುತ್ತಾರೆ. ಇನ್ನು ಕೆಲವರು ಸೋಫಾ ಬಳಕೆ ಮಾಡ್ತಾರೆ. ಕೆಲವರು ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುತ್ತಾರೆ.
ಆದರೆ ಈ ಎಲ್ಲಾ ವಿಧಾನಗಳು ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತವೆ ಅಂತಾರೆ ಯೋಗ ತಜ್ಞೆ ಜೂಹಿ ಕಪೂರ್. ವಜ್ರಾಸನದಲ್ಲಿ ಕುಳಿತು ಆಹಾರ ಸೇವಿಸುವುದು ಜೀರ್ಣಕ್ರಿಯೆಗೆ ಸಹಕಾರಿ ಎಂದು ಹೇಳಿದ್ದಾರೆ.
ವಜ್ರಾಸನ ಮಾಡುವ ಸರಿಯಾದ ವಿಧಾನ ಯಾವುದು?
ಯೋಗದಲ್ಲಿ ವಜ್ರಾಸನಕ್ಕೆ ತುಂಬಾ ಮುಖ್ಯ ಪ್ರಾಧಾನ್ಯತೆ ನೀಡಲಾಗಿದೆ. ವಜ್ರಾಸನ ಹಾಕುವುದರಿಂದ ಸಾಕಷ್ಟ ಪ್ರಯೋಜನ ಸಿಗುತ್ತದೆ. ಮೊದಲು ಚಾಪೆ ಅಥವಾ ಯಾವುದೇ ವಸ್ತ್ರದ ಮೇಲೆ ಕುಳಿತುಕೊಳ್ಳಿ. ನಂತರ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಹಿಮ್ಮಡಿಗಳನ್ನು ಸೊಂಟದ ಕೆಳಗೆ ತನ್ನಿ.
ಪಾದದ ಅಡಿಭಾಗವು ಆಕಾಶದ ಕಡೆಗೆ ಇರಲಿ. ಮತ್ತು ಎರಡೂ ಕಾಲ್ಬೆರಳುಗಳನ್ನು ಒಟ್ಟಿಗೆ ಸೇರಿಸಿ. ಸೊಂಟ ಮತ್ತು ಕುತ್ತಿಗೆಯನ್ನು ನೇರವಾಗಿರಿಸಿ. ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ಆಹಾರ ಜೀರ್ಣವಾಗಲು ಸಹಕಾರಿ.
ವಜ್ರಾಸನ ಮಾಡಿದಾಗ ಜೀರ್ಣ ಶಕ್ತಿ ಬಲಗೊಳ್ಳುತ್ತದೆ. ಇದರಿಂದಾಗಿ ಇದು ಕಠಿಣವಾದ ವಸ್ತುಗಳ ಸೇವನೆ ನಂತರ ವಜ್ರಾಸನ ಹಾಕಿದರೆ ಅದು ಆಹಾರ ಜೀರ್ಣವಾಗಲು ಸಾಧ್ಯವಾಗಿಸುತ್ತದೆ. ಮತ್ತು ಗ್ಯಾಸ್-ಆಸಿಡಿಟಿ ಮತ್ತು ಮಲಬದ್ಧತೆಯಂತಹ ಯಾವುದೇ ಸಮಸ್ಯೆ ತಡೆಯುತ್ತದೆ. ಹಾಗಾಗಿ ವಜ್ರಾಸನ ಪರಿಣಾಮಕಾರಿಯಾಗಿದೆ.
ವಜ್ರಾಸನದ ಪ್ರಯೋಜನಗಳು ಹೀಗಿವೆ
ಮೊಣಕಾಲು ನೋವಿಗೆ ಪರಿಹಾರ ನೀಡುತ್ತದೆ. ಬೆನ್ನು ನೋವು ಪರಿಹಾರ. ಹೊಟ್ಟೆಗೆ ರಕ್ತದ ಹರಿವು ಹೆಚ್ಚಿಸುತ್ತದೆ. ರಕ್ಯ ದಪ್ಪವಾಗುವುದಿಲ್ಲ, ಮುಟ್ಟಿನ ಸೆಳೆತಕ್ಕೆ ಪರಿಹಾರ ನೀಡುತ್ತದೆ.
ಇದನ್ನೂ ಓದಿ: ಪರಂಗಿ ಹಣ್ಣಿನ ಬೀಜದಿಂದ ಸಿಗೋ ಲಾಭ ಕೇಳಿದ್ರೆ ನೀವು ಎಸೆಯೋದೇ ಇಲ್ಲ
ಯಾರು ವಜ್ರಾಸನ ಮಾಡಬಾರದು?
ಮೊಣಕಾಲಿನ ಗಾಯ, ಶಸ್ತ್ರಚಿಕಿತ್ಸೆಗೆ ಒಳಗಾದವರು ಮತ್ತು ಬೆನ್ನುಹುರಿ ಸಮಸ್ಯೆ ಇರುವವರು, ಅಂಡವಾಯು ಮತ್ತು ಕರುಳಿನ ಹುಣ್ಣು ಇದ್ದವರು ಸೇವನೆ ಮಾಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ